ಸರಕಾರ ಬೀಳಿಸುವುದು ಹಗಲು ಕನಸು- ಬೆಂಗಳೂರು ಗ್ರಾಮೀಣ ಭಾಗಕ್ಕೆ ಮುಂಬೈ, ಕೊಲ್ಕೊತ್ತಾ ಮಾದರಿಯಲ್ಲಿ ರೇಲ್ವೆ ಸೇವೆಗೆ ಯೋಜನೆ- ಎಂ ಬಿ ಪಾಟೀಲ

ವಿಜಯಪುರ: ಸರಕಾರ ಪತನ ಹಗಲು ಕನಸು.  ನಾವೆಲ್ಲ 136 ಜನ ಒಗ್ಗಟ್ಟಿನಿಂದ ಇದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಕೆಡವಲು ಸಿಂಗಾಪುರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ ನೀಡಿರುವ ಹೇಳಿಕೆಯ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ನಾವು 136 ಶಾಸಕರು […]

ಬಸವನಾಡಿನಲ್ಲಿ ಲಘು ಭೂಕಂಪನ- ಎಲ್ಲಿ? ಎಷ್ಟು ತೀವ್ರತೆ ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಬೆಳಿಗ್ಗೆ ಲಘು ಭೂಕಂಪನ ಉಂಟಾಗಿದೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಸುತ್ತಮುತ್ತ ಬೆಳಿಗ್ಗೆ 9.55ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಯಲ್ಲಿದ್ದ ಜನ ಹೊರಗಡೆ ಓಡಿ ಬಂದಿದ್ದಾರೆ.  ಮನಗೂಳಿ ಪಟ್ಟಣದ ಆಗ್ನೆಯ ಭಾಗದಲ್ಲಿ 2.90 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ. ಭೂಮಿಯ ಕೆಳಗಡೆ ಸುಮಾರು 5 ಕಿ. ಮೀ. ಆಳದಲ್ಲಿ ಈ ಭೂಕಂಪನ ಉಂಟಾಗಿದ್ದು, ರಿಕ್ಚರ್ ಮಾಪಕದಲ್ಲಿ 2.4 ತೀವ್ರತೆ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ ಮಾಹಿತಿ […]

ಬೆಂಗಳೂರಿನಿಂದ ಕಾಶಿ ವಿಶ್ವನಾಥ ಸನ್ನಿಧಿಗೆ 50 ಜನರ ಪಾದಯಾತ್ರೆ- ಬಸವನಾಡಿನಲ್ಲಿ ಭಕ್ತರಿಗೆ ಬಸವ ನಾಡಿನಲ್ಲಿ ಆತಿಥ್ಯ ನೀಡಿದ ಶಿವಭಕ್ತರು

ವಿಜಯಪುರ: ಲೋಕಕಲ್ಯಾಣಕ್ಕಾಗಿ ಬೆಂಗಳೂರಿನ ಯಲಹಂಕ ಉಪನಗರದ ಗುರುಗಳಾದ ಶ್ರೀ ಡಿ. ಚಿಕ್ಕೀರಪ್ಪನವರ ನೇತೃತ್ವದಲ್ಲಿ 50 ಜನ ಪಾದಯಾತ್ರೆ ನಡೆಸುತ್ತಿದ್ದು, ಈ ತಂಡ ಬಸವನಾಡು ವಿಜಯಪುರಕ್ಕೆ ಆಗಮಿಸಿದೆ.  ಯಲಹಂಕದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ಪರಮ ಪವಿತ್ರ ಕಾಶಿ ಕ್ಷೇತ್ರಕ್ಕೆ ಜುಲೈ 8 ಶನಿವಾರದಿಂದ ಪಾದಯಾತ್ರೆ ಆರಂಭವಾಗಿದ್ದು, ಕಾಶಿ ವಿಶ್ವನಾಥ ಮಂದಿರಕ್ಕೆ ಸುಮಾರು 80 ದಿನಗಳ ಪಾದಯಾತ್ರೆ ಕೈಗೊಂಡಿದ್ದಾರೆ.  ಡಿ. ಚಿಕ್ಕಿರಪ್ಪ ಅವರ ನೇತೃತ್ವದಲ್ಲಿ ಸರಿ ಸುಮಾರು 50 ಕ್ಕೂ ಹೆಚ್ಚು ಪಾದಯಾತ್ರೆಯನ್ನು ನಡೆಸುತ್ತಿದ್ದು, ವಿಜಯಪುರಕ್ಕೆ ಆಗಮಿಸಿದಾಗ ಅವರಿಗೆ […]

ವಿಪತ್ತಿಗೆ ತುತ್ತಾಗುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜನಜಾಗೃತಿ ಮೂಡಿಸಿ- ಡಿಸಿ ಟಿ. ಭೂಬಾಲನ ಸೂಚನೆ

