ಭೂತನಾಳ ಕೆರೆಗೆ ಕೃಷ್ಣಾ ನೀರು- ಕುಡಿಯುವ ನೀರಿನ ಬಗ್ಗೆ ಆತಂಕ ಬೇಡ- ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ:ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಗೆ ಕೃಷ್ಣಾ ನದಿಯಿಂದ ನೀರು ತುಂಬಿಸಲಾಗುತ್ತಿದ್ದು, ಶೀಘ್ರದಲ್ಲಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಲಿದೆ.  ಇದರಿಂದ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಐತಿಹಾಸಿಕ ಭೂತನಾಳ ಕೆರೆಯಿಂದ ವಿಜಯಪುರ ನಗರದ ಉತ್ತರ ಮತ್ತು ಪಶ್ಚಿಮ ಭಾಗದ 10 ವಾರ್ಡುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ.  ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ […]

ದೇಹದಲ್ಲಿ ಎರಡು ಅಂಡವಾಯು ಹೊಂದಿದ್ದ 76 ವರ್ಷದ ಮಹಿಳೆಗೆ ದೇಶದಲ್ಲೇ ಮೊದಲ ಬಾರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು:  76 ವರ್ಷದ ಮಹಿಳೆಯ ಮೂತ್ರಕೋಶ, ಯೋನಿ ಹಾಗೂ ಗುದದ್ವಾರದಲ್ಲಿ ಬೆಳೆದುಕೊಂಡಿದಿದ್ದ ಎರಡು ರೀತಿಯ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾವನ್ನು ಲ್ಯಾಪರೋಸ್ಕೋಪಿಕ್‌ ಮೂಲಕ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ನಡೆಸಿದ್ದು, ಎರಡು ಹರ್ನಿಯಾಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು ದೇಶದಲ್ಲೇ ಮೊದಲು. ಈ ಕುರಿತು ಮಾತನಾಡಿದ ಮಿನಿಮಲ್ ಆಕ್ಸೆಸ್ ಮತ್ತು ಬಾರಿಯಾಟ್ರಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಗಣೇಶ್‌ ಶೆಣೈ, 76 ವರ್ಷದ ಮಹಿಳೆಯಲ್ಲಿ ಆರು ವರ್ಷಗಳ ಹಿಂದೆಯೇ ಪ್ಯಾರಾಸ್ಟೊಮಲ್ ಮತ್ತು ಪೆರಿನಿಯಲ್ ಹರ್ನಿಯಾ (ಅಂಡವಾಯು)ವು […]

ಅಂಗದಾನದ ಮಹತ್ವದ ಕುರಿತು ಜನಜಾಗೃತಿ ಮೂಡಿಸಲು ಸಾಮಾಜಿಕ ಚಳವಳಿ ಅಗತ್ಯ- ಡಾ. ಎಸ್. ಬಿ. ಪಾಟೀಲ

ವಿಜಯಪುರ: ಅಂಗಾಂಗ ದಾನದ ಮಹತ್ವದ ಕುರಿತು ಜನಜಾಗೃತಿಗೆ ಸಾಮಾಜಿಕ ಚಳವಳಿ ಅಗತ್ಯವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ‌ ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್. ಬಿ. ಪಾಟೀಲ ಹೇಳಿದ್ದಾರೆ. ನಗರದಲ್ಲಿರುವ ವಿವಿಯಲ್ಲಿ ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಜೊತೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಪ್ರತಿ ವರ್ಷ ಜುಲೈ ತಿಂಗಳನ್ನು ಅಂಗದಾನ ಮಹೋತ್ಸವ […]

ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ವ್ಯಸನ ಮುಕ್ತ ದಿನಾಚರಣೆ

ವಿಜಯಪುರ: ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ವ್ಯಸನ ಮುಕ್ತ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಎಲ್ಲ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಮುಂತಾದವರು  ಉಪಸ್ಥಿತರಿದ್ದರು.

