ವಿಜಯಪುರ ಸಂಘಕ್ಕೆ ಕೆಯುಡಬ್ಲ್ಯೂಜೆ ಪ್ರಶಸ್ತಿ- ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಸದಸ್ಯರು

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ರಾಜ್ಯ ಘಟಕ ಕೊಡಮಾಡುವ ಉತ್ತಮ ಸಾಧನೆಗೈದ ಸಂಘ ಪ್ರಶಸ್ತಿಗೆ ಪುರಸ್ಕೃತವಾಗಿದ್ದುö, ಸಂಘದ ಸದಸ್ಯರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ. ರಾಜ್ಯದ ಮೂರು ಜಿಲ್ಲಾ ಘಟಕಗಳಿಗೆ ಈ ಪ್ರಶಸ್ತಿ ಲಭಿಸಿದ್ದುö, ಅದರಲ್ಲಿ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘವೂ ಈ ಪ್ರಶಸ್ತಿಗೆ ಪಾತ್ರವಾಗಿದ್ದುö, ಸಂಘದ ಸದಸ್ಯರು ಹಾಗೂ ಪದಾಕಾರಿಗಳ ಹರ್ಷದ ಹೊನಲಿಗೆ ಕಾರಣವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ. […]

ಬಸವ ನಾಡಿನಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ- ವಚನಗಳ ಮೂಲಕ ಸಮ ಸಮಾಜಕ್ಕೆ ಶರಣರು ಶ್ರಮಿಸಿದ್ದಾರೆ- ಮಹಾದೇವ ಮುರಗಿ

ವಿಜಯಪುರ: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದ ಅನುಭವ ಮಂಟಪದ 12ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು ಆದಿಸೆಯಲ್ಲಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ ಮಡಿವಾಳ ಮಾಚಿದೇವ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವರ ಮುರಗಿ ಹೇಳಿದರು. ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶರಣರ ಅಂದು ಹಾಕಿಕೊಟ್ಟ ಹಾಗೂ ತಿಳಿಸಿದ ವಿಚಾರಗಳು ಇಂದಿಗೂ […]

ಸಿಎಂ ಜೊತೆ ಸಚಿವ ಎಂ. ಬಿ. ಪಾಟೀಲ ನೇತೃತ್ವದ ನಿಯೋಗದ ಸಭೆ: ನಂದಿ ಸಕ್ಕರೆ ಕಾರ್ಖಾನೆಗೆ ₹150 ಕೋ. ನೆರವಿಗೆ ಮನವಿ

ಬೆಂಗಳೂರು: ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 100 ಕೋಟಿ ರೂ. ಬಡ್ಡಿರಹಿತ ಸಾಲ ನೀಡುವಂತೆ ಮತ್ತು 50 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವಂತೆ ಕೋರಿ, ಕಾರ್ಖಾನೆಯ ಆಡಳಿತ ಮಂಡಲಿಯು ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಉನ್ನತ ಮಟ್ಟದ ನಿಯೋಗ ಸಚಿವ ಎಂ. […]

ಹುತಾತ್ಮರ ದಿನಾಚರಣೆ : ಹುತಾತ್ಮರಿಗೆ ಜಿಲ್ಲಾಡಳಿತದಿಂದ ಮೌನಾಚರಣೆ ಮೂಲಕ ನಮನ

ವಿಜಯಪುರ: ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನ ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶನ ಪ್ರತಿದಿನ ಆ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಭಾರತೀಯ ಸೇವಾದಳ, ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಹಾಗೂ ನೆಹರು ಯುವ ಕೇಂದ್ರ ಇವರ ಸಹಯೋಗದಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ನಗರದ ಹುತಾತ್ಮರ (ಮೀನಾಕ್ಷಿ ಚೌಕ್) ವೃತ್ತದಲ್ಲಿರುವ ಸ್ಮಾರಕಕ್ಕೆ ಹಾಗೂ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ […]

