ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಪಡಿಸಿದ ಕೇಂದ್ರ ಸರಕಾರ

ವಿಜಯಪುರ: ಕೇಂದ್ರ ಸರಕಾರ ಸಿಬಿಎಸ್ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದು ಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ಭಾರತ ಸರಕಾರ ಈ ಬಾರಿ ಸಿ ಬಿ ಎಸ್ ಇ ದ್ವಿತೀಯ ಪಿಯು ಪರೀಕ್ಷೆಗಳನ್ನು ರದ್ದು ಪಡಿಸಲು ನಿರ್ಧರಿಸಿದೆ. ಪರೀಕ್ಷೆ ಕುರಿತು ಸಾಕಷ್ಟು ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಠಿಯಿಂದ ಕೈಗೊಳ್ಳಲಾದ ವಿದ್ಯಾರ್ಥಿಗಳ ಸ್ನೇಹಿ ನಿರ್ಧಾರ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ […]

ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ, ಕೇಂದ್ರ ಸರಕಾರಗಳು ವಿಫಲ ಆರೋಪ- ಏಳು ಎಡಪಕ್ಷಗಳಿಂದ ಆನಲೈನ್ ಮೂಲಕ ಮನೆಮನೆಗಳಿಂದಲೇ ಪ್ರತಿಭಟನೆ

ವಿಜಯಪುರ: ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಏಳು ಎಡ ಪಕ್ಷಗಳು ಆನಲೈನ್ ಮೂಲಕ ಮನೆಮನೆಗಳಿಂದಲೇ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಿಪಿಐ, ಸಿಪಿಐ(ಎಂ), ಎಸ್‌ ಯು ಸಿ ಐ(ಸಿ), ಸಿಪಿಐ(ಎಂಎಲ್) ಲಿಬರೇಶನ್, ಎ ಐ ಎಫ್ ಬಿ, ಆರ್ ಪಿ ಐ, ಸ್ವರಾಜ ಇಂಡಿಯಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಂಟಿಯಾಗಿ ಪಾಲ್ಗೋಂಡರು. ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ತಂತಮ್ಮ ಮನೆಗಳ ಮುಂದೆ ಕೈಯಲ್ಲಿ ಭಿತ್ತಿ ಪತ್ರ ಹಿಡಿ ಕಾರ್ಯಕರ್ತರು ಜೀವ […]

ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಗಾಗಿ ರೂ. 55 ಲಕ್ಷ ಶಾಸಕರ ಅನುದಾನ ನೀಡಲು ಅರುಣ ಶಹಾಪುರ ನಿರ್ಧಾರ

ವಿಜಯಪುರ: ಕೊರೊನಾ ಎರಡನೇ ಅಲೆ ಈಗ ಸಾಕಷ್ಟು ಜನರಕನ್ನು ಹೈರಾಣಾಗಿಸಿದೆ. ಅಲ್ಲದೇ, ಸಂಕಷ್ಟಕ್ಕೂ ದೂಡಿದೆ. ಈ ಮಧ್ಯೆ, ಕೊರೊನಾ ಮೂರನೇ ಅಲೆಯ ಆತಂಕವೂ ಎದುರಾಗಿದ್ದು, ಈ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ ಬಿಜೆಪಿ ಸದಸ್ಯ ಅರುಣ ಶಹಾಪುರ ತಮ್ಮ ಸ್ವಂತ ಊರಾದ ಸಿಂದಗಿಗೆ ತಮ್ಮ ಅನುದಾನದಲ್ಲಿ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದಾರೆ. 2021-22ನೇ ಆರ್ಥಿಕ ವರ್ಷದಲ್ಲಿ ತಮ್ಮ ಶಾಸಕರ ಅನುದಾನದಲ್ಲಿ ರೂ. 55 ಲಕ್ಷ […]

ಬಸವನ ಬಾಗೇವಾಡಿ ಪಟ್ಟಣದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲು ರಾಷ್ಟ್ರೀಯ ಬಸವ ಸೈನ್ಯ ಆಗ್ರಹ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಜನತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡುವಂತೆ ಆಗ್ರಹಿಸಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಬಸವನ ಬಾಗೇವಾಡಿಯಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ತೆರಳಿದ ಪದಾಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿ ಓತಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವನ ಬಾಗೇವಾಡಿ ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಸಾರ್ವಜನಿಕರಿಗೆ ಕೊರೊನಾ ಲಸಿಕೆಯನ್ನು ನೀಡುವುದನ್ನು […]

