ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಪಡೆದು ವಿಜೃಂಭಣೆಯಿಂದ ಆಚರಣೆ ಮಾಡಿ- ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರವಿರಲಿದೆ- ಸಚಿವ ಎಂ ಬಿ ಪಾಟೀಲ

ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಪೊಲೀಸರ ಅನುಮತಿ ಪಡೆಯಬೇಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೂ ಕಾನೂನಿಗಿಂತ ಮೇಲಲ್ಲ.  ಕಾನೂನು ರಚನೆ ಮಾಡುವವರೇ ನಾವು.  ಶಾಸಕರು ಕಾನೂನನ್ನು ಪಾಲಿಸಬೇಡಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ.  ಇವತ್ತು ಅಹಿತಕರ ಘಟನೆಗಳು ಆಗಬಾರದು.  ಗಣೇಶೋತ್ಸವ ಆಚರಣೆ ವ್ಯವಸ್ಥಿತ ರೀತಿಯಲ್ಲಿ […]

ನಾನು ಯತ್ನಾಳ ಸ್ನೇಹಿತರಿಬ್ಬರೂ ಒಂದೇ ಇದ್ದೇವೆ- ಸೋಷಿಯಲ್ ಮೀಡಿಯಾದಲ್ಲಿ ತೇಜೋವಧೆ ಸಲ್ಲದು- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಯತ್ನಾಳ ಮತ್ತು ನಾನು ಸ್ನೇಹಿತರು.  ಇಂದು ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದೇವೆ.  ನಾವೆಲ್ಲ ಒಂದೇ ಇದ್ದೇವೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಇಬ್ಬರೂ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದರೂ ಯಾಕೆ ಮಾತನಾಡಿಲ್ಲ? ಭಿನ್ನಮತ ಮುಂದುವರೆದಿದೆಯೇ ಎಂದು ಪತ್ರಕರ್ತರು ಕೇಳಿದಾಗ ಸಂಸದ ರಮೇಶ ಜಿಗಜಿಣಗಿ ಜಾಣತನದ ಉತ್ತರ ನೀಡಿದರು. ನಾವಿಬ್ಬರೂ […]

ಬಿಜೆಪಿ ಮುಳುಗಿದ ಹಡಗು- ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟುವ ಸಮಯ ಬರಲಿದೆ- ಸಚಿವ ಎಂ ಬಿ ಪಾಟೀಲ ವಾಗ್ದಾಳಿ

ವಿಜಯಪುರ: ಬಿಜೆಪಿ ಮುಳುಗಿದ ಹಡಗು.  ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟುವ ಸಮಯ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸೈನಿಕ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಚೈತ್ರಾ ಕುಂದಾಪುರ ಅವರು ಬಿಜೆಪಿ ಟೆಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪ ಮತ್ತು ಇಂಥ ಪ್ರಕರಣಗಳಿಂದ ಉಂಟಾಗುತ್ತಿರುವ ವಿದ್ಯಮಾನಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ […]

ಸನಾತನ ಧರ್ಮ ಉಳಿದರೆ ಮಾತ್ರ ಹಿಂದುಗಳು, ದಲಿತರು, ಸಂವಿಧಾನ ಉಳಿಯಲು ಸಾಧ್ಯ- ಶಾಸಕ ಯತ್ನಾಳ

ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಹಿಂದುಗಳು, ದಲಿತರು ಮತ್ತು ಸಂವಿಧಾನ ಉಳಿಯಲು ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಕರ್ನಾಟಕದ ಸಿಎಂ ಟ್ವೀಟ್ ಮಾಡಿ, ಮನುವಾದ ಮತ್ತು ಮನುಸ್ಮೃತಿ ಚರ್ಚೆ ಮಾಡುತ್ತಾರೆ.  ನಾವು ಎಂದಾದರೂ ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿದ್ದೇವಾ? ಸಂವಿಧಾನ ಬದಲು ಮಾಡುವುದಾಗಿ ಹೇಳಿದ್ದೀವಾ? ಎಂದು ಅವರು ಪ್ರಶ್ನಿಸಿದರು. ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದೇ ಬಿಜೆಪಿ.  […]

