ಯತ್ನಾಳ‌ ಅಸ್ವಸ್ಥ- ಸಿಎಂ, ಸ್ಪೀಕರ, ಬೊಮ್ಮಾಯಿ, ಬಿ ಎಸ್ ವೈ ಆಸ್ತತ್ರೆಗೆ ಭೇಟಿ- ಆರಾಮವಾಗಿರುವೆ ಎಂದ ಶಾಸಕ

ಬೆಂಗಳೂರು: ಅಧಿವೇಶನ‌ ಸಂದರ್ಭದಲ್ಲಿ ಉಂಟಾದ ಗದ್ದಲದಲ್ಲಿ ಅಸ್ವಸ್ಥರಾದ ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ, ಸ್ಪೀಕರ್ ಯು. ಟಿ. ಖಾದರ, ಮಾಜಿ ಸಿಎಂ ಗಳಾದ ಬಿ. ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುಖಂಡರಾದ ಸಿ. ಟಿ. ರವಿ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ ಅವರ ಆರೋಗ್ಯ ವಿಚಾರಿಸಿದ್ದಾರೆ. ಮಧ್ಯಾಹ್ನ ವಿಧಾನ ಸಭೆ ಅಧಿವೇಶನದಲ್ಲಿ ಗದ್ದಲ ಉಂಟಾಗಿತ್ತು.  […]

ಸಾಂತ್ವನ ಕೇಂದ್ರ, ವೃದ್ಧಾಶ್ರಮಕ್ಕೆ ಜಿ. ಪಂ. ಸಿಇಓ ರಾಹುಲ ಶಿಂಧೆ ಭೇಟಿ, ಪರಿಶೀಲನೆ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನದಲ್ಲಿ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರ ಮತ್ತು ವೃದ್ಧಾಶ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಗಣೇಶ ನಗರದಲ್ಲಿ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿರುವ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಿ, ಸಾಂತ್ವನ ಕೇಂದ್ರದ ಮುಖ್ಯಸ್ಥ ಕೆ.ಎನ್.ಮೇಟಿ ಅವರಿಂದ ಕೇಂದ್ರದ ಕಾರ್ಯನಿರ್ವಹಣೆ ಹಾಗೂ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ನೊಂದವರಿಗೆೆ ಸಮರ್ಪಕವಾಗಿ ಸ್ಪಂದಿಸುವುದರೊAದಿಗೆ ಅವರಲ್ಲಿ […]

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಏಳಿಗೆ ಸಾಧ್ಯ- ಡಾ. ಆರ್. ಬಿ. ಕೊಟ್ನಾಳ

ವಿಜಯಪುರ: ಗ್ರಾಮಗಳ ಅಭಿವೃದ್ಧಿಯಿಂದ ದೇಶ ಏಳಿಗೆ ಸಾಧ್ಯ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಹೇಳಿದ್ದಾರೆ. ಕನ್ನಾಳ ಗ್ರಾಮದಲ್ಲಿ  ಬಿ. ಎಲ್. ಡಿ. ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್. ಎಸ್. ಎಸ್ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವೆಲ್ಲರೂ ಶ್ರಮಿಸಬೇಕು.  ಭಾರತ ಹಳ್ಳಿಗಳಿಂದ ಕೂಡಿರುವ ದೇಶವಾಗಿದ್ದು, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ದಿಯಾದಂತೆ.  ಇದರಿಂದ  ಮಹಾತ್ಮ […]

ಕತ್ತೆಗಳ ಅದ್ದೂರಿ ಮದುವೆ- ನೂಲು ಸುತ್ತಿ, ಹಳದಿ ಹಚ್ಚಿ, ಹುಗ್ಗಿ ತಿಂದು ಕೃಪೆ ತೋರುವಂತೆ ಮೇಘರಾಜನ ಪ್ರಾರ್ಥಿಸಿದ ಗ್ರಾಮಸ್ಖರು

