ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ ಮಾಧ್ಯಮವಾಗಿದೆ- ಎಸ್. ಆರ್. ಮೂಗನೂರಮಠ

ಬಾಗಲಕೋಟೆ:  ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ  ಮಾಧ್ಯಮವಾಗಿದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಹೇಳಿದ್ದಾರೆ. ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಬಾಗಲಕೋಟೆಯ ಬಿಈಸಿ ಧ್ವನಿ 90.4 ಎಫ್.ಎಮ್.ನಲ್ಲಿ ಪ್ರತಿ ಸೋಮವಾರ ಪ್ರಸಾರವಾಗುವ ಸಂಪೂಣ೯ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಕಾಯ೯ಕ್ರಮದ ಭಿತ್ತಿಚಿತ್ರಪಟ ಬಿಡುಗಡೆ ಮಾಡಿ ಅವರು ಮಾತನಾಡಿದರು. ರೇಡಿಯೋ ಅತ್ಯಂತ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪುವ ಕಡಿಮೆ ವೆಚ್ಚದ […]

ಬಿಜೆಪಿ ಕಾರ್ಪೊರೇಟರ್ ಜೊತೆ ಸಭೆ ಮಧ್ಯೆ ಎಚ್.ಡಿ.ಕೆ ಗೆ ಕರೆ ಮಾಡಿದ ಬಿ. ವೈ. ವಿಜಯೇಂದ್ರ- ಯಾಕೆ ಗೊತ್ತಾ?

ವಿಜಯಪುರ: ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ರಾತ್ರಿ ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ದಿನವಿಡೀ ನಿಗದಿತ ಕಾರ್ಯಕ್ರಮ ಬಳಿಕ ರಾತ್ರಿ ವಾರ್ಡ್ ನಂಬರ್ 12 ರ ಬಿಜೆಪಿ ಸದಸ್ಯೆ ರಶ್ಮಿ ಕೋರಿ ಅವರ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಸಭೆ ನಡೆಸಿದರು.  ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು.  ಹೀಗಾಗಿ ಪ್ರತ್ಯೇಕ ಸಭೆ ನಡೆಸುವಂತೆ ಸದಸ್ಯರು […]

ಕೃಷ್ಣಾ ನಗರದಲ್ಲಿ ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ ಸಮಾರಂಭ- ಜಗದೀಶ ಶೆಟ್ಟರ, ಬಿ. ವೈ. ವಿಜಯೇಂದ್ರ ಭಾಗಿ

ವಿಜಯಪುರ: 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗಜ್ಯೋತಿ ಬಸವೇಶ್ವರರು ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆಗೆ ನಾಂದಿ ಹಾಡಿದ್ದಾರೆ  ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ. ಎಚ್. ಪಾಟೀಲ ಮೆಮೋರಿಯಲ್, ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬಬಲೇಶ್ವರ ತಾಲೂಕು ಮತ್ತು ಬೀಳಗಿ ತಾಲೂಕು ಘಟಕಗಳು ಆಯೋಜಿಸಿದ್ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಣಜಿಗ ಸಮಾಜದ ಸಂಘಟನಾ […]

ನಾನಾಗಲಿ, ಪಕ್ಷದ ಮುಖಂಡರು ಕೇಂದ್ರಕ್ಕೆ ಹೋಗಿ ಚಾಡಿ ಹೇಳಿಲ್ಲ- ಹುಡುಗಾಟಿಕೆ ಆರೋಪಗಳಿಗೆ ಉತ್ತರಿಸಲ್ಲ- ಬಿ. ವೈ. ವಿಜಯೇಂದ್ರ ಟಾಂಗ್

ವಿಜಯಪುರ: ನಾನಾಗಲಿ ಅಥವಾ ಪಕ್ಷದ ಮುಖಂಡರಾಗಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾವು ಪ್ರಯತ್ನ ಮಾಡಿಲ್ಲ.  ಅದರ ಅವಶ್ಯಕತೆಯೂ ನಮಗಿಲ್ಲ.  ಆದರೆ,  ಮುಂದೆ ಸಂದರ್ಭ ಹೇಗೆ ಸೃಷ್ಠಿಯಾಗುತ್ತೆ ಅದರ ಮೇಲೆ ಕೇಂದ್ರ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ, ವಯಸ್ಸಿನಲ್ಲಿ ಚಿಕ್ಕವನಾದರೂ ಪಕ್ಷದ ಅಧ್ಯಕ್ಷನಾಗಿ ಹಿತದೃಷ್ಠಿಯಿಂದ […]

ವಿಜಯಪುರಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಭೇಟಿ- ಸ್ವಾಗತಕ್ಕೆ ಸಜ್ಜಾದ ಕಾರ್ಯಕರ್ತರು

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಶಾಸಕ ಬಿ. ವೈ. ವಿಜಯೇಂದ್ರ ಇದೇ ಮೊದಲ ಬಾರಿಗೆ ಬಸವ ನಾಡು ವಿಜಯಪುರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.  ಮೊದಲಿಗೆ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರಕ್ಕೆ ಭೇಟಿ ನೀಡಲಿರುವ ಅವರು, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಬಬಲೇಶ್ವರ ಮತ್ತು ಬೀಳಗಿ ತಾಲೂಕು ಘಟಗಳು ಆಯೋಜಿಸಿರುವ ವಿಜಯಪುರ ಮತ್ತು ಬಾಗಲಕೋಟೆ ದಿಲ್ಲೆ ಬಣಜಿಕ ಸಮಾಜದ ಸಂಘಟನಾ ಸಮಾವೇಶ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ಪ್ರತಿಭಾ ಪುರಸ್ಕಾರ ಮತ್ತು ಬಣಜಿಗ […]

