ನಾನಾ ನಿಗಮ ಮಂಡಳಿಗಳ ನೇಮಕಾತಿಗೆ ಅ. 28, 29ರಂದು ಸ್ಪರ್ಧಾತ್ಮಕ ಪರೀಕ್ಷೆ- ವ್ಯವಸ್ಥಿತ ನಡೆಸಲು ಅಪರ ಜಿಲ್ಲಾಧಿಕಾರಿ ಸೂಚನೆ

ವಿಜಯಪುರ: ನಾನಾ ನಿಗಮ ಮಂಡಳಿಗಳ ನೇಮಕಾತಿಗೆ ಜಿಲ್ಲೆಯ 64 ಪರೀಕ್ಷಾ ಕೇಂದ್ರಗಳಲ್ಲಿ ಅಕ್ಟೋಬರ್ 28 ಹಾಗೂ 29 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಸೂಚನೆ ನೀಡಿದ್ದಾರೆ. ನಗರದ ಗಾಂಧಿಚೌಕ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್ ಶಾರದಾ ಭವನದಲ್ಲಿ ಆಯೋಜಿಸಲಾಗಿದ್ದ  ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು,  ವ್ಯವಸ್ತಿತ ಪರೀಕ್ಷೆಗಾಗಿ 21 ಮಾರ್ಗಾಧಿಕಾರಿಗಳ ತಂಡ, ಪ್ರತಿ ಪರೀಕ್ಷಾ ಕೇಂದ್ರಕ್ಕೆ  ಓರ್ವ ವೀಕ್ಷಕರಂತೆ 64 ವೀಕ್ಷಕರು ಪ್ರತಿ […]

ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ ಪೌರ ಕಾರ್ಮಿಕರ ಆರೋಗ್ಯ ಕಾಪಾಡಲು- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಜಿಲ್ಲೆಯ ಪೌರಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಜಾಗೃತಿ ಮೂಡಿಸಬೇಕು. ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿನ 2013ರ 3ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸಮಾಜದ ಸ್ವಾಸ್ಥ ಕಾಪಾಡುವ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರ ಆರೋಗ್ಯ ತಪಾಸಣೆ ಅತಿ ಮುಖ್ಯವಾಗಿದೆ. […]

ರೈತರಿಗೆ ದಸರಾ ಶುಭ ಸಂದರ್ಭ ಅಂಗವಾಗಿ ಒಂದು ಗಂಟೆ ಹೆಚ್ಚಿಗೆ ವಿದ್ಯುತ್- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ರೈತರಿಗೆ ಕೃಷಿಗಾಗಿ ಇನ್ನು ಮುಂದೆ ಒಂದು ಗಂಟೆ ಹೆಚ್ಚಿಗೆ ವಿದ್ಯುತ್ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಡಿಸಿ, ಜಿ. ಪಂ. ಸಿ ಇ ಓ, ಎಸ್ಪಿ ಹಾಗೂ ಹೆಸ್ಕಾಂ ಅಧಿಕಾರಿಗಳೊಂದಿ ಸಭೆ ನಡೆಸಿ ಅವರು ಮಾತನಾಡಿದರು. ಈವರೆಗೆ ರೈತರಿಗೆ ಐದು ಗಂಟೆ ತ್ರಿ- ಫೇಸ್ ವಿದ್ಯುತ್ ನೀಡಲಾಗುತ್ತಿದೆ.  ಇನ್ನು ಮುಂದೆ ದಸರಾ ಕೊಡುಗೆಯಾಗಿ ಒಂದು ಗಂಟೆ ಹೆಚ್ಚಿಗೆ […]

ದಸರಾ ಅಂಗವಾಗಿ ಸಾರ್ವಜನಿಕರೊಂದಿಗೆ ಶಾಸಕ ಯತ್ನಾಳ ಅವರಿಂದ ಬನ್ನಿ ವಿನಿಮಯ

ವಿಜಯಪುರ: ವಿಜಯ ದಶಮಿ ಅಂಗವಾಗಿ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು. ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ ಶಾಸಕರು, ಫಲ್ಲಕ್ಕಿಯೊಂದಿಗೆ ನಗರದ ಎಪಿಎಂಸಿ ಹತ್ತಿರದ ನೀಲಕಂಠೇಶ್ವರ ದೇವಸ್ಥಾನದ ಬಳಿ ತೆರಳಿ ಬನ್ನಿ ಮುಡಿಯುವ ಕಾರ್ಯದಲ್ಲಿ ಭಾಗಿಯಾದರು. ನಂತರ ಮರಳಿ ಸಿದ್ದೇಶ್ವರ ದೇವಸ್ಥಾನ ಆವರಣಕ್ಕೆ ಆಗಮಿಸಿ, ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ರೈತರು, ಮುಖಂಡರು, […]

ದಸರಾ ಸಂಭ್ರಮ- ಸಾರ್ವಜನಿಕರು, ರೈತರು, ಮುಖಂಡರು, ಹಿತೈಷಿಗಳೊಂದಿಗೆ ಸಚಿವ ಎಂ. ಬಿ. ಪಾಟೀಲ ಬನ್ನಿ ವಿನಿಮಯ

ವಿಜಯಪುರ: ನಾಡಹಬ್ಬ ದಸರಾ ಅಂಗವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿದರು. ಬೆಳಿಗ್ಗೆಯಿಂದಲೇ ಸಚಿವರ ಗೃಹ ಕಚೇರಿಗೆ ಆಗಮಿಸಿದ ಅಪಾರ ಸಂಖ್ಯೆಯಲ್ಲಿದ್ದ ರೈತರು, ಮುಖಂಡರು, ಸಾರ್ವಜನಿಕರು, ಸಚಿವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಚಿವರಿಗೆ ಬನ್ನಿ ನೀಡಿ ಶುಭ ಕೋರಿದರು.  ಇದಕ್ಕೆ ಪ್ರತಿಯಾಗಿ ಸಚಿವರೂ ಕೂಡ ಎಲ್ಲರಿಗೂ ಬನ್ನಿ ನೀಡಿ ಶುಭ ಕೋರಿದರು.  ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ […]

