ಭಾರತದಲ್ಲೂ ಪಿಕಲ್‌ಬಾಲ್ ಆಟವನ್ನು ಜನಪ್ರಿಯಗೊಳಿಸಲು ಆಲ್ ಇಂಡಿಯಾ ಪಿಕಲ್‌ಬಾಲ್ ಅಸೋಸಿಯೇಷನ್‌ನೊಂದಿಗೆ ಸಹಯೋಗ
ಬೆಂಗಳೂರು: ವಿಶ್ವದೆಲ್ಲೆಡೆ ಹೆಚ್ಚು ಚಾಲ್ತಿಯಲ್ಲಿರುವ ಪಿಕಲ್‌ಬಾಲ್ ಆಟವನ್ನು ಭಾರತದಲ್ಲೂ ಪ್ರಸಿದ್ಧಿಗೆ ತರುವ ಉದ್ದೇಶದಿಂದ ಆಲ್ ಇಂಡಿಯಾ ಪಿಕಲ್‌ಬಾಲ್ ಅಸೋಸಿಯೇಷನ್ ಐಟಿಸಿ ಅವರ ಬಿಂಗೋ ತಿಂಡಿಯೊಂದಿಗೆ ಸಹಯೋಗತ್ವವನ್ನು ಘೋಷಿಸಿದೆ. ಬಿಂಗೊ ಸಹಭಾಗಿತ್ವದಲ್ಲಿ ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ ಗೆ ನಟಿ ಮಂದಿರಾ ಬೇಡಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಐಟಿಸಿ ಸ್ನ್ಯಾಕ್ಸ್, ನೂಡಲ್ಸ್ ಮತ್ತು ಪಾಸ್ಟಾ ವಿಭಾಗದ ವಿಪಿ ಸುರೇಶ್ ಚಂದ್, ವಿಶ್ವ ಪಿಕಲ್‌ಬಾಲ್ ಚಾಂಪಿಯನ್‌ಶಿಪ್ (WPC), ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಗಳಲ್ಲಿ ಒಂದಾಗಿದ್ದು, ಈ ಕ್ರೀಡೆಯನ್ನು […]
ಡಿ. 14ರಂದು ವಿಜಯಪುರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ
ವಿಜಯಪುರ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಡಿ. 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ಅವರು ತಿಳಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಎ ಡಿ ಆರ್ ಕಟ್ಟಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಾಲತನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ […]
ಪತ್ರಕರ್ತರು ಸಮಾಜಮುಖಿ ಕೆಲಸ ಮಾಡಬೇಕು- ಹಿರಿಯ ಪತ್ರಕರ್ತ ಗೋಪಾಲ ನಾಯಕ
ವಿಜಯಪುರ: ಪತ್ರಿಕೋದ್ಯಮ ವೃತ್ತಿ ವೃತ್ತಿಯಾಗಿದ್ದು, ಪತ್ರಕರ್ತರಾದವರು ಸಮಾಜಮುಖಿ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದ್ದಾರೆ. ನಗರದ ಜಿ. ಪಂ. ಬಳಿ ಇರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ಪವಿತ್ರ ವೃತ್ತಿಯಾಗಿದೆ. ಇಂಥ ಮಹತ್ವದ ಪತ್ರಿಕಾಧರ್ಮ ನಿಭಾಯಿಸುವ ಪತ್ರಕರ್ತರಲ್ಲಿ ಕೆಟ್ಟ ವಿಚಾರಗಳು, ಸಮಾಜಕ್ಕೆ ಧಕ್ಕೆ ತರುವ ಭಾವನೆಗಳು ಇರಬಾರದು. […]
ಲಕ್ಷ್ಮಣ ನಿಂಬರಗಿ ವಿಜಯಪುರ ನೂತನ ಎಸ್ಪಿಯಾಗಿ ವರ್ಗಾವಣೆ
ವಿಜಯಪುರ: 2014ರ ಬ್ಯಾಚಿನ ಐಪಿಎಸ್ ಅಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ವಿಜಯಪುರ ನೂತನ ಎಸ್ಪಿಯಾಗಿ ಸರಕಾರ ವರ್ಗಾವಣೆ ಮಾಡಿದೆ. ರಾಜ್ಯ ಕ್ರೈಂ ಬ್ಯೂರೊ ಎಸ್ಪಿಯಾಗಿರುವ ಲಕ್ಷ್ಮಣ ನಿಂಬರಗಿ ಅವರನ್ನು ಈಗ ವಿಜಯಪುರ ನೂತನ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಲಕ್ಷ್ಮಣ ನಿಂಬರಗಿ ಅವರು ಇದಕ್ಕೂ ಮುಂಚೆ ಬೆಳಗಾವಿ ಮತ್ತು ಬಳ್ಳಾರಿ ಎಸ್ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆಯ್ಕೆ ಮಾಡಿದ ಮತದಾರರ ಋಣ ತೀರಿಸುವ, ಉಭಯ ಜಿಲ್ಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ- ಸುನೀಲಗೌಡ ಪಾಟೀಲ
ಬಾಗಲಕೋಟೆ: ಆಯ್ಕೆ ಮಾಡಿರುವ ಮತದಾರರು ಮತ್ತು ಉಭಯ ಜಿಲ್ಲೆಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುನೀಲಗೌಡ ಪಾಟೀಲ ರವರನ್ನು ಸನ್ಮಾನಿಸಲಾಯಿತು, ನನ್ನ ವಿಧಾನ ಪರಿಷತ್ ಶಾಸಕತ್ವದ ಅವಧಿ ಇನ್ನೂ ನಾಲ್ಕು ವರ್ಷವಿದೆ. ಈ ಸಮಯವನ್ನು ನನ್ನ ಮೇಲೆ ಭರವಸೆ ಇಟ್ಟು ವಿಧಾನ ಪರಿಷತ್ ಗೆ ಕಳಿಸಿದ ವಿಜಯಪುರ ಮತ್ತು ಬಾಗಲಕೋಟೆ ಉಭಯ […]