ಬಂಜಾರಾ ಕಸೂತಿ ಕಲೆ ಉತ್ತೇಜನಕ್ಕಾಗಿ ತರಬೇತಿ ಶಿಬಿರ ಆಯೋಜನೆ- ಆಶಾ ಎಂ. ಪಾಟೀಲ

ವಿಜಯಪುರ: ಬಂಜಾರಾ ಕಸೂತಿ ಕಲೆಯನ್ನು ಪ್ರೋತ್ಸಾಹಿಸಲು ಬಂಜಾರಾ ಕಸೂತಿ ಕಸೂತಿ ಸಂಸ್ಥೆ ಸ್ಥಾಪಿಸಿ ತರಬೇತಿ ಶಿಬಿರಗಳ ಆಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ.ಪಾಟೀಲ ಹೇಳಿದರು. ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮಹಿಳಾ ಸಬಲೀಕರಣ ಘಟಕ ಮತ್ತು ಬಂಜಾರಾ ಕಸೂತಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ವಾರದ ಬಂಜಾರಾ ಕಸೂತಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರದ ಸಾಂಸ್ಕøತಿಕ ವೆಶಿಷ್ಟ್ಯತೆಯ ಸಂಕೇತವಾಗಿರುವ ಬಂಜಾರಾ ಕಸೂತಿ ಗ್ರಾಮೀಣ ಕರಕುಶಲ […]

ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಬಿಎಲ್ ಡಿ ಇ ಆಸ್ಪತ್ರೆ ಬದ್ಧವಾಗಿದೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರು ಸಮಯಕ್ಕೆ ಸರಿಯಾಗಿ ಆಹಾರ, ನಿದ್ರೆ ಮಾಡಲ್ಲ. ಅಂಥ ಪತ್ರಕರ್ತರಿಗೆ ಆರೋಗ್ಯ ಸೇವೆ ಕಲ್ಪಿಸಲು ಬಿಎಲ್ ಡಿಇ ಆಸ್ಪತ್ರೆ ಬದ್ಧವಾಗಿದೆ ಎಂದು ಬಿಎಲ್ ಡಿ ಸಂಸ್ಥೆಯ ಅಧ್ಯಕ್ಷರೂ‌ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.‌ ನಗರದ ಬಿಎಲ್ ಡಿಇ ಆಸ್ಪತ್ರೆಯ ಟ್ರಾಮಾ ಸೆಂಟರ್ ಸಭಾಂಗಣದಲ್ಲಿ ಸೋಮವಾರ ಬಿಎಲ್ ಡಿಇ ಆಸ್ಪತ್ರೆಯ ಆರೋಗ್ಯ ಭಾಗ್ಯ ಯೋಜನೆಯಡಿ […]

ಶಾಸಕ ಸಿ. ಎಸ್. ನಾಡಗೌಡ ಸೇರಿ 35 ಜನರಿಗೆ ನಿಗಮ, ಮಂಡಳಿ ಅಧ್ಯಕ್ಷರಾಗಿ ನೇಮಕ- ಯಾರಿಗೆ ಯಾವ ನಿಗಮ, ಮಂಡಳಿ ಜವಾಬ್ದಾರಿ? ಇಲ್ಲಿದೆ ಮಾಹಿತಿ.

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಶಾಸಕ ಸಿ. ಎಸ್. ನಾಡಗೌಡ ಸೇರಿದಂತೆ 35 ಜನ ಶಾಸಕರಿಗೆ ನಾನಾ ನಿಗಮ ಮತ್ತು ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.  ಅಲ್ಲದೇ, ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಎರಡು ವರ್ಷಗಳ ಅವಧಿಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಇದರಲ್ಲಿ ವಿಜಯಪುರ ಜಿಲ್ಲೆಗೆ ಕೇವಲ ಒಂದು ನಿಗಮಕ್ಕೆ ಮಾತ್ರ ಅಧ್ಯಕ್ಷ ಸ್ಥಾನ ನೀಡಲಾಗಿದ್ದರೆ, ಪಕ್ಕದ ಬಾಗಲಕೋಟೆ ಜಿಲ್ಲೆಯ ಮೂರು ಜನ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. […]

ಗಣರಾಜ್ಯೋತ್ಸವದ ವೇಳೆ ಗಾಳಿಯಲ್ಲಿ ಗುಂಡು- ಗ್ರಾ. ಪಂ. ಅಧ್ಯಕ್ಷೆಗೆ ಗಾಯ- ಆಸ್ಪತ್ರೆಯಲ್ಲಿ ಚೇತರಿಕೆ