ಬಂಜಾರಾ ಸಮುದಾಯದ ಜನ ಶ್ರಮಜೀವಿಗಳು- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ಬಂಜಾರಾ ಸಮುದಾಯದ ಜನ ಶ್ರಮಜೀವಿಗಳು.  ಯಾವುದೇ ಜಲಾಷಯ, ಸೇತುವೆ ಸೇರಿದಂತೆ ಕಟ್ಟಡಗಳ ನಿರ್ಮಾಣದಲ್ಲಿ ಬೆವರ ಹನಿ‌ ಇದೆ ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌರ‍್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಇಂದು ಮಂಗಳವಾರ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಎಲ್.ಟಿ. 1ರಲ್ಲಿ ದರ‍್ಗಾದೇವಿ ಮಹಾದ್ವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಂಜಾರಾ ಮಹಿಳೆಯರೂ ಕೂಡ ಶ್ರಮಜೀವಿಯಾಗಿ ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.  ಭಕ್ತಿ ಮತ್ತು ಶ್ರದ್ಧೆಗೆ ಈ […]

ದಸರಾ ಅಂಗವಾಗಿ ಪಾರೇಖ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ

ವಿಜಯಪುರ: ನಾಡಹಬ್ಬ ದಸರಾ ಮತ್ತು ವಿಜಯ ದಶಮಿ ಅಂಗವಾಗಿ ನಗರದ ಜ್ಞಾನಯೋಗಾಶ್ರಮದ ಹತ್ತಿರ ಇರುವ ಪಾರೇಖ ನಗರದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಾಲಯದ ಬನ್ನಿಗಿಡದ ಪಲ್ಲಕ್ಕಿಯನ್ನು ಹೊತ್ತ ಬಡಾವಣೆಯ ಹಿರಿಯರು ಮತ್ತು ಯುವಕರು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಹಿರಿಯರು, ಮಹಿಳೆಯರು ಮತ್ತು ಮಕ್ಕಳೂ ಕೂಡ ಪಲ್ಲಕ್ಕಿ ಉತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಕರ್ನಾಟಕದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ- ವಿಧಾನ ಸಭೆ ಚುನಾವಣೆ ಸೋಲಿನಿಂದ ಮೋದಿ, ಶಾ ಚೇತರಿಸಿಕೊಂಡಿಲ್ಲ- ಎಂ. ಬಿ. ಪಾಟೀಲ

ವಿಜಯಪುರ: ರಾಜ್ಯದಲ್ಲಿ‌ ಬಿಜೆಪಿ ಚೇತರಿಕೆ ಕಾಣುವುದಿಲ್ಲ. ಹೀಗಾಗಿ ಆ ಪಕ್ಷದ ಹೈಕಮಾಂಡ್ ಇನ್ನೂ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಅದು ಮುಳುಗುತ್ತಿರುವ ಹಡಗು ಅಲ್ಲ. ಈಗಾಗಲೇ ಮುಳುಗಿ ಹೋಗಿರುವ ಹಡಗು. ಹೀಗಾಗಿ ಈ ಪಕ್ಷಕ್ಕೆ […]

ನವರಾತ್ರಿ ಶುಭ ದಿನದಂದು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದ ಬಸವ ನಾಡಿನ ಪೋಷಕರು

ವಿಜಯಪುರ: ಹಿಂದೂ ಸಂಪ್ರದಾಯದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶುಭ ದಿನಗಳಿಗಾಗಿ ಕಾಯುವ ಸಂಪ್ರದಾಯ ಹಿಂದಿನಂದಲೂ ಆಚರಣೆಯಿಂದ ಬಂದಿದೆ.  ತಮ್ಮ ಮಕ್ಕಳು ವಿದ್ಯಾವಂತರಾಗಬೇಕು.  ಬುದ್ದಿವಂತರಾಗಬೇಕು.  ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರಬೇಕು ಎಂದು ಆಶಿಸುವ ಪೋಷಕರು ಬಾಲ್ಯದಲ್ಲಿ ಅವರು ಅಕ್ಷರ ಕಲಿಯುವ ಅಥವಾ ಶಾಲೆಗೆ ಸೇರುವ ದಿನ ಶುಭವಾಗಿದ್ದರೆ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ನಂಬಿಕೆಯಿಂದ ಸ್ವಾಮೀಜಿಗಳು ಅಥವಾ ಅರ್ಚಕರು ಇಲ್ಲವೇ ಜ್ಯೋತಿಷಿಗಳು ಬಳಿ ಪಂಚಾಂಗ ಕೇಳುತ್ತಾರೆ.  ಅದೇ ರೀತಿ, ಇಂಥ ಶುಭ ದಿನಗಳಿಗಾಗಿಯೂ ಭಾರತೀಯ ಸಂಪ್ರದಾಯದಲ್ಲಿ ಕೇವಲ […]

ಕಿತ್ತೂರು ರಾಣಿ ಚೆನ್ನಮ್ಮ ಅವರ ತತ್ವಾದರ್ಶಗಳು ದಾರಿದೀಪವಾಗಿವೆ- ಮಹಾದೇವ ಮುರಗಿ

ವಿಜಯಪುರ: ನಾಡು- ನುಡಿಗಾಗಿ, ಈ ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತೆತೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ  ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಈ […]