ಮಲೇರಿಯಾ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ- ಅಪರ ಜಿಲ್ಲಾಧಿಕಾರಿ ರಮೇಶ ಕಳಸದ

ವಿಜಯಪುರ: ಡೆಂಗ್ಯೂ ಜ್ವರ ಮಲೇರಿಯಾ ಹಾಗೂ ಚಿಕುನ್‌ ಗುನ್ಯಾದಂಥ ಇತರ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಲೇರಿಯಾ, ಡೆಂಗ್ಯೂ ವಿರೋಧಿ ಮಾಸಾಚರಣೆ ಜಿಲ್ಲಾಮಟ್ಟದ ಅಂತರ ಇಲಾಖೆಗಳ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ರೋಗಗಳು ಹರಡದಂತೆ ಅವಶ್ಯಕ ಮುಂಜಾಗ್ರತೆ ಕ್ರಮಗಳನ್ನುಕೈಕೊಳ್ಳುವುದು ತುರ್ತು ಅವಶ್ಯಕತೆಯಾಗಿದೆ ಎಂದು […]

ಶಾಸಕ ಎಂ. ಬಿ. ಪಾಟೀಲ ಅವರಿಂದ ಜು. 1 ರಿಂದ ಮೂರು ದಿನ ವಿಜಯಪುರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ

ವಿಜಯಪುರ: ಮಾಜಿ ಸಚಿವ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರು ಮೂರು ದಿನ ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜುಲೈ 1, 2 ಮತ್ತು 3 ರಂದು ವಿಜಯಪುರದಲ್ಲಿ ವಾಸ್ತವ್ಯ ಇರಲಿರುವ ಮಾಜಿ ಸಚಿವರು ಈ ಮೂರು ದಿನ ಬೆ.11 ರಿಂದ ಮ. 2ರ ವರೆಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ವಿಜಯಪುರ ನಗರದ ಬಿ ಎಲ್ ಡಿ ಇ ಸಂಸ್ಥೆ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಎಂ. ಬಿ. ಪಾಟೀಲ ಅವರು ಸಾವರ್ಜನಿಕರ ಕುಂದು ಕೊರತೆಗಳನ್ನು […]

ವೇಸ್ಟ್ ಪೇಪರ್ ಗಳಿಂದ ಬೆಸ್ಟ್ ಕೆಲಸ ಮಾಡಿದ ಬಾಲಕ

ವಿಜಯಪುರ: ಇದು ಕೊರೊನಾ ಲಾಕಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡ ಬಾಲಕನ ಸ್ಟೋರಿ. ಕೊರೊನಾ ಹಿನ್ನಲೆಯಲ್ಲಿ ಲಾಕ್‌ಡೌನ್‌ ಸಮಯದಲ್ಲಿ ಬಹುತೇಕ ಮಕ್ಕಳು ಮೊಬೈಲ್ ಗೇಮ್ಸ್, ಟಿವಿ, ಆನಲೈನ್ ಕ್ಲಾಸ್ ಗಳಲ್ಲಿ ಸಮಯ ಕಳೆದಿದ್ದೆ ಹೆಚ್ಚು. ಆದರೆ, ಬಸವ ನಾಡು ವಿಜಯಪುರದ ಈ ಬಾಲಕ ಇತರ ಮಕ್ಕಳಂತೆ ಕಾಲಹರಣ ಮಾಡದೇ ಎಲ್ಲರನ್ನು ಆಕರ್ಷಿಸುವಂಥ ಕೆಲಸ ಮಾಡಿದ್ದಾನೆ. ತನ್ನ ಮನೆಯಲ್ಲಿ ಬಿದ್ದ ವೇಸ್ಟ್‌ ಪೇಪರ್‌ ಗಳನ್ನ ಬಳಸಿದ ಈ ಬಾಲಕ ಅಸಲಿ ಹೂವುಗಳಂತೆ ಬಣ್ಣ ಬಣ್ಣದ ತರಹೇವಾರಿ ಫ್ಲಾವರ್ ಗಳನ್ನು ತಯಾರಿಸುವ […]

ಪ್ರವಾಸಿಗರ ಆಕರ್ಷಣೆಗೆ ತ್ರಿ ಸ್ಟಾರ್ ಹೊಟೇಲ್‌ಗಳ ನಿರ್ಮಾಣ- ಪ್ರವಾಸೋಧ್ಯಮ ಅಭಿವೃದ್ಧಿಗೆ ಬದ್ಧ- ಸಚಿವ ಸಿ. ಪಿ. ಯೋಗೇಶ್ವರ

