ಬಸವ ನಾಡಿನಲ್ಲಿ ಅಂಗವಿಕಲರಿಗೆ ಸಲಕರಣೆ ವಿತರಿಸಿದ ಶಾಸಕ ಎಂ. ಬಿ. ಪಾಟೀಲ

ವಿಜಯಪುರ: ವಿಕಲಚೇತನರು ಯಾವುದೇ ಪರಿಸ್ಥಿತಿಯಲ್ಲಿ ಎದೆಗುಂದದೆ ಸ್ವಾವಲಂಬಿ ಜೀವನ ನಡೆಸಿ, ಇತರರಿಗೆ ಮಾದರಿಯಾಗಬೇಕು ಎಂದು ಬಿ. ಎಲ್. ಡಿ. ಇ. ಸಂಸ್ಥೆಯ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಹೇಳಿದರು. ವಿಜಯಪುರ ನಗರದ ಬಿ. ಎಲ್. ಡಿ. ಇ. ಸಂಸ್ಥೆ ಆವರಣದಲ್ಲಿ ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ನಡೆದ ವಿಕಲಚೇತನರಿಗೆ ಕೃತಕ ಅಂಗಾಂಗ ಜೋಡಣೆ ಹಾಗೂ ಸಾಧನ ಸಲಕರಣೆಗಳ ಉಚಿತ ವಿತರಣೆ ಕಾರ್ಯಕ್ರಮ […]

ಕೊರೊನಾ ಹಿನ್ನೆಲೆ ಜನರಿಂದ ಹಿಂಜರಿಕೆ- ನಾಯಕನ ಜನ್ಮದಿನವನ್ನು ಉಪಯೋಗಿಸಿ ರಕ್ತದಾನ ಶಿಬಿರ ಮಾಡಿದ ಯುವಕರು

ವಿಜಯಪುರ: ಕೊರೊನಾ ಹಿನ್ನೆಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ಬೆಂಬಲಿಗರು ತಮ್ಮ ನಾಯಕನ ಜನ್ಮದಿನವನ್ನು ಜನೋಪಯೋಗಿಯಾಗಲು ಬಳಸಿಕೊಂಡಿದ್ದಾರೆ. ವಿಜಯಪುರ ನಗರ ಮಾಜಿ ಶಾಸಕರೂ ಆಗಿರುವ ಅಪ್ಪು ಪಟ್ಟಣಶೆಟ್ಟಿ ಅವರ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸದೇ, ರೋಗಿಗಳಿಗೆ ಅಗತ್ಯವಾಗಿರುವ ರಕ್ತವನ್ನು ಸಂಗ್ರಹಿಸುವ ಮೂಲಕ ಕೊರೊನಾ ಸಂಕಷ್ಟ ಕಾಲದಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ವಿಜಯಪುರ ಜಿಲ್ಲೆ ಅಷ್ಟೇ […]

ಬಹುಭಾಷಾ ತಜ್ಞ ಎ. ಕೆ. ರಾಮಾನುಜನ್ ನಂತರ ಡಾ. ಅರುಣ ಇನಾಮದಾರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಮಾದರಿಯಾಗಿದ್ದಾರೆ- ಹಿರಿಯ ಪತ್ರಕರ್ತ ರಾಜು ವಿಜಾಪುರ

ವಿಜಯಪುರ: ಖ್ಯಾತ ಭಾಷಾ ತಜ್ಞ ಎ. ಕೆ. ರಾಮಾನುಜನ್ ಅವರ ಬಳಿಕ ಶರಣರೊಬ್ಬರ ವಚನಗಳನ್ನು ಇಂಗ್ಲೀಷ್‍ಗೆ ಭಾಷಾಂತರಿಸಿದ ಕೀರ್ತಿ ಡಾ. ಅರುಣ ಇನಾಮದಾರ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಪತ್ರಕರ್ತರಾದ ರಾಜುಅ ವಿಜಾಪುರ ಹೇಳಿದರು. ವಿಜಯಪುರದ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ನಡೆದ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟಗಳನ್ನು, ಬಿ. ಎಂ. ಪಾಟೀಲ್ ಅವರ ಚೇತನಕ್ಕೆ ಸಮರ್ಪಣೆ, ರೇಡಿಯನ್ಸ್ ಆಫ್ ವಚನ(ವಚನ ಪ್ರಭೆ) ಪುಸ್ತಕ ಬಿಡುಗಡೆ ಹಾಗೂ ಸೋಬಗಿನ ಸಂಕ್ರಾಂತಿ […]

ಇಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಜನ್ಮದಿನ- ಕೊರೊನಾ ಮಹಾಮಾರಿಯ ನೋವಿನ ಹಿನ್ನೆಲೆ ಆಚರಣೆ ಬೇಡ ಎಂದ ಜನನಾಯಕ

