ಬಸವನಾಡಿನ ಪಿಡಿಜೆ ಬ ಶಾಲೆಯ ನೂತನ ಸಂಸತ್ತು ರಚನೆ- ಪ್ರಮಾಣ ವಚನ ಸ್ವೀಕರಿಸಿದ ಶಾಲೆಯ ಮಂತ್ರಿಮಂಡಳದ ಹೊಸ ಪದಾಧಿಕಾರಿಗಳು

ವಿಜಯಪುರ: ಬಸವನಾಡಿನ ಪ್ರತಿಷ್ಠಿತ ಪಿ.ಡಿ.ಜೆ ಬ ಶಾಲೆಯ ನೂತನ ಸಂಸತ್ತಿನ ಹೊಸ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆ ಹೊಸ ಮಂತ್ರಿಮಂಡಳದ ಪ್ರವೀಣ ಹಡಪದ, ಪ್ರಧಾನ ಮಂತ್ರಿಯಾಗಿ ಕುಬೇರ ಹೊನ್ನಕಸ್ತೂರಿ, ಉಪಪ್ರಧಾನ ಮಂತ್ರಿ ಆದರ್ಶ ಅಂಗಡಿ, ವಿರೋಧ ಪಕ್ಷದ ನಾಯಕ ಇಮ್ರಾನ್ ನದಾಫ ಮತ್ತು ಸದಸ್ಯರಾಗಿ 44 ಜನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರಮಾಣ ವಚನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಈ ಶೈಕ್ಷಣಿಕ ವರ್ಷ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿ ಮತ್ತು […]

ಡೇ ನಲ್ಮ: ಸಾಲ ಮಂಜೂರಾತಿಗೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅಧಿಕಾರಿಗಳಿಗೆ ಸೂಚನೆ

ವಿಜಯಪುರ: ಡೇ ನಲ್ಮ ಅಭಿಯಾನದ ಪಿಎಂ ಸ್ವ-ನಿಧಿ ಅಡಿ ಬಾಕಿ ಇರುವ ಅರ್ಜಿಗಳ ಸಾಲ ಮಂಜೂರಾತಿಗೆ ಶೀಘ್ರ ಕ್ರಮ ವಹಿಸುವಂತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ.   ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸ್ವ ನಿಧಿ ಸಮೃದ್ದಿ ಯೋಜನೆಯಡಿ ಎಂಟು ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. ಪಿಂಕ್ ಆಟೋ […]

ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆ ಕೈಗೊಳ್ಳಿ- ಪ್ರೊ. ಬಿ. ಕೆ. ತುಳಸಿಮಾಲ

ವಿಜಯಪುರ: ಸಂಶೋಧನಾ ವಿದ್ಯಾರ್ಥಿನಿಯರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಂಶೋಧನೆಯನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಹೇಳಿದರು. ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಘಟಕದ ವತಿಯಿಂದ ಆಯೋಜಿಸಲಾದ ಸಂಶೋಧನೆ ವಿದ್ಯಾರ್ಥಿನಿಯರಿಗೆ ಲ್ಯಾಪ್-ಟಾಪ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಲ್ಯಾಪಟಾಪ್‍ಗಳ ಸದುಪಯೋಗವನ್ನು ಸಂಶೋಧನೆಗಷ್ಟೇ ಸೀಮಿತಗೊಳಿಸದೇ ಮಾಹಿತಿ ವಿಶ್ಲೇಷಣೆಗಳನ್ನು ಮಾಡಿ ಆ ಮೂಲಕ ಆರ್ಥಿಕವಾಗಿ ಸದೃಢರಾಗಬಹು […]

ಗುಮ್ಮಟ ನಗರಿಯಲ್ಲಿ ಡಿಸಿ ಟಿ. ಭೂಬಾಲನ ಸಿಟಿ ರೌಂಡ್ಸ್- ಒಳಚರಂಡಿ, ನೀರು ಸರಬರಾಜು, ರಸ್ತೆ ಕಾಮಗಾರಿಗಳ ಪರಿಶೀಲನೆ

ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ವಿಜಯಪುರ ನಗರದ ಜುಮ್ಮಾ ಮಸೀದಿ ರಸ್ತೆ, ಹಕೀಮ್ ಚೌಕ್, ಗೋಲಗುಂಬಜ್, ರೇಲ್ವೆ ಸ್ಟೇಶನ್ ರಸ್ತೆ, ನವಬಾಗ ರಸ್ತೆ ಸೇರಿದಂತೆ ನಾನಾ ಸ್ಥಳಗಳಿಗೆ ಭೇಟಿ ನೀಡಿ ರಸ್ತೆ, ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಬೆ. 7 ಗಂಟೆಗೆ ಮಹಾನಗರ ಪಾಲಿಕೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನಗರ ನೀರು ಸರಬರಾಜು ಮಂಡಳಿ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ  ನಾನಾ ಅಧಿಕಾರಿಗಳೊಂದಿಗೆ ಸಿಟಿ ರೌಂಡ್ಸ್ ನಡೆಸಿದ ಜಿಲ್ಲಾಧಿಕಾರಿಗಳು, ನಗರದ ಅತಾವುಲ್ಲಾ ವೃತ್ತದಿಂದ ಜಂಡಾಕಟ್ಟಿಯ […]

ಬೆಂಗಳೂರಿನಲ್ಲಿ ಮೇಕ್ ಮೈಟ್ರಿಪ್ ನಿಂದ ಎರಡು ಹೊಸ ಫ್ರಾಂಚೈಸಿ ಮಳಿಗೆಗಳ ಪ್ರಾರಂಭ

ಬೆಂಗಳೂರು: ಭಾರತದ ಮುಂಚೂಣಿಯ ಆನ್ಲೈನ್ ಟ್ರಾವೆಲ್ ಕಂಪನಿ ಮೇಕ್ ಮೈ ಟ್ರಿಪ್ ಕರ್ನಾಟಕದ ಬೆಂಗಳೂರಿನಲ್ಲಿ ಎರಡು ಹೊಸ ಫ್ರಾಂಚೈಸಿ ಮಳಿಗೆಗಳನ್ನು ತೆರೆದಿದೆ. ಈ ಮಳಿಗೆಗಳು ಕಮ್ಮನಹಳ್ಳಿ ಮತ್ತು ಇನ್ಫೆಂಟ್ರಿ ರಸ್ತೆಯ ಪ್ರದೇಶದಲ್ಲಿದ್ದು ನಗರದಲ್ಲಿ ಕ್ರಮವಾಗಿ ಮೇಕ್ ಮೈಟ್ರಿಪ್ ನ 16 ಮತ್ತು 17ನೇ ಮಳಿಗೆಗಳಾಗಿವೆ ಹಾಗೂ ಕರ್ನಾಟಕದಲ್ಲಿ ಹದಿನಾಲ್ಕನೆಯದಾಗಿವೆ.  ಈ ಫ್ರಾಂಚೈಸಿ ಜಾಲದ ವಿಸ್ತರಣೆಯು ಭಾರತದಲ್ಲಿ ಮುಂಚೂಣಿಯ 100+ ನಗರಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವ ವಿಸ್ತಾರ ಕಾರ್ಯತಂತ್ರದ ಭಾಗವಾಗಿದ್ದು ಜನರು ಅವರು ವಿಶ್ವಾಸವಿರಿಸುವವರೊಂದಿಗೆ ಹೆಚ್ಚು ಅನುಕೂಲಕರವಾಗಿ ಸಂವಹನ […]