ವಿಜಯಪುರ: ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅನುಕೂಲವಾಗುವಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ರೂ. 85 ಕೋ. ವೆಚ್ಚದಲ್ಲಿ ತ್ರಿ ಸ್ಟಾರ್ ಹೊಟೇಲ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ ಖಾತೆ ಸಚಿವ ಸಿ. ಪಿ. ಯೋಗೀಶ್ವರ ತಿಳಿಸಿದ್ದಾರೆ. ವಿಜಯಪುರ ನಗರದ ಹೊರ ವಲಯದ ಭೂತನಾಳ ಕೆರೆ ಪ್ರದೇಶ ವ್ಯಾಪ್ತಿಯಲ್ಲಿ ರೂ. 17 ಕೋ. ವೆಚ್ಚದಲ್ಲಿ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ತ್ರಿ ಸ್ಟಾರ್ ಹೊಟೇಲ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಮುಂದಿನ 18 […]

ಯತ್ನಾಳ ಜೊತೆ ಸದಾ ಕಾಲ ನಾನಿರುತ್ತೇನೆ ಎಂದ ಸಚಿವ ಸಿ. ಪಿ. ಯೋಗೇಶ್ವರ

ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜೊತೆಗೆ ನಾನು‌ ಸದಾ ಕಾಲ‌ ಇರುತ್ತೇನೆ ಎಂದು ಸೈನಿಕ ಎಂದೇ ಖ್ಯಾತಿಯಾಗಿರುವ ಸಚಿವ ಸಿ. ಪಿ. ಯೋಗೇಶ್ವರ ಭರವಸೆ ನೀಡಿದ್ದಾರೆ. ವಿಜಯಪುರದಲ್ಲಿ ತ್ರಿ ಸ್ಟಾರ್ ಹೋಟೇಲ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯತ್ನಾಳ ಅವರ ದ್ವನಿಗೆ ದ್ವನಿಯಾಗಿ ನಾನು ಸದಾ ಕಾಲ ನಿಲ್ಲುವೆ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ರೆಬೆಲ್ ನಾಯಕ ಎಂದೇ ಹೆಸರಾಗಿರುವ ಶಾಸಕ ಯತ್ನಾಳ ಬೆಂಬಲಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ […]

ವಿಜಯಪುರ ಜಿಲ್ಲೆಯಲ್ಲಿ ಜೂ. 30, ಜು. 1 ರಂದು ಎರಡು ದಿನ ಕೆಲವು ಗುಂಪುಗಳಿಗೆ ಕೊರೊನಾ ಲಸಿಕೆ ಹಾಕಲ್ಲ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜೂ. 30 ಮತ್ತು ಜು. 1 ರಂದು ಸಾರ್ವಜನಿಕರಿಗೆ ಕೊರೊನಾ ಲಸಿಕೆ ಹಾಕಲಾಗುವುದಿಲ್ಲ. ಜನತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. ಸರಕಾರದ ನಿರ್ದೇಶನದಂತೆ ಮುಂದಿನ ತಿಂಗಳಿನಿಂದ ಕಾಲೇಜುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮುಂಚಿತವಾಗಿ ಪದವಿ ಕಾಲೇಜುಗಳು, ಡಿಪ್ಲೋಮಾ ಕಾಲೇಜುಗಳು, ಐಟಿಐ ಕಾಲೇಜುಗಳಲ್ಲಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಮತ್ತು ಭೋದಕ ಮತ್ತು ಭೋದಕರ ಹೊರತಾದ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಲು ನಿರ್ಧಾರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂ. 28 […]

ಎಂಟು ಬಾರಿ ಶಾಸಕನಾಗಿದ್ದೇನೆ-ನಾನ್ಯಾಕೆ ಸಿಎಂ ಆಗಬಾರದು? ಸಚಿವ ಉಮೇಶ ಕತ್ತಿ ಪ್ರಶ್ನೆ

ವಿಜಯಪುರ: ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ನಾನ್ಯಾಕೆ ಸಿಎಂ ಆಗಬಾರದು? ಎಂದು ಸಚಿವ ಉಮೇಶ ಕತ್ತಿ ಪ್ರಶ್ನಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ತಾವೂ ಕೂಡ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ನನಗೂ ಸಿಎಂ ಆಗುವ ಅರ್ಹತೆ ಇದೆ. ಆದರೆ, ಸಧ್ಯಕ್ಕೆ ಸಿಎಂ ಕುರ್ಚಿ ಸಧ್ಯಕ್ಕೆ ಖಾಲಿ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾರೆ. ಇನ್ನು ಎರಡು ವರ್ಷ ಯಡಿಯೂರಪ್ಪರೇ ಸಿಎಂ ಆಗಿರುತ್ತಾರೆ. ಸಿಎಂ ಕುರ್ಚಿ ಖಾಲಿಯಾದ ಮೇಲೆ ನೋಡೋಣ. ದೇವರ […]

ಯಡಿಯೂರಪ್ಪ ಟಾಲ್ ಲೀಡರ್- ಆದರೆ, ಲಿಂಗಾಯಿತರಲ್ಲಿ ನಾನು ಸೇರಿದಂತೆ ಪರ್ಯಾಯ ನಾಯಕರಿದ್ದೇವೆ- ಎಂ. ಬಿ. ಪಾಟೀಲ

ಮೈಸೂರು: ಯಡಿಯೂರಪ್ಪ ದೊಡ್ಡ ನಾಯಕರು. ಲಿಂಗಾಯಿತರಲ್ಲಿ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಆದರೆ, ಲಿಂಗಾಯಿತರಲ್ಲಿ ಪರ್ಯಾಯ ನಾಯಕರಿಲ್ಲ ಎನ್ನುವುದು ಸುಳ್ಳು ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ಮೈಸೂರಿನಲ್ಲಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಸೆಕೆಂಡ್ ಲೈನ್ ನಲ್ಲಿ ಬಹಳಷ್ಟು ಜನ ಲಿಂಗಾಯಿತ ನಾಯಕರಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾನಿದ್ದೇನೆ. ಶರಣ ಪ್ರಕಾಶ ಪಾಟೀಲ, ಈಶ್ವರ ಖಂಡ್ರೆ […]

ಮಹಾರಾಷ್ಟ್ರ ಮತ್ತೀತರ ನೆರೆಯ ರಾಜ್ಯಗಳಿಗೆ ಸಾರ್ವಜನಿಕರು ತೆರಳಲು, ಮರಳಲು ಸರಕಾರ ವಿಧಿಸಿರುವ ಷರತ್ತುಗಳೇನು ಗೊತ್ತಾ?

ವಿಜಯಪುರ: ಸಂಭವನೀಯ ಕೊರೊನಾ 3ನೇ ಅಲೆಯನ್ನು ತಡೆಗಟ್ಟಲು ರಾಜ್ಯ ಸರಕಾರ ಬಿಗೀ ನಿಲುವು ತೆಗೆದುಕೊಂಡಿದ್ದು, ನೆರೆಯ ರಾಜ್ಯಗಳಿಗೆ ತೆರಳಲು ಮತ್ತು ಅಲ್ಲಿಂದ ಬರುವವರಿಗಾಗಿ ಹಲವಾರು ಷರತ್ತುಗಳನ್ನು ವಿಧಿಸಿದೆ. ಈ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರ ಜಿಲ್ಲೆಯ ಮಹಾರಾಷ್ಟ್ರ್ದ ಗಡಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಎಲ್ಲ ಅರ್ಹ ಜನರಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಗಡಿ ಭಾಗಗಳಾದ ಚಡಚಣ ತಾಲೂಕಿನ ದೂಳಖೇಡ, ಶಿರಾಡೋಣ ಮತ್ತು ಇತರೆ ಚೆಕ್ […]

ಕಾಂಗ್ರೆಸ್ಸಿನಲ್ಲಿ ಹೈಕಮಾಂಡ ನಿರ್ಧಾರವೇ ಅಂತಿಮ- ಎಸ್. ಆರ್. ಪಾಟೀಲ

ವಿಜಯಪುರ: ಸಿಎಂ ಅಭ್ಯರ್ಥಿಯ ಬಗ್ಗೆ ಯಾರೂ ಮಾತನಾಡದಂತೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸ್ಪಷ್ಟ ಸೂಚನೆ ನೀಡಿದ್ದಾರೆ ವಿಧಾನ ಪರಿಷತ್ ಪ್ರತಿಪಕ್ಷದ ‌ನಾಯಕ ಎಸ್. ಆರ್. ಪಾಟೀಲ ತಿಳಿಸಿದ್ದಾರೆ‌ ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಶಾಸಕಾಂಗ ಸಭೆ ನಡೆಸಿ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಯಾರೋ ಹೇಳಿದರು ಎಂದು ಮುಖ್ಯಮಂತ್ರಿ ಮಾಡಲು ಆಗುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ಮುಂದಿನ ಸಿಎಂ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ಪ್ರತಿನಿಧಿ ಇರುತ್ತಾರೆ. […]