ದಕ್ಷಿಣ ಭಾರತದಲ್ಲಿ ಸತತವಾಗಿ 7ನೇ ಬಾರಿ ಸಂಸದನಾಗಿ ಆಯ್ಕೆಯಾದರೂ ಸಚಿವ ಸ್ಥಾನ ನೀಡಿಲ್ಲ- ದಲಿತರು ಬಿಜೆಪಿಗೆ ಮತ ಹಾಕಿಲ್ವಾ? ರಮೇಶ ಜಿಗಜಿಣಗಿ ಬೇಸರದ ನುಡಿ

ವಿಜಯಪುರ: ದಕ್ಷಿಣ ಭಾರತದಲ್ಲಿ ಸತತ ಏಳನೇ ಬಾರಿ ದಲಿತ ಸಮುದಾಯದಿಂದ ಸಂಸದನಾಗಿ ಆಯ್ಕೆಯಾಗಿದ್ದರೂ ಕೇಂದ್ರದಲ್ಲಿ ನನಗೆ ಸಚಿವ ಸ್ಥಾನ ನೀಡದಿರುವುದು ನೋವು ತಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರದಲ್ಲಿ ಸಂಸದರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ದಲಿತ ಸಮುದಾಯದಿಂದ ಸತತವಾಗಿ ಏಳು ಬಾರಿ ಸಂಸದನಾಗಿ ನಾನೊಬ್ಬನೇ ಆಯ್ಕೆಯಾಗಿದ್ದೇನೆ.  ಹೀಗಿದ್ದರೂ ಸಚಿವ ಸ್ಥಾನಗಳನ್ನು ಮೇಲ್ವರ್ಗದವರಿಗೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ.  ನನಗೆ ಜನ ಅವಶ್ಯವಾಗಿದ್ದಾರೆ.  ಸಚಿವನಾಗಬೇಕು […]

ಡೆಂಗ್ಯೂ ನಿಯಂತ್ರಣ: ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ ಸಮ್ಮುಖದಲ್ಲಿ ಪಾಲಿಕೆಯಿಂದ ಕ್ರಿಮಿನಾಶಕ ಸಿಂಪಡಣೆ

ವಿಜಯಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಜ್ವರದ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ವಾರ್ಡ್ ಸಂಖ್ಯೆ 32 ರಲ್ಲಿ ಬರುವ ನಾನಾ ಬಡಾವಣೆಗಳಲ್ಲಿ ಡೆಂಗ್ಯೂ ಹಾಗೂ ಇತರೆ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕಾಗಿ ಲಾರ್ವಾ ಸಂತತಿ ಉತ್ಪತ್ತಿ ತಾಣಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿವರುದ್ರ ಬಾಗಲಕೋಟ, ರಾಜ್ಯಾದ್ಯಂತ ಡೆಂಗ್ಯೂ ಹಾವಳಿ ಹೆಚ್ಚಾಗಿದ್ದು ಕೆಲವೇ ದಿನಗಳಲ್ಲಿ 700 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.  ಶುದ್ಧ ನೀರು ಇರುವ ಸಣ್ಣಪುಟ್ಟ ಸ್ಥಳದಲ್ಲಿಯೇ ಡೆಂಗ್ಯೂ ಜ್ವರ ಹರಡುವ ಇಡಿಸ್ […]

ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಾಗೃತಿ ಮೂಡಿಸಲು ಡಿಸಿ ಟಿ. ಭೂಬಾಲನ ಸೂಚನೆ

ವಿಜಯಪುರ: ಜಲಮೂಲಗಳಾದ ನದಿ, ಕೆರೆ, ಕಾಲುವೆ ಮತ್ತು ಭಾವಿಗಳು ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಔಷದೀಯ ಗುಣವುಳ್ಳ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮುಂದಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸೂಚಿಸಿದ್ದಾರೆ. ಜಿಲ್ಲಾದ್ಯಂತ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಕುರಿತು ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪರಿಸರ ಅಧಿಕಾರಿಗಳು, ವಿಜ.ಯಪುರ ಕೆ. ಎಸ್. ಪಿ. ಎ. ಸಿ. ಬಿ ಮತ್ತು ಮುಖ್ಯಾಧಿಕಾರಿಗಳೊಂದಿಗೆ ನಡೆದ ಸಭೆಯ […]

