ಬಸವ ನಾಡಿನಲ್ಲಿದೆ ತಿರುಪತಿ ವೆಂಕಟೇಶ್ವರನ ದೇವಸ್ಥಾನ- ಇಲ್ಲಿ ವರ್ಷಕ್ಕೊಂದು ಬಾರಿ ಮಾತ್ರ ಸಿಗುತ್ತೆ ಭಕ್ತರಿಗೆ ದರ್ಶನ

ವಿಜಯಪುರ: ತಿಮ್ಮಪ್ಪ ಎಂದರೆ ಸಾಕು ಎಲ್ಲರಿಗೆ ತಟ್ಟನೆ ನೆನಪಾಗುವುದು ತಿರುಪತಿ ತಿಮ್ಮಪ್ಪನ ದೇವಸ್ಥಾನ.  ಆದರೆ, ಗ್ರಾಮಸ್ಥರು ನಿರ್ಮಿಸಿರುವ ವೆಂಕಟೇಶ್ವರನ ದೇವಸ್ಥಾನವೊಂದು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿದೆ.  ವರ್ಷಕ್ಕೊಂದು ಬಾರಿ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆಯುವುದು ಇಲ್ಲಿನ ಸಂಪ್ರದಾಯವಾಗಿದ್ದು, ಭಕ್ತರು ಕೂಡ ಈ ಒಂದು ಶುಭ ದಿನಕ್ಕಾಗಿ ವರ್ಷವಿಡೀ ಕಾಯುವುದು ಗಮನಾರ್ಹವಾಗಿದೆ. ಹೀಗೆ ಜಿಟಿಜಿಟಿ ಮಳೆಯ ನಡುವೆ ಕೈಯ್ಯಲ್ಲೊಂದು ಛತ್ರಿ, ತಲೆಯ ಮೇಲೋಂದು ಬುತ್ತಿಯ ಬುಟ್ಟಿ ಇಟ್ಟುಕೊಂಡು ಈ ಮಹಿಳೆಯರು ಹೊರಿರುವುದು ಇದೇ ತಿಮ್ಮಪ್ಪ ಅರ್ಥಾತ್ ವೆಂಕಟೇಶ್ವರನ ದರ್ಶನಕ್ಕಾಗಿ.  […]

ಶಿಕ್ಷಕರ ಗಳಿಕೆ ರಜೆ ಹೆಚ್ಚಿಸಿ ತಾರತಮ್ಯ ನಿವಾರಿಸಿ- 7ನೇ ವೇತನ ಆಯೋಗಕ್ಕೆ ಜಿಓಸಿಸಿ ಬ್ಯಾಂಕ್ ನಿರ್ದೇಶಕ ಹಣಮಂತ ಬ. ಕೊಣದಿ ಮನವಿ

ವಿಜಯಪುರ: ಶಿಕ್ಷಕರ ಹಾಗೂ ಸರಕಾರಿ ನೌಕರರ ಗಳಿಕೆ ರಜೆ ನಿಗದಿಯಲ್ಲಿ ತಾರತಮ್ಯವಾಗುತ್ತಿದ್ದು, ಶಿಕ್ಷಕರ ಗಳಿಕೆ ರಜೆ ಹೆಚ್ಚಿಸಿ ನ್ಯಾಯ ಒದಗಿಸುವಂತೆ ವಿಜಯಪುರ ಸರಕಾರಿ ನೌಕರರ ಸಹಕಾರಿ (ಜಿಓಸಿಸಿ) ಬ್ಯಾಂಕಿನ ನಿರ್ದೇಶಕ ಹಣಮಂತ ಬ. ಕೊಣದಿ 7ನೇ ವೇತನ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಕರಿಗೆ 143 ರಜಾ ದಿನಗಳನ್ನು ನಿಗದಿ ಮಾಡಲಾಗಿದೆ.  ಆದರೆ, ಸರಕಾರಿ ನೌಕರರಿಗೆ 150 ರಜಾ ದಿನಗಳನ್ನು ನಿಡಲಾಗಿದೆ.  ಶಿಕ್ಷಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆ […]

ಆಯುರ್ವೇದ ವೈದ್ಯ ಪದ್ಧತಿಯಲ್ಲಿರುವ ಪ್ರಮುಖ ಅಂಶಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸಂಶೋದನೆ ನಡೆಸಬೇಕು- ಡಾ. ವೈ. ಎಂ. ಜಯರಾಜ

ವಿಜಯಪುರ: ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳನ್ನು ಸಂಸ್ಕೃತ ಭಾಷೆಯಲ್ದಿದ್ದು, ಅವುಗಳನ್ನು ಇಂದಿನ ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಲುಪಿಸಲು ಸಂಶೋಧನೆಗಳನ್ನು ನಡೆಸಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ. ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಅನುಸಂಧಾನ-2023 ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ ಭಾರತೀಯರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿರುವ ಪ್ರಮುಖ ಕೊಡುಗೆಯಾಗಿದೆ.  ಆದರೆ, ಆಯುರ್ವೇದ ವೈದ್ಯ ಪದ್ಧತಿಯ ಚಿಕಿತ್ಸಾ […]