ವಿಜಯಪುರ: ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರವಾಹವನ್ನು ಸಮರ್ಥವಾಗಿ ಎದುರಿಸಲು ವಿಪತ್ತುಗಳಿಗೆ ತುತ್ತಾಗುವಂಥ ಪ್ರದೇಶಗಳನ್ನು ಗುರುತಿಸಿಕೊಂಡು ಗ್ರಾಮ ವಿಪತ್ತು ನಿರ್ವಹಣಾ ಸಮಿತಿ ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು.  ಜನರಲ್ಲಿ ಜಾಗೃತಿ ಮೂಡಿಸಿ ಯಾವುದೇ ಅನಾಹುತಗಳು ಸಂಭವಿಸದAತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ. ಭೂಬಾಲನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೇಸ್ವಾನ್ ಕೊಠಡಿಯಲ್ಲಿ ನಡೆದ ಮುಂಗಾರು ಮಳೆಯ ಮುಂಜಾಗ್ರತೆ ಕ್ರಮ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಕೃಷ್ಣಾ, ಭೀಮಾ ಮತ್ತು ಡೋಣಿ ನದಿ ಪಾತ್ರದಲ್ಲಿ 54 […]

ಜು. 29, 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ- ಡಾ. ಅರ್ಜುನ ಗೊಳಸಂಗಿ

ವಿಜಯಪುರ: ಪ್ರಬುದ್ಧ ಭಾರತದ ಆಶಯದೊಂದಿಗೆ ವಿಜಯಪುರ ನಗರದ ಕಂದಗಲ ಹನುಮಂತರಾಯ ರಂಗಮAದಿರದಲ್ಲಿ ಜುಲೈ 29 ಮತ್ತು 30 ರಂದು 10ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರು ಹೇಳಿದರು. ಅವರು ನಗರದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಹಾಗೂ ಬೆಳ್ಳಿ ಸಂಭ್ರಮದ ವಿಶೇಷವಾಗಿ ಮೂಡಿ ಬರುತ್ತಿರುವ ಪ್ರೊ. ಎಚ್. ಟಿ. ಪೋತೆ ಅವರ ಜನಪ್ರಿಯ ನಾಟಕ ರಮಾಯಿ […]

ಅನುದಾನಿತ-ಅನುದಾನ ರಹಿತ ಕಾಲೇಜ್ ಪ್ರಾಚಾರ್ಯರ ಸಭೆ: ಶಿಕ್ಷಕ ಮಿತ್ರ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಲು ಡಾ. ಹೊಸಮನಿ ಕರೆ

ವಿಜಯಪುರ: ಪ್ರಥಮ ಮತ್ತು ದ್ವೀತಿಯ ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಹೊಂದಿಲ್ಲದ ವಿಷಯಗಳಲ್ಲಿ 20 ಆಂತರಿಕ ಅಂಕಗಳ ಪರೀಕ್ಷೆ ಹಾಗೂ ಇಎಲ್‍ಸಿ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಶಿಕ್ಷಕ ಮಿತ್ರ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಕೆ. ಹೊಸಮನಿ ಕರೆ ನೀಡಿದ್ದಾರೆ.  ನಗರದ ಬಾಗಲಕೊಟೆ ರಸ್ತೆಯ ಪಿಡಿಜೆ ಪದವಿ ಪೂರ್ವ ಕಾಲೇಜ್‍ನಲ್ಲಿ ನಡೆದ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ […]

ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಬಳಿ ಕಣಕಪ್ಲಿಗಳ ಕಲರವ- ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ ಪಕ್ಷಿಗಳು

ವಿಜಯಪುರ: ಒಂದು ಕಾಲದಲ್ಲಿ ಬರದ ನಾಡು ಎಂದು ಅಪಖ್ಯಾತಿ ಪಡೆದಿದ್ದ ಬಸವನಾಡು ಈಗ ಹಸಿರು ನಾಡಾಗುವತ್ತ ಸಾಗುತ್ತಿದೆ.  ಆಲಮಟ್ಟಿ ಜಲಾಷಯ ನಿರ್ಮಾಣ ಮತ್ತು ಈ ಜಲಾಷಯದಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ನೀರಾವರಿ ಯೋಜನೆಗಳು ಭೂತಾಯಿಗೆ ನೀರುಣಿಸುತ್ತಿದ್ದು, ವಾತಾವರಣ ಹಸಿರಿನತ್ತ ಸಾಗುವಂತೆಯೂ ಮಾಡಿದೆ. ಇದಕ್ಕೆ ಮತ್ತೋಂದು ಉದಾಹರಣೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಪ್ರವಾಸಿಗರನ್ನು ಸೆಳೆಯುತ್ತಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶ.  ಇಲ್ಲಿನ ಹೆಲಿಪ್ಯಾಡ್ ಪಕ್ಕದಲ್ಲಿದ್ದ ಖಾಲಿ ಜಮೀನಿನಲ್ಲಿ ಈಗ ಹುಲುಸಾಗಿ ಅರಣ್ಯ ಪ್ರದೇಶ ಬೆಳೆದಿದೆ.  ನೋಡಲು ಇದು […]

