ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವ ಎಂ. ಬಿ. ಪಾಟೀಲ- ಅರಕೇರಿ ಕೆರೆಗೆ ನೀರು ತುಂಬಿಸಲು ಸೂಚನೆ

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ಗೃಹ ಕಚೇರಿಯಲ್ಲಿ ದಿನವಿಡೀ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಸಚಿವರ ಗೃಹ ಕಚೇರಿಗೆ ಆಗಮಿಸಿದ ಬಬಲೇಶ್ವರ ಮತಕ್ಷೇತ್ರ ಮತ್ತು ಜಿಲ್ಲೆಯ ನಾನಾ ಭಾಗಗಳ ಹಾಗೂ ಹೊರ ಜಿಲ್ಲೆಗಳ ಜನರು ನಾನಾ ಅಹವಾಲು ಸಲ್ಲಿಸಿದರು.  ಕುಡಿಯುವ ನೀರು, ರಸ್ತೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವರು, ಇದೇ ಸಂದರ್ಭದಲ್ಲಿ ಸಂಬAಧಿಸಿದ ಅಧಿಕಾರಿಗಳಿಗೆ ಕರೆ […]

ಅರಕೇರಿಯಲ್ಲಿ ಆಪ್ಟೆ ಫೌಂಡೇಶನ್ ವತಿಯಿಂದ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ನಿಸರ್ಗದ ಜೊತೆಗೆ ಒಂದು ದಿನ ಕಾರ್ಯಕ್ರಮ

ವಿಜಯಪುರ: ಅರಕೇರಿಯಲ್ಲಿ ಆಷ್ಟೆ ಫೌಂಡೇಶನ್ ವತಿಯಿಂದ ಸ್ವಾಭಿಮಾನ ವೃದ್ಧಾಶ್ರಮದಲ್ಲಿ ನಿಸರ್ಗದ ಜೊತೆ ಒಂದು ದಿನ ವಿನೂತನ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮದ ಅಂಗವಾಗಿ ತುಳಸಿಗಿರೀಶ ಫೌಂಡೇಶನ್ ವತಿಯಿಂದ ಮಧುಮೇಹ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಕೂಡ ಆಯೋಜಿಸಲಾಗಿತ್ತು. ಮಧುಮೇಹ ತಜ್ಞ ಮತ್ತುಸಮಾಜ ಸೇವಕ ಬಾಬುರಾಜೇಂದ್ರ ನಾಯಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಳಿ ವಯಸ್ಸಿನಲ್ಲಿ ಕ್ರಮಬದ್ಧವಾದ ಆರೋಗ್ಯದ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.  ನಮ್ಮ ದೇಹ ಮತ್ತು ಪ್ರಕೃತಿಯ ನಡುವೆ ಇರುವ ಸಂಬಂಧಗಳನ್ನು ಚೆನ್ನಾಗಿ ಇಟ್ಟುಕೊಂಡರೆ ನಾವೆಲ್ಲರೂ ಆರೋಗ್ಯವಂತರಾಗಿ ಇರಲು […]

ಕಾಖಂಡಕಿ ಶ್ರೀ ಮಹಿಪತಿದಾಸರು ಸಿನೇಮಾ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ

ವಿಜಯಪುರ: ನಾಡಿನ ಹೆಸರಾಂತ ದಾಸವರೇಣ್ಯರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿರಾಯರ ಕುರಿತು ತೆರೆಗೆ ಬರುತ್ತಿರುವ ಕಾಖಂಡಕಿ ಶ್ರೀ ಮಹಿಪತಿದಾಸರು ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರಿನ ಕೆ ಆರ್ ಪುರಂ ನಲ್ಲಿರುವ ಮೊವೀಸ್ ಫಿಲ್ಮ್ ಸ್ಟುಡಿಯೋದಲ್ಲಿ ಖ್ಯಾತ ನಿರ್ದೇಶಕ ಡಾ. ಮಧಸೂಧನ ಹವಾಲ್ದಾರ, ಯುವ ಧುರೀಣ ಪ್ರಕಾಶ ಅಕ್ಕಲಕೋಟ ಚಿತ್ರೀಕರಣಕ್ಕೆ ಕ್ಲ್ಯಾಪ್ ಮಾಡಿದರು. ಬೆಂಗಳೂರಿನ ಬ್ರೆನ್ಸ್ ಫೌಂಡೇಶನ್ ಮುಖ್ಯ ನ್ಯೂರೋ ಸರ್ಜನ್ ಹಾಗೂ ಸಂಸ್ಥಾಪಕ ಡಾ. ವೆಂಕಟರಮಣ ಎನ್. ಕೆ. ಬೆಂಗಳೂರಿನ ಉನ್ನತಿ ಫೌಂಡೇಶನ್ನಿನ ರಮೇಶ್ […]

ಡಾ. ರಾಘವೇಂದ್ರ ಕುಲಕರ್ಣಿ ಅವರ ಸಂಶೋಧನೆಗೆ ಭಾರತ ಸರಕಾರದಿಂದ ಪೇಟೆಂಟ್ ಘೋಷಣೆ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ.‌ ಕುಲಕರ್ಣಿ ಅವರು ಕೈಗೊಂಡ ಸಂಶೋಧನೆಗೆ ಭಾರತ ಸರಕಾರ ಪೇಟೆಂಟ್ ನೀಡಿದೆ. ಫಾರ್ಮಾಸ್ಯೂಟಿಕಲ್ ಕಂಪೊಸಿಷನ್ ಕಾಂಪ್ರೈಸಿಂಗ್ ಫಂಕ್ಷನಲಿ ಮಾಡಿಫೈಡ್ ಪಿಎಚ್- ರಿಸ್ಪಾನ್ಸಿವ್ ಜೆಲ್ಲೆನ್ ಗಮ್ ಗ್ರಾಫ್ಟ್ ಕೊಪಾಲಿಮರ್ ಮೈಕ್ರೊಸ್ಪೀಯರ್ಸ್ ಫಾರ್ ಕೊಲೊನ್ ಕ್ಯಾನ್ಸರ್(PHARMACEUTICAL COMPOSITION COMPRISING FUNCTIONALLY MODIFIED PH-RESPONSIVE GELLEN GRAFT COPOLYMER MICROSPHERES FOR COLON CANCER) ಆವಿಷ್ಕಾರ ಮಾಡಿದ್ದು, ಈ ಸಂಶೋಧನೆಗೆ ಭಾರತ ಸರಕಾರದ ಪೇಟೆಂಟ್ ಪ್ರಮಾಣ ಪತ್ರ […]

ತುಬಚಿ- ಬಬಲೇಶ್ವರ ಏತನೀರಾವರಿ ಹೊಲಗಾಲುವೆ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ- ಸಚಿವ ಎಂ. ಬಿ. ಪಾಟೀಲ ಭರವಸೆ

ವಿಜಯಪುರ: ತುಬಚಿ- ಬಬಲೇಶ್ವರ ಏತನೀರಾವರಿ ಹೊಲಗಾಲುವೆಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ರೂ. 1.25 ಕೋಟಿ ವೆಚ್ಚದ ಅಲ್ಲಿಸಾಬ ವಸ್ತಿಯಿಂದ ಗುಂಡು ಸತ್ಯಪ್ಪ ಮಾಳಿ ವಸ್ತಿ(ಕರೆಮ್ಮ ದೇವಸ್ಥಾನದ ಹತ್ತಿರ) ವರೆಗೆ 3 ಕಿ. ಮೀ. ರಸ್ತೆ ಸುಧಾರಣೆ ಕಾಮಗಾರಿ ಮತ್ತು ರೂ. […]

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲು ಜಿ. ಪಂ. ಸಿಇಓ ರಾಹುಲ ಶಿಂಧೆ ಅಧಿಕಾರಿಗಳಿಗೆ ಸೂಚನೆ

ವಿಜಯಪುರ: ಕುಡಿಯುವ ನೀರು ಪೂರೈಕೆ ಕಾರ್ಯದಲ್ಲಿ ಯಾವುದೇ ಲೋಪಗಳಾಗದಂತೆ ಎಚ್ಚರಿಕೆ ವಹಿಸಿ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾ ಪಂಚಾಯತಿಯಲ್ಲಿ ಕುಡಿಯುವ ನೀರು ಮತ್ತು ಗೃಹಲಕ್ಷ್ಮೀ ಯೋಜನೆ ಪೂರ್ವಸಿದ್ಧತಾ ಕುರಿತು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲ ಜಲಮೂಲಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಜಲ ಮೂಲಗಳನ್ನು ಪ್ರತಿ ತಿಂಗಳು ಸ್ವಚ್ಛಗೊಳಿಸಬೇಕು.ಕುಡಿಯುವ ನೀರಿನ ಪರೀಕ್ಷೆ […]

5 ವರ್ಷ ಸಮಸ್ಯೆಯನ್ನು 20 ದಿನಗಳಲ್ಲಿ ಬಗೆಹರಿಸಿ ವಿತರಣೆ ಕಾಲುವೆಗೆ ನೀರು ಹರಿಸಿದ ಎಂ. ಬಿ. ಪಾಟೀಲ

