ಬೆಂಗಳೂರು ಜೈಲಿನಿಂದ ಬಿಡುಗಡೆಯಾಗಿ ಬಂದ ಕರವೇ ಮುಖಂಡರಿಗೆ ಗುಮ್ಮಟ ನಗರಿಯಲ್ಲಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

ವಿಜಯಪುರ: ಬೆಂಗಳೂರಿನಲ್ಲಿ ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆಗಾಗಿ ನಡೆದ ಹೋರಾಟದಲ್ಲಿ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರ ಜೊತೆ ಬಂಧಿತರಾಗಿ ಜೈಲು ಸೇರಿದ್ದ ವಿಜಯಪುರ ಜಿಲ್ಲಾಧ್ಯಕ್ಷ ಎಂ. ಸಿ. ಮುಲ್ಲಾ ಮತ್ತು ಉಪಾಧ್ಯಕ್ಷ ಮಹಾದೇವ ರಾವಜಿ ಅವರು ನಗರಕ್ಕೆ ಮರಳಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಕರವೇ ರಾಜ್ಯಾಧ್ಯಕ್ಷ ಸೇರಿದಂತೆ ಸುಮಾರು 53 ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರಿದಂ ಅವರು 14 ದಿನ ಜೈಲುವಾಸ ಅನುಭವಿಸಿದ್ದರು.  ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಹಿನ್ನೆಲೆಯಲ್ಲಿ ಎಂ. […]

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಗೊಂದಲ ಮಾಡಿಕೊಳ್ಳದೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು. ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕಾರ್ಯಗಳನ್ನು ಜವಾಬ್ದಾರಿಯಿಂದ […]

ಅಥಣಿ ಶ್ರೀ ಮೋಟಗಿಮಠದ ಬಸವಭೂಷಣ ಪ್ರಶಸ್ತಿಗೆ ಆಯ್ಕೆಯಾದ ಡಾ. ಎಂ. ಎಸ್. ಮದಭಾವಿಗೆ ಅಭಿನಂದನೆಗಳ ಮಹಾಪೂರ

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಡಾ. ಎಂ. ಎಸ್. ಮದಭಾವಿ ಅವರಿಗೆ ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿಮಠ ಈ ವರ್ಷದ ಬಸವಭೂಷಣ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ.   ಉತ್ತರ ಕರ್ನಾಟಕದ ಗಡಿಯಲ್ಲಿರುವ ಶ್ರೀ ಮೋಟಗಿಮಠವು ಶತಮಾನಗಳಿಂದ ನಾಡು, ನುಡಿ, ಸಂಸ್ಕೃತಿ ಸಂವರ್ಧನೆಗಾಗಿ ಶ್ರಮಿಸುತ್ತ ಬಂದಿದೆ.  ಪ್ರತಿವರ್ಷ ಶರಣಸಂಸ್ಕೃತಿ ಗಡಿನಾಡ ನುಡಿಹಬ್ಬ ಆಚರಿಸುವ ಈ ಮಠ ಗಡಿಯಲ್ಲಿ ಕನ್ನಡದ ಏಳಿಗೆಗಾಗಿ ಶ್ರಮಿಸುತ್ತಿದೆ.  ಭಾಷಾ ಭಾವೈಕ್ಯತೆ, ಧರ್ಮ, […]

ತ್ಯಾಗವೀರ, ಜ್ಞಾನದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಸಮಾಜಮುಖಿ ಕಾರ್ಯಗಳಿಗಾಗಿ ಸರ್ವಸ್ವ ತ್ಯಾಗ ಮಾಡಿದ್ದಾರೆ- ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ

ವಿಜಯಪುರ: ತ್ಯಾಗವೀರ, ಜ್ಞಾನ ದಾಸೋಹಿ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ ಎಂದು ಕವಲಗಿ ಕೂಡವಕ್ಕಲಿಗ ಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದ ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಮತ್ತು ಶ್ರೀ ಸಿರಸಂಗಿ ಲಿಂಗರಾಜ ವೃತ್ತ ಉದ್ಗಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಸಿರಸಂಗಿ ಲಿಂಗರಾಜ ದೇಸಾಯಿ ಅವರು ಅಂದಿನ ಕಾಲದಲ್ಲಿ ರಾಜ್ಯದಲ್ಲಿ […]

