ಜಿಂದಾಲ್ ಗೆ ನೀಡಿದಂತೆ ನಮಗೆ ರಾಜ್ಯದಲ್ಲಿ ಎಲ್ಲಿಯಾದರೂ 500 ಎಕರೆ ಜಾಗ ನೀಡಿ- ಗೋಶಾಲೆ ಆರಂಭಿಸುತ್ತೇವೆ ಎಂದು ಸಿಎಂ ಗೆ ಪತ್ರ ಬರೆದ ಯತ್ನಾಳ
ವಿಜಯಪುರ: ಸದಾ ಮುಖ್ಯಮಂತ್ರಿ ಅವರ ಪುತ್ರರ ವಿಚಾರದಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿರುವ ಯತ್ನಾಳ, ಈಗ ಹೊಸದೊಂದ ಬೇಡಿಕೆ ಇಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಯತ್ನಾಳ, ರಾಜ್ಯದ ಯಾವುದಾದರೊಂದು ಭಾಗದಲ್ಲಿ 500 ಎಕರೆ ಜಮೀನು ನೀಡಿ. ತಾವು ಅಧ್ಯಕ್ಷರಾಗಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯಿಂದ ಗೋಶಾಲೆ ಆರಂಭಿಸುವುದಾಗಿ ಆಗ್ರಹಿಸಿದ್ದಾರೆ. ಈಗಾಗಲೇ ತಮ್ಮ ಸಂಸ್ಥೆಯ ವತಿಯಿಂದ ಕಗ್ಗೋಡ ಗ್ರಾಮದಲ್ಲಿ ವಿಶಾಲವಾದ ಪ್ರದೇಶದಲ್ಲಿ ಗೋವುಗಳ ಗೋರಕ್ಷಾ ಕೇಂದ್ರ ಸ್ಥಾಪನೆ […]
ಗುಮ್ಮಟ ನಗರಿಯಲ್ಲಿ ರೂ. 15 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ಸುಟ್ಟು ಹಾಕಿದ ಪೊಲೀಸರು
ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರು ಸುಮಾರು ರೂ. 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ(ಡ್ರಗ್ಸ್) ನಾಶಪಡಿಸಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಈ ಡ್ರಗ್ಸ್ ನಾಶ ಪಡಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ. ಎನ್ ಡಿ ಪಿ ಎಸ್ ಕಾಯಿದೆಯಡಿ ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ 40 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರೂ. 14.08 ಲಕ್ಷಕ್ಕೂ ಹೆಚ್ಚು ಮೌಲ್ಯದ 302.871 ಕೆಜಿ […]
ನಾಳೆ ಶನಿವಾರ ರೂ. 50 ಕೋ. ಮೌಲ್ಯದ ಮೌಲ್ಯದ ವಸ್ತುಗಳನ್ನು ನಾಶಪಡಿಸಲಿರುವ ರಾಜ್ಯ ಸರಕಾರ- ಯಾಕೆ ಗೊತ್ತಾ?
ಬೆಂಗಳೂರು: ಕಳೆದ ವರ್ಷ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾಗಿರುವ ರೂ. 50 ಕೋ. ಗೂ ಹೆಚ್ಚು ಮೌಲ್ಯದ ನಾನಾ ಬಗೆಯ ಮಾದಕ ದ್ರವ್ಯ(ಡ್ರಗ್ಸ್)ನ್ನು ಶನಿವಾರ ನಾಶ ಪಡಿಸಲಾಗುವುದು ಎಂದು ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶನಿವಾರ ಅಂತಾರಾಷ್ಟ್ರೀಯ ಡ್ರಗ್ ವಿರೋಧಿ ಮತ್ತು ಅಕ್ರಮ ಕಳ್ಳಸಾಗಣೆ ದಿನದ ಅಂಗವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಡ್ರಗ್ಸ್ ನಾಶ ಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಗಾಂಜಾ, ಅಫೀಮು, ಬ್ರೌನ್ ಶುಗರ್, ಹೆರಾಯಿನ್, ಚರಸ್, […]
ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸಿದ ಅನ್ನದಾತರು
