ಏಳೆಂಟು ತಿಂಗಳಲ್ಲಿ ರಾಜ್ಯ ಸರಕಾರ ಪತನ- ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಏಳೆಂಟು ತಿಂಗಳಲ್ಲಿ ರಾಜ್ಯ ಸರಕಾರ ಪತನವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ವಿಜಯಪುರ ನಗರದಲ್ಲಿಬ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ಔತಣಕೂಟ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಲವಾರು ಕಾರಣಗಳಿಂದ ಬಿಜೆಪಿಗೆ ಸೋಲಾಯಿತು. ಅನೇಕ‌ ತಪ್ಪು ನಿರ್ಣಯಗಳು, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ, ಬಿಜೆಪಿ ಸರಕಾರದಲ್ಲಿ ಕೆಲವು ಸಚಿವರು ಮಾಡಿದ ಭ್ರಷ್ಟಾಚಾರ, ಬಿಜೆಪಿ ಸರಕಾರದಲ್ಲಿ ಹಿಂದುತ್ವ ನಿರ್ಲಕ್ಷ್ಯ ಮಾಡಲಾಯಿತು. ಈ ಎಲ್ಲ ವಿಚಾರಗಳಿಂದ ಚುನಾವಣೆಯಲ್ಲಿ […]

ಸದಾಶಿವ ಮೂಲ ಮಹಾಸಂಸ್ಥಾನಮಠದ ಹೆಸರಿನಲ್ಲಿ ಯಾರೂ ದೇಣಿಗೆ ಕೇಳುತ್ತಿಲ್ಲ- ಯಾರಿಗೂ ಹಣ ನೀಡಬೇಡಿ- ಬಬಲಾದಿ ಶ್ರೀ ಸಿದ್ಧರಾಮಯ್ಯ ಮುತ್ಯಾ ಖಡಕ್ ಎಚ್ಚರಿಕೆ

ವಿಜಯಪುರ: ಕಾಲಜ್ಞಾನಕ್ಕೆ ಹೆಸರಾಗಿರುವ ಬಸವ ನಾಡಿನ ಬಬಲಾದಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮೂಲ ಮಹಾಸಂಸ್ಥಾನ ಮಠದ ಹೆಸರಿನಲ್ಲಿ ಕೆಲವು ಜನರು ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಶ್ರೀಗಳ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಮಠದ ಕಾರ್ಣಿಕ ಶ್ರೀ ಸಿದ್ಧರಾಮಯ್ಯ ಮುತ್ಯಾ ನೀಡುವ ಹೇಳಿಕೆ ಜಗತ್ಪ್ರಸಿದ್ಧವಾಗಿದೆ.  ಇವರು ನುಡಿಯುವ ಭವಿಷ್ಯ ಎಲ್ಲವೂ ನಿಜವಾಗುತ್ತಿದೆ.  ಹೀಗಾಗಿ ಈ ಮಠದ ಮೇಲೆ ಕರ್ನಾಟಕವಷ್ಟೇ ಅಲ್ಲ, ದೇಶದ ನಾನಾ ಭಾಗಗಳಿಂದಲೂ ಭಕ್ತರು ಆಗಮಿಸಿ ದೇವರ ಪ್ರೀತಿಗೆ […]

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯಕ್ಕೆ ತಕ್ಕಂತೆ ಕೌಶಲ್ಯ ಬೆಳೆಸಿಕೊಳ್ಳಬೇಕು- ಡಾ. ಆರ್. ಎಸ್. ಮುಧೋಳ

ವಿಜಯಪುರ, ಆ. 12: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಮಾಡಿಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದ್ದಾರೆ. ವಿವಿಯಲ್ಲಿ ಚಿಕ್ಕಮಕ್ಕಳ ವಿಭಾಗದ ಆಶ್ರಯದಲ್ಲಿ ನಡೆದ ಮಕ್ಕಳಲ್ಲಿ ಕಂಡು ಬರುವ ಗಂಭೀರ ಕಾಯಿಲೆಗಳ ನಿರ್ವಹಣೆ ವಿಧಾನದ ಬಗ್ಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ವಿಶೇಷ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಲಿಕಾ ಕೌಶಲ್ಯ ತರಬೇತಿ ಕಾರ್ಯಕ್ರಮ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಪ್ರಮುಖ ಪಾತ್ರ […]

ಬಿಜೆಪಿ ಅವಧಿಯಲ್ಲಿ ಟೆಂಡರ್ ಗಾತ್ರ ಹೆಚ್ಚಿಸಿರುವ ಕುರಿತು ಸಮಗ್ರ ತನಿಖೆಯಾಗಬೇಕು- ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಟೆಂಡರ್ ಗಾತ್ರ ಹಚ್ಚಿಸಿರುವ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅಹಿಂದ ಮತ್ತು ಕಾಂಗ್ರೆಸ್ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ 40 ಪರ್ಸೆಂಟ್ ಕಮಿಷನ್ ಭಾಗವಾಗಿ ನಾನಾ ಟೆಂಡರ್ ಗಳ ಅಂದಾಜು ವೆಚ್ಚವನ್ನು ಹೆಚ್ಚಿಸಲಾಗಿದೆ.  ಈ ಹೆಚ್ಚಳಕ್ಕೆ ಏನು ಕಾರಣ? ಯಾವ ದರಕ್ಕೆ ಗುತ್ತಿಗೆ ನೀಡಲಾಗಿದೆ? ಸೇರಿದಂತೆ ಎಲ್ಲ ಅಂಶಗಳ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು. ಬಿಜೆಪಿ […]

ಮಕ್ಕಳಿಗೆ ವಿದ್ಯಾರ್ಥಿ ದಿಸೆಯಿಂದಲೇ ಪರಿಸರ ಜಾಗೃತಿ ಪಾಠ- ಮಾಸ್ಟರ್ ಕಿಶನ್, ಧ್ರುವ ಎಂ. ಪಾಟೀಲ ವಿನೂತನ ಪ್ರಯತ್ನ

ವಿಜಯಪುರ: ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದ ಮನುಕುಲದ ಮೇಲಾಗುತ್ತಿರುವ ಗಂಭೀರ ಪರಿಣಾಮಗಳ ಬಗ್ಗೆ ಮಕ್ಕಳಿಗೆ ವಿದ್ಯಾರ್ಥಿ ದಿಸೆಯಿಂದಲೇ ಜಾಗೃತಿ ಮೂಡಿಸಿ ಅವರನ್ನು ಭವಿಷ್ಯದ ಹಸಿರು ಸೈನಿಕ(ಗ್ರೀನ್ ವಾರಿಯರ್ಸ್)ರನ್ನಾಗಿ ಮಾಡುವ ವಿನೂತನ ಮತ್ತು ವಿಶಿಷ್ಠ ಕಾರ್ಯಕ್ರಮವೊಂದು ಬಸವ ನಾಡಿನಲ್ಲಿ ನಡೆಯಿತು.  ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಪಿ.ಪಿ.ಎ(ಸೊಸಾಯಿಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ಸ್ ಆ್ಯಂಡ್ ಎನಿಮಲ್ಸ್), ಶಾಲಾ ಶಿಕ್ಷಣ ಇಲಾಖೆ ಮತ್ತು ಅರ್ಜುಣಗಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ನಡೆದ […]

ಗ್ರಾಮೀಣ ಕೂಲಿ ಕಾರ್ಮಿಕರ ಶಿಶು ಪೋಷಣೆ ಸರಕಾರದ ಮಡಿಲಿಗೆ: ಜಿ. ಪಂ. ಸಿಇಓ ರಾಹುಲ್ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವವರ 6 ತಿಂಗಳಿಂದ 3 ವರ್ಷದ ಶಿಶುಗಳನ್ನು ವ್ಯವಸ್ಥಿತ ಪಾಲನೆ ಪೋಷಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲು ರಾಜ್ಯ ಸರಕಾರ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ) ಎಂಬ ಮಹತ್ವದ ಯೋಜನೆ ಜಾರಿಗೆ ತಂದಿದೆ.  ಈ ಮೂಲಕ ಕೂಲಿ ಕಾರ್ಮಿಕರ ಶಿಶುಗಳ ಪೋಷಣೆ ಮಾಡುವ ಜವಾಬ್ದಾರಿಯನ್ನು ಸರಕಾರ ತನ್ನ ಮಡಿಲಿಗೆ ಹಾಕಿಕೊಂಡಿದೆ ಎಂದು ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ […]

