ಜಿಲ್ಲಾ ಪಂಚಾಯಿತಿಯಲ್ಲಿ ಮಿನಿ ಗ್ರಂಥಾಲಯ ನಿರ್ಮಾಣ- ಸಿಇಓ ಅವರ ನಡೆ ಇತರರಿಗೆ ಪ್ರೇರಣೆ- ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ

ವಿಜಯಪುರ: ಜಿ. ಪಂ. ಸಿಇಓ ಕಚೇರಿ ಮುಂದೆ ಹೊಸದಾಗಿ ನಿರ್ಮಿಸಲಾಗಿರುವ ಮಿನಿ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮತ್ತು ಅವರ ಸಮಯವನ್ನು ಹಾಳು ಮಾಡಬಾರದು ಎಂಬ ಸದುದ್ದೇಶದಿಂದ ಜಿ. ಪಂ. ಸಿಇಓ ರಾಹುಲ ಶಿಂಧೆ ಅವರು ತಮ್ಮ ಸ್ವ ಇಚ್ಚೆಯಿಂದ ಮಿನಿ ಗ್ರಂಥಾಲಯ ಸ್ಥಾಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇದು ಸಾರ್ವಜನಿಕರ ಮೇಲೆ ಅವರಿಗಿರುವ ಸೇವಾ ಮನೋಭಾವನೆಯನ್ನು ತೋರಿಸುತ್ತದೆ.  […]

ಮೆದುಳು, ಬೆನ್ನುಹುರಿ ಚಿಕಿತ್ಸೆಗೆ ಈ ಆಸ್ಪತ್ರೆ ವರದಾನ- ಡಾ. ಮಲ್ಲಪ್ಪ ಹುಗ್ಗಿಯವರ ಕೈಗುಣಕ್ಕೆ ರೋಗಿಗಳು ಫುಲ್ ಖುಷ್

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ರೋಗಿಯೊಬ್ಬನ ಮೆದುಳಿನಲ್ಲಿ ಬೆಳೆದಿದ್ದ ಗಡ್ಡೆಯನ್ನು ತೆಗೆಯುವ ಮೂಲಕ ಅಪರೂಪದ ಶಸ್ತçಚಿಕಿತ್ಸೆಯನ್ನು ನಡೆಸಿದ್ದಾರೆ. 52 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೆಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಯನ್ನು ಪರೀಕ್ಷಿಸಿದ ನರರೋಗ ತಜ್ಞ ಡಾ. ಮಲ್ಲಪ್ಪ ವಿ. ಹುಗ್ಗಿ ಎಲ್ಲ ವ್ಯದ್ಯಕೀಯ ತಪಾಸಣೆ ನಡೆಸಿದಾಗ ರೋಗಿಯ ತಲೆಯಲ್ಲಿ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಆಗ ವೈದ್ಯರು ಸತತ ನಾಲ್ಕು […]

ವೃತ್ತಿಯಿಂದ ಗಳಿಸಿದ ರೂ. 2 ಕೋ. ಖರ್ಚು ಮಾಡಿ ಶ್ರೀಶೈಲದಲ್ಲಿ ವಸತಿ ನಿಲಯ ಕಟ್ಟಿದ ಮಲ್ಲಯ್ಯನ ಭಕ್ತ ಡಾ. ಸಾರ್ವಭೌಮ ಬಗಲಿ

ವಿಜಯಪುರ: ಪ್ರತಿ ವರ್ಷ ಲಕ್ಷಾಂತರ ಜನ ಉತ್ತರ ಕರ್ನಾಟಕದಿಂದ ಆಂಧ್ರ ಪ್ರದೇಶದಲ್ಲಿರುವ ಶ್ರೀಶೈಲ ಮಲ್ಲಯ್ಯನ ದರ್ಶನಕ್ಕೆ ತೆರಳುತ್ತಾರೆ.  ಯುಗಾದಿ ಸಂದರ್ಭದಲ್ಲಿ ಅಲ್ಲಿ ನಡೆಯುವ ಮಲ್ಲಯ್ಯನ ಜಾತ್ರೆಗೆ ಬಹುತೇಕ ಜನರು ಪಾದಯಾತ್ರೆ ಮೂಲಕ ತೆರಳಿದರೆ, ಲಕ್ಷಾಂತರ ಜನರು ಸರಕಾರಿ ಬಸ್ಸುಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿಯೂ ಪ್ರಯಾಣ ಮಾಡುತ್ತಾರೆ. ಹೀಗೆ ಶ್ರೀಶೈಲಕ್ಕೆ ತೆರಳು ಭಕ್ತರಿಗೆ ಅಲ್ಲಿ ತಂಗಲು ಎಷ್ಟೇ ವಸತಿ ಗೃಹ ನಿರ್ಮಿಸಿದರೂ ಕಡಿಮೆಯೇ.  ಮಲ್ಲಯ್ಯನ ಭಕ್ತರ ಈ ಸಮಸ್ಯೆಯನ್ನು ಅರಿತ ಮಾಜಿ ಶಾಸಕ ಮತ್ತ ವೃತ್ತಿಯಿಂದ ವೈದ್ಯರಾಗಿರುವ ಹಾಗೂ […]