ವಿಜಯಪುರ: ಮಳೆಯಾಗದ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಪೂಜೆ, ಜಲಾಭಿಷೇಕ, ಕತ್ತೆಗಳ ಮದುವೆ ಮಾಮೂಲು.  ಆದರೆ, ಇದೇ ವರುಣನ ಕೃಪೆಗಾಗಿ ಬಸವನಾಡಿನಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಗಾದರ್ಭಗಳ ಮದುವೆ ಗಮನ ಸೆಳೆದಿದೆ. ಮುಂಗಾರು ಹಂಗಾಮು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ವರುಣ ಇನ್ನೂ ಕೃಪೆ ತೋರಿಲ್ಲ.  ಮೋಡ ಮುಸುಕಿದ ವಾತಾವರಣವಿದೆ ಆದರೂ, ನಾಲ್ಕಾರು ಹನಿ ಮಳೆ ಸುರಿದಿದ್ದು ಬಿಟ್ಟರೆ ಈ ಬಾರಿ ಮಳೆಯ ಕೊರತೆ ಪ್ರಮಾಣ ಹೆಚ್ಚಾಗಿದೆ.  ಇದು ಭೂತಾಯಿಯನ್ನು ನಂಬಿ ಜೀವನ ಸಾಗಿಸುವ ರೈತರ […]

ದರಬಾರ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ

ವಿಜಯಪುರ: ನಗರದ ಶ್ರೀಮತಿ ಕುಮುದಬೇನ ದರಬಾರ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯುವ ಕೌಶಲ್ಯ ದಿನ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಗುರುಪಾದಯ್ಯಾ ಹೀರೆಮಠ, ಉದ್ಯೋಗ ಪಡೆಯಲು ಅಗತ್ಯವಾಗಿರುವ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ನಮ್ಮ ದೇಶದಲ್ಲಿ ಇರುವ ಸರಕಾರಿ ಉದ್ಯೋಗಗಳು ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶಗಳ ಬಗ್ಗೆ ಹಾಗೂ ಅವುಗಳಿಗೆ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಅ;ರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು […]

ಕೇರಿಂಗ್ ಸೋಲ್ಸ್ ವತಿಯಿಂದ ಸ್ವಯಂ ಸೇವಕರಿಗೆ ಸನ್ಮಾನ

ವಿಜಯಪುರ: ಸಮಾಜಕ್ಕಾಗಿ ದುಡಿದ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಶ್ರಮಜೀವಿಗಳಿಗೆ ಕೇರಿಂಗ್ ಸೋಲ್ಸ್ ಇಂಡಿಯಾ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ ಸಿಕ್ಯಾಬ್ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖಸ್ಥ ಡಾ. ಎಸ್. ಎ. ಖಾದ್ರಿ ಮತ್ತು ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಅಬ್ಬಾಸ ದುಂಡಸಿ ಮಾತನಾಡಿ, ಪ್ರತಿಯೊಬ್ಬರು ಸಮಾಜಕ್ಕೆ ಕೊಡುಗೆ ನೀಡಿದಾಗ ಜೀವನಕ್ಕೊಂದು ಅರ್ಥ ಬರುತ್ತದೆ.  ಇಂಥ ಸಮಾಜ ಸೇವಕರಿಗೆ ಈ ಕೇರಿಂಗ್ ಸೋಲ್ಸ್ ಗುರುತಿಸಿ ಅವರನ್ನು ಸಹ ಸನ್ಮಾನಿಸುವುದು ಶ್ಲಾಘನೀಯವಾಗಿದೆ.  ಸಮಾಜಕ್ಕೆ ದುಡಿಯುವವರು ಕುಟುಂಬ, ಮನೆ, […]

ಡಾ. ದರ್ಶನ ಮನೋಹರ ಬಿರಾದಾರ ರಾಷ್ಟ್ರೀಯ ಹೃದ್ರೋಗ ತಜ್ಞರ ಸಮಾವೇಶಕ್ಕೆ ಉತ್ತಮ ಉದಯೋನ್ಮುಖ ಹೃದ್ರೋಗ ತಜ್ಞರಾಗಿ ಆಯ್ಕೆ

ವಿಜಯಪುರ: ಹೈದರಾಬಾದಿನಲ್ಲಿ ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ ಏರ್ಪಡಿಸಿದ ರಾಷ್ಟ್ರಮಟ್ಟದ ಹೃದಯ ರೋಗ ತಜ್ಞರ ಸಮಾವೇಶದಲ್ಲಿ ಉತ್ತಮ ಉದಯೋನ್ಮುಖ ಹೃದಯ ರೋಗ ತಜ್ಞ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೃದರೋಗ ತಜ್ಞ ಡಾ. ದರ್ಶನ ಮನೋಹರ ಬಿರಾದಾರ ಆಯ್ಕೆಯಾಗಿದ್ದಾರೆ. ಪ್ರತಿವರ್ಷ ಯುವ ಹೃದಯರೋಗ ತಜ್ಞರನ್ನು ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾದಿಂದ ಉತ್ತಮ ಉದಯೋನ್ಮುಖ ತಜ್ಞರನ್ನು ಆಹ್ವಾನಿಸಿ, ಈ ಪ್ರಶಸ್ತಿ ನೀಡಲಾಗುತ್ತದೆ.  ಈ ಪ್ರಶಸ್ತಿಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ.  ಅದರಲ್ಲಿ ಡಾ. ದರ್ಶನ ಆಯ್ಕೆಯಾಗಿರುವುದು ಸಂತಸ ತಂದಿದೆ. […]