ಮುದ್ದೇಬಿಹಾಳ, ಬಸವನ ಬಾಗೇವಾಡಿ, ಮನಗೂಳಿಗೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ ಭೇಟಿ, ಪರಿಶೀಲನೆ
ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಂಗಳವಾರ ಮುದ್ದೇಬಿಹಾಳ ಪುರಸಭೆಗೆ ಭೇಟಿ ನೀಡಿ, ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಸ ವಿಲೇವಾರಿ ಘಟಕ, ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ನಂತರ ಬಸವನ ಬಾಗೇವಾಡಿಗೆ ಭೇಟಿ ನೀಡಿ ಬಸ್ ನಿಲ್ದಾಣದ ಹತ್ತಿರ ಇರುವ ಇಂದಿರಾ ಕ್ಯಾಂಟಿನ್ ವೀಕ್ಷಣೆ ಮಾಡಿದ ಅವರು, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ […]
ಬಸವ ನಾಡಿಗೆ ವಂದೇ ಭಾರತ ರೈಲು ಕಾರ್ಯಸಾಧುವಲ್ಲ- ರೇಲ್ವೆ ಇಲಾಖೆ ಉತ್ತರಕ್ಕೆ ಶಾಸಕ ಸುನೀಲಗೌಡ ಪಾಟೀಲ ಆಕ್ರೋಶ
ವಿಜಯಪುರ: ವಿಜಯಪುರ-ಬಾಗಲಕೋಟೆ-ಬೆಂಗಳೂರು ಮತ್ತು ಮುಂಬಯಿ-ವಿಜಯಪುರ ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ರೇಲ್ವೆ ಇಲಾಖೆ ತಿಳಿಸಿದ್ದು, ಇದು ಕೇಂದ್ರ ಸರಕಾರ ಬಸವನಾಡಿನ ಬಗ್ಗೆ ಹೊಂದಿರುವ ಮಲತಾಯಿ ಧೋರಣಗೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ-ಬಾಗಲಕೋಟೆ-ಬೆಂಗಳೂರು ಮಧ್ಯೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬಯಿ-ಸೋಲಾಪುರ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ […]
ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು: ರೂ. 52 ಕೋ. ವೆಚ್ಚದಲ್ಲಿ 10 ಕಿ. ಮೀ ಕೊಳವೆ ಮಾರ್ಗ ಬದಲಾವಣೆಗೆ ಒಪ್ಪಿಗೆ- ಎಂ. ಬಿ. ಪಾಟೀಲ
ಬೆಂಗಳೂರು: ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ರೂ. 52 ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್. ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ […]
ವಕ್ಫ್ ವಿಚಾರ: ಯತ್ನಾಳ ಹೋರಾಟಕ್ಕೆ ಈಶ್ವರಪ್ಪ ಬೆಂಬಲ- ಸಿಎಂ, ಜಮೀರ್ ಅಹ್ಮದಖಾನ್ ವಿರುದ್ಧ ವಾಗ್ದಾಳಿ
ವಿಜಯಪುರ: ವಕ್ಪ್ ಕಾಯಿದೆ ವಿರೋಧಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಜಯಪುರ ನಗರದಲ್ಲಿ ನಡೆಸುತ್ತಿರುವ ಅಹೋರಾತ್ರಿ ಹೋರಾಟಕ್ಕೆ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ಕರ್ನಾಟಕಕ್ಕೆ ಸ್ಫೂರ್ತಿ ಕೊಡೋ ಜನ ಕಾರ್ಯಕರ್ತರು ಇಲ್ಲಿದ್ದಾರೆ. ಪಹಣಿಯಲ್ಲಿ ವಕ್ಪ್ ಬೋರ್ಡ್ ಎಂದು ಮಾಡಿದ್ದಕ್ಕೆ ರಾಜ್ಯದ ಕಾಂಗ್ರೆಸ್ ಸಚಿವರಿಗೂ ಸಮಾಧಾನ ಇಲ್ಲ. ಖುರ್ಚಿ ಆಸೆಗಾಗಿ ಸುಮ್ಮನಿದ್ದಾರೆ. ನಿಮಗೆ ಖರ್ಚಿನೇ […]
ವಕ್ಫ್ ವಿಚಾರ: ಬಿಜೆಪಿ ಹೇಳುವುದೊಂದು, ಮಾಡುವುದೊಂದು ಧೋರಣೆ ಅನುಸರಿಸುತ್ತಿದೆ- ಪ್ರೊ. ರಾಜು ಆಲಗೂರ ವಾಗ್ದಾಳಿ
ವಿಜಯಪುರ: ಚುನಾವಣೆ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುವುದಾಗಿ ಬಿಜೆಪಿ ಹೇಳಿತ್ತು. ಆದರೆ, ಈಗ ಆ ಪಕ್ಷದ ಮುಖಂಡರು ವಕ್ಫ್ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈಗ ವಕ್ಫ್ ಹೋರಾಟದಲ್ಲಿ ಭಾಗಿಯಾಗುವ ಯಾವ ನೈತಿಕತೆಯೂ ಇಲ್ಲ. ವಕ್ಪ್ ಆಸ್ತಿ ಸಂರಕ್ಷಣೆ ಮತ್ತು […]