ಬ್ಲ್ಯಾಕ್ ಫಂಗಸ್ ಎಂದರೇನು? ಇದರ ಬಗ್ಗೆ ಹೋಮಿಯೋಪಥಿ ವೈದ್ಯರ ಸಲಹೆಗಳೇನು? ಎಂಬುದನ್ನು ತಿಳಿಯಿರಿ

ಡಾ. ರವಿ ಎಸ್. ಕೋಟೆಣ್ಣವರ,ಹೋಮಿಯೋಪಥಿ ವೈದ್ಯ ವಿಜಯಪುರ- ಕೊರೊನಾ ಎರಡನೇ ಅಲೆಯ ನಡುವೆಯೇ ಈಗ ಬ್ಲ್ಯಾಕ್ ಫಂಗ್ ಕಾಟ ಶುರವಾಗಿದೆ. ಅಲ್ಲಲ್ಲಿ ಈ ರೋಗ ಕೆಲವರಲ್ಲಿ ಕಾಣಿಸಿಕೊಂಡಿದ್ದು, ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಮೊದಲ ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದ್ದು, ಇದನ್ನು ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.ಈ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಇಬ್ಬರಲ್ಲಿ ಈ ರೋಗ ಕಾಣಿಸಿಕೊಂಡಿದೆ. ಬ್ಲ್ಯಾಕ್ ಫಂಗಸ್ ಅಂದರೆ ಕನ್ನಡದಲ್ಲಿ ಕಪ್ಪು ಶಿಲೀಂದ್ರ ಕೇದ ಈಗ ತಾನೆ ಶಿವ-ಶಿವಾ ಎಂದು ಕರೋನಾದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಮತ್ತೆ ಆತಂಕಕ್ಕೆ ತಳ್ಳುತ್ತಿದೆ. […]

ರವಿವಾರವೂ ಜಿಲ್ಲೆಯಲ್ಲಿ ಸಂಚರಿಸಿ ಕೊರೊನಾ ನಿಯಂತ್ರಣ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದ್ದರೂ, ಪ್ರತಿದಿನ ಸರಾಸರಿ 300 ರಿಂದ 400ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ವಿಜಯಪುರ ಜಿಲ್ಲಾಡಳಿತ ಸರಣಿ ಸಭೆಗಳು, ತಪಾಸಣೆಗಳ ಮೂಲಕ ಸಾಕಷ್ಟು ಶ್ರಮ ವಹಿಸುತ್ತಿದೆ. ರವಿವಾರ ವಾರದ ರಜೆ ಇದ್ದರೂ ಕೂಡ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಎಸ್ಪಿ ಅನುಪಮ ಅಗ್ರವಾಲ ನಾನಾ ಕಡೆ ತಿರುಗಾಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ರವಿವಾರ […]

ಅಕೌಂಟಿಬಿಲಿಟಿ ಇದ್ದರೆ ರೆಮಿಡಿಸಿವಿರ್ ಅಕ್ರಮ ಮಾರಾಟಕ್ಕೆ ಕಡಿವಾಣ ಸಾಧ್ಯ- ಆಪತ್ತು ನಿರ್ಹವಣೆ ಸಲಕರಣೆ ಖರೀದಿಗೆ ಮತ್ತೆ ರೂ. 15 ಕೋ. ಬಳಕೆ- ಬಸವರಾಜ ಬೊಮ್ಮಾಯಿ

ಬೆಂಗಳೂರು: ಒಂದು ಅಕೌಂಟಿಬಿಲಿಟಿ ಇದ್ದರೆ ರೆಮಿಡಿಸಿವಿರ್ ಎಂಜೆಕ್ಷನ್ ಅಕ್ರಮ ಮಾರಾಟ ತಪ್ಪಿಸಲು ಸಾಧ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಸಲಕರಣೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬಳಿಕ ಮಾಧ್ಯದಮಗಳ ಜೊತೆ ಮಾತನಾಡಿದ ಅವರು, ರೆಮಿಡಿಸಿವಿರ್ ಅಕ್ರಮ ಮಾರಾಟ ತಪ್ಪಿಸಲು ಅಕೌಂಟಿಬಿಲಿಟಿ ಅಗತ್ಯವಾಗಿದೆ. ಒಂದು ಬ್ಯಾಚಿನ ಔಷಧಿ ಯಾರಿಗೆ, ಎಷ್ಟು ಜನರಿಗೆ ಹೋಗಿದೆ? ಎಷ್ಟು ಜನರಿಗೆ ಕೊಡಬೇಕು? ಎಷ್ಟು ಜನರಿಗೆ ನೀಡಲಾಗಿದೆ? ಎಂಬುದರ ಬಗ್ಗೆ ಲೆಕ್ಕ ಇರಬೇಕು. ಆರೋಗ್ಯ ಇಲಾಖೆ ಈ […]

