ವಿಜಯ ಕಾಲೇಜು ಅಂಚೆ ಕಚೇರಿ ಈಗ ಬಿ ಎಲ್ ಡಿ ಇಎ ಕ್ಯಾಂಪಸ್ ಪೋಸ್ಟ್ ಆಫೀಸ್ ಆಗಿ ಮರು ನಾಮಕರಣ

ವಿಜಯಪುರ: ಅಂಚೆ ಕಚೇರಿ ಸಿಬ್ಬಂದಿ ಸೇವಾ ಮನೋಬಾವ ಹೆಚ್ಚಿಸಿಕೊಂಡು ಸಮಾಜ ಮುಖಿಯಾಗಿ ಸೇವೆ ಸಲ್ಲಿಸಬೇಕು ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಕರೆ ನೀಡಿದ್ದಾರೆ. ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ವಿಜಯ ಕಾಲೇಜು ಅಂಚೆ ಕಚೇರಿ ಹೆಸರನ್ನು ಬಿ ಎಲ್ ಡಿ ಇ ಎ ಕ್ಯಾಂಒಸ್ ಪೋಸ್ಟ್ ಆಫೀಸ್ ಆಗಿ ಮರು ನಾಮಕರಣ ಮತ್ತು ಮೇಘದೂತ್ ಪೋಸ್ಟ್ […]

ರವಿವಾರ ರಜಾ ದಿನವೂ ನಗರದ ನಾನಾ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ರವಿವಾರ ರಜೆ ದಿನವಾಗಿರುವುದರಿಂದ ಬಹುತೇಕ ಅಧಿಕಾರಿಗಳು ರಜೆಯಲ್ಲಿರುವುದು ಮಾಮೂಲು. ಆದರೆ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತ್ರ ರಜೆ ದಿನವಾಗಿದ್ದರೂ ವಿಜಯಪುರ ನಗರದ ನಾನಾ ಸ್ಥಳಗಳಲ್ಲಿ ಮಹಾನಗರಪಾಲಿಕೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ನಾನಾ ಯೋಜನೆಗಳಲ್ಲಿ ಮಂಜೂರಾದ ಕಾಮಗಾರಿಗಳನ್ನು ಪರಶೀಲನೆ ನಡೆಸಿದರು. ಮೊದಲಿಗೆ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ವರೆಗೆ ನಡೆಯುತ್ತಿರುವ ಸಿಸಿ ರಸ್ತೆ ಮತ್ತು ಫುಟ್ ಪಾತ್ ಕಾಮಗಾರಿಯನ್ನು ವೀಕ್ಷಿಸಿದ ಅವರು, ಈ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ […]

ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಭೇಟಿ ಮಾಡಿ ಅಭಿನಂದಿಸಿದ ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ನೂತನ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರನ್ನು ಡಿಸಿಎಂ ಗೋವಿಂದ ಕಾರಜೋಳ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಥಾವರಚಂದ ಗೆಹ್ಲೋಟ್ ಬೆಳಿಗ್ಗೆ ರಾಜ್ಯದ ‌ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ಪೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ರಾಜಭನಕ್ಕೆ ತೆರಳಿ, ಥಾವರಚೆಂದ ಗೆಹ್ಲೋಟ ಅವರನ್ನು ಅಭಿನಂದಿಸಿ, ಶುಭಾಷಯ ಕೋರಿದರು‌‌.

ನೂತನ ರಾಜ್ಯಪಾಲರಾಗಿ ಥಾವರಚಂದ ಗೆಹ್ಲೋಟ್ ಅಧಿಕಾರ ಸ್ವೀಕಾರ

ಬೆಂಗಳೂರು- ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರಚಂದ ಗೆಹ್ಲೋಟ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈ ಸಮಾರಂಭದಲ್ಲಿ ಭಾಗವಹಿಸಿ ನೂತನ ರಾಜ್ಯಪಾಲರಿಗೆ ಶುಭ ಕೋರಿದರು. ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ನಾನಾ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹುತಾತ್ಮ ಯೋಧನ ಪತ್ನಿಗೆ ಬಿ ಎಲ್ ಡಿ ಇ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗದ ಭರವಸೆ ನೀಡಿದ ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ಧಾಳಿಯಲ್ಲಿ ಹುತಾತ್ಮನಾದ ವೀರಯೋಧ ಕಾಶೀರಾಯ ಬೊಮ್ಮನಹಳ್ಳಿ ನಿವಾಸಕ್ಕೆ ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಭೇಟಿ ನೀಡಿದರು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಯೋಧ ಕಾಶೀರಾಯ ಬೊಮ್ಮನಹಳ್ಳಿ ಜು. 2 ರಂದು ಭಯೋತ್ಪಾದಕತ ಧಾಳಿಯಲ್ಲಿ ಹುತಾತ್ಮರಾಗಿದ್ದರು. ಇಂದು ವೀರಯೋಧನ ನಿವಾಸಕ್ಕೆ ಭೇಟಿ ನೀಡಿದ ಸುನೀಲಗೌಡ ಪಾಟೀಲ ಯೋದನ‌ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಹುತಾತ್ಮ ಯೋಧನ ಪತ್ನಿ ಸಂಗೀತಾ ಅವರಿಗೆ ಬಿ ಎಲ್ ಡಿ ಇ […]

ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ವಿತರಿಸಿದ ಬಿಜೆಪಿ ಸಂಸದ, ವಿಧಾನ ಪರಿಷತ ಸದಸ್ಯ

