ಕಬಿನಿ, ದಾಂಡೇಲಿ ಕಾಡಲ್ಲಿ ವರುಷಗಳ ಕಾಲ ಹುಡುಕಿದರೂ ಸಿಗದ ಹಕ್ಕಿ ಬಸವ ನಾಡಿನ ಮನೆಯ ಹಿಂಭಾಗದಲ್ಲಿ ಸೆರೆ ಹಿಡಿದ ಧ್ರುವ ಪಾಟೀಲ
ಬಸವ ನಾಡು ವಿಜಯಪುರ- ಬಸವ ನಾಡಿನ ಯುವಕ ಮತ್ತು ವನ್ಯಜೀವಿ ಛಾಯಾಗ್ರಾಹಕ ಧ್ರುವ ಪಾಟೀಲ ಆ ಒಂದು ಹಕ್ಕಿಗಾಗಿ ವರುಷಗಟ್ಟಲೇ ಕಬಿನಿ ಮತ್ತು ದಾಂಡೇಲಿ ಅರಣ್ಯದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಈಗ ಅದೇ ಆ ಒಂದು ಹಕ್ಕಿಯನ್ನು ತಮ್ಮ ಮನೆಯ ಉದ್ಯಾನದಲ್ಲಿ ಕಾಣುವ ಮೂಲಕ ಫುಲ್ ಖುಷ್ ಆಗಿ ಅದರ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ವಿಶ್ವದ ಬಲು ಅಪರೂಪದ ಮತ್ತು ಅಷ್ಟೇ ಸುಂದರವಾಗಿರುವ ಬಾನಾಡಿ ಪ್ಯಾರಾಡೈಸ್ ಫ್ಲೈಕ್ಯಾಚರ್ ಗಂಡು ಹಕ್ಕಿಯನ್ನು ಸೆರೆಯ […]
ಕೊರೊನಾ ಜೊತೆಗೆ ಸಾಮಾನ್ಯ ರೋಗಿಗಳ ನೆರವಿಗೆ ಧಾವಿಸಿದ ಶಾಸಕ ಎಂ. ಬಿ. ಪಾಟೀಲ- ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಳು, ಚಿಕಿತ್ಸಾ ಶುಲ್ಕ ಕಡಿತ
ಬಸವ ನಾಡು ವಿಜಯಪುರ- ಸದಾ ಜನಪರ ತುಡಿತ ಹೊಂದಿರುವ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಈಗ ಕೊರೊನಾ ಸಂಕಷ್ಟ ಕಾಲದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದಾರೆ.ಕೊರೊನಾ 2ನೇ ಅಲೆಯಿಂದಾಗಿ ರೋಗಿಗಳು ತತ್ತರಿಸುತ್ತಿದ್ದು, ಉತ್ತಮ ಚಿಕಿತ್ಸೆ ಒದಗಿಸಲು ತಮ್ಮ ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿಕಿತ್ಸಾ ಶುಲ್ಕವನ್ನೂ ಕಡಿಮೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಕರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ […]
ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಬೆಡ್‍ಗಳು ಕೊರೊನಾ ಸೋಂಕಿತರಿಗೆ ಮೀಸಲಿರುವಂತೆ ಖಚಿತಪಡಿಸಿಕೊಳ್ಳಿ- ಡಿಸಿ ಪಿ. ಸುನೀಲ ಕುಮಾರ
ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳು ಕೊರೊನಾ ದೃಢಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ತಾಲೂಕು ಮಟ್ಟದಲ್ಲಿ ಸರಿಯಾದ ರೀತಿ ಚಿಕಿತ್ಸೆ ನೀಡಿ ಅವಶ್ಯಕವಿದ್ದರೆ ಮಾತ್ರ ಜಿಲ್ಲಾ ಆಸ್ಪತ್ರೆಯ ಸಹಾಯವನ್ನು ತೆಗೆದುಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದ್ದಾರೆ.ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಡೆಸಿದ […]
ಶಾಸಕ ಎ. ಎಸ್. ಪಾಟೀಲ ನಡಹಳ್ಳಿ, ಅವರ ತಂದೆ ಇಬ್ಬರಿಗೂ ಕೊರೊನಾ ಪಾಸಿಟಿವ್
ಬಸವ ನಾಡು ವಿಜಯಪುರ- ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹಾಗೂ ಅವರ ತಂದೆ ಇಬ್ಬರಿಗೂ ಕೊರೊನಾ ಸೋಂಕು ದೃಡಪಟ್ಟಿದೆ.ಸಧ್ಯ ಇಬ್ಬರನ್ನೂ ವಿಜಯಪುರದ ಸರಕಾರಿ ಕೋವಿಡ್ ಆಸ್ಪತ್ರೆಗೆ ಮುಂದಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ತಮ್ಮ ಸಂಪರ್ಕದಲ್ಲಿ ಬಂದವರು ಮುನ್ನೆಚ್ಚರಿಕೆಯಾಗಿ ಕೊರೊನಾ ತಪಾಸಣೆ ಮಾಡಿಸಿಕೊಳ್ಳಬೇಕು, ಸ್ವಯಂ ಹೋಂ ಕ್ವಾರೆಂಟೈನಗೆ ಒಳಗಾಗಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.
