ಸೆ. 27 ರಂದು ಈದ್ ಮಿಲಾದ್- ಗುಮ್ಮಟ ನಗರಿಯ ಆಸಾರ ಮಹಲದಲ್ಲಿ ಮುಯ್ಯೆ ಮುಬಾರಕ ಸಂದಲ ಉರುಸು

ವಿಜಯಪುರ: ಪವಿತ್ರ ಈದ್- ಮೀಲಾದ್ ಅಂಗವಾಗಿ ನಗರದ ಆಸಾರ ಮಹಲದಲ್ಲಿರುವ ಶಿರಸ ಸಂದಲ ಹಾಗೂ ಮಯ್ಯ ಮುಕ್ತಾರಕದ ಪೈಗಂಬರ ರವರ ಮಹಮ್ಮದ ಕಾರ್ಯಕ್ರಮಗಳು ಸೆ. 27 ರಂದು ಬುಧವಾರ ಸಂ. 6 ರಿಂದ ಗುರುವಾರ ಬೆ. 5 ವರೆಗೆ  ಮುಯ್ಯೆ ಮುಬಾರಕ ಸಂದಲ ಉರುಸು ನಡೆಯಲಿವೆ. ಸೌದಿ ಅರಬ ಎಂಬುವವರು ಆಸಾರ ಮಹಲದಲ್ಲಿ ಸದ್ಯಯಿರುವ ಮುಯೆ ಮುಬಾರಕದ ಹಿಂದೆ ಒಂದು ಇತಿಹಾಸವೇ ಇದೆ.  ಆಸಾರ ಮಹಲದಲ್ಲಿರಿಸಿರುವ ಮಹಮ್ಮದ ಪೈಗಂಬರ ರವರ ಮುಯೆ ಮುಬಾರಕವನ್ನು ರಾಷ್ಟ್ರದಿಂದ 1005 ನೇ […]

ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘಕ್ಕೆ ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ- ರಾಜಶೇಖರ ಮಗಿಮಠ

ವಿಜಯಪುರ: ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘ ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸಂಘದ 22ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕು ಈ ವರ್ಷ ರೂ. 4.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು. 1928 ಸಂಘದ ಸದಸ್ಯರು ಸಹ ಸದಸ್ಯರಿದ್ದು, ಸಂಘ ರೂ. 32.06 ಲಕ್ಷ ಷೇರು ಬಂಡವಾಳ ಹೊಂದಿದೆ.  […]

2ಎ ಮೀಸಲಾತಿ ಸಿಗುವವರೆಗೂ ವಿರಮಿಸುವುದಿಲ್ಲ- ಕೂಡಲ ಸಂಗಮ ಸ್ವಾಮೀಜಿ- ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ನಡೆಸಿ ಒತ್ತಾಯ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮುಂಬರುವ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕು.  ಇಲ್ಲದಿದ್ದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಅವರು, ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. […]

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಧನಾತ್ಮಕ ಚಿಂತನೆಗೆ ಸಹಕಾರಿಯಾಗಿವೆ- ರಾಜಶೇಖರ ಧೈವಾಡಿ

ವಿಜಯಪುರ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಶಾಂತಿ, ಸಹಬಾಳ್ವೆ, ಸಾಂಘಿಕ ಜೀವನ ಹಾಗೂ ಸಂತೃಪ್ತ ಬದುಕಿಗೆ ಸಹಕಾರಿಯಾಗುತ್ತವೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ಧೈವಾಡಿ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿವೃತ್ತ ನೌಕರರ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ […]

ಗುಮ್ಮಟ ನಗರಿಯಲ್ಲಿ ಶೋ ರೋಂ ಮೇಲ್ಛಾವಣಿ ಮೇಲೆ 102 ಕಿ. ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ- ಎಲ್ಲಿ, ಅದರ ವಿಶೇಷತೆಗಳೇನು ಗೊತ್ತಾ?

ವಿಜಯಪುರ: ಬಸವ ನಾಡಿನಲ್ಲಿ ಇದೇ ಮೊದಲ ಬಾರಿಗೆ ಅಟೊ ಮೊಬೈಲ್ ಶೋ ರೂಂ ಒಂದು ಮೇಲ್ಛಾವಣಿ ಮೇಲೆ ಪ್ರತಿನಿತ್ಯ 102 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಸ್ವಾವಲಂಬಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿಜಯಪುರ ನಗರದ ಆಲಮಟ್ಟಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿರುವ ನಾರಾಯಣ ಹುಂಡೈ ಕಾರ್ಸ್ ಪ್ರೈವೆಲದ ಲಿಮಿಟೆಡ್ ಮಾಲಿಕರಾದ ಗೋವಿಂದ ಜೋಶಿ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಲು ಬೆಂಗಳೂರಿನ ಓ ಆರ್ ಬಿ ಎನರ್ಜಿ ಕಂಪನಿಯಿಂದ […]

ಬ್ಯಾಂಕುಗಳಿಂದ ಸಾಲ ಪಡೆಯುವಾಗ ವಹಿಸುವ ಆಸಕ್ತಿ ಮರಳಿಸುವಾಗಲು ಇರಬೇಕು- ಶ್ರೀ ಗುರು ಶಾಂತಲಿಂಗ ಶಿವಾಚಾರ್ಯ