ವಿಜಯಪುರ: ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯಲ್ಲಿ ಬರುವ ವಿತರಣೆ ಕಾಲುವೆ- 4ಕ್ಕೆ ನೀರು ಹರಿಸುವ ಸಮಸ್ಯೆಯನ್ನು ಕೇವಲ 20 ದಿನಗಳಲ್ಲಿ ಬಗೆಹರಿಸಿ ನೀರು ಬಿಡುಗಡೆ ಮಾಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಗಮನ ಸೆಳೆದಿದ್ದಾರೆ. ತಿಕೋಟಾ ತಾಲೂಕಿನ ಬಿಜ್ಜರಗಿ ಬಳಿ ಬರುವ ವಿತರಣೆ ಕಾಲುವೆ-4ರ ಸಮಸ್ಯೆ ಬಗೆಹರಿಸಿ ನೀರು ಹರಿಸಿ ಸ್ಪಂದಿಸುವಂತೆ ಕಳ್ಳಕವಟಗಿ, […]

ಭೂತನಾಳ ಕೆರೆಯ ಬಳಿ ನಿರ್ಮಿಸಲಾಗುತ್ತಿರುವ ಲೇಕ್ ಫ್ರಂಟ್ ಗಾರ್ಡನ್ ಪರಿಶೀಲನೆ ನಡೆಸಿದ ಡಿಸಿ ಟಿ. ಭೂಬಾಲನ್

ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ನಗರದ ಭೂತನಾಳ ಕೆರೆ ಹತ್ತಿರ ಅಭಿವೃದ್ದಿ ಪಡಿಸಲಾಗುತ್ತಿರುವ ಲೇಕ್ ಫ್ರಂಟ್ ಗಾರ್ಡನ್ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೂತನಾಳ ಕೆರೆ ಪ್ರದೇಶದಲ್ಲಿ ಅಭಿವೃದ್ದಿಪಡಿಸಲಾಗುತ್ತಿರುವ ಲೇಕ್ ಫ್ರಂಟ್ ಗಾರ್ಡನ್ ಅತ್ಯಂತ ಗುಣಮಟ್ಟದ ಕಾಮಗಾರಿ ಕೈಗೊಂಡು, ಅತ್ಯಾಕರ್ಷಕವಾದ ಗಾರ್ಡನ್ ನಿರ್ಮಾಣ ಕಾಮಗಾರಿಯನ್ನು ತೀವ್ರವಾಗಿ ಕೈಗೊಂಡು ಪೂರ್ಣಗೊಳಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ಭೂತನಾಳ ಕೆರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ […]

ಶರಣರ ವಚನಗಳನ್ನು ನಾಟಕ, ನೃತ್ಯರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಹೆಚ್ಚು ಜನರಿಗೆ ತಲುಪಲು ಸಾಧ್ಯ- ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ

ವಿಜಯಪುರ: ಶರಣರ ವಚನಗಳನ್ನು ನಾಟಕ ಮತ್ತು ನೃತ್ಯ ರೂಪಕಗಳ ಮೂಲಕ ಪ್ರಸಾರ ಮಾಡುವುದರಿಂದ ಜೀವನದ ಸಾರವನ್ನು ಹೆಚ್ಚೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎಂದು ಷಣ್ಮುಖಾರೂಢ ಮಠದ ಪೀಠಾಧಿಪತಿ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ಮತ್ತು ಹಿಂದಿ ವಿಭಾಗ, ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ಸಾಣೆಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ದೇಶದಲ್ಲೇ ಮೊದಲ ಅಖಿಲ […]

ಚಂದ್ರಯಾನ 3 ಯಶಸ್ವಿ- ಬಸವ ಜನ್ಮಭೂಮಿಯಲ್ಲಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಸಂಭ್ರಮಾಚರಣೆ

ವಿಜಯಪುರ: ಭಾರತದ ಬಹುನಿರೀಕ್ಷಿತ ಚಂದ್ರಯಾನ 3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.  ಪರಸ್ಪರ ಸಿಹಿ ಹಂಚಿದ ಕಾರ್ಯಕರ್ತರು ಇಸ್ರೊ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಇಸ್ರೊ ವಿಜ್ಞಾನಿಗಳು ಚಂದ್ರಯಾನ 3 ಯಶಸ್ವಿಯಾಗಿ ಮಾಡುವ ಮೂಲಕ ಕೋಟ್ಯಂತರ ಭಾರತೀಯರ ಜನರ ಕನಸು ನನಸು ಮಾಡಿದ್ದಾರೆ.  ವಿಕ್ರಮ್ […]