ವಿಜಯಪುರ: ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಅಚಾನಕ್ಕಾಗಿ ಹಾರಿದ ಗುಂಡು ಗ್ರಾ. ಪಂ. ಅಧ್ಯಕ್ಷೆಯ ಕಾಲಿಗೆ ತಾಗಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. 75ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೋಮವ್ವ ಹೊಸಮನಿ ಧ್ವಜಾರೋಹಣ ಮಾಡಿ ನಿಂತಿದ್ದರು.  ಆಗ ಕಾಲಿಗೆ ಏಕಾಏಗ ಏನೋ ಬಡಿದಂತಾಗಿ ಕೆಳಗೆ ಕುಳಿತಿದ್ದಾರೆ.  ನಂತರ ಪರಿಶೀಲಿಸಿದಾಗ ಗುಂಡು ತಗುಲಿರುವುದು ಪತ್ತೆಯಾಗಿದೆ. ಇದೀಗ ಗ್ರಾ. ಪಂ. ಅಧ್ಯಕ್ಷೆ ಸೋಮವ್ವ ಹೊಸಮನಿ […]

ಗಣರಾಜ್ಯೋತ್ಸವ: ಬಸವ ನಾಡಿನಲ್ಲಿ ಸಚಿವ ಎಂ. ಬಿ. ಪಾಟೀಲ ಧ್ವಜಾರೋಗಣ

ವಿಜಯಪುರ: ಗಣರಾಜ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಧ್ವಜಾರೋಹಣ ನೆರವೇರಿಸಿದರು. ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ಅವರಯ ನಂತರ ನಾನಾ ಪದಾತಿ ದಳಗಳನ್ನು ವೀಕ್ಷಿಸಿದರು‌ ಅಲ್ಲದೇ, ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು.     ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ […]

ಶಾಸಕ ಸುನೀಲಗೌಡ ಪಾಟೀಲ ಪ್ರಯತ್ನದ ಫಲಶೃತಿ- ಗಣರಾಜ್ಯೋತ್ಸವ ದಿನದಿಂದ ವಿಜಯಪುರದಿಂದ ಬೆಂಗಳೂರಿಗೆ ಎಸಿ ಸ್ಲೀಪರ್ ಕೋಚ್ ಬಸ್ ಪ್ರಾರಂಭ

ವಿಜಯಪುರ: ವಿಜಯಪುರ ದಿಂದ ಬೆಂಗಳೂರಿಗೆ ಎ.ಸಿ ಮಲ್ಟಿ ಎಕ್ಸಲ್ ವೋಲ್ವೋ ಸ್ಲೀಪರ್ ಬಸ್ ಸೇವೆ ಪ್ರಾರಂಭಿಸುವAತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಮಾಡಿದ ಮನವಿಗೆ ರಾಜ್ಯ ಸರಕಾರ ಸ್ಪಂದಿಸಿದ್ದು, ಜನೇವರಿ 26 ಶುಕ್ರವಾರ ಗಣರಾಜೋತ್ಸವ ದಿನದಿಂದ ವಿಜಯಪುರ ದಿಂದ ಬೆಂಗಳೂರಿಗೆ ಬಸ್ ಸಂಚಾರ ಪ್ರಾರಂಭವಾಗಲಿದೆ. ಈ ಬಸ್ ಸಂಚಾರ ಪ್ರಾರಂಭಿಸುವಂತೆ ಸುನೀಲಗೌಡ ಪಾಟೀಲ ಅವರು ಕಳೆದ ಎರಡು ವರ್ಷಗಳಿಂದ ಸರಕಾರವನ್ನು ಆಗ್ರಹಿಸಿದ್ದರು. ಅಲ್ಲದೇ, ವಿಧಾನ ಪರಿಷತ್ ಕಲಾಪದಲ್ಲಿಯೂ ಈ ಕುರಿತು ಪ್ರಸ್ತಾಪಿಸಿದ್ದರು. ಜೊತೆಗೆ ಕಳೆದ […]