ವಿಜಯಪುರ: ಕೊರೊನಾ ಮತ್ತು ಲಾಕಡೌನ್ ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮತ್ತು ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ಅವರು ಆಹಾರ ಕಿಟ್ ವಿತರಿಸಿದರು. ವಿಜಯಪುರ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ಹೆಸರು ನೋಂದಾಯಿಸಿಕೊಂಡ ಕಟ್ಟಡ ಕಾರ್ಮಿಕರಿಗೆ ಜಿಲ್ಲಾ […]

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಜು. 12 ರಿಂದ ಸ್ಪುಟ್ನಿಕ್ ಲಸಿಕೆ ಲಭ್ಯ- ಉಪಕುಲಪತಿ ಡಾ. ಆರ್. ಎಸ್. ಮುಧೋಳ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಡೆಗಟ್ಟುವ ಸ್ಪುಟ್ನಿಕ್ ಲಸಿಕೆ ಜು. 12 ಸೋಮವಾರದಿಂದ ಲಭ್ಯವಿದೆ ಎಂದು ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸ್ಪುಟ್ನಿಕ್ ಲಸಿಕೆ ಕೊರೊನಾ ಸೋಂಕನ್ನು ಶೇ.92 ರಷ್ಟು ತಡೆಗಟ್ಟುವ ದಕ್ಷತೆಯನ್ನು ಹೊಂದಿದೆ. ಈ ಲಸಿಕೆಯನ್ನು ಸಾರ್ವಜನಿಕರಿಗೆ ಬಿ ಎಲ್ ಡಿ ಇ ಸೂಪರ್ […]

ಕೆ ಆರ್ ಎಸ್ ಡ್ಯಾಂ ನಲ್ಲಿ ಯಾವುದೇ ಬಿರುಕು ಇಲ್ಲ-ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ

ವಿಜಯಪುರ: ಕೆ ಆರ್ ಎಸ್ ಜಲಾಷಯದಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಮತ್ತೋಮ್ಮೆ ಸ್ಪಷ್ಟಪಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಅಲಿಯಾಬಾದ್ ಗ್ರಾಮದ ಹೊರವಲಯದಲ್ಲಿ ನಡೆದ ಕಲ್ಲು ಗಣಿ ಗಣಿ ದುರಂತ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೆ ಆರ್ ಎಸ್ ನಲ್ಲಿ ಯಾವುದೇ ಬಿರುಕು ಇಲ್ಲ. ಅಲ್ಲಿರುವ ಮುಖ್ಯ ಎಂಜಿನಿಯರ್ ಸ್ವತಃ […]

ಭಾರತ ಗ್ಯಾಸ್ ವತಿಯಿಂದ ವಿಜಯಪುರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಣೆ

ವಿಜಯಪುರ: ಭಾರತ ಗ್ಯಾಸ್ ವತಿಯಿಂದ ವಿಜಯಪುರ ನಗರದಲ್ಲಿ ಸ್ವಚ್ಛ ಭಾರತ ಸಪ್ತಾಹ ಆಚರಿಸಲಾಯಿತು. ಸಪ್ತಾಹದ ಅಂಗವಾಗಿ ಸ್ವಚ್ಚ ಭಾರತ ಅಭಿಯಾನ ನಡೆಯಿತು. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಜಾಥಾ ಗಾಂಧಿಚೌಕ್ ವರೆಗೆ ನಡೆಯಿತು. ಧಾರವಾಡ ಭಾರತ ಗ್ಯಾಸ್ ಟೆರಿಟರಿ ಮುಖ್ಯಸ್ಥ ದೀಪಕ್ ಅಗರವಾಲ ಮತ್ತು ಮಾರಾಟ ಅಧಿಕಾರಿ ಶಾಶ್ವತ ಶರ್ಮಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಡೆಲಿವರಿ ಬಾಯ್ ಗಳ ಸಭೆ ಕೂಡ ನಡೆಸಲಾಯಿತು. ಈ ಸಂಧರ್ಭದಲ್ಲಿ ವಿಜಯಪುರ ಜಿಲ್ಲೆಯ ವಿತರಕರದ ಉಮೇಶ […]

ಜು. 10 ಶನಿವಾರದಿಂದ ಸಾರಿಗೆ ಸಿಬ್ಬಂದಿ ವೇತನ ಬಿಡುಗಡೆ-ಡಿಸಿಎಂ ಲಕ್ಷ್ಮಣ ಸವದಿ

ವಿಜಯಪುರ: ಜು. 10 ರಿಂದ ಸಾರಿಗೆ ಇಲಾಖೆಯ ಎಲ್ಲ‌ ಸಿಬ್ಬಂದಿಯ ಸಂಬಳ ಕೊಡಲಾಗುವುದು.‌‌ ಎರಡು ಹಂತದಲ್ಲಿ ಸಂಬಳ ಹಾಕುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ‌‌ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಸಮಯದಲ್ಲಿ ಸಾರಿಗೆ ಇಲಾಖೆಗೆ ಅತೀ ಹೆಚ್ಚು ತೊಂದರೆಯಾಗಿದೆ. ಸಂಬಳ ನೀಡಲು ಸಮಸ್ಯೆ ಇದೆ. ಈ ಮೊದಲು ಸಿಎಂ ರೂ. 2480 ಕೋ. ಕೊಟ್ಟಿದ್ದರು. ಈಗ ರೂ. 165 ಕೋ. ನೀಡಿದ್ದಾರೆ‌. ಜು. 10 ರಿಂದ ಎಲ್ಲರ ಸಂಬಳ‌ ನೀಡಲಾಗುವುದು. ಎರಡು ಹಂತದಲ್ಲಿ ಸಂಬಳ […]