ಸಚಿವ ಶಿವಾನಂದ ಪಾಟೀಲ ಸೇರಿ ಹಲವು ಮಂತ್ರಿಗಳು ದೆಹಲಿಗೆ- ಯಾಕೆ ಗೊತ್ತಾ?

ವಿಜಯಪುರ: ಹೈಕಮಾಂಡ್ ನಿಂದ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಕೆಲವು ಸಚಿವರು ದೆಹಲಿಗೆ ತೆರಳುತ್ತಿದ್ದೇವೆ ಎಂದು ಜವಳಿ ಮತ್ತು ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಎಸ್. ಪಾಟೀಲ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ರಚನೆಯಾದ ಮೇಲೆ ಬಹಳಷ್ಟು ಸಚಿವರು ವರಿಷ್ಠರನ್ನು ಭೇಟಿ ಮಾಡಿಲ್ಲ ಈ ಹಿನ್ನೆಲೆಯಲ್ಲಿ ಕರೆದಿದ್ದಾರೆ ಎಂದು ತಿಳಿಸಿದರು. ಮಂತ್ರಿ ಮಂಡಳ ರಚನೆಯಾದ ಮೇಲೆ ಅಧಿವೇಶನ, ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ.  ಬೆಂಗಳೂರಿಗೆ ಬಂದಾಗ ನಮ್ಮನ್ನು ಭೇಟಿ ಮಾಡಬೇಕು ಎಂಬುದು […]

ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ: ಎನ್ಇಪಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ- ಗುಲ್ನಾದ್ ಕೌರ್

ವಿಜಯಪುರ: ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಳೆದ ಮೂರು ವರ್ಷಗಳಲ್ಲಿ ಪರಿಣಾಮಕಾರಿ ಅನುಷ್ಠಾನ ಮಾಡಲಾಗಿದೆ ಎಂದು ವಿಜಯಪುರ ಕೇಂದ್ರೀಯ ವಿದ್ಯಾಲಯದ ಕಾರ್ಯ ನಿರ್ವಾಹಕ ಪ್ರಾಂಶುಪಾಲ ಗುಲ್ನಾಜ್ ಕೌರ್ ಹೇಳಿದ್ದಾರೆ. ನಗರದ ಅಫಜಲಪೂರ ಟಕ್ಕೆಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಕೇಂದ್ರ ಸರಕಾರ 2020 ರಲ್ಲಿ ಜಾರಿಗೊಳಿಸಿದ ಎನ್‌ಇಪಿ 3ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೂರು ವರ್ಷಗಳ ಹಿಂದೆ ಕೇಂದ್ರ ಸರಕಾರ ಪರಿಚಯಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ರಾಷ್ಟ್ರದ ಪರಿಣಾಮಕಾರಿಯಾದ ಶೈಕ್ಷಣಿಕ ಗುರಿ […]

ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ- ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ- ಎಚ್. ಟಿ. ಪೋತೆ

ವಿಜಯಪುರ: ಮತದಾನದ ಹಕ್ಕು ನಮ್ಮನ್ನು ಉಳಿಸುತ್ತದೆ.  ನಿಮ್ಮ ರಕ್ಷಣೆ ಮಾಡುವವರಿಗೆ ಮತಹಾಕಿ ಎಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಚ್. ಟಿ. ಪೋತೆ ಹೇಳಿದರು.  ನಗರದಲ್ಲಿ ಗದುಗಿನ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮ ಮತ್ತು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು ನಿಮ್ಮನ್ನು ರಕ್ಷಿಸುವ ವ್ಯಕ್ತಿಗೆ ಮತ ನೀಡಬೇಕು.  ನಮ್ಮ ಹಕ್ಕನ್ನು ರಕ್ಷಣೆ ಮಾಡುವ, ದೇಶ, ಮಹಿಳೆ, ಪ್ರತಿಯೊಬ್ಬರನ್ನು ರಕ್ಷಣೆ ಮಾಡುವವರು, ನಿಮ್ಮ ಹಕ್ಕನ್ನು […]

ಬಣಜಿಗ ಸಮುದಾಯ ರಾಜ್ಯ ಮಟ್ಟದ ವಧು-ವರರ ಸಮಾವೇಶ, ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ವಿಜಯಪುರ: ನಗರದ ಆಶ್ರಮ ರಸ್ತೆಯಲ್ಲಿರುವ ಸಾಯಿ ವಿಹಾರದ ಸಭಾಭವನದಲ್ಲಿ ಬಣಜಿಗ ಮುದಾಯದ ರಾಜ್ಯ ಮಟ್ಟದ ವಧು-ವರ ಸಮಾವೇಶ ಮತ್ತು ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಈ ಮುಂಚೆ ಸಮಾಜದ ಹಿರಿಯರು ಬಿಡುವ ಮಾಡಿಕೊಂಡು ಒಬ್ಬರಿಗೊಬ್ಬರು ಚರ್ಚಿಸಿ ಶುಭ ಕಾರ್ಯಗಳನ್ನು ಮಾಡುತ್ತಿದ್ದರು.  ಈಗ ವಧು- ವರರ ಕಾರ್ಯಕ್ರಮ ಮಾಡುವ ಮೂಲಕ ಸಂಬಂಧ ಗಟ್ಟಿಗೊಳಿಸಲು ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಬುರುಣಾಪುರದ ಯೋಗೇಶ್ವರಿ ಮಾತಾಜಿ, ವಧು- ವರರ […]

ಸಿಎಂ ಸಿದ್ಧರಾಮಯ್ಯಗೆ ಕ್ಯಾರಿಕೇಚರ್ ಕಾಣಿಕೆ ನೀಡಿದ ವಸವನಾಎಇನ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ

ಬೆಂಗಳೂರು: ನಗರದ ಪ್ರೇಸ್ ಕ್ಲಬ್ ನಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯ ವ್ಯಂಗ್ಯ ಚಿತ್ರಕಾರ ಶರಣು ಚೆಟ್ಟಿ ಕ್ಯಾರಿಯೇಚರ್ ಕಾಣಿಕೆ ನೀಡಿದ್ದಾರೆ. ಗೊಲಗೇರಿಯಸರಕಾರಿ ಕನ್ನಡ ಹೆಣ್ಣು‌ ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಯ ತಾವು ರಚಿಸಿರುವ ಮುಖ್ಯಮಂತ್ರಿಗಳ ವ್ಯಂಗ್ಯಭಾವಚಿತ್ರ ಮತ್ತು ತುಂಟ ಮಕ್ಕಳು ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು. ಅವರ ಕಲಾಕೃತಿ ವೀಕ್ಷಿಸಿದ ಮುಖ್ಯಮಂತ್ರಿಗಳು ಶರಣು ಚಟ್ಟಿ ಅವರ […]

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ

ವಿಜಯಪುರ: ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರಕಾರದ ಕಾರ್ಯದರ್ಶಿ, ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಸೂಚನೆ ನೀಡಿದ್ದಾರೆ. ನಗರದ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾನಾ ಅಧಿಕಾರಿಗಳೊಂದಿಗೆ ನಡೆಸಿದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ಕೊರತೆಯಾಗದಂತೆ ರಸಗೊಬ್ಬರ, ಬಿತ್ತನೆ […]

ನೆಗೆಟಿವ್, ಅಪರಾಧ ಸುದ್ದಿಗಳ ಬದಲು ಪಾಸಿಟಿವ್ ನ್ಯೂಸ್ ಗಳಿಗೆ ಆದ್ಯತೆ ನೀಡಬೇಕು- ಎಂ. ಬಿ.‌‌ ಪಾಟೀಲ

ವಿಜಯಪುರ: ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ‌ ನೆಗೆಟಿವ್ ಸುದ್ದಿ ಪ್ರಸಾರ ಹೆಚ್ಚಾಗುತ್ತಿದ್ದು, ಅದರ ಬದಲು ಪಾಸಿಟಿವ್ ನ್ಯೂಸ್ ಗಳಿಗೆ ಆದ್ಯತೆ ನೀಡಬೇಕು‌ ಎಂದು ಬೃಹತ್ ಮತ್ತು ಮದ್ಯಮ‌ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಪತ್ರಿಕೆಗಳು ಬಹಳ ವಿಶ್ವಾಸಾರ್ಹತೆ ಹೊಂದಿದ್ದವು. ಈಗ ಟಿವಿ ಮಾಧ್ಯಮ, ಯೂಟ್ಯೂಬ್ ಗಳಿಂದಾಗಿ ಬಹಳ […]

ವಿಜಯಪುರ ವಿಮಾನ ನಿಲ್ದಾಣ: ಫೆಬ್ರವರಿ ವೇಳೆಗೆ ಪೂರ್ಣಗೊಳಿಸುವ ಗುರಿಯಿದೆ- ಎಂ. ಬಿ. ಪಾಟೀಲ

ವಿಜಯಪಯರ: ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಂದಿನ ವರ್ಷ ಫೆಬ್ರವರಿಯೊಳಗೆ ಪೂರ್ಣಗೊಳಿದುವ ಗುರಿಯಿದೆ ಎಂದು ಬೃಹತ್ ಮತ್ತು‌ ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ‌ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಜಿಲ್ಲೆ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ಪ್ರವಾಸಿ ತಾಣವೂ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೂ ಹೆಸರುವಾಸಿಯಾಗಿದೆ. ಶೈಕ್ಷಣಿಕವಾಗಿ ಮತ್ತು […]

ತೊರವಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ- ಸಚಿವ ಎಂ. ಬಿ. ಪಾಟೀಲ ಚಾಲನೆ

ವಿಜಯಪುರ: ಡಾ. ಫ. ಗು. ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಡಾ. ಬಿ. ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಪುಣ್ಯಸ್ಮರಣೆ ಅಂಗವಾಗಿ ತಿಕೋಟಾ ತಾಲೂಕಿನ ತೊರವಿಯಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಉದ್ಘಾಟಿಸಿದರು. ತೊರವಿ ಗ್ರಾಮದ ಶ್ರೀ ಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವರು ಶಿಬಿರಕ್ಕೆ ಚಾಲನೆ ನೀಡಿ […]

ಮಳೆ ಹಿನ್ನೆಲೆ- ಇಂದು ವಿಜಯಪುರ ಜಿಲ್ಲಾದ್ಯಂತ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ರಜೆ- ಟಿ. ಭೂಬಾಲನ್

ವಿಜಯಪುರ: ಜಿಲ್ಲಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ ಹಾಗೂ ಖಾಸಗಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಇಂದು ಶುಕ್ರವಾರ ಜುಲೈ-28 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ. ಎಲ್ಲ ಪದವಿ, ಸ್ನಾತಕೋತ್ತರ ಪದವಿ,ಡಿಪ್ಲೋಮಾ, ಇಂಜಿನೀಯರಿಂಗ್ ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೊಷಿಸಿರುವುದಿಲ್ಲ. ಎಂದಿನಂತೆ ತರಗತಿ ನಡೆಯಲಿವೆ ಎಂದು ಅವರು […]