ವಿಜಯಪುರ: ಬ್ಯಾಂಕುಗಳಿಂದ ಸಾಲ ಪಡೆಯುವಾಗ ತೋರಿಸುವ ಆಸಕ್ತಿಯನ್ನು ಸಮಯಕ್ಕೆ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬೊಮ್ಮನಹಳ್ಳಿಯ ಶ್ರೀ ಗುರು ಶಾಂತಲಿಂಗ ಶಿವಾಚಾರ್ಯರು ಹೇಳಿದ್ದಾರೆ. ನಗರದ ಎಪಿಎಂಸಿಯಲ್ಲಿರುವ ಶ್ರೀ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಶ್ರೀ ಸೌಹಾರ್ದ ಸಹಕಾರಿ ಸಂಘ 2022 -23ನೇ ಆರ್ಥಿಕ ವರ್ಷದ 4ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ನೂರು ಜನರ ಹಣ ಕೂಡಿಸಿ ಒಬ್ಬರಿಗೆ ಸಾಲದ ರೂಪದಲ್ಲಿ ಕೊಡಬೇಕಾಗುತ್ತದೆ.  ಹಣ ತರುವುದು ಮತ್ತು ಕೊಡುವುದು […]

ಪ್ರತಿಷ್ಠಿತ ಶ್ರೀ‌ ಸಿದ್ಧೇಶ್ವರ ಸಹಕಾರಿ ಬ್ಯಾಂಕಿಗೆ ಈ ವರ್ಷ ರೂ. 1.22 ಕೋ. ನಿವ್ವಳ ಲಾಭ- ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ

ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ 1.22 ಕೋ. ನಿವ್ವಳ ಲಾಭ- ಅಧ್ಯಕ್ಷ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ. 1. 22 ಕೋ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ ತಿಳಿಸಿದ್ದಾರೆ. ನಗರದ ಆಶ್ರಮ ರಸ್ತೆಯಲ್ಲಿರುವ ಶ್ರೀ ಪರಮಪೂಜ್ಯ ಶ್ರೀ ಸಂಗನಬಸವ ಶಿವಯೋಗಿಗಳ ಸಮುದಾಯ ಭವನದಲ್ಲಿ ನಡೆದ ಬ್ಯಾಂಕಿನ‌ 111ನೇ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು‌ ಮಾತನಾಡಿದರು. ರಾಜ್ಯದ ಸಹಕಾರಿ ರಂಗದಲ್ಲಿ ಬೆಳೆದ ಕೆಲವೇ ಬ್ಯಾಂಕುಗಳಲ್ಲಿ ನಮ್ಮ […]

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ -4ರ ಯೋಜನೆ- ಕಾಮಗಾರಿಗಳ ಪರಿಶೀಲನೆ ನಡಸಿದ ಡಿಸಿ ಟಿ. ಭೂಬಾಲನ್

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಕೋಲ್ಹಾರ, ಮನಗೂಳಿ ಹಾಗೂ ನಿಡಗುಂದಿ ಪಟ್ಟಣ ಪಂಚಾಯಿತಿ ಮತ್ತು ಬಸವನ ಬಾಗೇವಾಡಿ ಪುರಸಭೆ ವ್ಯಾಪ್ತಿಯಡಿ ಕೈಗೊಂಡಿರುವ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ-4ರ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಕೋಲ್ಹಾರ, ಮನಗೂಳಿ ಹಾಗೂ ನಿಡಗುಂದಿ ಮತ್ತು ಬಸವನ ಬಾಗೇವಾಡಿಗೆ ಭೇಟಿ ನೀಡಿದ ಅವರು, ಈ ಕಾಮಗಾರಿಯ ಸಿಸಿ ರಸ್ತೆ ಹಾಗೂ ಡಾಂಬರ ರಸ್ತೆಗಳ ಪರಿಶೀಲನೆ ನಡೆಸಿದರು. ಅಂದಾಜು ಪತ್ರಿಕೆಯಂತೆ ಕಾಮಗಾರಿಯ ಅಳತೆ ಹಾಗೂ ಗುಣಮಟ್ಟ ಕಾಪಾಡಿಕೊಂಡು ಕಾರ್ಯ ನಿರ್ವಹಿಸಲು ಅಭಿಯಂತರರು, […]

ಪೌರ ಕಾರ್ಮಿಕರ ಯೋಜನೆಗಳ ಸದುಪಯೋಗ ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಿ- ಮಹಾದೇವ ಮುರಗಿ ಕರೆ

ವಿಜಯಪುರ: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತೀ ಮುಖ್ಯವಾಗಿದೆ. ಪೌರ ಕಾರ್ಮಿಕರ ಹಿತ ಕಾಪಾಡಲು ಸರಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಪೌರ ಕಾರ್ಮಿಕರಿಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಕರೆ ನೀಡಿದ್ದಾರೆ. ನಗರಾಭಿವೃದ್ದಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ನಗರದ ಬೇಗಂ ತಲಾಬ್ ಆವರಣದಲ್ಲಿ ಆಯೋಜಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಸೇವೆ […]

ರಾಜ್ಯಕ್ಕೆ ಮೂರು ಜನ ಡಿಸಿಎಂ ಅಗತ್ಯವಿಲ್ಲ- ಸಿಎಂ, ಡಿಸಿಎಂ ಸಮರ್ಥರಿದ್ದಾರೆ- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ರಾಜ್ಯಕ್ಕೆ ಮೂರು ಡಿಸಿಎಂ ಗಳ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಉಪಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಹೈಕಮಾಂಡ್ ನಿರ್ಣಯ ಮಾಡಿದರೆ ಅದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎ. ಪಿ. ಎಂ. ಸಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಧ್ಯಕ್ಕೆ ಹೊಸದಾಗಿ ಡಿಸಿಎಂ ಗಳ ಅವಶ್ಯಕತೆ ಇಲ್ಲ. ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯ […]