ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಜೂ. 15 ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ಶರಣ ಸಂಕಲ್ಪ ನೃತ್ಯರೂಪಕ

ವಿಜಯಪುರ: ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ಶರಣ ಸಂಕುಲ ನೃತ್ಯರೂಪಕ ಕಾರ್ಯಕ್ರಮ ದಿ.15 ಶನಿವಾರ ಸಂ. 6.30ಕ್ಕೆ ಟೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ.  ಕಳೆದ 25 ವರ್ಷಗಳಿಂದ ದೇಶಾದ್ಯಂತ 12ನೇ ಶತಮಾನದ ಶಿವಶರಣರ ತತ್ವಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೃತ್ಯ, ಸಂಗೀತ ಮತ್ತು ಅಭಿನಯಗಳ ಮೂಲಕ ಪ್ರದರ್ಶಿಸುವ ಶರಣಸಂಕುಲ ಕಾರ್ಯಕ್ರಮ ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಅಕ್ಕಮಹಾದೇವಿಗೆ […]

ಖಾಸಗಿ ಆಸ್ಪತ್ರೆಗಳಿಗೆ ಕೆಪಿಎಂಇ ನೋಂದಣಿ ಫಲಕ ಕಡ್ಡಾಯ- ಡಿಸಿ ಟಿ. ಭೂಬಾಲನ್

ವಿಜಯಪುರ: ಜಿಲ್ಲೆಯ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳು ಕಡ್ಡಾಯವಾಗಿ ಕೆಪಿಎಂಇ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ) ಕಾಯ್ದೆ -2018 ರ ಅಡಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಪಿಎಂಇ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳು, ಪ್ರಯೋಗಾಲಯ, ನರ್ಸಿಂಗ್ ಹೋಮ್ ಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಬೇಕು. ನಕಲಿ ವೈದ್ಯರ […]

ಎರಡೂ ಕಿವಿಗಳಲ್ಲೂ ಶ್ರವಣದೋಷ: ನೈಜೀರಿಯನ್ ಯುವತಿಗೆ ಯಶಸ್ವಿ ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ನಡೆಸಿದ ಫೋರ್ಟಿಸ್‌ ವೈದ್ಯರು

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲಿ ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ. ಎಚ್. ಕೆ. ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು. ಈ ಕುರಿತು […]

ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಸಿಎಂ ಎಸ್. ಸಿದ್ಧರಾಮಯ್ಯ ಸ್ಪಷ್ಟ ಸೂಚನೆ

ಬೆಂಗಳೂರು: ಅಬಕಾರಿ ಪರವಾನಗಿಗಳ ನವೀಕರಣಕ್ಕೆ ಸನ್ನದುದಾರರಿಗೆ ಕಿರುಕುಳ ನೀಡಬಾರದು. ನೆರೆ ರಾಜ್ಯಗಳಿಂದ ಕರ್ನಾಟಕಕ್ಕೆ ಕಳ್ಳಸಾಗಾಣಿಕೆ ಮೂಲಕ ನುಸುಳುವ ಮದ್ಯವನ್ನು ಕಡ್ಡಾಯವಾಗಿ ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಈ ಸೂಚನೆ ನೀಡಿದರು. ಇಲಾಖೆಯ ತೆರಿಗೆ ಸಂಗ್ರಹ ಸಾಮರ್ಥ್ಯವನ್ನು ಆಧರಿಸಿಯೇ ನಿಗದಿ ಪಡಿಸುವ ಗುರಿ ತಲುಪಲು ಅಧಿಕಾರಿಗಳು ಗರಿಷ್ಠ ಪ್ರಯತ್ನ ಮಾಡಬೇಕು ಎಂದು ಅವರು‌ ಸೂಚಿನೆ ನೀಡಿದರು. ಚುನಾವಣೆ ನೀತಿ […]

ಇಂಡಿ, ಚಡಚಣ, ಸಿಂದಗಿ ತಾಲೂಕುಗಳ ಹಲವೆಡೆ ಭಾರಿ ಮಳೆ- ಕೆಲವೆಡೆ 100 ಮಿ. ಮೀ. ಗೂ ಹೆಚ್ಚು ಮಳೆ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ‌ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ಇಂಡಿ ತಾಲೂಕಿನ ಅಲ್ಲಲ್ಲಿ ಭಾರಿ ಮಳೆಯಾಗಿದೆ. ನಿಂಬಾಳ ಕೆಡಿ ಯಲ್ಲಿ ಅತ್ಯಧಿಕ 128 ಮಿ. ಮಿ. ಅಂದರೆ 13.80 ಸೆಂ. ಮೀ. ಮಳೆ ದಾಖಲಾಗಿದೆ. ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ. 1. ಇಂಡಿ ತಾಲೂಕು- ನಿಂಬಾಳ ಕೆ. ಡಿ- 128 ಮಿ. ಮೀ. 2. ಇಂಡಿ ತಾಲೂಕು- […]

