ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ನಿಂದ 34 ಜನ ಗುಣಮುಖ, ಹಲವರ ಜೀವ, ದೃಷ್ಠಿ ರಕ್ಷಣೆ- ಉಪಕುಲಪತಿ ಡಾ. ಆರ್. ಎಸ್. ಮುಧೋಳ
ವಿಜಯಪುರ: ಕೊರೊನಾ ನಂತರ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ (ಮೈಕಾರಮಿಕೊಸಿಸ್) ಕಾಯಿಲೆಯಿಂದ ಬಳಲಿದ ಹಲವರ ಜೀವ ಮತ್ತು ದೃಷ್ಠಿಯನ್ನು ರಕ್ಷಿಣೆ ಮಾಡಲಾಗಿದೆ ಎಂದು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ. ತಾವು ಸ್ವತಃ ಇ ಎನ್ ಟಿ ಸರ್ಜನ್ ಆಗಿ 40 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿದ್ದೇನೆ. ತಮ್ಮ ಸುಧೀರ್ಘ ಸೇವಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದ್ದು ಇದೇ ಮೊದಲು. ಈ ಹಿಂದೆ ತೀವ್ರತರ […]
ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಕಾಮಗಾರಿ ಬೇಗ ಮುಗಿಸಲು ಸಂಸದ ರಮೇಶ ಜಿಗಜಿಣಗಿ ಸೂಚನೆ
ವಿಜಯಪುರ: ಬಹುದಿನಗಳಿಂದ ಕುಂಟುತ್ತ ಸಾಗಿರುವ ವಿಜಯಪುರ ನಗರದ ಇಬ್ರಾಹಿಂಪುರ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಸೂಚನೆ ನೀಡಿದ್ದಾರೆ. ಇಬ್ರಾಹಿಂಪುರ ರೇಲ್ವೆ ಗೇಟ್ ಹತ್ತಿರದ ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಅವರು, ಪರಿಶೀಲನೆ ನಡೆಸಿದರು. ಈ ಹಿಂದೆಯೇ ಪೂರ್ಣವಾಗಬೇಕಿದ್ದ ಈ ಕಾಮಗಾರಿ ಕುಂಟುತ್ತ ಸಾಗಿದೆ. ಇದರಿಂದಾಗಿ ಈ ಭಾಗದ ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ಕುರಿತು ಸಾರ್ವಜಬಿಕರ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳಕ್ಕೆ […]
ಪೋಷಕರೇ ಹುಷಾರ್: ಆಟವಾಡುತ್ತ ಹೊಟ್ಟೆಯ ಕೆಳಗೆ ಗುಂಡು ಹಾರಿಸಿಕೊಂಡ ಬಾಲಕ ಆಸ್ಪತ್ರೆಗೆ ದಾಖಲು
ವಿಜಯಪುರ: ಪೋಷಕರು ನಿರ್ಲಕ್ಷ್ಯಿಸಿದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಯಾವೆಲ್ಲ ವಸ್ತುಗಳು ಎಲ್ಲೆಲ್ಲಿ ಹೇಗೇಗೆ ಸುರಕ್ಷಿತವಾಗಿ ಇಡಬೇಕು ಎಂದು ಜಾಗೃತೆ ವಹಿಸಲೂ ಇದೊಂದು ಉದಾಹರಣೆ ಸಾಕು. ಬಾಲಕನ ಮಕ್ಕಳಾಟದಿಂದ ಆಕಸ್ಮಿಕವಾಗಿ ಹಾರಿದ ಗುಂಡು ಆತನ ತೊಡೆಗೆ ತಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ನಡೆಸಿದೆ. ಚಡಚಣ ಪಟ್ಟಣದ ಮರಡಿ(ಮಡ್ಡಿ) ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ನಾಲ್ಕು ವರ್ಷದ ಬಾಲಜ ಗಾಯಗೊಂಡಿದ್ದಾನೆ. ಇಂದು ಮಧ್ಯಾಹ್ಯದ ಸುಮಾರು ಮನೆಯಲ್ಲಿದ್ದ ವಾಲಕ ತಿಜೋರಿಯಲ್ಲಿದ್ದ ಗುಂಡುಗಳನ್ನು ಹಾಕಿಡಲಾಗಿದ್ದ […]
ಅಸಂಘಟಿತ ಕಾರ್ಮಿಕರಿಗೆ ಸಹಾಯ ಧನ: ಸದುಪಯೋಗಕ್ಕೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಕರೆ
ವಿಜಯಪುರ: ರಾಜ್ಯ ಸರಕಾರ ಅಸಂಘಟಿತ ಕಾರ್ಮಿಕರಾದ ಆಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರಗಳು, ಮೆಕ್ಯಾನಿಕ್ ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಚಮ್ಮಾರರುಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ ಒಟ್ಟು 12 ವರ್ಗಗಳಿಗೆ ತಲಾ ರೂ.2000 ಗಳಂತೆ ಮತ್ತು ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರೂ.3000 ಸಹಾಯ ಧನವನ್ನು ಘೋಷಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಪಿ. ಸುನಿಲ ಕುಮಾರ ತಿಳಿಸಿದ್ದಾರೆ. ಅರ್ಹ ಫಲಾನುಭವಿಗಳು ಕರ್ನಾಟಕ ಸರಕಾರದ ಸೇವಾ ಸಿಂಧು ತಂತ್ರಾಂಶದಲ್ಲಿhttps://sevasindhu.karnataka.gov.in ಸಿಟಿಜನ್ ಲಾಗಿನ್ ಆಗಿ ಅಗತ್ಯ ದಾಖಲೆಗಳೊಂದಿಗೆ […]
ಬಿಜೆಪಿ ಮುಖಂಡರು ಅಧಿಕಾರ ದಾಹ ಬಿಟ್ಟು ಕೊರೊನಾ, ಬೆಲೆ ಏರಿಕೆ ನಿಯಂತ್ರಿಸಲಿ- ಶಾಸಕ ಎಂ. ಬಿ. ಪಾಟೀಲ ವಾಗ್ದಾಳಿ
ಹಾವೇರಿ: ಕೊರೊನಾ ಸಂಕಷ್ಟ ಸಮಯದಲ್ಲಿ ಕೊರೊನಾ ನಿರ್ವಹಣೆ ಬಿಟ್ಟು ಬಿಜೆಪಿ ನಾಯಕರು ಅಧಿಕಾರ ದಾಹ ಪ್ರದರ್ಶಿಸುತ್ತಿದ್ದಾರೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು, ರಾಜ್ಯ ಸರಕಾರದಲ್ಲಿ ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸುವ ಕೆಲಸ ಮಾಡಬೇಕು. ಅಧಿಕಾರ ಖುರ್ಚಿ ಗಿರ್ಚಿ ನಂತರ ಎಂದು ಅವರು ಹೇಳಿದರು. ಕೊರೊನಾದಿಂದಾಗಿ […]
ಕೊರೊನಾ, ಲಾಕಡೌನ್ ಸಮಯದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ನೇತೃತ್ವದಲ್ಲಿ 50 ದಿನಗಳಲ್ಲಿ 50 ಸಾವಿರ ಜನರಿಗೆ ಆಹಾರ ವಿತರಣೆ
ವಿಜಯಪುರ: ಕೊರೊನಾ ಮತ್ತು ಲಾಕಡೌನ ಸಂದರ್ಭದಲ್ಲಿ ಸತತ 50 ದಿನ 50 ಸಾವಿರ ಹಸಿದ ಹೊಟ್ಟೆಗಳ ಹಸಿವು ನೀಗಿಸುವ ಮೂಲಕ ಗಣೇಶ ಭಕ್ತರು ಮತ್ತು ಮಾಜಿ ಸಚಿವರು ಗಮನ ಸೆಳೆದಿದ್ದಾರೆ. ಹೀಗೆ ಹಸಿವಿನಿಂದ ಬಳಲಿದವರಿಗೆ ಬಸವನಾಡಿನ ಗಣೇಶ ಭಕ್ತರು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನ್ನ ಹಾಕಿದ್ದಾರೆ. ಸಮಾಜ ಸೇವೆಗೆ ನಿಂತು ಸೈ ಎನಿಸಿಕೊಂಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೇ, ಹೊಟೇಲುಗಳಿಗೆ ತೆರಳಲು ಸಾಧ್ಯವಾಗದೇ, ಆರ್ಥಿಕ ಸಂಕಷ್ಟದಲ್ಲಿದ್ದವರ ಪಾಲಿಗೆ ಇವರು ಈ ಮೂಲಕ ಅನ್ನದಾತರಾಗಿದ್ದಾರೆ. […]
ಮಂಗಳವಾರದಿಂದ ಶಾಸಕ ಎಂ. ಬಿ. ಪಾಟೀಲ ಅವರಿಂದ ಅಹವಾಲು ಸ್ವೀಕಾರ
ವಿಜಯಪುರ: ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಅವರ ಕಚೇರಿ ಸೋಮವಾರದಿಂದ ಎಂದಿನಂತೆ ಆರಂಭವಾಗಲಿದೆ. ಜ. 15 ಮಂಗಳವಾರ ಬೆ. 10.30 ರಿಂದ ಮ.2 ರವರೆಗೆ ಬಿ. ಎಂ. ಪಾಟೀಲ ರಸ್ತೆಯಲ್ಲಿರುವ ಕಛೇರಿಯಲ್ಲಿ ಶಾಸಕರು ಉಪಸ್ಥಿತರಿದ್ದಾರೆ. ಈ ಸಂದರ್ಭದಲ್ಲಿ ಶಾಸಕರು ಬಬಲೇಶ್ವರ ಮತಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಇದ್ದವರು ಮಾತ್ರ ಕಛೇರಿಗೆ ಭೇಟಿ ನೀಡುಬೇಕು ಮತ್ತು ಭೇಟಿಯ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್, ಸೈನಿಟೈಸರ್ ಬಳಕೆ ಹಾಗೂ ಸಾಮಾಜಿಮ ಅಂತರ […]
ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ- ವಿಜಯಪುರದಲ್ಲಿ ಏನಿರುತ್ತೆ? ಏನಿರಲ್ಲ- ಡಿಸಿ ಮಾಹಿತಿ
ವಿಜಯಪುರ: ರಾಜ್ಯ ಸರಕಾರ ನಾಳೆಯಿಂದ ಲಾಕಡೌನ್ ಸಡಿಲಿಕೆ ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ? ಎಂಬುದರ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮಾರ್ಗಸೂಚಿ ಪ್ರಮುಖ ಅಂಶಗಳು ಈ ಕಳಗಿನಂತಿವೆ ಜೂ. 14ರ ಬೆ. 6ರಿಂದ ಜೂ. 21ರ ಬೆಳಿಗ್ಗೆ 6 ರವರೆಗೆ ಈ ಮಾರ್ಗಸೂಚಿಗಳು ಜಾರಿಯಲ್ಲಿರಲಿವೆ. ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಬೆ. 6 ರಿಂದ ಮ. 2ರ ವರೆಗೆ ಕಾಲಾವಕಾಶವಿದೆ. […]
ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲ್ಲ ಎನ್ನುತ್ತಿರುವ ಈ ಶಾಲೆಯ ವಿದ್ಯಾರ್ಥಿಗಳು- ಯಾಕೆ ಗೊತ್ತಾ?
ವಿಜಯಪುರ- ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ವಿಜಯಪುರ ನಗರದ ಶಾಲೆಯೊಂದರ ಮಕ್ಕಳು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಸಚಿವರಿಗೆ ಪತ್ರವನ್ನೂ ಬರೆದಿದ್ದಾರೆ. ಮೆಟ್ರಿಕ್ ಪರೀಕ್ಷೆಯನ್ನೇ ಬಹಿಷ್ಕರಿಸಲು ಮುಂದಾಗಿರುವ ಈ ವಿದ್ಯಾರ್ಥಿಗಳು, ಮಲ್ಟಿಪಲ್ ಚಾಯ್ಸ್ ಪರೀಕ್ಷೆಯನ್ನು ವಿರೋಧಿಸಿದ್ದಾರೆ. ಪರೀಕ್ಷೆ ನಡೆಸಿದರೆ ನಾವು ಬರೆಯುವುದಿಲ್ಲ ಎಂದು ಹಠ ಹಿಡಿದಿರುವ ಈ ವಿದ್ಯಾರ್ಥಿಗಳು ಈ ಕುರಿತು ಶಿಕ್ಷಣ ಸಚಿವ ಸುರೇಶಕುಮಾರ ಅವರಿಗೆ ಪತ್ರ ಬರೆದಿದ್ದಾರೆ. ಗುಮ್ಮಟನಗರಿ ವಿಜಯಪುರ ನಗರದ ವಿಕಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು […]
ವಿಜಯಪುರ ಎಪಿಎಂಸಿಯಲ್ಲಿ ಮಾವಿನ ಹಣ್ಣುಗಳ ಖರೀದಿಗೆ ಜನರ ನಿರಾಸಕ್ತಿ- ವ್ಯಾಪಾರಿಗಳು ಕಂಗಾಲು
ವಿಜಯಪುರ: ಒಂದೆಡೆ ಕೊರೊನಾ ಮತ್ತೋಂದೆಡೆ ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವನ್ನು ಕೇಳುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ವಿಜಯಪುರ ನಗರದ ಎಪಿಎಂಸಿಯಲ್ಲಿ ಭರಪೂರ ಮಾವು ಮಾರಾಟಕ್ಕೆ ಬಂದಿದೆ. ಆದರೆ, ಕೇಳುವವರೇ ಇಲ್ಲದಾಗಿದೆ. ಬೇಸಿಗೆ ಬಂತೆಂದರೆ ಸಾಕು ತರಹೇವಾರಿ ತಳಿಯ ಮಾವುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಆದರೆ, ಈ ಬಾರಿಯೂ ಕೊರೊನಾ ಮತ್ತು ಲಾಕಡೌನ್ ನಿಂದಾಗಿ ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಈಗ ಬೆಲೆ ಕುಸಿತದಿಂದಾಗಿ ಮಾವು ಬೆಳೆದ ಬೆಳೆಗಾರರು ಪರದಾಡುವಂತಾಗಿದೆ. ವಿಜಯಪುರ […]