ಬೆಳಿಗ್ಗೆ ಬೇಡಿಕೆಯಿಟ್ಟ ಶಾಸಕ ಎಂ. ಬಿ. ಪಾಟೀಲ- ಸಂಜೆ ವೇಳೆಗೆ ತಥಾಸ್ತು ಎಂದು ಆದೇಶ ಹೊರಡಿಸಿದ ಸಿಎಂ

ಬೆಂಗಳೂರು: ಬೆಳಿಗ್ಗೆಯಷ್ಟೇ ತಮ್ಮನ್ನು ಭೇಟಿ ಮಾಡಿದ್ದ ಮಾಜಿ ಸಚಿವ ಎಂ. ಬಿ. ಪಾಟೀಲ ಅವರ ಬೇಡಿಕೆಗೆ ಸಂಜೆ ವೇಳೆಗೆ ಸಿಎಂ ಬಿ. ಎಸ್. ಯಡಿಯೂರಪ್ಪ ತಥಾಸ್ತು ಎಂದು ಆದೇಶ ಹೊರಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಭಾಗದ 16 ಕೆರೆಗಳಿಗೆ ತಿಡಗುಂದಿ ಅಕ್ವಾಡಕ್ಟ ಕಾಲುವೆ ಮೂಲಕ ನೀರು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಎಂ. ಬಿ. ಪಾಟೀಲ ಅವರು ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಬಬಲೇಶ್ಬರ […]

ಸಿಎಂ ಭೇಟಿ ಮಾಡಿದ ಶಾಸಕ‌ ಎಂ. ಬಿ. ಪಾಟೀಲ- ಇಂಡಿ ತಾಲೂಕಿನ 16 ಕೆರೆಗಳಿಗೆ ನೀರು ತುಂಬಿಸಲು ಅನುದಾನಕ್ಕೆ ಮನವಿ

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ 16 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುದಾನ ಒದಗಿಸುವಂತೆ ಆಗ್ರಹಿಸಿ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ.‌ ಪಾಟೀಲ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿನಂತಿ ಮಾಡಿದರು. ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಯಡಿಯೂರಪ್ಪ ಅ ರನ್ನು ಭೇಟಿ ಮಾಡಿ ಚರ್ಚಿಸಿದ ಎಂ. ಬಿ. ಪಾಟೀಲ ಅವರು, ಭೀಮಾನದಿ ಪಾತ್ರದಲ್ಲಿ ನೀರಿನ ಕೊರತೆಯ ಕಾರಣ ಇಂಡಿ ಭಾಗದ ಕೆಲವು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲಾಗಿಲ್ಲ. […]

ಪಡಿತರ ಚೀಟಿದಾರರು ಇ -ಕೆವೈಸಿ ಮಾಡಿಸುವ ಪ್ರಕ್ರಿಯೆ ಪ್ರಾರಂಭ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಪಡಿತರ ಚೀಟಿದಾರರು ನ್ಯಾಯ ಬೆಲೆ ಅಂಗಡಿಯಲ್ಲಿ ಇ-ಕೆವೈಸಿ ಮಾಡಿಸುವ ಪ್ರಕ್ರಿಯೆಯನ್ನು ಕೊರೊನಾ ಲಾಕಡೌನ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಇ-ಕೆವೈಸಿ ಮಾಡಿಸುವ ಕಾರ್ಯ ಆಯಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಜು. 1 ರಿಂದ ಪುನಾರಂಭವಾಗಿದೆ ಎಂದು ಜಿಲ್ಲಾಧಿಕಾರಿ ಪಿ, ಸುನೀಲ ಕುಮಾರ ತಿಳಿಸಿದ್ದಾರೆ. ಈ ಸಂಬಂಧ ಎಲ್ಲಾ ನ್ಯಾಯ ಬೆಲೆ ಅಂಗಡಿಯವರಿಗೂ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಗಳನ್ನು ಆಯಾ ಪಡಿತರ ಚೀಟಿದಾರರನ್ನು ನ್ಯಾಯ ಬೆಲೆ ಅಂಗಡಿಗೆ ಕರೆಯಿಸಿ ಇ-ಕೆವೈಸಿ ಮಾಡಿಸಲು ನಿರ್ದೇಶನಗಳನ್ನು ನೀಡಲಾಗಿದೆ. ಇ-ಕೆವೈಸಿ ಮಾಡಿಸದೇ […]