ದರ್ಗಾ ಎಂ. ಎಂ. ತೆಲಗಿ ಸರಕಾರಿ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷರಾಗಿ ಸುನೀಲ ಕೃಷ್ಣಪ್ಪ ಬೋರಗಿ, ಮಲ್ಲಿಕಾರ್ಜುನ ಗಂಗನಗೌಡ ಬಿರಾದಾರ ಆಯ್ಕೆ

ವಿಜಯಪುರ: ನಗರದ ದರ್ಗಾದಲ್ಲಿರುವ ಎಂ. ಎಂ. ತೆಲಗಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ ಸಂಖ. 12ರ ನೂತನ ಎಸ್.ಡಿ.ಎಂ.ಸಿ(ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ) ರಚನೆ ಮಾಡಲಾಗಿದ್ದು, ನೂತನ ಅಧ್ಯಕ್ಷರಾಗಿ ಸುನೀಲ ಕೃಷ್ಣಪ್ಪ ಭೋರಗಿ ಮತ್ತು ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಗಂಗನಗೌಡ ಬಿರಾದಾರ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನಿತರ 16 ಜನ ಸದಸ್ಯರನ್ನು ಈ ಸಮಿತಿ ಹೊಂದಿದ್ದು, ಇದರಲ್ಲಿ ತಲಾ ಎಂಟು ಜನ ಪುರುಷ ಮತ್ತು ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.  ಈ ಸಮಿತಿ ಮೊದಲ ಸಭೆ […]

ರಾಜ್ಯ ಸರಕಾರದಿಂದ ಸರ್ವಾಧಿಕಾರಿ ಧೋರಣೆ ಆರೋಪ- ಗುಮ್ಮಟ ನಗರಿಯಲ್ಲಿ ಬಿಜೆಪಿಯಿಂದ ಹಲಗೆ ಬಾರಿಸಿ ಪ್ರತಿಭಟನೆ

ವಿಜಯಪುರ: ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ವಿಧಾನಸಭೆ ಅಧಿವೇಶನದಲ್ಲಿ ಮಾರ್ಷಲ್‌ ಗಳು ದೌರ್ಜನ್ಯ ಎಸಗಿದ್ದಾರೆ.  ಅಲ್ಲದೇ, ಕಾಂಗ್ರೆಸ್ ಸರಕಾರದ ಸಂವಿಧಾನ ವಿರೋಧಿ ಧೋರಣೆ ಅನುಸರಿಸುವ ಮೂಲಕ 10 ಶಾಸಕರನ್ನು ಅಮಾನತು ಮಾಡಿದೆ.  ಸಭಾಧ್ಯಕ್ಷರ ಈ ನಡೆ ಅಸಂವಿಧಾನಿಕವಾಗಿದೆ.  ಅಲ್ಲದೇ, ಹಿರಿಯ ಶಾಸಕರೆಂಬ ಕಾಳಜಿಯೂ ಇಲ್ಲದೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.  […]

ನನ್ನ ವಿರುದ್ಧ ಬೇನಾಮಿ ಮೊಬೈಲ್ ನಂಬರ ಬಳಸಿ ಅಪಪ್ರಚಾರ- ಇದಾವುದೂ ಪರಿಣಾಮ ಬೀರಲ್ಲ- ರಮೇಶ ಜಿಗಜಿಣಗಿ

ವಿಜಯಪುರ: ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಕೆಲವು ದುಷ್ಠರು ನನ್ನ ವಿರುದ್ಧ ಅನಾಮಿಕ ಮೊಬೈಲ್ ನಂಬರ್ ಗಳನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧ ದೂರು ನೀಡಲು ಕ್ರಮ ಕೈಗೊಂಡಿರುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವು ಮೊಬೈಲ್ ನಂಬರುಗಳಿಂದ ಜಿಲ್ಲೆಯಲ್ಲಿ ಪಂಚಾಯಿತಿ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಕರೆ ಮಾಡುತ್ತಿದ್ದಾರೆ.  ಅಲ್ಲದೇ, ನನ್ನ ಬಗ್ಗೆ ರಾಜಕೀಯ ಷಡ್ಯಂತ್ರ ರೂಪಿಸುತ್ತಿದ್ದಾರೆ. ನೇರವಾಗಿ ನನ್ನನ್ನು ಎದುರಿಸಲು ಹಿಂಜರಿಯುತ್ತಿರುವ ದುರುಳರು ನಡೆಸುತ್ತಿರುವ […]