ದೇಶ ರಕ್ಷಕರ ಪಡೆ. ಸ್ವದೇಶಿ ಜಾಗರಣಾ ಮಂಚನಿಂದ ಬಸವ ನಾಡಿನಲ್ಲಿ ನಡೆದಿರುವ ನಿಸ್ವಾರ್ಥ ಸೇವೆಗೊಂದು ಸಲಾಂ

ವಿಜಯಪುರ: ಇದ್ದರೆ ಇರಬೇಕು ಇಂಥ ಯುವಕರ ಸಂಘಟನೆಗಳು ಎಂಬ ಮಾತಿಗೆ ಹೇಳಿ ಮಾಡಿಸಿದಂತಿವೆ ಈ ಯುವಕರ ಪಡೆಗಳು. ಬಸವ ನಾಡಿನಲ್ಲಿ ಸದ್ದಿಲ್ಲದೇ ಈ ಸಂಘಟನೆಗಳು ಕೊರೊನಾ ಸೋಂಕಿತರ, ಅವರ ಸಂಬಂಧಿಕರ ಮತ್ತು ಅಸಹಾಯಕರ ಸೇವೆ ಮಾಡುವ ಮೂಲಕ ಮನೆ ಮಾತಾಗಿವೆ. ಕೊರೊನಾ ಎರಡನೇ ಅಲೆಗೆ ಉಳ್ಳವರೂ ನಲುಗಿ ಹೋಗಿದ್ದಾರೆ. ಇನ್ನು ಬಡವರ ಪಾಡಂತೂ ದೇವರಿಗೆ ಪ್ರೀತಿ ಎಂಬ ಪರಿಸ್ಥಿತಿ ಇದೆ. ಇಂಥ ಬಡವರು ಮತ್ತು ಅಸಹಾಯಕರಿಗೆ ವಿಜಯಪುರ ನಗರದ ದೇಶ ರಕ್ಷಕರ ಪಡೆ ತ್ತು ಸ್ವದೇಶಿ ಜಾಗರಣಾ […]

ಕೂಡಗಿ ಎನ್ ಟಿ ಪಿ ಸಿ, ಪವನ ವಿದ್ಯುತ್ ಕಂಪನಿಗಳ ವಿರುದ್ಧ ಬಸವ ಸೈನ್ಯ ಸಂಸ್ಥಾಪಕ ಶಂಕರಗೌಡ ಬಿರಾದಾರ ಅಸಮಾಧಾನ

ವಿಜಯಪುರ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿರುವ ಕೂಡಗಿಯ ಎನ್ ಟಿ ಪಿ ಸಿ ಮತ್ತು ಬಸವನ ಬಾಗೇವಾಡಿ ಸುತ್ತಮುತ್ತಲಿರುವ ಪವನ ವಿದ್ಯುತ್ ಕಂಪೆನಿಗಳು ಜನರಿಗೆ ಮೋಸ ಮಾಡುತ್ತಿವೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಆರೋಪಿಸಿದ್ದಾರೆ ಕರೊನಾ ರೋಗದಿಂದ ಇಡೀ ಮನುಕುಲವೇ ತತ್ತರಿಸಿ ಹೋಗಿದೆ. ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೇ, ಬಸವನ ಬಾಗೇವಾಡಿ ತಾಲೂಕಿನಲ್ಲಿ ಸಾವಿರಾರು ಜನ ನಿರ್ಗತಿಕರಾಗಿದ್ದಾರೆ. ಆದರೆ, ಎನ್ ಟಿ ಪಿ ಸಿ ಮತ್ತು ಪವನ ವಿದ್ಯುತ್ […]

ಸಿಎಂ ಬದಲಾವಣೆ ಕುರಿತು ಮತ್ತೆ ಯತ್ನಾಳ ಹೊಸ ಬಾಂಬ್- ಜೂ. 15ರೊಳಗೆ ಸಿಎಂ ಬದಲಾಗ್ತಾರೆ ಇಲ್ಲವೇ ಯೋಗೇಶ್ವರ ಡಿಸಿಎಂ ಆಗ್ತಾರೆ

ವಿಜಯಪುರ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ. ವೈ. ವಿಜಯೇಂದ್ರ ವಿರುದ್ಧ ಸದಾ ವಾಗ್ದಾಳಿ ನಡೆಸುವ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಜೂ. 15ರೊಳಗೆ ಒಂದು ಸಿಎಂ ಬದಲಾಗುತ್ತಾರೆ. ಇಲ್ಲದಿದ್ದರೆ, ಸಿ. ಪಿ. ಯೋಗೇಶ್ವರ ಅವರಿಗೆ ಡಿಸಿಎಂ ಮಾಡಿ ಇಂಧನ ಖಾತೆ ನೀಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು. ಯೋಗಿಶ್ವರ ಅವರನ್ನು ತೆಗೆದು ಹಾಕುವ ಅಥವಾ ಉಚ್ಚಾಟನೆ ಮಾಡುವ […]