ಅನುಭಾವ ಸಾಹಿತ್ಯಕ್ಕೆ ಹೊಸ ಆಯಾಮ ಒದಗಿಸಿದವರು ಮಧುರಚೆನ್ನರು- ಡಾ. ವಿ. ಡಿ. ಐಹೊಳ್ಳಿ

ವಿಜಯಪುರ: ಮಧುರಚೆನ್ನರು ಜಾನಪದ ಸಾಹಿತ್ಯ ಸಂಶೋಧನೆ ಸಂಗ್ರಹದ ಮೂಲಕ ಈ ನೆಲದ ಮೂಲ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸಿದರು.  ಅಲ್ಲದೇ, ಅನುಭಾವ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಒದಗಿಸಿ ಶ್ರೀ  ಮಾತಾ ಅರವಿಂದರ ತತ್ವ ಸಿದ್ದಾಂತಗಳನ್ನು ಅನುಸರಿಸಿ ಅರವಿಂದ ಮಂಡಲವನ್ನು ಸ್ಥಾಪಿಸಿ ಹಲಸಂಗಿ ಎನ್ನುವ ಕುಗ್ರಾಮವನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಕೇಂದ್ರವಾಗಿಸಿದ ಮಹಾನ್ ಚೇತನ ಎಂದು ಡಾ. ವಿ. ಡಿ. ಐಹೊಳ್ಳಿ ಹೇಳಿದ್ದಾರೆ.   ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲಸಂಗಿ ಗೆಳೆಯರ ಪ್ರತಿಷ್ಠಾನ ವತಿಯಿಂದ ಮಧುರಚೆನ್ನರು 120ನೇ […]

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ತಾಯಿಯ ಹಾಲು ಅಮೃತಕ್ಕೆ ಸಮಾನ- ಡಾ. ಎಸ್. ಎಲ್. ಲಕ್ಕಣ್ಣವರ

ವಿಜಯಪುರ: ತಾಯಿಯ ಹಾಲು ಅಮೃತಕ್ಕೆ ಸಮಾನ, ಎಲ್ಲಾ ತಾಯಿಂದಿರು ಮಗುವಿಗೆ ಎದೆ ಹಾಲು ನೀಡುವುದನ್ನು ನಿರ್ಲಕ್ಷಿಸಬಾರದು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಸ್. ಎಲ್. ಲಕ್ಕಣ್ಣವರ ಕರೆ ನೀಡಿದ್ದಾರೆ. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ವಿಜಯಪುರ ಹಾಗೂ ಜೆ.ಎಸ್.ಎಸ್ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆ.1 ರಿಂದ 7ರ […]

ಸ್ವಸ್ಥ ಬದುಕಿಗಾಗಿ ದುಶ್ಚಟಗಳಿಂದ ದೂರವಿರಲು ಯುಜನಾಂಗಕ್ಕೆ ಕರೆ- ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಕರೆ

ವಿಜಯಪುರ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವು ನಮ್ಮ ಗುರಿಯಾಗಿದೆ. ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿದಾಯಕವಾಗಿದೆ. ಮಾದಕವೆಂಬ ವಿಷ ಮನುಕುಲದಲ್ಲಿ ಯುವ ಸಮುದಾಯ ನಲುಗುತ್ತಿದೆ. ವ್ಯಸನಕ್ಕೆ ಒಳಗಾಗಿ ಸುಂದರ ಬದುಕನ್ನು ವ್ಯರ್ಥಮಾಡಿಕೊಳ್ಳದೇ ಸ್ವಾಸ್ಥ ಸುಂದರ ಬದುಕು ರೂಪಿಸುವತ್ತ ಯುವಜನಾಂಗ ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ.   ನಗರದ ಜಿ. ಪಂ. ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ […]

ರಾಷ್ಟ್ರೀಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಗುಮ್ಮಟ ನಗರಿಯ ವಿದ್ಯಾರ್ಥಿಗಳ ಸಾಧನೆ

