ಸಿಎಂ ಯಡಿಯೂರಪ್ಪ ಪರ 1000ಕ್ಕೂ ಹೆಚ್ಚು ಸ್ವಾಮೀಜಿಗಳು ಬೆಂಬಲಿಕ್ಕಿದ್ದಾರೆ- ಮುಖ್ಯಮಂತ್ರಿ ಬದಲಾವಣೆ ಬೇಡ ಎಂದ ಬಸವ ನಾಡು ಮನಗೂಳಿ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ

ವಿಜಯಪುರ: ರಾಜ್ಯದ 1000 ಕ್ಕೂ ಹೆಚ್ಚು ಜನ ನಾನಾ ಸ್ವಾಮೀಜಿಗಳು ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಬೆಂಬಲಕ್ಕಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡಬಾರದು. ಒಳ್ಳೆಯ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಪೂರ್ಣಾವಧಿಗೆ ಮುಂದುವರೆಸಬೇಕು ಎಂದು ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಮನಗೂಳಿಯಲ್ಲಿ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುತ್ತಿರುವ ಬಿ ಎಸ್ ವೈ […]

ಬಸವ ನಾಡಿನ ಗಾನಯೋಗಿ ಸಂಘದ ಯುವಕರ ಕಾಯಕ ಇತರರಿಗೂ ಪ್ರೇರಕ

ವಿಜಯಪುರ: ಮನಸ್ಸಿದ್ದರೆ ಮಾರ್ಗ. ಯುವಕರು ಕೈ ಜೋಡಿಸಿದರೆ ಎಷ್ಟೋಂದು ಸುಂದರವಾಗಿರುತ್ತೆ ಎಂಬುದಕ್ಕೆ ಪೂರಕ ಈ ಪ್ರಸಂಗ. ಅದು ಯಾರೂ ಊಹಿಸದ ಕಾರ್ಯ. ಅದರ ಅಕ್ಕಪಕ್ಕದಲ್ಲಿಯೇ ವಾಸಿಸುತ್ತರೂ ಜನ ಮಾತ್ರ ಕ್ಯಾರೆ ಎನ್ನುತ್ತಿರಲ್ಲಿ. ಕಸದಿಂದ ರಸ ಎಂಬ ಮಾತಿನಂತೆ ಗಲೀಜಾಗಿದ್ದ ಈ ಪ್ರದೇಶ ಈಗ ಸ್ವಚ್ಛ ಸುಂದರ ಪರಿಸರಕ್ಕೆ ಮಾದರಿಯಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಸವ ನಾಡು ವಿಜಯಪುರ ನಗರದ ಗೌರಿ ಗಣೇಶ ಬಡಾವಣೆಯಲ್ಲೊಂದು ಪ್ರಾಚೀನ ಭಾವಿಯಿತ್ತು. ಆದರೆ, ಸುತ್ತಮುತ್ತಲಿನ ಜನರಿಗೆ ಅದರ ಬಗ್ಗೆ ಕಾಳಜಿಯೇ ಇರಲಿಲ್ಲ. ನಾನಾ ಇಲಾಖೆಗಳು […]

ಬಿಜೆಪಿ ಟ್ವೀಟ್ ಗೆ ಪ್ರತಿಯಾಗಿ ಖಾರವಾಗಿ ಟ್ವೀಟ್ ಮಾಡಿದ ಎಂ. ಬಿ. ಪಾಟೀಲ ಹೇಳಿದ್ದೇನು ಗೊತ್ತಾ?

ವಿಜಯಪುರ: ಬಿಜೆಪಿ ಕರ್ನಾಟಕ ತಮ್ಮ ವಿರುದ್ಧ ಮಾಡಿರುವ ಟ್ವೀಟ್ ಗೆ ಪ್ರತಿಯಾಗಿ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಖಾರವಾಗಿ ಟ್ವೀಟ್ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ವಿರುದ್ಧ ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿತ್ತು. ಎಂ. ಬಿ. ಪಾಟೀಲ ಮತ್ತು ಅವರ ಗುರು ಶ್ರೀ ಸಿದ್ಧರಾಮಯ್ಯ ವೀರಶೈವ ಮತ್ತು […]