ಸ್ವತಃ ಕಷ್ಟದಲ್ಲಿದ್ದರೂ ಮಾನವೀಯತೆ ಮೆರೆದ ರೈತನಿಗೆ ಶಾಸಕ ಎಂ. ಬಿ. ಪಾಟೀಲ ನೆರವು

ವಿಜಯಪುರ- ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ ಮೂರು ಎಕರೆ ಜಮೀನಿನಲ್ಲಿ ಐದು ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿದ್ದರು. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾಳೆಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದರು. ಇಂಥ ಸಂದಿಗ್ಧತೆಯ ನಡುವೆಯೂ ಮಾನವೀಯತೆಗೆ ಮುಂದಾದ ರೈತ ಇತರ ರೈತರಿಗೆ ಮಾದರಿಯಾಗಿದ್ದಾರೆ. ಮಾರುಕಟ್ಟೆ ಇಲ್ಲದೆ ಹಾಳಾಗುತ್ತಿದ್ದ ತಮ್ಮ ಬಾಳೆ ಬೆಳೆಯನ್ನು ಸುತ್ತಲಿನ ಹಳ್ಳಿಗಳ ರೈತರಿಗೆ ಉಚಿತವಾಗಿ ನೀಡವುದರ ಜೊತೆಗೆ ಮಾಸ್ಕ ಹಾಗೂ ಸೈನಿಟೈಸರ್ ವಿತರಿಸುತ್ತ […]

ವಿಶ್ವ ತಂಬಾಕು ರಹಿತ ದಿನಾಚರಣೆ ಬಗ್ಗೆ ಹೋಮಿಯೋಪಥಿ ವೈದ್ಯರ ಸಲಹೆಗಳು

ಡಾ. ರವಿ. ಎಸ್. ಕೋಟೆಣ್ಣವರ,ಹೋಮಿಯೋಪಥಿ ವೈದ್ಯರು ವಿಜಯಪುರ: ವಿಶ್ವ ಆರೋಗ್ಯ ಸಂಸ್ಥೆಯು ಪ್ರತೀ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನಾಚಾರಣೆ ಘೋಷಣೆ ಮಾಡಿದ್ದು, ಇದನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ದಿನದಂದು ಒಂದು ಘೋಷ ವಾಖ್ಯವನ್ನು ನೀಡಿ ಈ ನಿಟ್ಟಿನಲ್ಲಿ ವರ್ಷವಿಡಿ ಸರಕಾರ ಮತ್ತು ಸರಕಾರ ಹೊರತಾದ ಸಂಘ-ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಘೋಷ ವಾಖ್ಯ ತ್ಯಜಿಸಲು ಬದ್ಧರಾಗಿ ಎಂಬುದಾಗಿದೆ. ಈಗಾಗಲೇ ಕೊರೊನಾ ಎರಡನೇ ಅಲೆ ಆರಂಭವಾಗಿದ್ದು, ಇದರ […]

ಸಿಎಂ ಸ್ಥಾನ ಪತನ ಮುನ್ಸೂಚನೆ ಹಿನ್ನೆಲೆ- ವಿಜಯೇಂದ್ರರಿಂದ ವೀರಶೈವ, ಲಿಂಗಾಯಿತ ಸ್ವಾಮೀಜಿಗಳ ಮೂಲಕ ಒತ್ತಡ ತಂತ್ರ- ಯತ್ನಾಳ ಗಂಭೀರ ಆರೋಪ

ವಿಜಯಪುರ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಪದಚ್ಯುತಿ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ವೀರಶೈವ- ಲಿಂಗಾಯಿತ ಮಠಾಧೀಶರು ಮತ್ತು ಸ್ವಾಮೀಜಿಗಳ ಮೂಲಕ ಸಿಎಂ ಪರ ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಯತ್ನಾಳ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಜಯೇಂದ್ರ ವಿರುಸ್ಧ ವಾಗ್ದಾಳಿ ನಡೆಸಿದ್ದು, ಮಠಾಧೀಶರು ಮತ್ತು ಸ್ವಾಮೀಜಿಗಳು ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂದು ಹೇಳಿದ್ದಾರೆ. ಯತ್ನಾಳ […]