ಸಾಲ ತೀರಿಸಲು, ಆರ್ಮಿ, ಪಿ ಎಸ್ ಐ ಪರೀಕ್ಷೆ ಪಾಸು ಮಾಡು, ಬೂಂದಿ ಲಾಡು ಅರ್ಪಿಸುವೆ- ಹನುಮಂತನ ಹುಂಡಿಯಲ್ಲಿ ಭಕ್ತರ ವಿಶಿಷ್ಠ ಬೇಡಿಕೆಗಳ ಚೀಟಿಗಳು

ವಿಜಯಪುರ: ನಾನು ಮಾಡಿದ ಸಾಲ ತೀರಿಸಲು ಪರಿಹಾರಕ್ಕೆ ದಾರಿ ತೋರಿಸು ಯಲಗೂರ ಹನಮಂತಪ್ಪ.  ಆರ್ಮಿ ರನ್ನಿಂಗ ಇವತ್ತು ಸ್ಟಾರ್ಟ್ ಮಾಡೀನಿ ದೇವರೆ.  ಪಾಸ ಮಾಡು.  ಅತೀ ವೇಗ ಓಡುವಂಗ ಮಾಡು.  ಆರೋಗ್ಯವಾಗಿ ಇಡು ದೇವರೆ.  ಗೋರ್ನಮೆಂಟ್ ಜಾಬ್ ಪಿ. ಎಸ್. ಐ ಮಾಡು.  ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು.  ಮಗನಿಗೆ ಎಂಬಿಎ ಸೀಟ್ ಸಿಗಲಿ.  ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ.  ನೌಕರಿ ಅವಶ್ಯಕತೆ ತುಂಬಾ ಇದೆ. ಬೇಗನೇ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು […]

ಬಬಲೇಶ್ವರದಲ್ಲಿ ಪಿಕೆಪಿಎಸ್ ನೂತನ ಕಟ್ಟಡ ಉದ್ಘಾಟನೆ ಸಮಾರಂಭ

ವಿಜಯಪುರ: ಬಬಲೇಶ್ವರ ಪಟ್ಟಣದ ಶ್ರೀ ಶಾಂತವೀರ ಸರ್ಕಲ್ ಹತ್ತಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ನೆರವೇರಿತು. ಮನಗೂಳಿಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರೈತರು ಮತ್ತು ಕಾರ್ಮಿಕರಿಗೆ ಸಹಕಾರಿ ಬ್ಯಾಂಕುಗಳು ಅವಶ್ಯಕವಾಗಿದ್ದು, ಸರಕಾರದ ಸಾಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು, ಮರಳಿ ನೀಡುವ ಮೂಲಕ ಈ ಬ್ಯಾಂಕುಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಸಹಕಾರಿ ಧುರೀಣ […]

ಶರಣರ ವಚನ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅನನ್ಯ: ಪ್ರಕಾಶ ಬಗಲಿ

ವಿಜಯಪುರ: ಶರಣ ಸಾಹಿತ್ಯವನ್ನು ಜಗತ್ತಿಗೆ  ಪರಿಚಯಿಸುವಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅನನ್ಯ ಎಂದು ನಗರದ ಪ್ರತಿಷ್ಠತಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ಎಸ್. ಬಗಲಿ ಹೇಳಿದ್ದಾರೆ. ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಡಾ. ಫ. ಗು. ಹಳಕಟ್ಟೀಯವರ 143ನೇ ಜನ್ಮದಿನದ ಅಂಗವಾಗಿ ವಿಜಯಪುರ ಪ್ರಿಂಟಿಂಗ್ ಪ್ರೆಸ್ ಮತ್ತು ವರ್ಕರ್ಸ್ ಅಸೋಶಿಯೇಷನ್ ಆಯೋಜಿಸಿದ್ದ ಮುದ್ರಣ ಸಾಧಕರಿಗೆ ಮುದ್ರೋಧ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮುದ್ರಣ ಸಾಧಕರನ್ನು ಗುರುತಿಸಿ […]