ಶಾಸಕ ಎಂ. ಬಿ. ಪಾಟೀಲ ನಾಳೆಯಿಂದ ಒಂದು ವಾರ ವಿಜಯಪುರದಲ್ಲಿ ವಾಸ್ತವ್ಯ
ಬಸವ ನಾಡು ವಿಜಯಪುರ- ಮಾಜಿ ಸಚಿವ, ಬಬಲೇಶ್ವರ ಕಾಂಗ್ರೆಸ್ ಶಾಸಕ, ಎಂ. ಬಿ. ಪಾಟೀಲ ನಾಳೆಯಿಂದ ಒಂದು ವಿಜಯಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.ಬೆ. 10.30 ಗಂಟೆಯಿಂದ ಮ. 2.00 ಗಂಟೆಯರೆಗೆ ಬಿ.ಎಲ್.ಡಿ.ಇ.ಸಂಸ್ಥೆ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಲು ಲಭ್ಯ ಇರಲಿದ್ದಾರೆ. ಅನಿವಾರ್ಯ ಇದ್ದವರು ಮಾತ್ರ ಈ ಸಮಯದಲ್ಲಿ ಶಾಸಕರನ್ನು ಭೇಟಿ ಮಾಡಬಹುದು.ಇದನ್ನು ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ಸಾರ್ವಜನಿಕರ ಭೇಟಿ ಇಲ್ಲ. ತೀವ್ರ ತುರ್ತು ಸಂದರ್ಭಗಳಲ್ಲಿ ಮಾತ್ರ ದೂರವಾಣಿ ಮೂಲಕ ಸಂಪರ್ಕಿಸಬಹುದು ಎಂದು ಬಬಲೇಶ್ವರ ಶಾಸಕ ಕಚೇರಿ ಪ್ರಕಟಣೆಯಲ್ಲಿ […]
ಕೊರೊನಾ ಕೈಮಿರಿದೆ- ಜನ ಜಾಗೃತಿ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ- ಎಂಎಲ್‌ಸಿ ಸುನಿಲಗೌಡ ಪಾಟೀಲ ಎಚ್ಚರಿಕೆ
ಬಸವ ನಾಡು ವಿಜಯಪುರ- ಕೊರೊನಾ ಎರಡನೇ ಅಲೆ ಈಗಾಗಲೇ ತನ್ನ ತೀವ್ರತೆಯನ್ನು ತೋರಿದ್ದು, ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕೊರೊನಾ ಮೊದಲನೇ ಹಂತದಲ್ಲಿ ನಾವು ಕಲಿಯದ ಪಾಠಗಳನ್ನು ಎರಡನೇ ಅಲೆ ಸಂದರ್ಭದಲ್ಲಿ ಕಲಿಯಬೇಕಾಗಿತ್ತು. ಆದರೆ ನಾವು ನಮ್ಮ ನಿರ್ಲಕ್ಷದಿಂದ ಈ ಬಾರಿಯೂ ಮಾಸ್ಕ್ ಧರಿಸದಿರುವುದು, ಸ್ಯಾನಿಟೈಸರ್ ಬಳಸದಿರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡದೆ ಸಂತೆ, ಮದುವೆ, […]
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರಿಂದ ರಸ್ತೆ, ಸೇತುವೆ ಕಾಮಗಾರಿ ಪರಿಶೀಲನೆ
ಬಸವ ನಾಡು ವಿಜಯಪುರ- ನಾಗಠಾಣ ಮತ್ತು ಮಿಂಚನಾಳ ಮಧ್ಯೆ ನಿರ್ಮಿಸಲಾಗುತ್ತಿರುವ 6 ಕಿ. ಮಿ. ರಸ್ತೆ, ಮತ್ತು 2 ಸೇತುವೆ ಕಾಮಗಾರಿಗಳನ್ನು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಪರಿಶೀಲನೆ ನಡೆಸಿದರು.ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಬಳಿಕ ಮಾತನಾಡಿ, ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆ ಕಾಮಗಾರಿ ಈಗ ಪೂರ್ಣಗೊಂಡಿದೆ. ಒಂದು ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿದೆ. ನಾಗಠಾಣ ಬಳಿಯ ಸೇತುವೆ ಕಾಮಗಾರಿ ನಡೆಯುತ್ತದೆ ಎಂದು ತಿಳಿಸಿದರು. ಒಟ್ಟು ರೂ. 9 ಕೋ. ವೆಚ್ಚದಲ್ಲಿ ಮಿಂಚನಾಳ, […]