ವಿಜಯಪುರ: ಬೆಂಗಳೂರಿನಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿಜಯಪುರ ನಗರದ ಬೆಸ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ. ಕುಮಟೆ ಮತ್ತು ಕಟಾ ವಿಭಾಗದಲ್ಲಿ ತಲಾ 10 ಪದಕ ಸೇರಿದಂತೆ ಒಟ್ಟು 20 ಪದಕಗಳನ್ನು ಗೆಲ್ಲುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕುಮಟೆ ವಿಭಾಗದಲ್ಲಿ ಅರುಣ, ಉದಯ, ಗುರುದಾಸ, ಜಗದೀಶ, ಶಿವರಾಜ, ಸಮರ್ಥ ಪ್ರಥಮ ಸ್ಥಾನ ಪಡೆದಿದ್ದು, ಸಿದ್ದಾಂತ ದ್ವಿತೀಯ ಮತ್ತು ಮನೋಜ, ರೋನಕ, ಪುಷ್ಪಾಶ್ರೀ ತೃತೀಯ […]

ಭೂತನಾಳ, ಬೇಗಂ ತಾಲಾಬ, ಮಮದಾಪುರ ಕೆರೆಗಳಿಗೆ ಹರಿದ ಕೃಷ್ಮೆಯ ನೀರು- ಎಂ. ಬಿ. ಪಾಟೀಲ ಹರ್ಷ

ವಿಜಯಪುರ: ನಗರಕ್ಕೆ ಕುಡಿಯುವ ನೀರು ಪೂರೈಸುವ ಭೂತನಾಳ ಕೆರೆ ಮಳೆಯ ಕೊರತೆಯಿಂದ ಬತ್ತಿ ಹೋಗಿತ್ತು.  ಇದೀಗ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೃಷ್ಣಾ ನದಿಯಿಂದ ಸಪ್ತ ಕೆರೆಗಳಲ್ಲಿ ಬರುವ ಭೂತನಾಳ, ಬೇಗಂ ತಲಾಬ್ ಮತ್ತು ಮಮದಾಪುರ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಚಾಲನೆಗೊಂಡಿರುವುದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅಮೃತ ಯೋಜನೆಯಡಿ ನಗರದ ಜನರಿಗೆ […]

ವಿಜಯಪುರ ನೂತನ ಡಿವೈಎಸ್ಪಿಯಾಗಿ ಬಸವರಾಜ ಯಲಿಗಾರ ವರ್ಗಾವಣೆ

ವಿಜಯಪುರ: ವಿಜಯಪುರ ಉಪವಿಭಾಗದ ನೂತನ ಡಿವೈಎಸ್ಪಿಯಾಗಿ ಬಸವರಾಜ ಯಲಿಗಾರ ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬಸವರಾಜ ಯಲಿಗಾರ ಈಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದ ಡಿವೈಎಸ್ಪಿಯಾಗಿ ಕೆಲಸ ಮಾಡುತ್ತಿದ್ದು, ಈಗ ಅವರನ್ನು ವಿಜಯಪುರ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಮುಂಚೆ ಕೂಡ ಬಸವರಾಜ ಯಲಿಗಾರ ವಿಜಯಪುರ ಜಿಲ್ಲೆಯಲ್ಲಿ ಪಿ.ಎಸ್.ಐ, ಸಿಪಿಐ ಆಗಿ ಕೆಲಸ ಮಾಡಿದ್ದಾರೆ.  ಮೂಲತಃ ಧಾರವಾಡ ಜಿಲ್ಲೆಯವರಾಗಿರುವ ಬಸವರಾಜ ಯಲಿಗಾರ ವಿಜಯಪುರ ಜಿಲ್ಲೆಯ ಅಳಿಯರಾಗಿರುವುದೂ ಗಮನಾರ್ಹವಾಗಿದೆ. ವಿಜಯಪುರ ಉಪವಿಭಾಗದ ಹಾಲಿ ಡಿವೈಎಸ್ಪಿ ಸಿದ್ಧೇಶ್ವರ […]