ಲಿಂಬೆ ಅಭಿವೃದ್ದಿ ಮಂಡಳಿ ಉತ್ತೇಜನಕ್ಕೆ ನಾನಾ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮನವಿ

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿಯಲ್ಲಿರು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು ರೂ. 5 ಕೋ. ಅನುದಾನ ನೀಡಬೇಕು ಸೇರಿದಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಮಂಡಳಿ ಅಧ್ಯಕ್ಷ ಅಶೋಕ ಎಸ್. ಅಲ್ಲಾಪುರ ಅವರು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್. ಶಂಕರ ಅವರಿಗೆ ಬೆಂಗಳೂರನಲ್ಲಿ ಮನವಿ ಪತ್ರ ಸಲ್ಲಿಸಿದ್ದಾರೆ. ಭಾರತವು ಲಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದೆ. […]

ಜನವಿರೋಧಿ ಸರಕಾರ ಕಿತ್ತೆಸೆಯುವವರೆಗೆ ವಿಶ್ರಮಿಸದಿರಿ- ಸಂಗಮೇಶ ಬಬಲೇಶ್ವರ

ವಿಜಯಪುರ: ಜನವಿರೋಧಿ ಸರಕಾರ ಕಿತ್ತೊಗೆಯುವವರೆಗೂ ವಿಶ್ರಮಿಸದಿರಿ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪೆಟ್ರೋಲ್, ಡೀಜಲ್ ಮತ್ತು ಅಡುಗೆ ಅನಿಲ ಗಗನಕ್ಕೇರುತ್ತಿರುವುದನ್ನು ವಿರೋಧಿಸಿ ವಿಜಯಪುರ ಜಿಲ್ಲೆಯ ಬಬಲೇಶ್ವರದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಸೈಕಲ್ ರ‌್ಯಾಲಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಇಂಥ ಜನವಿರೋಧಿ ಸಂವೇದನೆಯನ್ನೇ ಕಳೆದುಕೊಂಡಿರುವ ಅಮಾನವೀಯ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಕಿತ್ತೊಗೆಯುವವರೆಗೆ ಕಾರ್ಯಕರ್ತರು ವಿಶ್ರಮಿಸಬಾರದು ಎಂದು ಅವರು […]

ಸಂಘ, ಪರಿವಾರದ ಹಿನ್ನೆಲೆ, ಪಕ್ಷಕ್ಕೆ ಹತ್ತಿಪ್ಪತ್ತು ವರ್ಷ ದುಡಿದವರಿಗೆ ತಾ. ಪಂ. ಜಿ. ಪಂ. ಟಿಕೇಟ್ ನೀಡಿ- ಶ್ರೀಮಂತ ದುದ್ದಗಿ

ವಿಜಯಪುರ- ಸಂಘ ಪರಿವಾರದ ಹಿನ್ನೆಲೆ ಹೊಂದಿದವರು ಮತ್ತು ಬಿಜೆಪಿಯಲ್ಲಿ ಹತ್ತಿಪ್ಪತ್ತು ವರ್ಷ ದುಡಿದವರಿಗೆ ತಾ. ಪಂ. ಜಿ. ಪಂ. ಟಿಕೇಟ್ ನೀಡಬೇಕು ಎಂದು ವಿ ಎಚ್ ಪಿ ಬೆಳಗಾವಿ ವಿಭಾಗ ಮುಖಂಡ ಶ್ರೀಮಂತ ದುದ್ದಗಿ ಆಗ್ರಹಿಸಿದ್ದಾರೆ. ಮುಂಬಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತರಗೆ ಟಿಕೆಟ್ ನೀಡಬೇಕೆಂದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರ ಹೇಳಿಕೆ ಸ್ವಾಗತಾರ್ಹ. ಪಕ್ಷ ನಿಷ್ಠಾವಂತ ಕಾರ್ಯಕರ್ತರು ಎಂದರೆ ಏನು ಎಂಬುದು […]

ಹುತಾತ್ಮ ಯೋಧನ ಕುಟುಂಬಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನ ನೀಡಿದ ಶಾಸಕ‌ ಶಿವಾನಂದ ಪಾಟೀಲ