ಬಾಗಲಕೋಟೆ ಹೋಮಿಯೋಪಥಿ ಕಾಲೇಜನಲ್ಲಿ ಪ್ರಜಾಪ್ರಭುತ್ವ ದಿನ ಆಚರಣೆ

ಬಾಗಲಕೋಟೆ: ನಗರದ ಬಿ. ವಿ. ವಿ. ಎಸ್. ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.  ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಡಾ. ಅರುಣ ವಿ. ಹೂಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಪಂಚ ಯುದ್ಧ ಮುಕ್ತವಾದರೆ ಪ್ರತಿಯೊಬ್ಬನೂ ಶಾಂತಿ, ಸಮಾಧಾನದಿಂದ ಬದುಕಬಹುದು.  ಇದರಿಂದ ದೇಶದ ಅಭಿವೃದ್ಧಿಯಾಗುತ್ತದೆ.  ಹಿಂಸೆಯಿಂದ ಏನನ್ನೂ ಗಳಿಸಲು ಸಾಧ್ಯವಿಲ್ಲ.  ಪ್ರೀತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ನೆನಪಿಸುವುದೇ ಪ್ರಜಾಪ್ರಭುತ್ವ ದಿನದ ಉದ್ದೇಶವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಂಡಿರಬೇಕು.  ಯಾವುದೇ […]

ಸುಸ್ಥಿರ ಆರೋಗ್ಯಕ್ಕೆ ಉತ್ತಮ ಪರಿಸರ ಅಗತ್ಯ- ಪೃಕೃತಿಯ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ- ಡಾ. ವೈ. ಎಂ. ಜಯರಾಜ

ವಿಜಯಪುರ: ಪರಿಸರವನ್ನು ಕಾಪಾಡಿದರೆ, ಪ್ರಕೃತಿ ನಮ್ಮೆಲ್ಲರನ್ನು ರಕ್ಷಿಸುತ್ತದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.  ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂಡಿಯನ್ ಅಸೋಶಿಯೇಶನ್ ಆಪ್ ಪ್ರಿವೆಂಟಿವ್ ಆಂಡ್ ಸೋಷಿಯಲ್ ಮೆಡಿಸೀನ್ ಆಯೋಜಿಸಿರುವ 3ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪರಿಸರ ಹದಗೆಡಲು ಮನುಷ್ಯರೇ ಕಾರಣ.  ಆಹಾರ, ನೀರು, ಗಾಳಿ ಸೇರಿದಂತೆ ಪ್ರತಿಯೊಂದೂ ಕಲುಷಿತವಾಗುತ್ತಿದ್ದು, ಇದರ ದುಷ್ಪರಣಿಮಾಮಗಳು ಮನುಷ್ಯರು ಮತ್ತು ಪ್ರಾಣಿಗಳ ಮೇಲಾಗುತ್ತಿದೆ.  ಉತ್ತಮ ಪರಿಸರ ಪ್ರಕೃತಿಯ […]

ನಾಟಕ ಮಾಡುವಾಗ ಕುಸಿದು ಬಿದ್ದ ಯುವ ಪೋಸ್ಟಮ್ಯಾನ್ ಸಾವು- ಕೊಟ್ಯಾಳದಲ್ಲೊಂದು ಹೃದಯ ವಿದ್ರಾವಕ ಘಟನೆ

ವಿಜಯಪುರ: ಊರಿನ‌ ಜನರೆಲ್ಲ ಲೋಕಲ್ ನಾಟಕ ನೋಡುತ್ತ ಮನರಂಜನೆಯಲ್ಲಿದ್ದರು.  ಮೇಲಾಗಿ ಗ್ರಾಮದ ಮುಕ್ತಾಂಕಾರ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಈ ನಾಟಕವನ್ನು ಸ್ಥಳೀಯವಾಗಿಯೇ ರಚಿಸಲಾಗಿತ್ತು.  ಗ್ರಾಮದ ಯುವಕರೂ ನಾನಾ ಪಾತ್ರಗಳಲ್ಲಿ ನಟಿಸುತ್ತಿದ್ದರು. ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ಹೆಸರಿನ‌ ಈ ನಾಟಕದ ನಾನಾ ದೃಷ್ಯಗಳು ಬಿರುಸಿನಿಂದ ಸಾಗಿದ್ದವು.  ಮಧ್ಯರಾತ್ರಿ ಸುಮಾರು 12.30ರ ಹೊತ್ತಿಗೆ ಹಾಸ್ಯ ಕಲಾವಿದ ಬಂದು ಡ್ತಾನ್ಸ್ ಮಾಡುತ್ತಿದ್ದಾಗ ಎಲ್ಲರೂ ಕುತೂಹಲದಿಂದ ನಾಟಕ ವೀಕ್ಷಿಸುತ್ತಿದ್ದರು.  ಆಗ, ಹಾಸ್ಯ ಕಲಾವಿದನ ಪಾತ್ರದಾರಿ ಕೈ ಮೇಲೆತ್ತಿ ಹಿಂಬದಿಯಿಂದ ದಿಢೀರಾಗಿ […]

ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ, ನಿರಂತರ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಬಹುದು- ಜಾವೀದ ಜಮಾದಾರ

ವಿಜಯಪುರ: ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ ಹಾಗೂ  ನಿರಂತರ  ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ ಎಂದು ರಾಷ್ಚ್ರ ಯುವ ಪ್ರಶಸ್ತಿ ಪುರಸ್ಕೃತರ ಪೆಡರೇಶನ್ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದ್ದಾರೆ. ನಗರದ ಡಾ. ಬಿ. ಆರ್  ಅಂಬೇಡ್ಕರ  ಜಿಲ್ಲಾ  ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ,  ಜಿಲ್ಲಾ ಪಂಚಾಯಿತಿ,  ಹಾಗೂ  ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆ, ಕರ್ನಾಟಕ  ಕ್ರೀಡಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜಯಪುರ ತಾಲೂಕು  ಮಟ್ಟದ ದಸರಾ ಕ್ರೀಡಾಕೂಟ -ಉದ್ಗಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಮನುಷ್ಯನಿಗೆ ಮನೊಚೈತನ್ಯ, ಉಲ್ಲಾಸ, ನೀಡುತ್ತದೆ.  […]

ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಬಿಇಓ ಕಚೇರಿ ಸಿಬ್ಬಂದಿಯ ಕರ್ತವ್ಯವಾಗಿದೆ- ಸಂತೋಷಕುಮಾರ ಎಸ್. ವಿಜಾಪುರ

ವಿಜಯಪುರ: ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ ಅವರನ್ನು ಪ್ರೋತ್ಸಾಹಿಸುವುದು ಬಿಇಒ ಕಚೇರಿಯ ಎಲ್ಲ ಕಾರ್ಯ ನಿರ್ವಾಹಕರ ಕರ್ತವ್ಯ ಎಂದು ಧಾರವಾಡ ಶಹರ ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಸಂತೋಷಕುಮಾರ ಎಸ್. ವಿಜಾಪೂರ ಹೇಳಿದ್ದಾರೆ.  ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ಬಿಇಒ ಕಚೇರಿಯ ತಪಾಸಣೆ ಕಾರ್ಯ ನಿರ್ವಹಿಸಿದ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಧಿಕಾರಿಗಳ ಮತ್ತು ಸಿಬ್ಬಂದಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಸುಮಾರು 1100ಕ್ಕೂ ಹೆಚ್ಚಿನ ಶಿಕ್ಷಕರ ಸೇವಾ ಪುಸ್ತಕಗಳು ಹಾಗೂ ಕಚೇರಿಯ ಇತರೆ ಕಡತಗಳನ್ನು ಅಧಿಕಾರಿಗಳು […]

ಕ್ರೀಡೆ ಮಾನವನ ಆರೋಗ್ಯಕ್ಕೆ ಟಾನಿಕ್ ಇದ್ದಂತೆ- ಶಂಕರಗೌಡ ಎಸ್. ಸೋಮನಾಳ

ವಿಜಯಪುರ: ಕ್ರೀಡೆಗಳು ಮಾನವನ ಆರೋಗ್ಯಕ್ಕೆ ಟಾನಿಕ್ ಇದ್ದಂತೆ.  ಕ್ರೀಡೆಯಲ್ಲಿ ಭಾಗವಹಿಸುವುದರಿಂದ  ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಬಹುದು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಹೇಳಿದ್ದಾರೆ.  ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 2022-23ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಅಂತರ ವಿಭಾಗಗಳ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನೆ ವಿದ್ಯಾರ್ಥಿನಿಯರು, ಬೋಧಕ, ಬೋಧಕರ ಹೊರತಾದ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ನಾನಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕ್ರೀಡಾ […]