ಮೇಯರ್, ಉಪಮೇಯರ್, ಆಯುಕ್ತರಿಂದ ನಗರ ಪ್ರದಕ್ಷಿಣೆ- ಸ್ವಚ್ಛತೆ, ಅಭಿವೃದ್ದಿ ಕಾರ್ಯಗಳ ಪರಿಶೀಲನೆ

ವಿಜಯಪುರ: ಮಹಾನಗರ ಪಾಲಿಕೆಯ ಮೇಯರ್ ಮಹೇಜಬಿನ್ ಅಬ್ದುಲ್ ರಜಾಕ್ ಹೊರ್ತಿ, ಉಪಮೇಯರ್ ದಿನೇಶ ಹಳ್ಳಿ, ಆಯುಕ್ತ ವಿಜಯಕುಮಾರ ಮೆಕ್ಕಳಕಿ ಸೇರಿದಂತೆ ನಾನಾ ಸದಸ್ಯರು ಇಂದು ಬೆಳಿಗ್ಗೆ ವಿಜಯಪುರ ನಗರದ ನಾನಾ ಕಡೆಗಳಲ್ಲಿ ಪರಿವೀಕ್ಷಣೆ ನಡೆಸಿ, ನಗರದ ಸ್ವಚ್ಛತೆ ಹಾಗೂ ಅಭಿವೃದ್ದಿ ಕಾರ್ಯಗಳ ಪರಿಶೀಲನೆ ನಡೆಸಿದರು. ಬೆಳಿಗ್ಗೆ ನಗರದ ಗಾಂಧಿಚೌಕಿನಿಂದ ಪರಿವೀಕ್ಷಣೆ ಆರಂಭಿಸಿದ ಅವರು, ಲಾಲಬಹಾದ್ದೂರ ಶಾಸ್ತ್ರಿ, ಮಾರುಕಟ್ಟೆ ಹಾಗೂ ನೆಹರು ಮಾರುಕಟ್ಟೆಯಲ್ಲಿ  ಕೆಲವೊಂದು ಉದ್ದಿಮೆದಾರರು ಅಂಗಡಿಯ ಮುಂಭಾಗದಲ್ಲಿ ಅತಿಕ್ರಮಣ ಮಾಡಿರುವುದನ್ನು ಕಂಡು, ಕೂಡಲೇ ಅತಿಕ್ರಮಣವಾದ ಜಾಗವನ್ನು ತೆರವುಗೊಳಿಸುವಂತೆ […]

ಮತ್ತೆ ಬಾಯ್ಲರ್ ಸ್ಪೋಟ- 15 ಕಾರ್ಮಿಕರು ಬಚಾವ್- ನಂದಿ ಸರಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ

ವಿಜಯಪುರ: ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್ ಸ್ಪೋಟಗೊಂಡಿದ್ದು, ಅದೃಷ್ಟವಶಾತ ಅಲ್ಲಿ ಕೆಲಸ ಮಾಡುತ್ತಿದ್ದ 15 ಜನ ಕಾರ್ಮಿಕರು ಕೆಲವೇ ಕ್ಷಣಗಳಲ್ಲಿ ಪಾರಾಗಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಸುಕಿನ ಜಾವ ಈ ಸ್ಪೋಟ ಸಂಭವಿಸಿದೆ.  ಈ ಸಂದರ್ಭದಲ್ಲಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ 15 ಜನ ಕಾರ್ಮಿಕರು ಚಹ ಸೇವಿಸಲು ಹೊರಗಡೆ ತೆರಳಿದ್ದರು.  ಅಲ್ಲಿ ಯಾರೂ ಇಲ್ಲದಿರುವಾಗ ಈ ಸ್ಪೋಟ ಸಂಭವಿಸಿದೆ.  ಇದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. […]

ಬಿ.ಎಲ್.ಡಿ.ಇ. ಡೀಮ್ಡ್ ವಿವಿ- ಕೇಂದ್ರ ಆಯುಷ್ ಇಲಾಖೆಯ ಹೋಮಿಯೋಪಥಿ ಸಂಶೋಧನೆ ಪರಿಷತ ಮಧ್ಯೆ ಒಡಂಬಡಿಕೆ

ವಿಜಯಪುರ: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಕೇಂದ್ರ ಆಯುಷ್ ಇಲಾಖೆಯ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಧ್ಯೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಸಲಹೆಗಾರ ಮತ್ತು ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಡಾ. ಆರ್. ಎಸ್. ಮುಧೋಳ ಮತ್ತು ಕೇಂದ್ರ ಆಯುಷ ವಿಭಾಗದ ಹೋಮಿಯೋಪಥಿ ಸಂಶೋಧನೆ ಪರಿಷತ್ತಿನ ಮಹಾನಿರ್ದೇಶಕ ಡಾ. ಸುಭಾಶ ಕೌಶಿಕ ಅವರು […]