ಅಕ್ಕಮಹಾದೇವಿ ಮಹಿಳಾ ವಿವಿ ನೂತನ ರಜಿಸ್ಟ್ರಾರ್ ಆಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕಾರ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಶಂಕರಗೌಡ ಎಸ್. ಸೋಮನಾಳ ಅಧಿಕಾರ ಸ್ವೀಕರಿಸಿದ್ದಾರೆ. ಹಾಲಿ ಕುಲಸಚಿವರಾಗಿದ್ದ ಪ್ರೊ. ಬಿ. ಎಸ್. ನಾವಿ ಅವರು ನೂತನ ಕುಲಸಚಿವರಾಗಿ ನೇಮಕವಾಗಿರುವ ಶಂಕರಗೌಡ ಎಸ್. ಸೋಮನಾಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ, ಉಪಕುಲಸಚಿವ ಡಾ. ಯು. ಕೆ. ಕುಲಕರ್ಣಿ, ಡಾ. ದೀಪಕ ಶಿಂದೆ, ಸಹಾಯಕ ಕುಲಸಚಿವ ಡಾ. ಪ್ರಕಾಶ ಬಡಿಗೇರ, ಡಾ. ಜಾಯ್ ಹೊಸಕೇರಿ, ಡಾ. ಸವಿತಾ ಹುಲಮನಿ […]

ರೂ. 10 ಸೇರಿದಂತೆ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಿ: ಡಿಸಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಭಾರತೀಯ ರಿಸರ್ವ್ ಬ್ಯಾಂಕಿನಿಂದ ಚಲಾವಣೆಯಾಗಿರುವ ಎಲ್ಲಾ ನಾಣ್ಯಗಳನ್ನು ಕಾನೂನು ಬದ್ಧವಾಗಿ ಸ್ವೀಕರಿಸಬೇಕು.  ರೂ. 10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011ರ ಸೆಕ್ಷನ್ 6(1)ರ ಉಲ್ಲಂಘನೆಯಾಗುವುದರಿಂದ ಎಲ್ಲ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ.   ಭಾರತೀಯ ರಿಸರ್ವ್ ಬ್ಯಾಂಕ್ ಕಾಲಕಾಲಕ್ಕೆ ವಿಶಿಷ್ಟ ಲಕ್ಷಣಗಳುಳ್ಳ ನಾಣ್ಯಗಳನ್ನು ಬಿಡುಗಡೆ ಮಾಡುತ್ತದೆ.  ನಾಣ್ಯಗಳ ಅಸಲಿತನ ಬಗ್ಗೆ ಶಂಕೆ ವ್ಯಕ್ತಪಡಿಸಿ, ವ್ಯಾಪಾರಸ್ಥರು, ಅಂಗಡಿಯವರು ಮತ್ತು ಸಾರ್ವಜನಿಕರ ಮನಸ್ಸಿನಲ್ಲಿ ಶಂಕೆ ಬಿತ್ತಿರುತ್ತಾರೆ.  ಇದರಿಂದ ದೇಶದ ಕೆಲವು ನಿರ್ದಿಷ್ಟ ಭಾಗಗಳಲ್ಲಿ […]

ವೃದ್ಧ ದಂಪತಿಯ ಮನವಿಗೆ ಒಂದೇ ಗಂಟೆಯಲ್ಲಿ ಸ್ಪಂದನೆ- ಡಿಸಿ ಟಿ. ಭೂಬಾಲನ ಮಾಡಿದ ಕೆಲಸ ಇತರರಿಗೆ ಮಾದರಿ

ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಮುಂದೆ ಅಳಲು ತೋಡಿಕೊಂಡು ಬಂದ ಬಡ ವೃದ್ಧ ದಂಪತಿಗಳಿಗೆ ಒಂದು ಗಂಟೆಯೊಳಗೆ ವೃದ್ಧಾಪ್ಯ ವೇತನ ಮಂಜೂರು ಮಾಡುವ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.   ವಿಜಯಪುರ ನಗರದ ಗ್ಯಾಂಗಬಾವಡಿಯ ನಿವಾಸಿಗಳಾದ ಸೂರ್ಯಕಾಂತ ರಾಮದುರ್ಗಕರ ಮತ್ತು ಸುರೇಖಾ ರಾಮದುರ್ಗ ಕಡು ಬಡವ ವೃದ್ಧ ದಂಪತಿಯಾಗಿದ್ದು, ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರು.  ತಮ್ಮ ಜೀವನೋಪಾಯಕ್ಕೆ ಆಸರೆ ಒದಗಿಸಲು ಮನವಿ ಮಾಡಿಕೊಂಡಿದ್ದರು.  ಜಿಲ್ಲಾಧಿಕಾರಿಗಳು ಅವರ ದೂರನ್ನು ಶಾಂತಚಿತ್ತದಿಂದ ಅಲಿಸಿ, ಸ್ಥಳದಲ್ಲಿಯೇ ವೃದ್ದ ದಂಪತಿಗಳಿಗೆ ಪಿಂಚಣಿ ಮಂಜೂರು ಮಾಡಿ ಕೊಡುವ […]