ವಿಜಯಪುರ: ದೇಶಕ್ಕಾಗಿ ಹುತಾತ್ಮನಾದ ವೀರಯೋಧ ಕಾಶಿರಾಯ ಬೊಮ್ಮನಹಳ್ಳಿ ಸೇವೆ ಅಪ್ರತಿಮವಾಗಿದೆ. ಯುವಕರು ಸೇನೆಗೆ ಸೇರಲು ನಾವು ಪ್ರೇರೇಪಿಸಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಅವರು ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಹುತಾತ್ಮ ಕಾಶಿರಾಯ ಬೊಮ್ಮನಹಳ್ಳಿ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ರೂ. 5 ಲಕ್ಷ ಸಹಾಯ ಧನದ ಚೆಕ್ ವಿತರಿಸಿ ಮಾತನಾಡಿದರು. ಕಾಶಿರಾಯ […]

ಕಾರ್ಮಿಕ ಇಲಾಖೆಯಿಂದ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ವಿಜಯಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರ ವಿತರಣೆ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆಯಿತು. ಕಾರ್ಮಿಕ ಅಧಿಕಾರಿ ಮತ್ತು ಕಾರ್ಮಿಕ ನಿರೀಕ್ಷಕರ ಕಛೇರಿಗಳಲ್ಲಿ ಹೆಸರು ನೋಂದಾಯಿಸಿಕೊಂಡ ಕಟ್ಟಡ ಕಾರ್ಮಿಕರ ಆರೋಗ್ಯದ ಹಿತರಕ್ಷಣೆಗಾಗಿ ಮತ್ತು ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಇಂಡಿ ವಿಭಾಗದ ಉಪವಿಭಾಗಾಧಿಕಾರಿ ರಾಹುಲ ಶಿಂಧೆ, ಇಂಡಿ ತಹಶೀಲ್ದಾರ ಸಿ, […]

ಕೇಂದ್ರ ಸಂಪುಟ ವಿಸ್ತರಣೆ- ಪ್ರಾತಿನಿಧ್ಯ ವಿಜಯಪುರಕ್ಕೊ? ಚಿತ್ರದುರ್ಗಕ್ಕೊ? ಎಂಬುದೇ ಕುತೂಹಲ

ವಿಜಯಪುರ: ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿರುವ ಮಧ್ಯೆಯೇ ರಾಜ್ಯದಿಂದ ದಲಿತರ ಕೋಟಾದಲ್ಲಿ ಯಾರಿಗೆ ಪ್ರಾತಿನಿಧ್ಯ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯದ ಐದೂ ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿಯ ಸಂಸದರಿದ್ದಾರೆ. ಇವರಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಆರನೇ ಬಾರಿ ಸಂಸದರಾಗಿದ್ದರೆ, ವಿ. ಶ್ರೀನಿವಾಸ ಪ್ರಸಾದ(ಚಾಮರಾಜನಗರ) ಎರಡನೇ ಬಾರಿ, ನಾರಾಯಣಸ್ವಾಮಿ(ಚಿತ್ರದುರ್ಗ), ಉಮೇಶ ಜಾಧವ(ಕಲಬುರಗಿ) ಮತ್ತು ಮುನಿಸ್ವಾಮಿ(ಕೋಲಾರ) ಇದೇ ಮೊದಲ ಬಾರಿಗೆ ಸಂಸದರಾಗಿದ್ದಾರೆ. ರಮೇಶ ಜಿಗಜಿಣಗಿ ಈಗಾಗಲೇ ಒಂದು ಬಾರಿ ಈ ಹಿಂದಿನ […]

ಬಿ ಎಲ್ ಡಿ ಇ ಡೀಮ್ಡ್ ವಿವಿಯ ಡಾ. ಪ್ರವೀಣ ಶಹಾಪುರ ಕೇರಳ ಆರೋಗ್ಯ ವಿವಿಗೆ ನಾಮನಿರ್ದೇಶನ

ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಬಿ. ಎಂ. ಪಾಟೀಲ ವೈಧ್ಯಕೀಯ ಮಹಾವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಪ್ರವೀಣ ರಾ. ಶಹಾಪುರ ಅವರನ್ನು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಪ್ರಿ-ಕ್ಲಿನಿಕಲ್ ಸ್ನಾತಕೋತ್ತರ ವಿಭಾಗಕ್ಕೆ ಅಧ್ಯಯನ ಮಂಡಳಿಯ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ. ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಈ ಕುರಿತು ಅಧಿಸೂಚನೆ ಬಿಡುಗಡೆ ಹೊರಡಿಸಿದೆ. ಈ ನಾಮನಿರ್ದೇಶನಕ್ಕೆ ಡಾ. ಪ್ರವೀಣ ರಾ. ಶಹಾಪುರ ಸಂತಸ ವ್ಯಕ್ತಪಡಿಸಿದ್ದಾರೆ.