ಲಸಿಕೆ ಅಭಿಯಾನ ಆಯ್ತು ಈಗ ಕೊರೊನಾ ವಾರಿಯರ್ಸ್ ಗೆ ನೆರವಿಗೆ ಧಾವಿಸಿದ ಶಾಸಕ ಯತ್ನಾಳ

ವಿಜಯಪುರ- ಕಳೆದ ಸುಮಾರು ಒಂದು ತಿಂಗಳಿಂದ ವಿಜಯಪುರ ಮತಕ್ಷೇತ್ರದ ಜನತೆಗೆ ಕೊರೊನಾ ಲಸಿಕೆ ಹಾಕಿಸಲು ಅಭಿಯಾನ ಕೈಗೊಂಡಿದ್ದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಗ ಕೊರೊನಾ ವಾರಿಯರ್ಸ್ ನೆರವಿಗೆ ಧಾವಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಮಾಹಾಮಾರಿಯ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹೆಚ್ಚಿನ ರೋಗಿಗಗಳಿಗೆ ಪ್ರಾಣವಾಯು, ವೆಂಟಿಲೇಟರ್ ಗಳನ್ನು ಅವಲಂಬಿಸಬೇಕಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿತಿಯಲ್ಲಿಯೂ ಕೂಡ ಜೀವದ ಹಂಗು ತೊರೆದು ವಿಜಯಪುರ […]

ಕೋವಿಡ್ ಸೇವಾ ನಿರತ ವಿಜಯಪುರ ವೈದ್ಯೆಯ ಜೊತೆ ಸಿಎಂ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ

ವಿಜಯಪುರ: ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯದ ನಾನಾ ಜಿಲ್ಲೆಗಳಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ನಿರತ ವೈದ್ಯರ ಜತೆ ವರ್ಚುವಲ್ ಸಭೆ ಮೂಲಕ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ವಿಜಯಪುರದ ವೈದ್ಯೆ ಡಾ. ಮೀನಾಕ್ಷಿ ಮುತ್ತಪ್ಪನವರ ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಬೆಂಗಳೂರಿನಲ್ಲಿರುವ ತಮ್ಮ ಗೃಹ ಕಚೇರಿ ಕೃಷ್ಣದಿಂದ ವರ್ಚುವಲ್ ಮೂಲಕ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಡಾ.ಮೀನಾಕ್ಷಿ ಮುತ್ತಪ್ಪನವರಿಗೆ ಎಷ್ಟು ದಿನಗಳಿಂದ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಆಗ […]

4000 ಕೊರೊನಾ ವಾರಿಯರ್ಸ್, ಕೊವಿಡ್ ಕಾರ್ಯಪಡೆ ಪದಾಧಿಕಾರಿಗಳಿಗೆ ರೋಗ ನಿಯಂತ್ರಣ ಕುರಿತು ಯುಟ್ಯೂಬ್ ಮೂಲಕ ತಿಳಿವಳಿಕೆ

ವಿಜಯಪುರ: ಕೊರೊನಾ ಎರಡನೇ ಅಲೆ ಗ್ರಾಮೀಣ ಭಾಗಕ್ಕೆ ವ್ಯಾಪಕವಾಗಿ ಹರಡದಂತೆ ಬಸವ ನಾಡು ವಿಜಯಪುರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಯ ಕೋವಿಡ್-19 ಕಾರ್ಯಪಡೆಯ ಸುಮಾರು 4000 ಜನ ಕೊರೊನಾ ವಾರಿಯರ್ಸ್, ಅಧ್ಯಕ್ಷರು ಮತ್ತು ಸದಸ್ಯರಿಗೆ ಯೂಟ್ಯೂಬ್ ಚಾನಲ್ ಮುಖಾಂತರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿ. ಪಂ. ಸಿಇಓ ಗೋವಿಂದ ರೆಡ್ಡಿ ಮತ್ತು ಆರೋಗ್ಯ ಇಲಾಖೆ ಹಿರಿಯ ತಜ್ಞ ವೈದ್ಯರ ನೇತೃತ್ವದಲ್ಲಿ ಏಕಕಾಲಕ್ಕೆ ತಿಳುವಳಿಕೆಯನ್ನು ನೀಡಲಾಯಿತು. ಕೊರೊನಾ ಎರಡನೇ ಅಲೆಯು ಹರಡದಂತೆ ಸರಪಳಿಯನ್ನು ತುಂಡರಿಸಲು ಈಗಾಗಲೇ ಸರಕಾರದಿಂದ ಕಟ್ಟುನಿಟ್ಟಾದ […]