ವಿಜಯಪುರ ಜಿಲ್ಲೆಯ ಗಬಸಾವಳಗಿ ಬಳಿ ಹೊತ್ತಿ ಬೈಕಿಗೆ ಢಿಕ್ಕಿ ಹೊಡೆದು ಹೊತ್ತು ಉರಿದ ಸರಕಾರಿ ಬಸ್ಸು

ವಿಜಯಪುರ: ಬೈಕಿಗೆ ಢಿಕ್ಕಿ ಹೊಡೆದ ಸರಕಾರಿ ಬಸ್ಸೊಂದು ಹೊತ್ತು ಉರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಮೊರಟಗಿಯಿಂದ ಸಿಂದಗಿಗೆ ಬರುತ್ತಿದ್ದ ಬಸ್ಸಿಗೆ ಸಿಂದಗಿಯಿಂದ ಮೊರಟಗಿಯತ್ತ ಹೊರಟಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತದ ಸಂಭವಿಸಿದೆ.  ಢಿಕ್ಕಿಯ ಬಳಿಕ ಬೈಕ್ ಬಸ್ಸಿನಡಿ ಸಿಲುಕಿದೆ.  ಆಗ ಹೊತ್ತಿದ ಬೆಂಕಿಯಿಂದಾಗಿ ಬಸ್ಸು ಸುಟ್ಟು ಭಸ್ಮವಾಗಿದೆ.  ಆದರೆ, ಅದೃಷ್ಟವಶಾತ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. KA- 28/F- 2469 ನಂಬರಿನ […]

ಗುಮ್ಮಟ ನಗರಿಯಲ್ಲಿ ವಿದ್ಯುತ್ ಚಿತಾಗಾರ ಸ್ಥಾಪನೆಗೆ ಕ್ರಮ ಕೈಗೊಳ್ಳಿ- ಡಿಸಿ, ಪೌರಾಯುಕ್ತರಿಗೆ ಶಾಸಕ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವಂತೆ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ವಿಜಯಪುರ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ವಿಜಯಪುರ ನಗರವು ಈಗ ಮಹಾನಗರ ಪಾಲಿಕೆಯಾಗಿ  ಮೇಲ್ದರ್ಜೆಗೇರಿದೆ. ಅಲ್ಲದೇ, ಮಹಾನಗರಪಾಲಿಕೆ ಸುಮಾರು 10ಕಿ.ಮೀ ವ್ಯಾಪ್ತಿ ಒಳಗೊಂಡಿದೆ. ವಿಜಯಪುರ ನಗರದ ಜನಸಂಖ್ಯೆ ಸುಮಾರು 5 ಲಕ್ಷ ತಲುಪಿದೆ. ನಗರದಲ್ಲಿ ನಾನಾ ಸಮುದಾಯದ ಜನರು ಶವಗಳನ್ನು ಹೂಳುವ ಬದಲಾಗಿ ದಹನ ಮಾಡುವ ಸಂಪ್ರದಾಯವಿದೆ.  ಈ ಸಮುದಾಯಗಳ ಜನ ನಿಧನರಾದವರ ಅಂತ್ಯಕ್ರಿಯೆ ಸಮಯದಲ್ಲಿ […]

ವಿಜಯಪುರದಲ್ಲಿ ವಾರಿ ಸೌರಶಕ್ತಿ ಸಾಯಿ ಎಂಟರಪ್ರೈಸಿಸ್ ಪ್ರಾಂಚೈಸಿ ಲೋಕಾರ್ಪಣೆ ಮಾಡಿದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ನಗರದಲ್ಲಿ ವಾರಿಸೌರ ಶಕ್ತಿ ಕೇಂದ್ರದ ಸಾಯಿ ಎಂಟರ್ ಪ್ರೈಸಸ್ ಪ್ರಾಂಚೈಸಿ ಲೋಕಾರ್ಪಣೆ ಸಮಾರಂಭ ನಡೆಯಿತು. ಪುಲಕೇಶಿ ನಗರದಲ್ಲಿ ಬಿಜೆಪಿ ಮುಖಂಡ ಸಿದ್ದು ಬುಳ್ಳಾ ಅವರಿಗೆ ಸೇರಿದ ಈ ನೂತನ ಕೇಂದ್ರವನ್ನು ಸಂಸದ ರಮೇಶ ಜಿಗಜಿಣಗಿ ಉದ್ಘಾಟಿಸಿದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಮುಖಂಡ ಸಂತೋಷ ಪಾಟೀಲ ಡಂಬಳ  ಮುಂತಾದವರು […]