ದೇಶದಲ್ಲಿಯೇ ಮೊದಲು- ಸುಮಾರು 600 ಜನ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನೆಮನೆಗೆ ತೆರಳಿ ಜನಜಾಗೃತಿ- ಅಂಗದಾನದ ಮಹತ್ವ ತಿಳಿಸಿಡುವ ವಿನೂತನ ಪ್ರಯತ್ನ

ವಿಜಯಪುರ: ದೇಶದಲ್ಲಿಯೇ ಇದೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮವೊಂದನ್ನು ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಬಸವನಾಡಿನ ಪ್ರತಿಷ್ಠಿತ ಬಿ.ಎಲ್.ಡಿ.ಈ ಡೀಮ್ಡ್ ವಿಶ್ವವಿದ್ಯಾಲಯದ ಸುಮಾರು 600 ಜನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಜನಮೆಚ್ಚುವ ಕೆಲಸ ಮಾಡಿದ್ದಾರೆ. ಆಗಷ್ಟು 3 ರಾಷ್ಟ್ರೀಯ ಅಂಗದಾನ ದಿನಾಚರಣೆ ನಡೆಯುತ್ತದೆ.  ಈ ಕಾರ್ಯಕ್ರಮದ ಮಹತ್ವನ್ನು 25 ಸಾವಿರ ಮನೆಮನೆಗಳಿಗೆ ತೆರಳಿ ಜನಜಾಗೃತಿ ಮಾಡುವ ಮೂಲಕ ಈ ವೈದ್ಯರು ಮತ್ತು ವಿದ್ಯಾರ್ಥಿಗಳು ರಾಷ್ಟ್ರೀಯ ಅಂಗದಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗಮನ ಸೆಳೆದಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿವಿ […]

ರಾಜ್ಯ ಮಟ್ಟದ ಅಬ್ಯಾಕಸ್, ವೇದಿಕ ಗಣಿತ ಸ್ಪರ್ಥೆಯಲ್ಲಿ ಬಸವನಾಡಿನ ವಿದ್ಯಾರ್ಥಿಗಳ ಸಾಧನೆ

ವಿಜಯಪುರ: ಮಹಾರಾಷ್ಟ್ರದ ಸೋಲಾಪೂರದ ಶ್ರದ್ಧಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಬ್ಯಾಕಸ್ ಮತ್ತು ವೇದಿಕ್ ಗಣಿತ ಸ್ಪರ್ಧೆಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಸಿದ್ಧೇಶ್ವರ ಕೋಚಿಂಗ್ ಕ್ಲಾಸ್ ನ ವಿದ್ಯಾರ್ಥಿನಿ ಸ್ಪಂದನಾ ಬಸನಗೌಡ ಬಿರಾದಾರ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಗಮನ ಸೆಳೆದಿದ್ದಾರೆ.  ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಗೌರವಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸುರೇಶ ಜತ್ತಿ, ದೇವರು ಪ್ರತಿಯೊಬ್ಬ ಮಗುವಿನಲ್ಲಿ ವಿಶೇಷ ಸಾಮರ್ಥ್ಯ ಕೊಟ್ಟಿರುತ್ತಾನೆ.  ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು […]