ಲಿಂಬೆಹಣ್ಣು, ಸಮುದ್ರದ ಮರಳಿನಿಂದ ತಯಾರಾಯ್ತು ನಾಡದೇವಿ- ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ಗೆಲ್ಲಲಿ ಎಂದು ಶುಭ ಸಂದೇಶ- ಎಲ್ಲಿದೆ ಗೊತ್ತಾ?

ವಿಜಯಪುರ: ವಿಶ್ವಾದ್ಯಂತ ಈಗ ವಿಶ್ವಕಪ್ ಕ್ರಿಕೆಟ್ ಹವಾ ಜೋರಾಗಿದೆ.  ಭಾರತದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಈಗ ಕ್ರಿಕೆಟ್ ಕ್ರೇಜ್ ಹೆಚ್ಚಿಸಿದೆ.  ಈ ಮಧ್ಯೆ ನಾಡಹಬ್ಬ ದಸರಾ ಸಂಭ್ರಮವೂ ಜೋರಾಗಿದೆ.  ಇದೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬಸವ ನಾಡು ವಿಜಯಪುರದಲ್ಲಿ ಓಡಿಶ್ಯಾದ ಖ್ಯಾತ ಕಲಾವಿದ ಮತ್ತು ಸಮುದ್ರದ ಮರಳಿನಿಂದ ಕಲಾಕೃತಿ ರಚಿಸುವ ಸುದರ್ಶನ ಪಟ್ನಾಯಕ್ ನಿರ್ಮಿಸಿರುವ ಮಾದರಿಯೊಂದು ಗಮನ ಸೆಳೆಯುತ್ತಿದೆ. ವಿಜಯಪುರ ನಗರದ ಶಹಾಪೇಟಿ ಗಲ್ಲಿಯ ಮುಖ್ಯ ರಸ್ತೆಯಲ್ಲಿ ಪ್ರತಿವರ್ಷ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸಲಾಗುವ ನಾಡದೇವಿ ಆಕರ್ಷಣೆಯ ಕೇಂದ್ರವಾಗುತ್ತಿದೆ.  […]

ಬೆಂಗಳೂರಿನಲ್ಲಿ ಐಟಿ ಧಾಳಿ ಪ್ರಕರಣ- ಗುತ್ತಿಗೆದಾರರ ಬಳಿ ಸಿಕ್ಕ ಹಣ ಬಿಜೆಪಿಯ 40% ಕಮಿಷನ್ ಹಣವಿರಬೇಕು- ಎಂ. ಬಿ. ಪಾಟೀಲ ವ್ಯಂಗ್ಯ

ವಿಜಯಪುರ: ಬೆಂಗಳೂರಿನಲ್ಲಿ ಗುತ್ತಿಗೆದಾರರ ಮೇಲೆ ನಡೆದ ಐಟಿ ಧಾಳಿಯಲ್ಲಿ ಸಿಕ್ಕ ಹಣ ಬಿಜೆಪಿಯವರು 40% ಕಮಿಷನ್ ಸಂಗ್ರಹದ ಹಣವಿರಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ವ್ಯಂಗ್ಯವಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಣ ಕಾಂಗ್ರೆಸ್ ಪಂಚರಾಜ್ಯ ಚುನಾವಣೆಗೆ ಬಳಸಲು ಸಂಗ್ರಹಿಸಿ ಇಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ಐಟಿ ದಾಳಿಯಲ್ಲಿ ಸಿಕ್ಕ ಹಣ […]

ಶ್ರೀ ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿಯಿಂದ ಈ ಬಾರಿ ನಾಡಹಬ್ಬದ ಅಂಗವಾಗಿ ದೇಹುಗಾಂವ ಗಾಥಾ ಮಂದಿರ ನಿರ್ಮಾಣ

ವಿಜಯಪುರ: ನಾಡಹಬ್ಬದ ಅಂಗವಾಗಿ ನಗರದ ರಾಮ ಮಂದಿರ ರಸ್ತೆಯಲ್ಲಿರುವ ಶ್ರೀ ಸಿದ್ದೇಶ್ವರ ಆದಿಶಕ್ತಿ ತರುಣ ಮಂಡಳಿ ಪ್ರತಿವರ್ಷ ನಾನಾ ಮಾದರಿಗಳನ್ನು ನಿರ್ಮಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಈ ಬಾರಿಯೂ ವಿಶೇಷ ಮಾದರಿ ನಿರ್ಮಿಸಿದೆ. 44ನೇ ದಸರಾ ಹಬ್ಬದ ಆಚರಣೆ ಅಂಗವಾಗಿ ಈ ಬಾರಿ ಪುಣೆಯ ದೇಹುಗಾಂವ ಗಾಥಾ ಮಂದಿರ ನಿರ್ಮಿಸಲಾಗಿದೆ.  ದಸರಾ ಅಂಗವಾಗಿ ಅ. 17 ರಂದು ಮಂಗಳವಾರ ರಾಮ ಮಂದಿರದಿಂದ ನಾಡದೇವಿಯ 101 ಕೆಜಿ ಬೆಳ್ಳಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಯಲಿದೆ.  ನಗರದ ಪ್ರಮುಖ ರಸ್ತೆಗಳಲ್ಲಿ […]

ಕುಮಟಗಿ ಬೇಸಿಗೆ ಅರಮನೆ ಕೆರೆಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ, ಪರಿಶೀಲನೆ

ವಿಜಯಪುರ: ಆದಿಲ್ ಷಾಹಿ ಕಾಲದಲ್ಲಿ ನಿರ್ಮಿಸಲಾಗಿರುವ ಮತ್ತು ಬೇಸಿಗೆ ಅರಮನೆ ಕೆರೆ ಎಂದೇ ಖ್ಯಾತವಾಗಿರುವ ಕುಮಟಗಿ  ಕೆರೆ ಮತ್ತು ಸ್ಮಾರಕಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕುಮಟಗಿ ಬೇಸಿಗೆ ಅರಮನೆ ಕೆರೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅವರು ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.  ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸರಕಾರದ ಜಮೀನುಗಳನ್ನು ಗುರುತಿಸಿ ನಕ್ಷೆ ಸಿದ್ಧಪಡಿಸಿ ಸಲ್ಲಿಸಲು ಕಂದಾಯ ನಿರೀಕ್ಷಕರಿಗೆ ಮತ್ತು ಸ್ಮಾರಕ ಸುತ್ತಮುತ್ತಲಿನ ಕಸ-ಕಂಟಿಗಳನ್ನು ಸ್ವಚ್ಛಗೊಳಿಸುವ ಕ್ರಮಕ್ಕಾಗಿ ಭಾರತೀಯ […]

ಅಕ್ಟೋಬರ್ 16, 17 ರಂದು ಸಚಿವ ಎಂ. ಬಿ. ಪಾಟೀಲ ವಿಜಯಪುರ ಜಿಲ್ಲಾ ಪ್ರವಾಸ- ಇಲ್ಲಿದೆ ಕಾರ್ಯಕ್ರಮಗಳ ವೇಳಾಪಟ್ಟಿ

ವಿಜಯಪುರ:  ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಅಕ್ಟೋಬರ್ 16 ರಂದು ಸೋಮವಾರ ಮತ್ತು ಅಕ್ಟೋಬರ್ 17ರಂದು ಮಂಗಳವಾರ  ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.  ಅ. 16ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಸಭೆ ನಡೆಸಲಿದ್ದಾರೆ.  ನಂತರ ಜಿಲ್ಲೆಯಲ್ಲಿರುವ ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆ, ಮುಂದಿನ ಜನತಾ ದರ್ಶನ ಕಾರ್ಯಕ್ರಮ ನಿಗದಿ ಮಾಡುವುದು, ಕೋಟಿ ವೃಕ್ಷ ಅಭಿಯಾನ ಅಂಗವಾಗಿ ಆಯೋಜಿಸಲಾಗಿರುವ […]

ಭೂತನಾಳ ತಾಂಡಾ ಶ್ರೀ ದುರ್ಗಾದೇವಿ ದೇವಾಲಯ ಅಭಿವೃದ್ಧಿಗೆ ಕೇಂದ್ರದಿಂದ ರೂ. 1 ಕೋ. ವಿಶೇಷ ಅನುದಾನ ಮಂಜೂರು ಮಾಡಿಸಿದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ನಗರದ ಹೊರವಲಯದ ಭೂತನಾಳ ತಾಂಡಾದಲ್ಲಿರುವ ಪುರಾತನ ಶ್ರೀ ದುರ್ಗಾದೇವಿ ದೇವಾಲಯದ ಸರ್ವತೋಮುಖ ಪ್ರಗತಿಗಾಗಿ ಸಂಸದ ರಮೇಶ ಜಿಗಜಿಣಗಿ ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆಯಿಂದ ರೂ. 1 ಕೋ. ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಬಾಬು ಚವ್ಹಾಣ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಂಸದರು ಇಲಾಖೆಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ರೂ. 1 ಕೋ. ವಿಶೇಷ ಅನುದಾನ ಮಂಜೂರು ಮಾಡಿಸಿದ್ದಾರೆ.  ಸಂಸದರು ಅಭಿವೃದ್ಧಿ ಪರ ರಾಜಕಾರಣಿಯಾಗಿದ್ದು, ಆಧ್ಯಾತ್ಮಿಕತೆಗೂ […]

