ಗ್ರಾಮೊದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕೆ ಸಹಕಾರಿ ಸಂಘದ ಚುನಾವಣೆ ಫಲಿತಾಂಶ ಪ್ರಕಟ

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಬಳಿ ಇರುವ ಗ್ರಾಮ್ಯೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕ ಸಹಕಾರ ಸಂಘಕ್ಕೆ 2024-29ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಿರ್ದೇಶಕರಾಗಿ ಆಯ್ಕೆಯಾದ ಅಭ್ಯರ್ಥಿಗಳು, ಪಡೆದ ಮತಗಳ ವಿವರ ಇಲ್ಲಿದೆ. ಸಾಮಾನ್ಯ ಕ್ಷೇತ್ರ ಚಂದ್ರಶೇಖರ ಇಜೇರಿ(224), ಸುರೇಶ ಗಚ್ಚಿನಕಟ್ಟಿ(243), ಸಿದ್ಧಪ್ಪ ಸಜ್ಜನ(243), ರಾಜಶೇಖರ ಸಜ್ಜನ(221), ಈರಪ್ಪ ಹಿಪ್ಪರಗಿ(219), ನಜೀರಅಹ್ಮದ ನಾಡೇವಾಲೆ(202), ಮಲ್ಲಿಕಾರ್ಜುನ ನುಚ್ಚಿ(200). ಪರಿಶಿಷ್ಟ ಜಾತಿ ಕ್ಷೇತ್ರ ದಶರಥ ಬಿರಾದಾರ(166) ಅವಿರೋದವಾಗಿ ಆಯ್ಕೆಯಾದ ಅಭ್ಯರ್ಥಿಗಳು ಅಶೋಕ ನ್ಯಾಮಗೌಡ(ಹಿಂದುಳಿದ ವರ್ಗ […]

ಶ್ರೀ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ

ವಿಜಯಪುರ: ನಗರದಲ್ಲಿ ನಡೆದ ಶ್ರೀ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ.  ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ  ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ ಎಂದು ಹೇಳಿದರು. ಸಮಾಜದಲ್ಲಿರುವ ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕು.  ನಾನೂ […]

ಶಾಲೆಗಳ ಅಭಿವೃದ್ಧಿಗೆ ನರೇಗಾ ಸಹಕಾರಿ: ತಾ. ಪಂ. ಸಹಾಯಕ ನಿರ್ದೇಶಕ ಕಾಸಿಂಸಾಬ್ ಮಸಳಿ

ವಿಜಯಪುರ: ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಅಡುಗೆ ಕೋಣೆಯನ್ನು ವಿಜಯಪುರ ತಾ. ಪಂ. ಸಹಾಯಕ ನಿರ್ದೇಶಕ ಕಾಸಿಂಮಸಾಬ ಮಸಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನರೇಗಾ ಯೋಜನೆಯು ಗ್ರಾಮೀಣ ಜನರಿಗೆ ರೂ. 316 ಕೂಲಿ ಜೊತೆಗೆ 100 ದಿನಗಳ ಉದ್ಯೋಗ ಖಾತರಿ ನೀಡುವವರ ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ನೆರವು ನೀಡುತ್ತಿದೆ.  ಸರಕಾರಿ […]

ವಿಜಯಪುರದಲ್ಲಿ ಸಂಕ್ರಾಂತಿ ಅಂಗವಾಗಿ ಫಲಪುಷ್ಪ ಪ್ರದರ್ಶನ- ಗಮನ ಸೆಳೆಯುತ್ತಿದೆ ಹೂವು-ಹಣ್ಣುಗಳ ವರ್ಣಾಲಂಕಾರ

ವಿಜಯಪುರ: ಮಕರ ಸಂಕ್ರಾಂತಿ ಅಂಗವಾಗಿ ನಗರದ ಜಿಲ್ಲಾ ತೋಟಗಾರಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಗ ಗಮನ ಸೆಳೆಯುತ್ತಿದೆ.  ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ 2023-24ನೇ ವರ್ಷದ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ನೂತನ ಮೇಯರ್ ಮೆಹಜಬೀನ್ ಅಬ್ದುಲ್‌ ರಜಾಕ ಹೊರ್ತಿ […]

