ಕೊರೊನಾ 3ನೆ ಅಲೆ- ಚಿಕ್ಕಮಕ್ಕಳ ವಿಶೇಷ ಚಿಕಿತ್ಸಾ ಘಟಕ ಸ್ಥಾಪನೆಗೆ ಎಂ. ಬಿ. ಪಾಟೀಲ ಸೂಚನೆ
ಬಸವ ನಾಡು ವಿಜಯಪುರ: ಕೊರೊನಾ ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳು ಹೆಚ್ಚು ಬಾಧೀತರಾಗುತ್ತಾರೆ ಎಂಬ ವರದಿಗಳಿವೆ. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ಕೋವಿಡ್ ವಿಶೇಷ ಘಟಕ ಆರಂಭಿಸಲು ಈಗಲೇ ಕ್ರಮ ಕೈಗೊಳ್ಳಬೇಕು ಎಂದು ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಬಿ ಎಲ್ ಡಿ ಇ ಡೀಮ್ಡ್ ವಿವಿಯಲ್ಲಿ ನಡೆದ ಸಭೆಯಲ್ಲಿ ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧೀತರಾಗುವ ಕುರಿತು ವರದಿಗಳು ಬರುತ್ತಿವೆ. ಇದನ್ನು ಗಮನದಲ್ಲಿರಿಸಿ ನಾವು […]
5 ಲಕ್ಷ ರೆಮಿಡಿಸಿವರ್ ಖರೀದಿ-ಡಿಸಿಎಂ ಡಾ. ಅಶ್ವತ್ಥನಾರಾಯಣ
ಬಸವ ನಾಡು ಬೆಂಗಳೂರು: ರಾಜ್ಯದಲ್ಲಿ ರೆಮಿಡಿಸಿವಿರ್ ಔಷಧಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 5 ಲಕ್ಷ ಡೋಸ್ ರೆಮಿಡಿಸಿವಿರ್ ಇಂಜೆಕ್ಷನ್ ಖರೀದಿಸಲಾಗುತ್ತಿದೆ. ಇದಕ್ಕಾಗಿ ಈ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಮತ್ತುಬ ಡಿಸಿಎಂ ಡಾ. ಸಿ. ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಕೊರಪನಾ ಎರಡನೇ ಅಲೆಯನ್ನು ಎದುರಿಸಲು ರಾಜ್ಯ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಲು ಸಿಎಂ ಯಡಿಯೂರಪ್ಪ ಅವರು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಎಲ್ಲಿಯೂ ರೆಮಿಡಿಸಿವಿರ್ ಎಂಜೆಕ್ಷನ್ […]
ಪತ್ರಕರ್ತರಿಗೆ ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ
ಬಸವ ನಾಡು ವಿಜಯಪುರ: ಕೊರೊನಾ ನಿಯಂತ್ರಣದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಸಲ್ಲಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳ ಕಾರ್ಯ ಅನನ್ಯ ಮತ್ತು ಪ್ರಶಂಸಾರ್ಹವಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ವಿಜಯಪುರ ನಗರದಲ್ಲಿ ಜಿಲ್ಲಾ ಕೇಂದ್ರದ ಮಾಧ್ಯಮ ಪ್ರತಿನಿಧಿಗಳಿಗಾಗಿ ಜಿಲ್ಲಾಡಳಿತ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೊರನಾ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ […]
ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ, ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ಬಸವ ನಾಡು ವಿಜಯಪುರ- ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೊರೊನಾ ಲಸಿಕೆ ವಿಚಾರದಲ್ಲಿ ಸರಕಾರ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆಯುವುದು ಅವರ ಹಕ್ಕು. ವ್ಯಾಕ್ಸಿನ್ ಒದಗಿಸುವುದು ಸರಕಾರದ ಕೆಲಸ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯಾಕ್ಸಿನ್ ನೀಡುವ ವಿಚಾರದಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿವೆ ಎಂದು ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. 2ನೇ ಡೋಸ್ ವ್ಯಾಕ್ಸಿನ್ ಸಿಗಲಿಲ್ಲ ಎಂದರೆ ಜನರ […]
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 417 ಪ್ರಕರಣ ಇತ್ಯರ್ಥ- ಡಿಸಿಎಂ ಗೋವಿಂದ ಕಾರಜೋಳ ಮೆಚ್ಚುಗೆ
ಬಸವನಾಡು ವಿಜಯಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಕಳೆದ 8 ವರ್ಷಗಳಿಂದ ತಾಂತ್ರಿಕ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 417 ಭೂ ಸ್ವಾಧೀನ ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ಸಂಬಂಧಿಸಿದ ಜಮೀನಿನ ರೈತರಿಗೆ ನೇರವಾಗಿ ಪರಿಹಾರ ಧನವನ್ನು ನೀಡಲಾಗಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ. ಶಿವಮೊಗ್ಗ- ಚಿತ್ರದುರ್ಗ ಮಾರ್ಗದ ರಾಷ್ಟ್ರೀಯ ಹೆದ್ದಾರಿ -13, ಮುಧುಗಿರಿ- ಆಂಧ್ರಗಡಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 234, ಕೊಳ್ಳೆಗಾಲ- ಕೇರಳ ಗಡಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 212 ರಸ್ತೆಗಳ […]
ಕೊರೊನಾ ಹೆಮ್ಮಾರಿ ವಿರುದ್ಧ ಗೆದ್ದ ಶತಾಯುಷಿ ಸ್ವಾತಂತ್ರ್ಯ ಯೋಧ
ಬಸವ ನಾಡು ವಿಜಯಪುರ- ಕೊರೊನಾ ಸೋಂಕಿತರಾಗಿದ್ದ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಗುಣಮುಖರಾಗುವ ಮೂಲಕ ಕೊರೊನಾ ಹೆಮ್ಮಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ದೊರೆಸ್ವಾಮಿ ಕೊರಪನಾ ಸೊಂಕೀತರಿಗೆ ಮಾದರಿಯಾಗಿದ್ದಾರೆ. ಇವರನ್ನು ಕಂಡು ಕೊರೋನಾ ಓಡಿ ಹೋದಂತಾಗಿದೆ. ದೇಶದಲ್ಲಿ ಕೊರೋನಾದಿಂದ ಜನ ಭಯ ಪಡುತ್ತಿರುವ ಈ ಸಮಯದಲ್ಲಿ ಶತಾಯುಷಿ ಎಚ್. ಎಸ್. ದೊರೆಸ್ವಾಮಿ ಕೊರೊನಾ ಸೊಂಕೀತರಿಗೆ ಸ್ಪೂರ್ತಿಯಾಗಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ವಾರಗಳ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಗುಣಮುಖರಾಗಿ […]
ವಿಜಯಪುರ ಜಿಲ್ಲಾಸ್ಪತ್ರೆಗೆ ನಾಲ್ಕು ಆಕ್ಸಿಜನ್ ಕಾನ್ಸಂಟ್ರೇಟರ್ ಹಸ್ತಾಂತರಿಸಿದ ಪೊಲೀಸರು
ಬಸವ ನಾಡು ವಿಜಯಪುರ- ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ತೀವ್ರವಾಗಿ ಹೆಚ್ಚುತ್ತಿದ್ದು, ದಿನೇ ದಿನೇ ಕೊರೊನಾ ಸೋಂಕಿತಸ ಸಂಖ್ಯೆಯೂ ಹೆಚ್ಚಾಗುತ್ತಿದೆ.ಈ ಮಧ್ಯೆ ಆಕ್ಸಿಜನ್ ಕೊರತೆಯೂ ಹೆಚ್ಚಾಗಿದ್ದರಿಂದ ಕೊರೊನಾ ಸೋಂಕಿತರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಎಡಿಜಿಪಿ ಸೀಮಾಂತ ಕುಮಾರ ಸಿಂಗ್ ಬೆಂಗಳೂರಿನ O2 ಎನ್ ಜಿ ಓ ಜೊತೆ ಸೇರಿ ರಾಜ್ಯದ ನಾನಾ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ O2 ಸಂಸ್ಥೆ ಸಿ ಎಸ್ ಆರ್ ಯೋಜನೆಯಡಿ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆಯಾಗಿ […]