ಧರ್ಮದ ವಿಚಾರಕ್ಕೆ ಕೈ ಹಾಕಿದ ವ್ಯಕ್ತಿ, ಪಕ್ಷ ಉಳಿಯಲ್ಲ- ಜೆಡಿಎಸ್ ಜೊತೆ ಮೈತ್ರಿ ಆದರೆ ಅಭ್ಯಂತರವಿಲ್ಲ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಧರ್ಮದ ವಿಚಾರದಲ್ಲಿ ಯಾರು ಕೈ ಹಾಕುತ್ತಾರೋ ಅವರು ಉಳಿಯುವುದಿಲ್ಲ.  ಅವರ ಪಕ್ಷವೂ ಇರಲ್ಲ ಎಂದು ಬಿಜೆಸಿ ಸಂಸದ ರಮೇಶ ಜಿಗಜಿಣಗಿ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಮಾನಕಾರಿ ಹೇಳಿಕೆ ವಿಚಾರ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಸಣ್ಣ ಸಣ್ಣ ಹುಡುಗರು ಹೇಳಿಕೆ ನೀಡಿದ್ದಾರೆ.  ಇಂದು ನಿನ್ನೆ ಮಂತ್ರಿಯಾಗಿದ್ದಾರೆ.  ಇಂದಿರಾ ಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ ಕಾಲದಲ್ಲಿಯೂ ನೋಡಿದ್ದೇನೆ.  ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ […]

ಬಾಗಲಕೋಟೆಯಲ್ಲಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ

ಬಾಗಲಕೋಟೆ:  ನಗರದ ಬಸವೇಶ್ವರ ವಿದ್ಯಾವರ್ದಕ ಸಂಘದ ಸಂಸ್ಥಾಪಕ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಜಿಯವರ ಶ್ರಾವಣ ಮಾಸದ ಉತ್ಸವದ ಅಂಗವಾಗಿ ಬಿ. ವಿ. ವಿ. ಎಸ್ ಹೋಮಿಯೋಪಥಿಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆವರಣದಲ್ಲಿ ಅಜ್ಜನವರ ಸಮಗ್ರ ಜೀವನ ಚರಿತ್ರೆಯ ಚಿತ್ರಪಟಗಳ ಪ್ರದಶ೯ನ ನಡೆಯಿತು. ಸಂಘದ ಕಾಯಾ೯ಧ್ಯಕ್ಷ ಡಾ. ವೀರಣ್ಣ ಚರಂತಿಮಠ ಮತ್ತು ಗುಣದಾಳದ ಕಲ್ಯಾಣ ಹಿರೇಮಠದ ಡಾ. ವಿವೇಕಾನಂದ ದೇವರು ಪೂಜೆ ಸಲ್ಲಿಸಿ ಈ ಪ್ರದರ್ಶನ ಉದ್ಫಾಟಿಸಿದರು. ನೂರಾರು ವಿದ್ಯಾಥಿ೯ಗಳು ಹಾಗೂ ಸಾವ೯ಜನಿಕರು ಅಜ್ಜನವರ ಜೀವನ […]

ಜ್ಞಾನಯೋಗಾಶ್ರಮದ ಮಹಿಳಾ ಭಕ್ತರ ನಿರ್ದಾರ- ದೇಹದಾನ, ನೇತ್ರದಾನಕ್ಕೆ ನಿರ್ಧರಿಸಿದ ತಾಯಿ, ಮಗಳು ಸೇರಿ 5 ಜನ ಮಹಿಳೆಯರು

ವಿಜಯಪುರ: ತಾಯಿ ಮತ್ತು ಮಗಳು ಸೇರಿದಂತೆ ಒಟ್ಟು 5 ಜನ ಮಹಿಳೆಯರು ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮತ್ತು ನೇತ್ರದಾನ ಮಾಡುವುದಾಗಿ ಒಪ್ಪಿಗೆ ಪತ್ರ ನೀಡುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ. ನಗರದ ಜ್ಞಾನಯೋಗಾಶ್ರಮದ ಬಳಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಸದಸ್ಯರಾಗಿರುವ […]

ಹೆಚ್ಚಿನ ಸಂಖ್ಯೆಯಲ್ಲಿ ಅತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಸಚಿವ ಶರಣಬಸಪ್ಪ ದರ್ಶನಾಪುರ ಕರೆ

ವಿಜಯಪುರ: ಅತೀ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಿದರೆ, ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ನಗರದ ಸುಕೂನ ಕಾಲನಿ ಬಳಿಯ ಸ್ಪೂರ್ತಿ ರೆಸಾರ್ಟ ಮತ್ತು ಕ್ಲಬ್ ಹೌಸನಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಸಿಡ್ಬಿ ಕಾಶಿಯಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು […]

ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು- ಸಾಯಿರಾಬಾನು

ವಿಜಯಪುರ: ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂದು ಡಯಟ್ ಪ್ರಿನ್ಸಿಪಲ್ ಸಾಯಿರಾಬಾನು ಖಾನ್ ಹೇಳಿದ್ದಾರೆ. ನಗರದ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ ಹಾಗೂ ಡಯಟ್ ಸಹಯೋಗದಲ್ಲಿ ಜಿಲ್ಲೆಯ ನಾನಾ ಶಾಲೆಗಳ ಆಯ್ದ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ಅಟಲ್ ಟಿಂಕರಿAಗ್ ಲ್ಯಾಬ್‌ಗಳ ಸದ್ಬಳಕೆಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಯಾವ ಪ್ರಯೋಗಾಲಯದಿಂದ ಚಂದ್ರಯಾನದAಥಹ ಇತಿಹಾಸವನ್ನು ಸೃಷ್ಠಿಸುವ ವಿಜ್ಞಾನಿಗಳು ಹುಟ್ಟುತ್ತಾರೋ ಗೊತ್ತಿಲ್ಲ. ಆದ್ದರಿಂದ ಎಲ್ಲರೂ ಈ ಕಾರ್ಯಾಗಾರವನ್ನು ಸದುಪಯೋಗ ಪಡಿಸಿಕೊಂಡು […]

ಉದಯನಿಧಿ ಸ್ಟ್ಯಾಲಿನ್, ಡಾ. ಜಿ. ಪರಮೇಶ್ವರ, ಪ್ರಕಾಶ ರಾಜ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ತೀವ್ರ ವಾಗ್ದಾಳಿ- ಯಾಕೆ ಗೊತ್ತಾ?

ವಿಜಯಪುರ: ತಮಿಳುನಾಡು ಸಚಿವ ಉದಯನಿಧಿ ಸ್ಚಾಲಿನ್, ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಮತ್ತು ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ್ದಾರೆ.  ಯಾವನ್ರೀ ಅವನು ಸ್ಟಾಲಿನ್? ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, ಉದಿಯನಿಧಿಗೂ ಸನಾತನ ಧರ್ಮಕ್ಕೂ ಏನು ಸಂಭಂದ? ಅವನೊಬ್ಬ ಅಯ್ಯೋಗ್ಯ, ಹುಚ್ಚ.  ಸನಾತನ ಧರ್ಮ ಸಾವಿರಾರು ವರ್ಷಗಳಿಂದ […]

ಮೀರಜ್, ಸೋಲಾಪುರ ವೈದ್ಯರು ನಿರಾಕರಿಸಿದ ರೋಗಿಗೆ ಬಸವ ನಾಡಿನ ಡಾಕ್ಟರ್ ರಿಂದ ಸ್ಪಂದನೆ- 9 ತಿಂಗಳಿಂದ ಹಾಸಿಗೆಯಲ್ಲಿದ್ದ 85 ವರ್ಷದ ಅಜ್ಜ ನಡೆದಾಡುವಂತೆ ಮಾಡಿದ ವೈದ್ಯರು

ವಿಜಯಪುರ: ಮಹಾರಾಷ್ಟ್ರದ ಮೀರಜ್ ಮತ್ತು ಸೋಲಾಪುರಗಳಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದ ಮತ್ತು ಕಳೆದ ಒಂಬತ್ತು ತಿಂಗಳಿಂದ ನಡೆಯಲಾಗದೇ ಹಾಸಿಗೆ ಹಿಡಿದಿದ್ದ ರೋಗಿಗೆ ಶಸ್ತ್ರಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯರು ಗಮನ ಸೆಳೆದಿದ್ದಾರೆ. ಇಂಡಿ ತಾಲೂಕಿನ 85 ವರ್ಷದ ವೃದ್ದರೊಬ್ಬರು ಬಿದ್ದು ಎಡಗಾಲಿಗೆ ಗಾಯ ಮಾಡಿಕೊಂಡಿದ್ದರು.  ಎಡ ಚಪ್ಪೆ ಮುರಿದ ಕಾರಣ ನಡೆಯಲೂ ಅವರಿಗೆ ಆಗುತ್ತಿರಲಿಲ್ಲ.  ಅಲ್ಲದೇ, ಹಾಸಿಗೆಯಲ್ಲಿಯೇ ಇದ್ದ ಕಾರಣ ಬಲಗಾಲಿನ ಚರ್ಮಕ್ಕೂ ಗಂಭೀರ ಗಾಯವಾಗಿತ್ತು.  ಮೇಲಾಗಿ ಈ ರೋಗಿ ಹೃದಯ […]