ಗುಮ್ಮಟ ನಗರಿಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನು ಮುಂದುವರೆಸಿದ ಶಾಸಕ ಯತ್ನಾಳ
ಬಸವ ನಾಡು ವಿಜಯಪುರ- ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ 2ನೇ ಅಲೆಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನೂ ಹೆಚ್ಚಿಸಲಾಗಿದೆ.ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಸ್ವತಃ ನಾನಾ ಬಡಾವಣೆಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿಗೆ ಮುಂದಾಗಿದ್ದಾರೆ. ಈ ಮುಂಚೆ ವಿಜಯಪುರ ನಗರದಲ್ಲಿ ಶೇ. 4 ರಷ್ಟಿದ್ದ ಕೊರೊನಾ ಲಸಿಕೆ ಪಡೆದವರ ಸಂಖ್ಯೆ ಈಗ ಶೇ. 40ಕ್ಕೆ ಹೆಚ್ಚಾಗಿದೆ. ಸಾರ್ವಜನಿಕರು ಇನ್ನೂ […]
ಗುಮ್ಮಟ ನಗರಿಯಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಖಾಕಿ ಪಡೆಯಿಂದ ಜಾಗೃತಿ ಕಾರ್ಯಕ್ರಮ
ಬಸವ ನಾಡು ವಿಜಯಪುರ- ಕೊರೊನಾ 2ನೇ ಅಲೆ ಜೋರಾಗಿದ್ದು ಗುಮ್ಮಟ ನಗರಿ ವಿಜಯಪುರದಲ್ಲಿಯೂ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಮುಂಚೆ ಪ್ರತಿದಿನ ಎರಡಂಕಿಯೊಳಗೆ ಇರುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಶತಕದ ಗಡಿ ದಾಟುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಜನಜಾಗೃತಿ ಮೂಡಿಸಲು ವಿಜಯಪುರದಲ್ಲಿ ಖಾಕಿ ಪಡೆ ಮುಂದಾಗಿದೆ. ವಿಜಯಪುರ ಪೊಲೀಸರು ಎಸ್ಪಿ ಅನುಪಮ ಅಗ್ರವಾಲ ನೇತೃತ್ವದಲ್ಲಿ ವಿಜಯಪುರ ಗುಮ್ಮಟ ನಗರಿ ವಿಜಯಪುರದಲ್ಲಿ ಕೊರೊನಾ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಈ […]
ಹುಣಸೆಗಿಡ ಕೋರ್ಟ್ ನಿಂದ ಬನ್ನಿಗಿಡ ಕೋರ್ಟ್ ವರೆಗಿನ ತಮ್ಮ ವೃತ್ತಿ ಜೀವನದ ನೆನಪಿನ ಬುತ್ತಿ ಬಿಚ್ಚಿಟ್ಟ ನ್ಯಾಯವಾದಿ ಅರ್ಜುನ ಮಿಸಾಳೆ
ಬಸವ ನಾಡು ವಿಜಯಪುರ- ಬಸವ ನಾಡು ವಿಜಯಪುರ ಜಿಲ್ಲೆಗೂ ನ್ಯಾಯಾಂಗ ಇಲಾಖೆಗೂ ಅದರದೇ ಆದ ಇತಿಹಾಸವಿದೆ. ಹಿರಿಯ ನ್ಯಾಯವಾದಿ ಅರ್ಜುನ ಮಿಸಾಳೆ ಅವರು ತಾವು ನ್ಯಾಯವಾದಿಯಾಗಿ ಸೇವೆ ಸಲ್ಲಿಸಲು ಆರಂಭಿಸಿದಾಗಿನಿಂದ ಇಂದಿನವರೆಗಿನ ನ್ಯಾಯಾಲಯಗಳು ಮತ್ತು ಅವುಗಳ ಸ್ಥಳಗಳ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದ್ದಾರೆ.ನ್ಯಾಯವಾದಿ ಅರ್ಜುನ್ ಮಿಸಾಳೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾದ ಮಾಹಿತಿ ಇಲ್ಲಿದೆ. https://m.facebook.com/story.php?story_fbid=1142085802903653&id=100013067313581 ವಿಜಯಪುರ ನ್ಯಾಯಾಲಯಗಳು- “ಹುಣಸೆಗಿಡ […]