ವಿಜಯಪುರ: ಇಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಜನ್ಮದಿನ. ಆದರೆ, ತಮ್ಮ ಜನ್ಮದಿನ ಆಚರಣೆ ಬೇಡ. ಅಭಿಮಾನಿಗಳು ಮತ್ತು ಬೆಂಬಲಿಗರು ತಾವಿರುವ ಸ್ಥಳದಿಂದಲೇ ಶುಭ ಹಾರೈಸಿದರೆ ಸಾಕು ಎಂದು ಅಪ್ಪು ಪಟ್ಟಣಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಮನವಿ ಮಾಡಿದ್ದಾರೆ. ಅಪ್ಪು ಪಟ್ಟಣಶೆಟ್ಟಿ ಹಾಕಿರುವ ಪೋಸ್ಟ್ ನಲ್ಲಿ, ನನ್ನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕಾತುರದಿಂದ ಕಾಯುತ್ತಿರುವ ಅಭಿಮಾನಿ ಬಂಧು ಬಳಗಕ್ಕೆ ನನ್ನ ಕೋಟಿ ನಮನಗಳು. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು […]

ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರೀಗ ಕಾನೂನು ರತ್ನಾಕರ ಬಿರುದಾಂಕಿತ

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿಯ ಖ್ಯಾತ ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರಿಗೆ ಕಾನೂನು ರತ್ನಾಕರ ಎಂದು ಅಭಿಮಾನಿಗಳು ಮತ್ತು ಹಿತೈಷಿಗಳು ಬಿರುದು ನೀಡಿ ಗೌರವಿಸಿದ್ದಾರೆ. ಇಂಡಿಯಲ್ಲಿ ಹಾಸನ ಜಿಲ್ಲೆಯ ಕುರುವಂಶದ ಶಾನುಭೋಗ ದಾನಪ್ಪ ದತ್ತಿ ಸಂಘಟನೆ ಮತ್ತು ಇಂಡಿ ತಾಲೂಕುಬ್ರಾಹ್ಮಣರ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕೀರಿಟ ಧಾರಣೆ ಮಾಡಿ ಕಾನೂನು ರತ್ನಾಕರ ಬಿರುದಾಂಕಿತ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷಾತೀತವಾಗಿ ಪಾಲ್ಗೋಂಡ ಜನಪ್ರತಿನಿಧಿಗಳು, ನ್ಯಾಯವಾದಿ ಜಿ. ಎಸ್. ಕುಲಕರ್ಣಿ ಅವರ ಗುಣಗಾನ ಮಾಡಿದರು. ಇಂಡಿ […]

ರಾಜ್ಯದಲ್ಲಿ ಜನಮನ್ನಣೆ ಇಲ್ಲದ ಸರಕಾರದಿಂದ ಜನಪರ ಕಾರ್ಯಕ್ರಮ ಅಸಾಧ್ಯ- ಎಚ್. ಸಿ. ಮಹಾದೇವಪ್ಪ

ವಿಜಯಪುರ: ರಾಜ್ಯದಲ್ಲಿ ಜನಮನ್ನಣೆ ಇಲ್ಲದ ಸರಕಾರ ಅಸ್ತಿತ್ವದಲ್ಲಿದ್ದುದರಿಂದ ಜನಪರ ಕಾರ್ಯಕ್ರಮಗಳನ್ನು ನೀಡಲು ಅಸಾಧ್ಯವಾಗಿದೆ ಎಂದು ಮಾಜಿ ಸಚಿವ ಎಚ್. ಸಿ. ಮಹಾದೇವಪ್ಪ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಲ್ಲ ನಾಯಕರಿಗೆ ಸಿಎಂ ಆಗಬೇಕು ಎನ್ನುವ ಬಯಕೆಯಿದೆ. ಮುಖ್ಯಮಂತ್ರಿ ಸ್ಥಾನ ಎಂದರೆ ಅದೇನು ಸಂತೆಯಲ್ಲಿ ಸಿಗುವ ಬದನೆಕಾಯಿನಾ? ಎಂದು ಸದ್ಯದ ರಾಜ್ಯದ ಬೆಳವಣಿಗೆ ಕುರಿತು ತೀಕ್ಷವಾಗಿ ಪ್ರತಿಕ್ರಿಯೆ ‌ನೀಡಿದರು. ಸಿಎಂ ಸ್ಥಾನ ಸಂವಿಧಾತ್ಮಕ ಹುದ್ದೆ. ಅದಕ್ಕೆ ಅದರದೇ ಆದ ಕಾನೂನು ಚೌಕಟ್ಟು, ಘನತೆ ಇದೆ. ಆ […]

ಮೀನು ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ- ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ ವಿಲಿಯಮ್ಸ್