ಮನೆ ಮನೆ ಸಮೀಕ್ಷೆ ನಡೆಸಿ ಚಿಕಿತ್ಸೆ ನೀಡಿದರೆ ವಿಜಯಪುರ ಜಿಲ್ಲೆ ಕೊರೊನಾ ಮುಕ್ತವಾಗಲು ಸಾಧ್ಯ- ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ-: ಗ್ರಾಮೀಣ ಭಾಗದಲ್ಲಿ ಮನೆ-ಮನೆ ಸಮೀಕ್ಷೆ ಮಾಡಿ ಅನಾರೋಗ್ಯಕ್ಕೀಡಾದವರಿಗೆ ರೋಗ ಲಕ್ಷಣಗಳನುಸಾರ ಚಿಕಿತ್ಸೆ ನೀಡಲು ಪ್ರಾರಂಭಿಸಿದರೆ ವಿಜಯಪುರ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗುತ್ತದೆ ಎಂದು ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ಮನವಿ ಪತ್ರ ನೀಡಿ ಚರ್ಚೆ ನಡೆಸಿದ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮೊದಲನೆ ಅಲೆಯಲ್ಲಿ ಅಷ್ಟಾಗಿ ಕಂಡು ಬರದ ಕೊರೊನಾ, ಈಗ 2ನೇ ಅಲೆಯಲ್ಲಿ ಹೆಚ್ಚಾಗಿ […]

ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿವಿ ಹಂಗಾಮಿ ಉಪಕುಲಪತಿಯಾಗಿ ಡಾ. ಆರ್. ಎಸ್. ಮುಧೋಳ ನೇಮಕ

ಬಸವ ನಾಡು ವಿಜಯಪುರ: ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಹಂಗಾಮಿ ಉಪಕುಲಪತಿಗಳಾಗಿ ಡಾ. ಆರ್. ಎಸ್. ಮುಧೋಳ ಅವರನ್ನು ನೇಮಕ ಮಾಡಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಡಾ. ಆರ್. ಎಸ್. ಮುಧೋಳ ಅವರು ಮೂಲತಃ ವಿಜಯಪುರ ಜಿಲ್ಲೆಯ ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋವಳ್ಳಿ ಗ್ರಾಮದವರಾಗಿದ್ದಾರೆ. ವಿಜಯಪುರದ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಪಿಯು ಮುಗಿಸಿ, ಹುಬ್ಬಳ್ಳಿಯ […]

ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಎಂ. ಬಿ. ಪಾಟೀಲ

ಬಸವ ನಾಡು ವಿಜಯಪುರ: ರಾಜ್ಯ ಸರಕಾರ ಸ್ವ್ಯಾಬ್ ಟೆಸ್ಟ್ ಕಡಿಮೆ ಮಾಡಿರುವುದೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣ. ಇದು ಇದೇ ರೀತಿ ಮುಂದುವರೆದರೆ ಕೊರೊನಾ ಮಹಾಸ್ಪೋಟವಾಗಲಿದೆ ಎಂದು ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ವಾಹಿನಿ ಪಬ್ಲಿಕ್ ಟಿವಿ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈಗ ರಾಜ್ಯಾದ್ಯಂತ ಕೊರೊ ನಾ ಟೆಸ್ಟಿಂಗ್ ಕಡಿಮೆಯಾಗಿದೆ. ಜನೇವರಿ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ […]

ಹಬ್ಬದಾಚರಣೆ ಬದಲು ಊರೆಲ್ಲ ಔಷಧಿ ಸಿಂಪಡಿಸಿ ಮಾದರಿಯಾದ ರಂಭಾಪುರ ಗ್ರಾಮಸ್ಥರು

ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಹೊರ ವಲಯದ ರಂಭಾಪುರ ಗ್ರಾಮಸ್ಥರು ಈ ಬಾರಿ ಹಬ್ಬದಾಚರಣೆಯ ಬದಲು ವಿನೂತನ ಕಾರ್ಯ ಮಾಡುವ ಮೂಲಕ ಕಾಯಕವೇ ಕೈಲಾಸ ಎಂಬಂತೆ ಇಡೀ ಊರಿಗೆ ಉಪಕಾರ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿಯೂ ಕೊರೊನಾ ಎರಡನೇ ಅಲೆ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಇಲ್ಲಿಯೂ ಲಾಕಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಹಬ್ಬ, ಹರಿದಿನಗಳಿದ್ದರೂ ಮನೆಯಲ್ಲಿಯೇ ಆಚರಿಸಬೇಕು ಎಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಂಭಾಪುರ ಗ್ರಾಮಸ್ಥರು ಬಸವ ಜಯಂತಿಯನ್ನಂತೂ […]