ಶಿಕ್ಷಕರ ದಿನಾಚರಣೆ ಅಂಗವಾಗಿ 9 ಜನ ವೈದ್ಯ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, 5 ಜನ ನಿವೃತ್ತ ವೈದ್ಯರಿಗೆ ಗೌರವ ಸಲ್ಲಿಕೆ

ವಿಜಯಪುರ: ವೈದ್ಯರು ವೃತ್ತಿಯ ಜೊತೆಗೆ ವೈದ್ಯಕೀಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ದಾವಣಗೆರೆಯ ಎಸ್. ಎಸ್. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಮತ್ತು ಮುಖ್ಯಸ್ಥ ಡಾ. ಬಿ. ಎಸ್. ಪ್ರಸಾದ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿ ಪವಿತ್ರವಾಗಿದೆ. ಇದರ ಜೊತೆಗೆ ವೈದ್ಯರು ಮೆಡಿಕಲ್ ಕಾಲೇಜುಗಳಲ್ಲಿ ಪಾಠ ಮಾಡಲು ಹೆಚ್ಚಿನ ಅಧ್ಯಯನದ ಅಗತ್ಯ ಇರುತ್ತದೆ. ಬದಲಾಗುತ್ತಿರುವ […]

ವಿಜಯಪುರ ನೂತನ ಎಸ್ಪಿ ಸೋನಾವಣೆ ರಿಷಿಕೇಶ ಭಗವಾನ ಅಧಿಕಾರ ಸ್ವೀಕಾರ

ವಿಜಯಪುರ: ವಿಜಯಪುರ ಜಿಲ್ಲಾ ನೂತನ‌ ಎಸ್ಪಿಯಾಗಿ 2014ರ ಬ್ಯಾಚಿನ‌ ಐಪಿಎಸ್ ಅಧಿಕಾರಿ ಸೋನಾವಣೆ ರಿಷಿಕೇಶ ಭಗವಾನ ಅಧಿಕಾರ ಸ್ವೀಕರಿಸಿದ್ದಾರೆ. ಸೆಪ್ಟೆಂಬರ್‌ 5 ರಂದು ರಾಜ್ಯ ಸರಕಾರ ಸೋನಾವಣೆ ರಿಷಿಕೇಶ ಭಗವಾನ‌ ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು. ಇಂಟಲಿಜನ್ಸ್ ವಿಭಾಗದ ಎಸ್ಪಿಯಾಗಿದ್ದ ಸೋನಾವಣೆ ರಿಷಿಕೇಶ ಭಗವಾನ ಅವರು ಈಗ ಸ್ವಲ್ಪ ಹೊತ್ತಿನ ಮುಂಚೆ ವಿಜಯಪುರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಎಸ್ಪಿ ಎಚ್. ಡಿ. ಆನಂದ ಕುಮಾರ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ವಿಜಯಪುರ ಎಸ್ಪಿಯಾಗಿದ್ದ […]

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕಲಿಸಬೇಕು- ಶ್ರೀ ಸೋಮನಾಥ ಶಿವಾಚಾರ್ಯ

ವಿಜಯಪುರ: ಮಕ್ಕಳಿಗೆ ಶಿಕ್ಷಣದ ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಕನ್ನೂರ ಶ್ರೀ ಮದ್ ರಂಭಾಪುರಿ ಶಾಖಾ ಗುರುಮಠದ ಸೋಮನಾಥ ಶಿವಾಚಾರ್ಯ ಹೇಳಿದ್ದಾರೆ. ನಗರದ ಸಂಗನಬಸವ ಸಮುದಾಯ ಭವನದಲ್ಲಿ ಜಿ. ಪಂ, ತಾ. ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿಜಯಪುರ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಕಲ್ಲಿನ […]