ರಾಮ ಮಂದಿರ ಉದ್ಘಾಟನೆ ಬಳಿಕ ವಿಶ್ವದಲ್ಲಿ ಹಿಂದುಯುಗ ಪ್ರಾರಂಭವಾಗಲಿದೆ- ಕಾಂಗ್ರೆಸ್ ಕೌರವರು, ರಾವಣನ ಪಾತ್ರ ವಹಿಸುತ್ತಿದೆ- ಶಾಸಕ ಯತ್ನಾಳ ವಾಗ್ದಾಳಿ

ವಿಜಯಪುರ: ರಾಮ ಮಂದಿರ ಉದ್ಘಾಟನೆ ಬಳಿಕ ಜಗತ್ತಿನಲ್ಲಿ ಹಿಂದುಯುಗ ಪ್ರಾರಂಭವಾಗಲಿದೆ.  ವಿಶ್ವ ಹಿಂದೂಮಯವಾಗಲಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಹೋಗದಿರುವ ಕ್ರಮವನ್ನು ಅವರು ಕಟುವಾಗಿ ಟೀಕಿಸಿದರು. ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಶಂಕರಾಚಾರ್ಯ ಪೀಠಗಳ ವಿರೋಧ ವಿಚಾರ ಅವರವರಿಗೆ ಬಿಟ್ಟದ್ದು. ಒಂದು ತಿಳಿದುಕೊಳ್ಳಿ.  ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ದೇಶದಲ್ಲಿ ಹೊಸ ಹಿಂದೂ ಯುಗ […]

ಸಿಂದಗಿಯಲ್ಲಿ ಸಿಗರೇಟ್ ಕಳ್ಳತನ ಪ್ರಕರಣ- ಓರ್ವನನ್ನು ಬಂಧಿಸಿದ ಪೊಲೀಸರು- ನಿಟ್ಟುಸಿರು ಬಿಟ್ಟ ವಾರದ ಕುಟುಂಬ

ವಿಜಯಪುರ: ಸಿಂದಗಿ‌ ಪಟ್ಟದಲ್ಲಿ ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಸುಮಾರು ರೂ.‌ 42 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಪ್ರಕರಣವನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 24 ರಂದು ನಡೆದಿದ್ದ ಮತ್ತು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಗಂಭೀರವಾಗಿ ಪರಿಗಣಿಸಿದ್ದರು.  ಅದವರ ಸೂಚನೆಯಂತೆ ನಡೆದ ಕಾರ್ಯಾಚರಣೆಯ ಬಳಿಕ ಇದೀಗ ಈ ಪ್ರಕರಣವನ್ನು ಸಿಂದಗಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣ ಸಂಬಂಧ ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) […]

ವಿಜಯಪುರ ನಗರದ ಶ್ರೀ ಶಿವಾಜಿ ಮಹಾರಾಜ ಸೊಸಾಯಿಟಿಯಲ್ಲಿ ರಾಜಮಾತಾ ಜೀಜಾವು, ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ವಿಜಯಪುರ: ನಗರದ ಶ್ರೀ ಶಿವಾಜಿ ಮಹಾರಾಜ ಕೋ-ಆಪ್. ಕ್ರೆಡಿಟ್ ಸೊಸಾಯಿಟಿಯಲ್ಲಿ ರಾಜಮಾತಾ ಜೀಜಾವು ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಪ್ರಾಧಾಪ್ಯಕ ಡಾ. ಸದಾಶಿವ ಪವಾರ, ರಾಜಮಾತಾ ಜೀಜಾವು ಹಿಂದವಿ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರಿಗೆ ಬಾಲ್ಯದಿಂದಲೂ ಯುದ್ಧ ಕೌಶಲ್ಯಗಳು ಮತ್ತು ಹಿಂದು ಧರ್ಮದ ರಕ್ಷಣೆಯ ಕುರಿತು ನೀತಿ ಪಾಠಗಳನ್ನು ಹೇಳುತ್ತಿದ್ದರು.  ಅವರ ಪಾಠಗಳ ಪ್ರೇರಣೆಯಿಂದಲೇ ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಧರ್ಮಕ್ಕಾಗಿ ಶ್ರಮಿಸಿದರು ಎಂದು ಹೇಳಿದರು. ಸ್ವಾಮಿ ವಿವೇಕಾನಂದರು […]

ವಿಜಯಪುರ ಜಿಲ್ಲಾ ಮಟ್ಟದ ಥ್ರೊಬಾಲ್ ಚಾಂಪಿಯನ್ ಆದ ಎವಿಎಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರು- ರಾಜ್ಯ ಮಟ್ಟಕ್ಕೆ ಆಯ್ಕೆ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಎಬಿವಿಪಿ ವಿಜಯಪುರ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಥ್ರೊಬಾಲ್ ವಿವೇಕ್ ಟ್ರೊಫಿ-2024 ಪಂದ್ಯಾವಳಿಯನ್ನು ಗೆದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.   ಜ್ಞಾನ-ಶೀಲ-ಏಕತೆ ಸಾರಿದ ಸ್ವಾಮಿ ವಿವೇಕಾನಂದರ ಜಯಂತಿ ಸಾಕ್ಷೀಕರಿಸಲು ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಪೀಳಿಗೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಎಬಿವಿಪಿ ವಿಜಯಪುರ ಘಟಕ ಖೇಲೋ ಭಾರತ ಅಡಿಯಲ್ಲಿ ಜಿಲ್ಲಾಮಟ್ಟದ ಕ್ರೀಡಾಕೂಟ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಜನೇವರಿ 10 ರಂದು ಗುರುವಾರ ನಗರದ ಡಾ. ಬಿ.ಆರ್.ಅಂಬೇಡ್ಕರ […]

ಹಂಚನಾಳ ಕೆರೆ ಸೇರಿದಂತೆ ನಾನಾ ಸ್ಥಳಗಳಿಗೆ ಡಿಸಿ, ಪೌರಾಯುಕ್ತರ ಭೇಟಿ- ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಹಂಚನಾಳ ಕೆರೆ ಸೇರಿದಂತೆ ವಿಜಯಪುರ ನಗರದ ನಾನಾ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ಇಂಡಿ ರಸ್ತೆಯಲ್ಲಿರುವ ಕಸ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕಸ ಪ್ರತ್ಯೇಕಿಸುವ ಯಂತ್ರದ ಅಳವಡಿಕೆಯ ಯಂತ್ರದ ಅಳವಡಿಕೆ ಕೆಲಸವನ್ನು ಬೇಗನೆ ಪೂರ್ಣಗೊಳಿಸಬೇಕು.  ಈ ಸ್ಥಳದಲ್ಲಿರುವ ಘನ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಸಲ್ಲಿಸಬೇಕು.  ಸುತ್ತಮುತ್ತಲಿನ ಗಿಡ ಮರಗಳಿಗೆ ಬೇಸಿಗೆ […]

ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ವಿಜಯಪುರ: ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಬಬಲೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶೀತಲ ಕಿಣಗಿ ಅವರು, ಎಲ್ಲ ಗರ್ಭಿಣಿ ಮಹಿಳೆಯರು ಎಚ್ಐವಿ, ಎಚ್‌ಬಿಎಸ್‌ಎಜಿ, ಸಿಫಿಲ್ಸ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಏಡ್ಸ್ ಪ್ರೇವೆನ್ಶನ್ ಸೊಸೈಟಿ ವತಿಯಿಂದ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.  ಪ್ರತಿಯೊಬ್ಬರಿಗೂ ಜನಜಾಗೃತಿ ಬಹಳ ಮುಖ್ಯವಾಗಿದೆ.  ಆಶಾ ಕಾರ್ಯ ಕರ್ತೆಯರು ಮನೆ ಮನೆಗೆ ಹೋಗಿ ನಿರಂತರವಾಗಿ ಮಾಹಿತಿಯನ್ನೂ ನೀಡಬೇಕು.  ಮೊದಲನೆಯ ತ್ರೈಮಾಸಿಕದಲ್ಲಿ […]