ಹುಣಶ್ಯಾಳ ಪಿ. ಬಿ ಗ್ರಾಮದಲ್ಲಿ ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತರ ಬಲೆಗೆ

ವಿಜಯಪುರ: ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತರ ಬಲೆಗೆ ಸಿಲುಕಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ. ಬಿ. ಗ್ರಾಮದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿವಿ ಗ್ರಾಮದ ಗ್ರಾಮ ಪಂಚಾಯಿತಿಯ ಪಿಡಿಓ ಸಂಗಮೇಶ ಕುಂಬಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಗ್ರಾಮದ ಖುಲ್ಲಾ ಜಾಗದ ವಾರಸಾ ಮಾಡಿಕೊಡಲು ರೂ. 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಂಗಮೇಶ ಕುಂಬಾರ ರೂ. 15 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. […]

ಗುಮ್ಮಟ ನಗರಿ ಮಹಾನಗರ ಪಾಲಿಕೆ ಕೈವಶ- ಅತೀ ಹೆಚ್ಚು ಸದಸ್ಯರಿದ್ದರೂ ಅರಳದ ತಾವರೆ

ವಿಜಯಪುರ: ಗುಮ್ಮಟ ನಗರಿ ವಿಜಯಪುರ ಮಹಾನಗರ ಪಾಲಿಕೆ ಕೈವಶವಾಗಿದೆ.  ಸಚಿವ ಎಂ. ಬಿ. ಪಾಟೀಲ ಅವರ ಕೈಚಳಕದಿಂದಾಗಿ ಮೇಯರ್ ಮತ್ತು ಉಪಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿದ್ದು, ಚುನಾವಣೆ ಮತದಾನ ಬಹಿಷ್ಕರಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ಚುನಾವಣಾಧಿಕಾರಿಗಳ ವಿರುದ್ಧ ಘೋಷಣೆ ಹಾಕುತ್ತ ಪಾಲಿಕೆಯಿಂದ ಹೊರ ನಡೆದರು. ಬೆಳಿಗ್ಗೆಯಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ಸಿನಿಂದ ಮೆಹಜಬೀನ್ ಅಬ್ದುಲ್ ರಜಾಕ್ ಹೊರ್ತಿ ಮೇಯರ್ ಸ್ಥಾನಕ್ಕೆ ಮತ್ತು ದಿನೇಶ ಹಳ್ಳಿ ಉಪಮೇಯರ್ ಸ್ಥಾನಕ್ಕೆ ನಾಮಪತ್ರ […]

ಜೆಜೆಎಂ ಯೋಜನೆಗೆ ಗ್ರಾ. ಪಂ. ಸಮುದಾಯ ವಂತಿಗೆ ಪಡೆಯದಂತೆ ಮಾಡಿದ ಹೋರಾಟ ಫಲ ನೀಡಿದೆ- ವಿಪ ಶಾಸಕ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಪರವಾಗಿ ನಾನು ಹೋರಾಟ ಮಾಡಿದರ ಫಲವಾಗಿ ಜಲಜೀವನ ಮಿಷನ್(ಜೆಜೆಎಂ) ಯೋಜನೆಗೆ ಗ್ರಾ. ಪಂ. ಗಳ ವತಿಯಿಂದ ನೀಡಬೇಕಿದ್ದ ಸಮುದಾಯ ವಂತಿಗೆಯನ್ನು ರದ್ದು ಪಡಿಸಲಾಗಿದೆ.  ಈಗ ಸರಕಾರವೇ ಈ ಹಣವನ್ನು ಭರಿಸುತ್ತಿದ್ದು, ಈ ದುಡ್ಡಿನಲ್ಲಿ ಗ್ರಾ. ಪಂ. ಗಳು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕಾರಜೊಳ ಗ್ರಾಮದಲ್ಲಿ ತೊನಶ್ಯಾಳ ಗ್ರಾಮದಲ್ಲಿ ರೂ. 1.47 ಕೋ. ಮತ್ತು ಕಾರಜೋಳ ಗ್ರಾಮದಲ್ಲಿ […]