ವಿಜಯಪುರ ನೂತನ ಎಸ್ಪಿಯಾಗಿ ಸೋನಾವಣೆ ರಿಷಿಕೇಶ ಭಗವಾನ ವರ್ಗಾವಣೆ

ವಿಜಯಪುರ: ವಿಜಯಪುರ ಜಿಲ್ಲಾ ನೂತನ‌ ಎಸ್ಪಿಯಾಗಿ 2014ರ ಬ್ಯಾಚಿನ‌ ಐಪಿಎಸ್ ಅಧಿಕಾರಿ ಸೋನಾವಣೆ ರಿಷಿಕೇಶ ಭಗವಾನ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ‌ದೆ. ಇಂಟಲಿಜನ್ಸ್ ವಿಭಾಗದ ಎಸ್ಪಿಯಾಗಿದ್ದ ಸೋನಾವಣೆ ರಿಷಿಕೇಶ ಭಗವಾನ ಅವರನ್ನು ರಾಜ್ಯ ಸರಕಾರ ವಿಜಯಪುರ ಎಸ್ಪಿ ಹುದ್ದೆಗೆ ವರ್ಗಾವಣೆ ಮಾಡಿದೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ ವಿಜಯಪುರ ಎಸ್ಪಿಯಾಗಿದ್ದ ಎಚ್. ಡಿ. ಆನಂದಕುಮಾರ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಾಲ್ಯದಿಂದಲೇ ಕಾಂಗ್ರೆಸ್ ವಿರೋಧಿಯಾಗಿದ್ದೇನೆ- ಪಕ್ಷಾಂತರ ಮಾಡುವ ಪ್ರಶ್ನೆಯೇ ಇಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ನಾನು ಹುಟ್ಟಿನಿಂದಲೂ ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಬಿಜೆಪಿ‌ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. 45 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಇನ್ನೇನು ವಯಸ್ಸಾಗಿದೆ. ಮತ್ತೆ ಪಾರ್ಟಿ ಚೇಂಜ್ ಮಾಡಿ ಏನು ರಾಜಕಾರಣ ಮಾಡುವುದಿದೆ? ಮಾಡುವುದಾದರೆ ನಮ್ಮ ವಂಶಕರು ಮಾಡಬೇಕಷ್ಟೇ ಎಂದು‌ ಸ್ಪಷ್ಟಪಡಿಸಿದರು. ನಾನಂತೂ ಕಾಂಗ್ರೆಸ್ ಗೆ ಹೋಗಲ್ಲ. ಟಿಕೆಟ್ ಸಿಗದಿರಲು ನನಗೇನೂ ಇನ್ನೂ ವಯಸ್ಸಿನ […]

ಗಾಯಯೋಗಿ ಸಂಘದ ಪದಾಧಿಕಾರಿಗಳ ಜನಪರ ಸೇವೆ ಮುಂದುವರಿಕೆ- ಬಸ್ ನಿಲ್ದಾಣದ ಶೌಚಾಲಯಕ್ಕೆ ಸುಣ್ಣಬಣ್ಣ- ಜಾಗೃತಿ ಸಂದೇಶ

ವಿಜಯಪುರ: ಸ್ವಚ್ಛತ, ಸುಣ್ಣಬಣ್ಣ ಬಳಿಯುವುದು ಮತ್ತು ಜನಜಾಗೃತಿ ಸಂದೇಶಗಳನ್ನು ಸಾರುವ ಮೂಲಕ ಅನೇಕ ಜನಪರ ಕಲಸಗಳನ್ನು ಮಾಡುತ್ತಿರುವ ನಗರದ ಗಾಯನೋಗಿ ಸಂಘ ಈಗ ಮತ್ತೋಂದು ಸಮಾಜಮುಖೆ ಕೆಲಸ ಮಾಡಿದೆ. ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿರುವ ಇಂದಿನ ದಿನಗಳಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸಲು ದುಶ್ಚಟಕ್ಕೆ ಬಲಿಯಾಗದಿರಿ.  ತಂದೆ-ತಾಯಿಯನ್ನು ಅನಾಥರನ್ನಾಗಿ ಮಾಡಿಸಬೇಡಿ ಎಂಬುಸದಿರಿ ಎನ್ನುವ ಸಂದೇಶವನ್ನು ಸಾರುವ ಮೂಲಕ ನಗರ ಬಸ್ ಸಾರಿಗೆ ಸಂಸ್ಥೆಯ ಶೌಚಾಲಯದ ಗೋಡೆಯ ಮೇಲೆ ಯುವಕರ ಮೇಲೆ ಪ್ರಭಾವ ಬೀರುವ ಬರಹಗಳನ್ನು ಸುಣ್ಣ ಬಣ್ಣಗಳನ್ನು ಬಳೆಯುವ ಮೂಲಕ […]

ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಸಿಎಂ ಬಾಗೀನ ಅರ್ಪಣೆ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ

ವಿಜಯಪುರ: ಎರಡನೇ ಬಾರಿ ಮುಖ್ಯಮಂತ್ರಿಯಾದ ಮೇಲೆ ಎಸ್. ಸಿದ್ಧರಾಮಯ್ಯ ಇದೇ ಮೊದಲ ಬಾರಿಗೆ ಆಲಮಟ್ಟಿ ಆಗಮಿಸಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರಕ್ಕೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಆಲಮಟ್ಟಿಯ ಹೆಲಿಪ್ಯಾಡ್ ಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಆಲಮಟ್ಟಿ ಹೆಲಿಪ್ಯಾಡ್ ನಲ್ಲಿ ವಿಜಯಪುರ ಎಸ್ಪಿ ಎಚ್. ಡಿ. ಅನಂದಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿ ಗೌರವ ಸಲ್ಲಿಸಿದರು.  ಗೌರವ ವಂದನೆ ಸ್ವೀಕರಿಸಿ ರಸ್ತೆ ಮಾರ್ಗವಾಗಿ ಡ್ಯಾಂ ಅವರಣಕ್ಕೆ ಆಗಮಿಸಿದ ಸಿಎಂ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ […]

ನಂದಿ ಸಕ್ಕರೆ ಕಾರ್ಖಾನೆ ಚುನಾವಣೆ- ಕುಮಾರ ದೇಸಾಯಿ ಬಣದ 10, ಶಶಿಕಾಂತಗೌಡ ಪಾಟೀಲ ಬಣದ 7 ಜನರ ಆಯ್ಕೆ- ಯಾರಿಗೆ ಎಷ್ಟು ಮತ? ಇಲ್ಲಿದೆ ಮಾಹಿತಿ

ವಿಜಯಪುರ: ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ಪ್ರತಿಷ್ಠಿತ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 17 ಜನ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರು ಮತ್ತು ಅವರು ಪಡೆದಿರುವ ಮತಗಳ ಮಾಹಿತಿ ಇಲ್ಲಿದೆ. ಆಡಳಿತ ಮಂಡಳಿಯ ಅ ವರ್ಗದ ವಿಜೇತರು ಮತ್ತು ಪಡೆದ ಮತಗಳು ಕುಮಾರ ಚಂದ್ರಕಾಂತ ದೇಸಾಯಿ(ಜೈನಾಪೂರ)- 3893 ಶಶಿಕಾಂತಗೌಡ ಬಿಮನಗೌಡ ಪಾಟೀಲ(ಶಿರಬೂರ)- 3310 ಅಶೋಕ ಪಾಂಡಪ್ಪ ಲೆಂಕಣ್ಣನವರ- 3234 ಅದೃಶಪ್ಪ […]

ಕೇಂದ್ರ ಪುರಸ್ಕೃತ ಅನುದಾನ ಸಮರ್ಪಕವಾಗಿ ಬಳಸಿ- ಗುಣಮಟ್ಟದ ಕಾಮಗಾರಿ ಕೈಗೊಳ್ಳಿ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಕೃಷಿ, ಗ್ರಾಮೀಣಾಭಿವೃದ್ದಿ, ಸ್ವಚ್ಛ ಭಾರತ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಕೇಂದ್ರ ಪುರಸ್ಕøತ ಯೋಜನೆಯಡಿಯ  ಬಿಡುಗಡೆಯಾಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡುವ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸೂಚನೆ ನೀಡಿದ್ದಾರೆ.  ನಗರದ ಜಿ. ಪಂ. ಸಭಾಂಗಣದಲ್ಲಿ ನಡೆದ ಕೇಂದ್ರ ಸರಕಾರದ ನಾನಾ ಯೋಜನೆಗಳ 1ನೇ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಕೇಂದ್ರ ಪುರಸ್ಕøತ ಯೋಜನೆಗಳನ್ನು ನಿಗದಿತ  ಕಾಲಾವಧಿಯಲ್ಲಿ […]

ಸಕಾಲದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ತಲುಪಿಸಿ: ಸಿಇಓ ಸೂಚನೆ

ವಿಜಯಪುರ: ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ಒದಗಿಸಬೇಕು ಎೞದು ಜಿ. ಪಂ. ಸಿಇಓ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿ. ಪಂ. ಸಿಇಓ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಸಂಘದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿ ಗುರುತಿಸಲ್ಪಟ್ಟ ಗ್ರಾ. ಪಂ. ಗಳಲ್ಲಿ, ಚುನಾಯಿತ ಪಂಚಾಯಿತಿ ಸದಸ್ಯರುಗಳಿಗೆ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು.  ಪಂಚಾಯಿತಿಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅಚ್ಚು-ಕಟ್ಟಾಗಿ ಆಯೋಜಿಸಬೇಕು.  […]