ವಿಜಯಪುರ: ವಿಜಯಪುರ ಜಿಲ್ಲಾದ್ಯಂತ ಅನಲಾಕ್ ಜಾರಿಯಾಗುತ್ತಿದ್ದಂತೆ ಒಂದೊಂದೆ ಚಟುವಟಿಕೆಗಳು ಶುರುವಾಗಿವೆ. ವಿಜಯಪುರ ಜಿಲ್ಲೆಯ ಹಡಗಲಿಯಲ್ಲಿ ಕಾರ ಹುಣ್ಣಿಮೆ ಅಂಗವಾಗಿ ರೈತರು ಎತ್ತಿನ ಗಾಡಿ ಮತ್ತು ಎತ್ತುಗಳನ್ನು ಓಡಿಸಿ ಸಂಭ್ರಮಿಸಿದ್ದಾರೆ. ಕಾರ ಹುಣ್ಣಿಮೆ ಅನ್ನದಾತರ ಪಾಲಿಗೆ ತಮ್ಮ ಕುಟುಂಬ ಸದಸ್ಯರಂತಿರುವ ಎತ್ತುಗಳಿಗೆ ಸ್ನಾನ ಮಾಡಿಸಿ, ನಾನಾ ಬಣ್ಣಗಳನ್ನು ಹಚ್ಚಿ ರಿಬ್ಬನ್ ಕಟ್ಟಿ ಸಂಭ್ರಮಿಸುವ ಹಬ್ಬ. ಮುಂಗಾರು ಕೃಷಿ ಚಟುವಟಿಕೆಗಳು ಇದರಿಂದ ಆರಂಭವಾಗುತ್ತವೆ. ಈ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ರೈತರ ಪಾಲಿಗೆ ಸಂಭ್ರಮದ ಹಬ್ಬವಾಗಿದೆ. ಕೊರೊನಾ ಮಾರ್ಗಸೂಚಿ ಇದ್ದರೂ ಹಡಗಲಿಯಲ್ಲಿ […]
ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮ: ಕೊರೊನಾ 3ನೇ ತಡೆಯಲು ಹಾವೇರಿಯಲ್ಲಿ 16 ವರ್ಷದೊಳಗಿನ ಎಲ್ಲ ಮಕಕ್ಳ ಆರೋಗ್ಯ ತಪಾಸಣೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ
ಹಾವೇರಿ: ಕೊರೊನಾ ಮೂರನೇ ಅಲೆ ತಡೆಗಟ್ಟಲು ರಾಜ್ಯದಲ್ಲಿಯೇ ವಿನೂತನ ಕಾರ್ಯಕ್ರಮ ಹಾವೇರಿಯಲ್ಲಿ ಆರಂಭವಾಗಿದೆ. ಕೊರೊನಾ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆಗಾಗಿ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿ ಹಾವೇರಿ ಜಿಲ್ಲೆಯಲ್ಲಿ 16 ವರ್ಷದೊಳಗಿನ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಹಾವೇರಿ ನಗರದ ನಾಗೇಂದ್ರನಮಟ್ಟಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ […]
ಆಲಮಟ್ಟಿ ಕಾಲುವೆ ನಿರ್ವಹಣೆಗೆ ಟೆಂಡರ್, ಜಲಾಷಯದಿಂದ ನೀರು ಬಿಡುಗಡೆ- ಕೆ ಬಿ ಜೆ ಎನ್ ಎಲ್ ನಿಲುವಿಗೆ ರೈತ ಮುಖಂಡ ಬಸವರಾಜ ಕುಂಬಾರ ಆಕ್ಷೇಪ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಆಲಮಟ್ಟಿ ಜಲಾಷಯದಿಂದ ನೀರು ಹರಿಸಲಾಗುವ ಕಾಲುವೆಗಳ ನಿರ್ವಹಣೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಈಗ ಟೆಂಡರ್ ಕರೆದಿದ್ದಾರೆ. ಅಧಿಕಾರಿಗಳ ಈ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಆರೋಪಿಸಿದೆ. ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ, ಆಲಮಟ್ಟಿಯಲ್ಲಿ ಕಳೆದ 18 ವರ್ಷಗಳಿಂದ ನೀರು ಸಂಗ್ರಹಿಸಲಾಗುತ್ತಿದೆ. ಪ್ರತಿಬಾರಿ ಮಾರ್ಚ್ ತಿಂಗಳಲ್ಲಿ ಕಾಲುವೆ ನಿರ್ವಹಣೆಗೆ ಟೆಂಡರ್ ಕರೆಯಲಾಗುತ್ತಿತ್ತು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾಲುವೆಗಳ ನಿರ್ವಹಣೆ ಮುಗಿದು ಜೂನ್ ವೇಳೆಗೆ […]
ಚಿಕ್ಕಗಲಗಲಿ ಬ್ಯಾರೇಜಿಗೆ ಶಾಸಕ ಎಂ. ಬಿ. ಪಾಟೀಲರಿಂದ ಬಾಗೀನ ಅರ್ಪಣೆ- ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು ಎಂದ ಮಾಜಿ ಸಚಿವ
ವಿಜಯಪುರ: ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಚಿಕ್ಕಗಲಗಲಿ ಬ್ಯಾರೇಜಿಗೆ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸ್ವಕ್ಷೇತ್ರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ರೂ. 54 ಕೋ. ವೆಚ್ಚದ ನೂತನ ಬ್ರಿಡ್ಜ್-ಕಂ-ಬಾಂದಾರ ತುಂಬಿ ಹರಿಯುತ್ತಿದೆ. ಈ ಬ್ಯಾರೇಜಿಗೆ ಎಂ. ಬಿ. ಪವಾಟೀಲ ಗಂಗಾಪೂಜೆ ನೆರವೇರಿಸಿ, ಬಾಗೀನ […]