ವಿಜಯಪುರ ನಗರದ ಹೋಟೆಲ್ ಟೌನ್ ಪ್ಯಾಲೇಸ್ ನಲ್ಲಿ ಮೀನುಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ಬಯೋಪ್ಲಾಕ್ ಭಾರತ, ನವದೆಹಲಿಯ ಬಯೋಪ್ಲಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ನಡೆದ ಜೀವಂತ ಹಾವು ಭತ್ತಿ ಮೀನಿನ(ಸ್ನೇಕ್ ಹೆಡ್ ಫಿಶ್) ಕೋಯ್ಲು ಮತ್ತು ಮಾರುಕಟ್ಟೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಾಣಿಜನ್ಯ ಪ್ರೋಟಿನ್ ಬೇಡಿಕೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಇದರಿಂದ ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವ ಮತ್ತು ಗುಣಮಟ್ಟದ ಪ್ರೋಟಿನ್ ಒದಗಿಸುವುದು ದೊಡ್ಡ ಸವಾಲಾಗಿದೆ ಎಂದು ತಿಳಿಸಿದರು. ಭೂತನಾಳ ಮೀನುಗಾರಿಕೆ ಸಂಶೋಧನಾ ಮತ್ತು […]

ಪ್ರವಾಹ ಪೀಡಿತ ಸ್ಥಳಗಳಿಗೆ ಸಿಎಂ ಭೇಟಿ- ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೀಡಾದ ಆಸ್ತಿಪಾಸ್ತಿ ಕುರಿತು ಮಾಹಿತಿ ನೀಡಿದ ಡಿಸಿಎಂ ಗೋವಿಂದ ಕಾರಜೋಳ

ಬೆಳಗಾವಿ: ಕಳೆದ ಒಂದು‌ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿರಣ್ಯಕೇಶಿ ನದಿಯಲ್ಲಿ ಉಂಟಾದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ಅಹವಾಲು ಆಲಿಸಿದರು. ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಲೆಯಿಂದಾಗಿ ಹಿರಣ್ಯಕೇಶಿ, ಕೃಷ್ಣಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ ಸೇರಿದಂತೆ ಜಿಲ್ಲೆಯ ಸಪ್ತ ನದಿಗಳಲ್ಲಿ ಹಾಗೂ […]

ಪ್ರಕೃತಿಯ ಮಡಿಲಿನಲ್ಲಿ ವಿಹರಿಸಿ ಸಸಿಗೆ ನೀರುಣಿಸಿ ಸಂತಸಪಟ್ಟ ನಡೆದಾಡುವ ದೇವರು- ಆಧುನಿಕ ಭಗೀರಥನ ಪರಿಸರ ಪ್ರೀತಿಗೆ ಶ್ಲಾಘನೆ

ವಿಜಯಪುರ: ಅವರು ನಡೆದಾಡುವ ದೇವರು. ಅವರ ಮಾತುಗಳು ಈ ಭಾಗದಲ್ಲಿ ವೇದವಾಕ್ಯ. ಅವರು ಎದುರಿಗೆ ಕಂಡರೆ ಸಾಕು ಭಕ್ತರು ದೂರದಿಂದಲೇ ನಮಸ್ಕರಿಸುವ ಮೂಲಕ ಭಕ್ತಿಭಾವ ತೋರಿಸುತ್ತಾರೆ. ಈ ನಡೆದಾಡುವ ದೇವರು ಇಂದು ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ವಿಹರಿಸಿದರು. ಅಲ್ಲಿ ಅಭಿವೃದ್ಧಿ ಹೊಂದುತ್ತಿರುವ ವನವನ್ನು ಕಣ್ತುಂಬಿಕೊಂಡರು. ಅಷ್ಟೇ ಅಲ್ಲ, ಅಲ್ಲಿರುವ ಜನರಿಂದ ಮಾಹಿತಿ ಪಡೆದು ಸಂತಸ ವ್ಯಕ್ತಪಡಿಸಿದರು. ಇದು ವಿಜಯಪುರ ನಗರದ ಹೊರವಲಯದ ಕರಾಡದೊಡ್ಡಿಯ ಬಳಿ ಮಾನವ ನಿರ್ಮಿತ ಅರಣ್ಯ ಪ್ರದೇಶದಲ್ಲಿ ನಡೆದ ಘಟನೆ. ಬರಕ್ಕೆ ಹೆಸರಾಗಿರುವ […]

ರಾಜಕೀಯ ಜಂಜಾಟದ ನಡುವೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಶೀಲನೆ ನಡೆಸಿದ ಸಿಎಂ ಬಿ. ಎಸ್. ಯಡಿಯೂರಪ್ಪ

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಜಂಜಾಟದ ನಡುವೆಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪ್ರಶೀಲನೆ ನಡೆಸಿದರು. ಇದೇ ವೇಳೆ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ ಬಿ. ಎಸ್. ಯಡಿಯೂರಪ್ಪ ಅವರಿಂದ ಪ್ರವಾಹ ಹಾನಿಯ ಕುರಿತು ಮಾಹಿತಿ ಪಡೆದು ಅಳಲು ಆಲಿಸಿದರು. ಡಿಸಿಎಂ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, […]