ಏಳೆಂಟು ಸಂಸದರು ಚುನಾವಣೆಗೆ ಸ್ಪರ್ಧಿಸಲ್ಲ- ರಾಜ್ಯ ರಾಜಕೀಯದಲ್ಲಿ ಏನೋ ಗಡಿಬಿಡಿ ನಡೆಯುತ್ತಿದೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸುಮಾರು ಏಳೆಂಟು ಜನ ಸಂಸದರು ಚುನಾವಣೆ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಸಿದ್ದಸಿರಿ ಸಂಸ್ಥೆಯ ಎಸ್ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಮಾದ್ಯಮದವರ ಜೊತೆ ಅವರು ಮಾತನಾಡಿದರು. ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಏನಾದರೂ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನನಗೆ ಮಾಹಿತಿ ಇಲ್ಲ.  ನನ್ನ ಮಾಹಿತಿಯ ಪ್ರಕಾರ ಏಳೆಂಟು ಜನ ಸಂಸದರು ತಾವಾಗಿಯೇ ಸ್ವಯಂ […]

ವಿಜಯಪುರ ಜಿಲ್ಲಾಡಳಿತದಿಂದ ನಾರಾಯಣ ಗುರುಗಳ ಜಯಂತಿ ಆಚರಣೆ

ವಿಜಯಪುರ: ಮಹಾನ್ ಪುರುಷರ ಆದರ್ಶ, ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಜಯಂತಿಗಳು ಮುಖ್ಯ ಹಾಗೂ ಮಹತ್ವದ್ದಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾರಾಯಣ ಗುರುಗಳ ನಡೆ, ನುಡಿ ಹಾಗೂ ಆಚಾರ, ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕದ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ […]

ಸೆ. 2 ರಂದು ಸಿಎಂ ಭೇಟಿ ಹಿನ್ನೆಲೆ ಆಲಮಟ್ಟಿ ಜಲಾಷಯಕ್ಕೆ ಡಿಸಿ ಟಿ. ಭೂಬಾಲನ ಭೇಟಿ, ಸಿದ್ಧತೆ ಪರಿಶೀಲನೆ

ವಿಜಯಪುರ: ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಇದೇ ಸೆಪ್ಟೆಂಬರ್ 2ರಂದು ಆಲಮಟ್ಟಿಯ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು  ಭೇಟಿ ನೀಡಿ, ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಿದರು. ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಹೆಲಿಪ್ಯಾಡ ಸ್ಥಳ ಹಾಗೂ ಅಲ್ಲಿನ ಭದ್ರತೆ, ಬಾಗಿನ ಅರ್ಪಿಸುವ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪೂಜಾ ಸ್ಥಳ, ಅಲ್ಲಿ ಹೂವಿನ ಅಲಂಕಾರ, ಶಾಮಿಯಾನ ವ್ಯವಸ್ಥೆ […]

ಗೃಹಲಕ್ಷ್ಮಿ ಯೋಜನೆಗೆ ಹೆದರಿ ಕೇಂದ್ರ ಸರಕಾರ ಅಡುಗೆ ಅನಿಲ ಬೆಲೆ ಇಳಿಕೆ ಮಾಡಿದೆ- ಸಚಿವ ಎಂ. ಬಿ. ಪಾಟೀಲ

ವಿಜಯಪುರ: ನಮ್ಮ ಗೃಹಲಕ್ಷ್ಮಿ ಯೋಜನೆಗೆ ಅಂಜಿ (ಹೆದರಿ) ಕೇಂದ್ರ ಸರಕಾರ ಅಡುಗೆ ಅನೀಲ ಸಿಲಿಂಡರ್ ಬೆಲೆಯನ್ನು ಇಳಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಉದ್ಗಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಕರ್ನಾಟಕದಲ್ಲಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಾಳೆ ದೇಶಾದ್ಯಂತ ಮಾಡುವುದಾಗಿ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.  ರಾಷ್ಚ್ರಾದ್ಯಂತ ಅನೇಕ ರಾಜ್ಯಗಳಲ್ಲಿ ಚುನಾವಣೆಗಳು ಬರಲಿವೆ.  […]

ಬಾಲ್ಯವಿವಾಹ ತಡೆಗಟ್ಟುವಲ್ಲಿ ತಂಡವಾಗಿ ಕಾರ್ಯ ನಿರ್ವಹಿಸಿ- ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ

ವಿಜಯಪುರ: ಸಾಮಾಜಿಕ ಪಿಡುಗಾದ ಬಾಲ್ಯವಿವಾಹ ತಡೆಗಟ್ಟುವಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು  ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಹಾಗೂ ತಾಲೂಕಾ ಮಟ್ಟದಲ್ಲಿ ಅರಿವು ಹಾಗೂ ಅಭಿಯಾನ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಸಬೇಕು.  ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ […]

ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ- ಡಾ. ಆರ್. ಎಸ್. ಮುಧೋಳ

ವಿಜಯಪುರ: ನೇತ್ರದಾನ ಮಾಡುವ ಮೂಲಕ ಹಲವಾರು ಜನ ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದೆ. ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನೇತ್ರಕಸಿ ಮಾಡಲು ಎಲ್ಲ ವ್ಯವಸ್ಥೆಗಳೂ ಲಭ್ಯವಿವೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ನೇತ್ರಶಾಸ್ತ್ರ ವಿಭಾಗ ಆಯೋಜಿಸಿರುವ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. […]

ಮಾನ್ವಿ ಡಿಪೋ ಕಂಡಕ್ಟರ್, ಡ್ರೈವರ್ ಮಾನವೀಯತೆ- ಮಹಿಳೆಗೆ ಚಿನ್ನದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ

ವಿಜಯಪುರ: ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಕಳೆದುಕೊಂಡಿದ್ದ 5 ಗ್ರಾಂ ಚಿನ್ನಾಭರಣವನ್ನು ಮರಳಿಸುವ ಮೂಲಕ ಸರಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಗೆ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ಮಾಂಗಲ್ಯ ಸರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರು ದೇವೇಂದ್ರ ಡಂಬಳ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ, […]