ಸಿಂದಗಿ ತಾಲೂಕು ಕಚೇರಿಗಳಿಗೆ ಭೇಟಿ ಟಿ. ಭೂಬಾಲನ ಭೇಟಿ, ಪರಿಶೀಲನೆ- ತಾಲೂಕಾದ್ಯಂತ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸೂಚನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಸಿಂದಗಿ ತಾಲೂಕಿನ ನಾನಾ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ತಾಲೂಕಿನಾದ್ಯಂತ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು. ಸಿಂದಗಿ ನೂತನ ತಾಲೂಕು ಆಡಳಿತ ಸೌಧ ಕಟ್ಟಡದ ಸ್ಥಳ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗೆ ವೇಗ ನೀಡಿ, ತೀವ್ರಗತಿಯಲ್ಲಿ […]

ವಿಜಯಪುರ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಮೇರಾ ದೇಶ ಮೇರಾ ಮಿಟ್ಟಿ ಕಾರ್ಯಕ್ರಮ- ಯುವಜನತೆ ದೇಶ ಸೇವೆ ಮಾಡಲು ಪಣತೋಡಿ- ಸಿ. ಕೆ. ಹೊಸಮನಿ

ವಿಜಯಪುರ: ಯುವಕರು ದೇಶ ಸೇವೆ ಮಾಡಲು ಪಣತೊಡಬೇಕು ಎಂದು ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಕೆ. ಹೊಸಮನಿ ಹೇಳಿದ್ದಾರೆ. ನಗರದ ಬಾಲಕರ ಸರಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್. ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆದ ಮೇರಾ ಮಿಟ್ಟಿ ಮೇರಾ ದೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯದ ಭವ್ಯ ನಾಗರಿಕರು.  ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ವೀರ ಯಶೋಗಾಥೆಯ ಬಗ್ಗೆ ತಿಳಿದುಕೊಳ್ಳಬೇಕು.  ಅವರ ಹೋರಾಟದ ವಿಚಾರಗಳು ಪ್ರೇರಣೆಯಾಗಬೇಕು ಎಂದು ಅವರು ಹೇಳಿದರು. […]

ನಿವೃತ್ತಿಯ ಬಳಿಕ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿರುವ ವಂದಾಲದ ರೈತನ ಯಶೋಗಾಥೆ

ವಿಜಯಪುರ: ನೌಕರಿಯಲ್ಲಿದ್ದಾಗ ಜಾನುವಾರುಗಳು ಸೇವೆ ಮಾಡಿದ ರೈತ ನಿವೃತ್ತಿಯ ನಂತರ ಭೂತಾಯಿಯ ಸೇವೆ ಮಾಡಿ ದಾಳಿಂಬೆ ನಗೆ ಬೀರುತ್ತಿದ್ದಾರೆ.  ಪಶುವೈದ್ಯಕೀಯ ಸಹಾಯಕರಾಗಿದ್ದ ಇವರು ಈಗ ಅಪ್ಪಟ ಮಣ್ಣಿನ ಮಗನಾಗಿ ದುಡಿಯುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.   ಇದು ಬರದ ನಾಡಿನ ವ್ಯಕ್ತಿಯೊಬ್ಬರು ನಿವೃತ್ತಿ ಜೀವನದಲ್ಲೂ ಆಸಕ್ತಿಯಿಂದ ಬೇಸಾಯದಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿರುವ ಸ್ಟೋರಿ.  ಸೇವಾ ನಿವೃತ್ತಿಯಾದ ನಂತರ ಬಹುತೇಕರು ವಿಶ್ರಾಂತ ಜೀವನ ಸಾಗಿಸುತ್ತಾರೆ.  ಆದರೆ, ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ವಂದಾಲ ಗ್ರಾಮದ ಬಸಪ್ಪ ಸಿದ್ದಪ್ಪ ಕುಂಬಾರ ಇದಕ್ಕೆ ಅಪವಾದವಾಗಿದ್ದಾರೆ.  […]

ಬಬಲೇಶ್ವರ, ತಿಕೋಟಾ ಪಟ್ಟಣಗಳಿಗೆ 24×7 ನೀರು ಪೂರೈಸುವ ಗುರಿಯಿದೆ- ಕುಡಿಯುವ ನೀರು ಯೋಜನೆ ಪರಿಷ್ಕರಿಸಲು ತೀರ್ಮಾನ- ಎಂ ಬಿ ಪಾಟೀಲ

ಬೆಂಗಳೂರು: ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನರಿಗೆ 24×7 ನೀರು ಪೂರೈಸುವ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಿಜಯಪುರ ನಗರ, ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಸಂಬಂಧಿಸಿದಂತೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ನಾನಾ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಮಾತನಾಡಿದರು. ಬಬಲೇಶ್ವರ ಮತ್ತು ತಿಕೋಟಾಗಳಿಗೆ […]