ಸಚಿವ ನಿರಾಣಿ ಸಿಎಂ ಖುರ್ಚಿಗಾಗಿ ಬಹಳ ದೊಡ್ಡ ಲಾಬಿ ಮಾಡುತ್ತಿದ್ದಾರೆ- ಯತ್ನಾಳ ಆರೋಪ

ವಿಜಯಪುರ: ಸಿಎಂ ಖುರ್ಚಿಗಾಗಿ ನಿರಾಣಿ ಬಹಳ ದೊಡ್ಡ ಲಾಭಿ ಮಾಡುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ನಿರಾಣಿ ಬಳಿ ಸಿಕ್ಕಾಪಟ್ಟೆ ಹಣವಿದೆ. ಎಲ್ಲರನ್ನೂ ಖರೀದಿ ಮಾಡುತ್ತೇನೆ. ಎಲ್ಲರಿಗೂ ಏನು ಬೇಕಾದರೂ ಕೊಡುತ್ತೇನೆ ಎನ್ನುತ್ತಾರೆ. ಯುವರಾಜ ಎಂವ ವ್ಯಕ್ತಿ ಈಗಾ ಜೈಲಲ್ಲಿದ್ದಾನೆ. ಅದೇ ಯುವರಾಜನ ಮೂಲಕ ಅನೇಕ ಸಿನೆಮಾ ತಾರೆಯರನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದರು. ಜಿಲ್ಲೆಯಲ್ಲಿ ಓರ್ವಳು ಮಹಿಳೆ ಇದ್ದಳು. ಆಕೆ ಜೊತೆಗೆ ಸಂಪರ್ಕ […]

ಸಿಎಂ ಪರ ಬ್ಯಾಟಿಂಗ್ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ

ವಿಜಯಪುರ: ಸಿಎಂ ಬಿ. ಎಸ್. ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಲಿಂಗಾಯಿತ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಕಿಮ್ಮತ್ತಿಲ್ಲ. ಮಂತ್ರಿಯಾಗಬೇಕಾದರೆ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕಾಲು ಹಿಡಿದು ಆಗ್ತಾರೆ. ತಾಕತ್ತಿದ್ದರೇ ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಎಂದು ಲಿಂಗಾಯತರ ಘೋಷಣೆ ಮಾಡಲಿ ಎಂದು ಸವಾಲು […]

ಹಿಟ್ನಳ್ಳಿಯಲ್ಲಿ ಅತ್ಯಧಿಕ 71 ಮಿ. ಮೀ. ಮಳೆ- ಬಸವ ನಾಡಿನಲ್ಲಿ ಉಳಿದೆಡೆ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ರವಿವಾರವೂ ಉತ್ತಮ ಮಳೆ ಸುರಿದಿದೆ‌. ಹಿಟ್ನಳ್ಳಿಯಲ್ಲಿ ಅತ್ಯಧಿಕ 71 ಮಿ. ಮೀ. ಮಳೆ ದಾಖಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ರವಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ ವಿಜಯಪುರ ತಾಲೂಕು ವಿಜಯಪುರ ನಗರ- 11.40 ಮಿ. ಮೀ., ನಾಗಠಾಣ- 9.10 ಮಿ. ಮೀ., ಭೂತನಾಳ- 21.80 ಮಿ. ಮೀ., ಹಿಟ್ನಳ್ಳಿ- 71 ಮಿ. ಮೀ. ಬಬಲೇಶ್ವರ ತಾಲೂಕು ಮಮದಾಪುರ- 31.60 […]

ಯಡಿಯೂರಪ್ಪರನ್ನು ಪದಚ್ಯುತಿ ಮಾಡಿದರೆ ಬಿಜೆಪಿ ವರಿಷ್ಠರು ಲಿಂಗಾಯಿತರ ಅವಕೃಪೆ ಎದುರಿಸಬೇಕಾಗುತ್ತದೆ- ಎಂ. ಬಿ. ಪಾಟೀಲ ಎಚ್ಚರಿಕೆ

ವಿಜಯಪುರ: ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ನಡೆಯುತ್ತಿರುವ ವಿಧ್ಯಮಾನಗಳ ಕುರಿತು ಮಾಜಿಬಸಚಿವ ಮತ್ತು‌ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ‌ ಟ್ವೀಟ್ ಮೂಲಕ‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಎಂ. ಬಿ. ಪಾಟೀಲ, ಕರ್ನಾಟಕ ಮುಖ್ಯಮಂತ್ರಿ @BSYBJP ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ […]