ಎ.ಎಸ್.ಪಿ ಕಾಮರ್ಸ್ ಕಾಲೇಜಿನಲ್ಲಿ ಬಿಬಿಎ ವಿಭಾಗದಿಂದ ಮಂಚಾ-ಮಚ್ಚಾ ವೃತ್ತಿಪರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಎಸ್.ಪಿ. ಕಾಮರ್ಸ್ ಕಾಲೇಜಿನ ಬಿಬಿಎ ವಿಭಾಗ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿದ್ದ ಜಿಲ್ಲಾ ಮಟ್ಟದ ಮಂಚ್- ಮಚ್ಚಾ ವೃತ್ತಿಪರ ಸ್ಪರ್ಧೆಯಲ್ಲಿ ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಆವರಣದಲ್ಲಿರುವ ಬಿಬಿಎ ಕಾಲೇಜಿನಲ್ಲಿ ನಡೆದ ಈ ವೃತ್ತಿಪರ ಸ್ಪರ್ಧೆಯಲ್ಲಿ ರ್ಯಾಂಪ್ ವಾಕ್, ಟೀಮ್ ಬಿಲ್ಡಿಂಗ್, ರಸಪ್ರಶ್ನೆ, ಅಡುಗೆ, ಛಾಯಾಚಿತ್ರ ಸ್ಪರ್ಧೆಗಳು ನಡೆದವು.  ಜಿಲ್ಲೆಯ ನಾನಾ ಭಾಗಗಳಿಂದ 29 ಪಿಯು […]

ವಿಜಯಪುರ ಜಿಲ್ಲಾಡಳಿತದಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ

ವಿಜಯಪುರ: ಜ್ಞಾನಪೀಠ ಪುರಸ್ಕೃತ ಕನ್ನಡದ ಮೊದಲ ಸಾಹಿತಿ, ಕನ್ನಡ ನಾಡು-ನುಡಿಗೆ ತಮ್ಮ ಜೀವನವ ಮುಡಿಪಾಗಿಟ್ಟು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರ ಕವಿ, ವಿಶ್ವ ಮಾನವರಾಗಿ ರಾಷ್ಟ್ರದಲ್ಲಿ ತಮ್ಮ ಸಾಹಿತ್ಯ ಸಂಚಲನದಿAದ ಮೆರಗು ನೀಡಿ ರಾಷ್ಟ್ರ ಕವಿ ಎನಿಸಿಕೊಂಡವರು ಕುವೆಂಪು ಅವರು ಮಾತ್ರ ಎಂದು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು […]

ಯುರೊ ಕಿಡ್ಸ್ ಪ್ರೀ ಸ್ಕೂಲ್ ವತಿಯಿಂದ ಮಕ್ಕಳು, ಪೋಷಕರಿಗೆ ವಾರ್ಷಿಕ ಕ್ರೀಡಾಕೂಟ

ವಿಜಯಪುರ: ನಗರದ ಘೇವರಚಂದ ಕಾಲನಿಯಲ್ಲಿರುವ ಯುರೋ ಕಿಡ್ಸ್ ಪ್ರೀ ಸ್ಕೂಲಿನ ಮಕ್ಕಳು ಮತ್ತು ಪೋಷಕರಿಗಾಗಿ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶ್ರೀ ಶಿವಾಜಿ ಕೋ-ಆಪ್. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಂಜಯ ವಿ. ಜಾಧವ ಕ್ರೀಡಾಕೂಟ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು, ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ತುಂಬಾ ಮುಖ್ಯವಾಗಿದೆ.  ಪೋಷಕರು ಮತ್ತು ಶಾಲಾ ಶಿಕ್ಷಕರು ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಮಕ್ಕಳು […]

ಡಾ. ಬಿ. ಆರ್. ಅಂಬೇಡ್ಕರ ಅವರ ಬದುಕು, ಸಾಧನೆ: ವಿಶೇಷ ಉಪನ್ಯಾಸಕ ಕಾರ್ಯಕ್ರಮ

ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಓದು ಎಂಬ ಡಾ. ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಕುರಿತು ವಿಶೇಷ ನಗರದ ದರಬಾರ ಶಾಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾವರ್ಧಕ ಸಂಘದ ಸಂಯೋಜನಾಧಿಕಾರಿ ಡಾ. ವಿ. ಬಿ. ಗ್ರಾಮ ಪುರೋಹಿತ ಅವರು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಡಾ.ಅಂಬೇಡ್ಕರ್ ಅವರಲ್ಲಿನ ಓದಿನ ಹಂಬಲ ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಪ್ರಾಚಾರ್ಯ […]

ಗ್ರಾಂ. ಪಂ. ಸದಸ್ಯರ ಹಿತರಕ್ಷಣೆಯೇ ಸದಾ ಸಿದ್ಧನಿದ್ದೇನೆ- ಎಂಎಲ್‌ಸಿ ಸುನೀಲಗೌಡ ಪಾಟೀಲ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ಹಿತ ಕಾಪಾಡಲು ಸದಾ ಸಿದ್ಧನಿರುತ್ತೇನೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಇಂದು ಗುರುವಾರ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಆಶ್ರಯದಲ್ಲಿ 2023-24ನೇ ವರ್ಷದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ಧನ ಹೆಚ್ಚಳಕ್ಕೆ ಸದನದ ಒಳಗೆ […]