ಜಿಲ್ಲೆಯ ಎಲ್ಲ 9 ಸಕ್ಕರೆ ಕಾರ್ಖಾನೆಗಳು ನ. 1ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಸರಕಾರದ ಆದೇಶದಂತೆ ಜಿಲ್ಲೆಯ ಎಲ್ಲ ಒಂಬತ್ತು ಸಕ್ಕರೆ ಕಾರ್ಖಾನೆಗಳು ನವೆಂಬರ್ 1ರಿಂದ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ನುರಿಸಿದ 14 ದಿನಗಳಲ್ಲಿ ನಿಗದಿ ಪಡಿಸಿದ ಎಫ್. ಆರ್. ಪಿ ದರದಂತೆ ಕಬ್ಬಿನ ಬಿಲ್ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾದರು. ಪ್ರಸಕ್ತ 2023-24 ನೇ ವರ್ಷದ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕರು, ನಿರ್ದೇಶಕರುಗಳು, ಮುಖ್ಯ ಕಾರ್ಯ […]

ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು- ಬಿ. ಎಂ. ಕೋಕರೆ

ವಿಜಯಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ವ್ಹಾಲಿಬಾಲ್ ಸಂಸ್ಥೆಯ ಉಪಾಧ್ಯಕ್ಷ ಬಿ. ಎಂ. ಕೋಕರೆ ಆಗ್ರಹಿಸಿದ್ದಾರೆ. ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದ ಆಶ್ರಯದಲ್ಲಿ ಬುಧವಾರ ಪ್ರಾರಂಭವಾದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಲಬುರಗಿ ವಲಯ ಪುರುಷರ ಹಾಗೂ ಮಹಿಳೆಯರ ವಿಭಾಗದ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಪುರ […]

ಯುದ್ಧಪೀಡಿತ ಇಸ್ರೆಲ್ ನಿಂದ ಬಸವನಾಡಿಗ ವಾಪಸ್ಸಾದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ.

ವಿಜಯಪುರ: ಯುದ್ಧ ಪೀಡಿತ ಇಸ್ರೆಲಿನಲ್ಲಿ ಸಿಲುಕಿದ್ದ ಬಸವನಾಡು ವಿಜಯಪುರದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ. ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಇಸ್ರೇಲ್ ನ ಜೆರುಸೆಲಂನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಿಸಿದ ಅವರು, ವಿಜಯಪುರಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ ಅವರನ್ನು ಭೇಟಿ ಮಾಡಿದರು.  ಅಲ್ಲದೇ, ಇಸ್ರೆಲ್ ನಲ್ಲಿ ತಾವು ಎದುರಿಸಿದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸುಮೇಶ ಕೆ. ಜಿ. ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು. ಈ […]

ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ರವಿ ಕಿತ್ತೂರ ಅವಿರೋಧ ಆಯ್ಕೆ

ವಿಜಯಪುರ: ಜಿಲ್ಲಾಸ್ಪತ್ರೆಯ ಎ ಆರ್ ಟಿ ವಿಭಾಗದ ಹಿರಿಯ ಆಪ್ತ ಸಮಾಲೋಚಕಮುಖ್ಯಸ್ಥ ರವಿ ಕಿತ್ತೂರ ಅವರು ರಾಜ್ಯ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 35 ಜನ ಪದಾಧಿಕಾರಿಗಳು ಚುನಾವಣೆಯಲ್ಲಿ 34 ಜನ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರಲ್ಲಿ ರವಿ ಕಿತ್ತೂರ ಅವರು ಸಂಘಟನಾ ಕಾರ್ಯದರ್ಶಿಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ.  ಕಳೆದ ಬಾರಿ ಅವರು ಸಹ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ ಮಾರ್ಗದರ್ಶನದಲ್ಲಿ ಸಚಿವರಾದ ಬೈರತಿ ಸುರೇಶ, ಮಾಜಿ ಸಚಿವರಾದ ಎಚ್. […]