ವಿಜಯಪುರ ಜಿಲ್ಲೆಯಲ್ಲಿ ಆಕ್ಸಿಜನ್ ನಿರ್ವಹಣೆಗೆ ಆಕ್ಸಿಜನ್ ಕೋಶ ರಚನೆ, ಸಹಾಯವಾಣಿ ಸೌಲಭ್ಯ- ಡಿಸಿ ಪಿ. ಸುನೀಲ ಕುಮಾರ
ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ವೈದ್ಯಕೀಯ ಆಮ್ಲಜನಕ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮರ್ಪಕ ಆಕ್ಸಿಜನ್ ಪೂರೈಕೆಗಾಗಿ ವಿಜಯಪುರ ಜಿಲ್ಲಾಡಳಿತ ಆಕ್ಸಿಜನ್ ಕೋಶ ರಚನೆ ಸೇರಿದಂತೆ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಈಗ ಎರಡು ಆಮ್ಲಜನಕ ಘಟಕಗಳಿವೆ. ಮೆ. ಕುಲಕರ್ಣಿ ಗ್ಯಾಸಸ ಏಜೆನ್ಸಿ.ಮತ್ತು ಮೆ. ಎನ್. ಆರ್. […]
ಮಳೆಗಾಲದಲ್ಲಿ ಬರುವ ರೋಗಗಳಿಗೆ ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಗಳು
ಪ್ರೊ. ರವಿ ಎನ್. ಕೋಟೆಣ್ಣವರ,ಖ್ಯಾತ ಹೋಮಿಯೋಪಥಿ ವೈದ್ಯರು ವಿಜಯಪುರ- ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವುಇಳೆಯೊಡನೆ ಜಳಕವಾಡೋಣು ನಾವೂನುಮೋಡಗಳ ಆಟ ನೋಡೋಣುಎಂದು ಪ್ರಾಸಬದ್ದವಾಗಿ ಭಾವಪೂರ್ಣ ಸಾಲುಗಳನ್ನು ಬರೆದರು ವರಕವಿ ಬೇಂದ್ರೆ.ನಿಜ, ಮಳೆ ಎಂದರೆ ಹಾಗೇನೆ, ಆಗಸದ ಶೂನ್ಯದಿಂದ ಥಳಥಳಿಸುವ ಮುತ್ತುಗಳಂತೆ ನೆಲಕ್ಕೆ ಬಿದ್ದು ಜೀವಸೃಷ್ಟಿಗೆ ನಾಂದಿ ಹಾಡುವ ಮಳೆಯು ಅದ್ಯಾವುದೋ ಮಾಯದ ಲೋಕದಿಂದ ಬಂದದ್ದೇ ಇರಬಹುದೇನೊ ಎಂಬ ವಿಸ್ಮಯ.ಈ ಮಳೆಯ ಹುಟ್ಟೇ ಒಂದು ಅದ್ಭುತ, ಅಚ್ಚರಿ, ಕೌತುಕ, ಚೋದ್ಯ. ಬಿಸಿ ಬಿಸಿ ಬೇಗೆಯ ದಿನಗಳಲ್ಲಿ, ಮಳೆಯ ಸೂಚನೆಯೂ […]
ಕೊರೊನಾ ರೋಗಿಗಳ ಪ್ರಮಾಣಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳಿಗೆ ರೆಮಡಿಸಿವಿರ್ ಎಂಜೆಕ್ಷನ್ ಹಂಚಿಕೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ
ಬಸವ ನಾಡು ವಿಜಯಪುರ- ಸರಕಾರದಿಂದ ವಿಜಯಪುರ ಜಿಲ್ಲೆಗೆ ಹಂಚಿಕೆಯಾದ ರೆಮಿಡಿಸಿವಿರ್ ಎಂಜೆಕ್ಷನ್ ನ್ನು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಅಲ್ಲಿನ ರೋಗಿಗಳ ಪ್ರಮಾಣಕ್ಕನುಗುಣವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.ಮೇ 11 ರಂದು ನಾನಾ ಖಾಸಗಿ ಆಸ್ಪತ್ರೆಗಳಿಗೆ 2054 ರೆಮಿಡಿಸಿವಿರ್ ಎಂಜೆಕ್ಷನ್ ಹಂಚಿಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ, ಖಾಸಗಿ ಆಸ್ಪತ್ರೆಗಳಲ್ಲಿನ ಕೊರೊನಾ ರೋಗಿಗಳ ಸಂಖ್ಯೆಗೆ ಪ್ರಮಾಣಕ್ಕೆ ಅನುಗುಣವಾಗಿ ಈ ಔಷಧಿಯನ್ನು ನೇರವಾಗಿ ಆಯಾ ಖಾಸಗಿ […]