ಭೀಮಾ ತೀರದಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ನೇತೃತ್ವದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ
ವಿಜಯಪುರ: ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವ ಕುರಿತು ವಿಜಯಪುರ ಜಿಲ್ಲೆಯ ಭೀಮಾ ತೀರದಲ್ಲಿ ಅಣಕು ಪ್ರದರ್ಶನ ನಡೆಯಿತು. ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಬಳಿ ಭೀಮಾ ನದಿಯಲ್ಲಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ಉಸ್ತುವಾರಿಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ ನಡೆಯಿತು. ದೇವಣಗಾಂವ ಗ್ರಾ. ಪಂ. ಮಟ್ಟದ ವಿಪತ್ತು ನಿರ್ವಹಣಾ ಯೋಜನಾ ಸಮಿತಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ನೀಡುವ ಜೊತೆಗೆ ತಾವರಖೇಡ ಗ್ರಾಮದಲ್ಲಿ ದೋಣಿ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಅಣಕು ಪ್ರದರ್ಶನ ನಡೆಸಲಾಯಿತು. […]
ಕರುಳ ಕುಡಿಯ ಕಳೆಬರದ ಎದುರು ಐದಾರು ಗಂಟೆ ನಿಂತು ಅಶ್ವಧಾರೆ ಸುರಿಸಿದ ತಾಯಿ
ವಿಜಯಪುರ: ಕೊರೊನಾ ಸಂಕಷ್ಟ ಸಮಯಮದಲ್ಲಿ ತಮ್ಮವರನ್ನು ಕಳೆದುಕೊಂಡರೂ ಅಂತ್ಯಕ್ರಿಯೆ, ಅಸ್ತಿವಿರ್ಜನೆಗೂ ಮುಂದಾಗದ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಇರುವಾಗ ಮೂಕ ಪ್ರಾಣಿಯ ಈ ಘಟನೆ ಎಂಥವರ ಕಣ್ಣಂಚಿನಲ್ಲೂ ನೀರು ತರಿಸುವಂತಿದೆ. ಇದು ಮಾೃತಹೃದಯಕ್ಕೆ ಪ್ರತ್ಯಕ್ಷ ಸಾಕ್ಷಿ. ತಾಯಿ ಕರಳು ಎಂಥದ್ದೂ ಎಂಬುದಕ್ಕೆ ತಾಜಾ ಉದಾಹರಣೆ. ಕರುಳ ಕುಡಿಯನ್ನು ಕಳೆದುಕೊಂಡ ತಾಯಿ ಕುದುರೆಯೊಂದು ಅದರ ಕಳೆಬರದ ಎದುರು ಐದಾರು ಗಂಟೆ ಸತತವಾಗಿ ನಿಂತು ರೋಧಿಸಿದ ಹೃದಯ ವಿದ್ರಾವಕ ಘಟನೆಯಿದು. ಈ ಘಟನೆ ನಡೆದಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ […]
ಅಭಿವೃದ್ಧಿ ಕಾಮಗಾರಿಗಳ ಚಾಲನೆ ಜೊತೆಗೆ ಕೊರೊನಾ ಮಾರ್ಗಸೂಚಿ ಪಾಲನೆ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ಜನಪರ ಶಾಸಕ ಎಂ. ಬಿ. ಪಾಟೀಲ
ವಿಜಯಪುರ: ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಮತ್ತೆ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈ ಕಾರ್ಯಕ್ರಮಗಳು ಕೇವಲ ಸಮಾರಂಭಗಳಿಗೆ ಸೀಮಿತವಾಗದೇ ತಮ್ಮ ಮತಕ್ಷೇತ್ರದ ಜನರಲ್ಲಿ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕಡೆಗೂ ಶಾಸಕರು ಗಮನ ಹರಿಸಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಶಾಸಕರ ಸಲಹೆ ದೇಶದ ನೂರು ಕೋಟಿ ಜನರು ಹಾಗೂ ನಮ್ಮ ರಾಜ್ಯದಲ್ಲಿ ಐದು ಕೋಟಿ ಜನರು ಲಸಿಕೆ ಹಾಕಿಸಿಕೊಂಡರೆ […]