ಸರಕಾರದ ಯೋಜನೆಗಳ ಲಾಭ ದೊರಕಿಸಿ ತಾಂಡಾಗಳ ಅಭಿವೃದ್ದಿಗಾಗಿ ಒತ್ತು ನೀಡಿ- ನಿಗಮದ ಅಧ್ಯಕ್ಷ ಜಯದೇವ ನಾಯಕ ಸೂಚನೆ

ವಿಜಯಪುರ: ಅತಿ ಹೆಚ್ಚು ತಾಂಡಾಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿನ ತಾಂಡಾಗಳಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ, ಶೈಕ್ಷಣಿಕ ಸುಧಾರಣೆಗೆ ಸರಕಾರ ಜಾರಿಗೊಳಿಸಿರುವ ಯೋಜನೆಗಳ ಲಾಭ ದೊರಕಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿ ಜನರಿಗೆ ಸವಲತ್ತುಗಳನ್ನು ದೊರಕಿಸುವಂತೆ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಎನ್. ಜಯದೇವ ನಾಯಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ತಾಂಡಾಗಳಲ್ಲಿನ ಜನರ ಆರೋಗ್ಯ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಆರೋಗ್ಯ- […]

ಸಹಿಷ್ಣುತೆಯನ್ನು ಕೆದಕುವುದು ಕೆಲವರ ಚಾಳಿಯಾಗಿದೆ- ರಾಮ ಮಂದಿರ ಕಾಮಗಾರಿಯಲ್ಲಿ ದೋಷವಿಲ್ಲ- ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ವಿಜಯಪುರ: ಹಿಂದೂಗಳ ಸಹಿಷ್ಣತೆ ಹೊಂದಿದವವರನ್ನು ಮತ್ತು ಕೆಡವುದುದ  ಕೆಲವರ ಚಾಳಿಯಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಕುರಿತು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ ಗಾಂಧಿ ನೀಡಿರುವ ಹೇಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಶ್ರೀಗಳು, ಸಹಿಷ್ಣು ಆಗಿರುವವರನ್ನು ಕೆದಕುವುದು,ಮತ್ತು ಕೆಡುವುವುದು ಕೆಲವರ ಚಾಳಿ ಆಗಿದೆ.  ಸಹಿಷ್ಟತೆ ಗುಣ ಹೊಂದಿರುವವರನ್ನು  ಕೂಡ ಕೆಣಕಬೇಕು.  ಹಾಗೆ ಕೆಣಕಿ ಒಂದಿಷ್ಟು […]

ಯಕ್ಕುಂಡಿಯಲ್ಲಿ ಶ್ರೀ ಹನುಮಾನ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ- ಕಾಶಿ ಜಗದ್ಗುರುಗಳು ಭಾಗಿ

ವಿಜಯಪುರ: ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನದ ಬದರಿನಾಥ ಶೈಲಿಯ ಶಿಖರದ ಕಳಸಾರೋಣದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆರತಿ ಮತ್ತು ಕುಂಭಮೇಳದೊಂದಿಗೆ ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ, ಶಿಖರದ ಪಂಚ ಕಳಸ ಮೆರವಣಿಗೆ ಹಾಗೂ ಧರ್ಮಸಭೆ ನಡೆಯಿತು.  ಈ ಧರ್ಮಸಭೆಯನ್ನು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಗ್ರಾಮಸ್ಥರ […]

ರಾಷ್ಟ್ರೀಯ ಶಸ್ತ್ರ ಚಿಕಿತ್ಸೆ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಂದ ರಕ್ತದಾನ

ವಿಜಯಪುರ: ರಾಷ್ಟ್ರೀಯ ಶಸ್ತ್ರ ಚಿಕಿತ್ಸೆ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಬಿ ಎಲ್ ಡಿ ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ರಕ್ತ ನಿಧಿ ಕೇಂದ್ರದಲ್ಲಿ ಸೋಮವಾರ ವೈದ್ಯರಿಂದ ರಕ್ತದಾನ ಶಿಬಿರ ನಡೆಯಿತು. ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಭಾರತೀಯ ಶಸ್ತ್ರ ಚಿಕಿತ್ಸಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಸುಮಾರು 15 ಜನ ವೈದ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ. ಎಂ. ಬಿ. […]