ನಳೀನಕುಮಾರ ಕಟೀಲ ಅವರ ಆಡಿಯೋ ಲೀಕ್ ಪ್ರಕರಣದ ತನಿಖೆಯಾಗಬೇಕು- ಶಾಸಕ ಯತ್ನಾಳ ಆಗ್ರಹ

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುನಾರ ಕಟೀಲ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಪ್ರಕರಣ ಕುರಿತು ತನಿಖೆಯಾಗಬೇಕು ಎಂದು ವಿಜಯಪುರ ನಗರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಅವರು, ನಳಿನಕುಮಾರ ಕಟೀಲ ಅವರು ಪಾಪ ವೈಕ್ತಿಕವಾಗಿ ಏನನ್ನೋ ಮಾತನಾಡಿದ್ದಾರೆ. ಅದು ಅವರ ಧ್ವನಿ ಹೌದೋ? ಅಲ್ಲವೋ ಗೊತ್ತಿಲ್ಲ. ಆಡಿಯೋದಲ್ಲಿರುವ ಧ್ವನಿ‌ ತಮ್ಮದಲ್ಲ ಎಂದು ನಳೀನಕುಮಾರ ಕಟೀಲ‌ ಅವರೇ ಸ್ಪಷ್ಟಪಡಿಸಿದ್ದಾರೆ ಈ ಬಗ್ಗೆ ತನಿಖೆ ಆಗಬೇಕು ಎಂದು ಯತ್ನಾಳ ಆಗ್ರಹಿಸಿದರು. ಖಾಸಗಿಯಾಗಿ […]

ಕಳೆದ 24 ಗಂಟೆಗಳಲ್ಲಿ ಬಸವ ನಾಡಿನಲ್ಲಿ ಸುರಿದ ಮಳೆ ಎಷ್ಟು? ಹವಾಮಾನ ಮುನ್ಸೂಚನೆ ಏನಿದೆ? ಇಲ್ಲಿದೆ ಮಾಹಿತಿ

ವಿಜಯಪುರ: ಶನಿವಾರದಿಂದ ಇಂದಿನವರೆಗೆ ಕಳೆದ 24 ಗಂಟೆಯವರೆಗೆ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಬಸವನ ಬಾಗೇವಾಡಿ ತಾಲೂಕಿನಲ್ಲಿ ಅತ್ಯಧಿಕ 27.,73 ಮಿ. ಮಿ. ಮಳೆಯಾಗಿದ್ದರೆ, ದೇವರ ಹಿಪ್ಪರಗಿ ತಾಲೂಕಿನಲ್ಲಿ ಅತೀ ಕಡಿಮೆ ಅಂದರೆ 3.33 ಮಿ. ಮಿ. ಮಳೆ ದಾಖಲಾಗಿದೆ. ಚಡಚಣ ಪಟ್ಟಣದಲ್ಲಿ ಅತ್ಯಧಿಕ 61 ಮಿ. ಮಿ. ಮಳೆ ದಾಖಲಾಗಿದೆ. ತಾಲೂಕು ಮತ್ತು ಪ್ರಮುಖ ಸ್ಥಳಗಳಲ್ಲಿ ದಾಖಲಾದ ಮಳೆಯ ವಿವರ ಇಂತಿದೆ ವಿಜಯಪುರ ತಾಲೂಕು ವಿಜಯಪುರ ನಗರ- 27.40 ಮಿ. ಮೀ., ಭೂತನಾಳ- 31.40 […]

ಮಾಜಿ ಸಚಿವ ಎಂ. ಬಿ. ಪಾಟೀಲ ನಿವಾಸದಲ್ಲಿ ಪರಿಸರಾಸಕ್ತರ ಉಪಹಾರ ಕೂಟ-ಶೇ. 99 ರಷ್ಟು ಜನ ಪ್ರಕೃತಿಯ ವಿನಾಶದಲ್ಲಿ ತೊಡಗಿದ್ದಾರೆ-ಕೃಷಿ, ಅರಣ್ಯ ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ

ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇ.1ರಷ್ಟು ಜನ ಮಾತ್ರ ಪ್ರಯತ್ನಗಳನ್ನು ನಡೆಸಿದ್ದಾರೆ. ಉಳಿದ ಶೇ.99 ಜನರು ಪ್ರಕೃತಿಯ ವಿನಾಶದದಲ್ಲಿ ನಿರತರಾಗಿದ್ದಾರೆ. ಆದರೆ ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇ.1ರ ಸಂಖ್ಯೆಯನ್ನು ಪ್ರತಿಶತ 10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಾಗಿ ಪ್ರಕೃತಿ ವಿಕೋಪಗಳು ತಪ್ಪುತ್ತವೆ ಎಂದು ಕೃಷಿ, ಅರಣ್ಯ ವಿಜ್ಞಾನಿ ಡಾ. ಚಂದ್ರಶೇಖರ ಬಿರಾದಾರ ಹೇಳಿದರು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಮೂಲದ ಡಾ.ಚಂದ್ರಶೇಖರ ಬಿರಾದಾರ ಸದ್ಯ ಈಜಿಪ್ತನಲ್ಲಿ ನೆಲೆಸಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಮತ್ತು […]