ಬಸವನಾಡಿನಲ್ಲಿ ಮುಂದುವರೆದ ಮಳೆ: ಆಲಮಟ್ಟಿಯಲ್ಲಿ ಅತ್ಯಧಿಕ 9.50 ಸೆಂ. ಮೀ., ಹಡಲಗೇರಿಯಲ್ಲಿ 4 ಸೆಂ. ಮಿ. ಮಳೆ. ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ‌ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಅತ್ಯಧಿಕ 9.65 ಸೆಂ. ಮೀ. ಮಳೆಯಾಗಿದ್ದು, ಮುದ್ದೇಬಿಹಾಳ ತಾಲೂಕಿನ‌ ಹಡಲಗೇರಿಯಲ್ಲಿ 4 ಸೆಂ. ಮೀ. ಮಳೆ ದಾಖಲಾಗಿದೆ. ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ. 1. ಕೊಲ್ಹಾರ ತಾಲೂಕು- ಆಲಮಟ್ಟಿ 9.65 ಸೆಂ. ಮೀ 2. ತಿಕೋಟಾ ತಾಲೂಕು- ತಾಜಪುರ ಎಚ್- 7.05 ಸೆಂ. […]

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ ಇನ್ನಿಲ್ಲಃ ಅನ್ನದಾತನ ಅಗಲಿಗೆ ನೋವು ತಂದಿದೆ ನಮಗೆಲ್ಲ

ಮಹೇಶ ವಿ. ಶಟಗಾರ ವಿಜಯಪುರ: ಮಾಧ್ಯಮ ಲೋಕದ ದಿಗ್ಗಜ, ದೇಶಕ್ಕೆ ಸಾವಿರಾರು ಪತ್ರಕರ್ತರನ್ನು ನೀಡಿದ ಈ ನಾಡು ಸಂಸ್ಥೆ ಸ್ಥಾಪಿಸುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ರಾಮೋಜಿ ರಾವ(87) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4.50ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮೋಜಿ ರಾವ ಈಗ ನೆನಪು ಮಾತ್ರ ರಾಮೋಜಿ ರಾವ ಇನ್ನಿಲ್ಲ ಎಂಬ ಎಂಬ ಸುದ್ದಿ ತೀವ್ರ ದುಃಖ ತಂದಿದೆ.  ನನ್ನಂಥ ಹಲವರು 2000ನೇ ಈ ದಿನ ಅಂದರೆ ಜೂನ್ 8 ರಂದು […]

ವಿಜಯಪುರ ಜಿಲ್ಲಾದ್ಯಂತ ಮಳೆ: ತಡವಲಗಾದಲ್ಲಿ ಅತ್ಯಧಿಕ 8.50 ಸೆಂ. ಮೀ., ಚಡಚಣದಲ್ಲಿ 3.50 ಸೆಂ. ಮಿ. ಮಳೆ. ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಬಸವನಾಡು ವಿಜಯಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.  ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾದಲ್ಲಿ ಅತ್ಯಧಿಕ 8.50 ಸೆಂ. ಮೀ. ಮಳೆಯಾಗಿದ್ದು, ಚಡಚಣ ಪಟ್ಟಣದಲ್ಲಿ 3.50 ಸೆಂ. ಮೀ. ಮಳೆ ದಾಖಲಾಗಿದೆ.     ಇದೇ ರೀತಿ ಜಿಲ್ಲಾದ್ಯಂತ ಕೂಡ ಅತ್ಯುತ್ತಮ ಮಳೆಯಾಗಿದೆ.  ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆ ದಾಖಲಾದ ಸ್ಥಳಗಳ ಮಾಹಿತಿ ಇಲ್ಲಿದೆ. ಇಂಡಿ ತಾಲೂಕು- ತಡವಲಗಾ- 8.50 ಸೆಂ. ಮೀ ಇಂಡಿ ತಾಲೂಕು- ಬೆನಕನಹಳ್ಳಿ- 3.60 ಸೆಂ. ಮೀ. ಇಂಡಿ ತಾಲೂಕು- ಲಾಳಸಂಗಿ- 4.40 […]

ಜ್ಞಾನದಾಹ: 83ನೇ ಇಳಿ ವಯಸ್ಸಿನಲ್ಲಿ 5ನೇ ಎಂ ಎ ಪರೀಕ್ಷೆ ಬರೆದ ಹಿರಿಯ ನಾಗರಿಕ- ಇವರು ಎಲ್ಲರಿಗೂ ಮಾದರಿ

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ. ಎಸ್. ಎಸ್. ಮಹಾವಿದ್ಯಾಲಯದಲ್ಲಿರುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(ಇಗ್ನೊ) ಕೇಂದ್ರ ಆಯೋಜಿಸಿರುವ ಎಂ. ಎ. ಇಂಗ್ಲಿಷ್ ಪರೀಕ್ಷೆಗೆ 83 ವರ್ಷ ಮತ್ತು 68 ವರ್ಷದ ಹಿರಿಯರು ಹಾಜರಾಗಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.  ಇಂದು ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಇಂಗ್ಲಿಷ್ ಪರೀಕ್ಷೆ ನಡೆಯಿತು.  ಈ ವೇಳೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಡೂರಿನ 83 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ವಿಜಯಪುರ […]

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳಿಗೆ ಚಾಲನೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (BLR ವಿಮಾನ ನಿಲ್ದಾಣ) ರಿಫೆಕ್ಸ್‌ ಇವೀಲ್ಜ್‌ (Refex eVeelz) ಸಹಯೋಗದೊಂದಿಗೆ ಈ ಬಾರಿ ವಿಶ್ವ ಪರಿಸರ ದಿನದ ಪ್ರಯುಕ್ತ ನೂತನವಾಗಿ ಎಲೆಕ್ಟ್ರಿಕ್‌ ಏರ್‌ಪೋರ್ಟ್‌ ಟ್ಯಾಕ್ಸಿಗಳನ್ನು ಪರಿಚಯಿಸಿದೆ. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಒಟ್ಟು 75 ಕಾಂಪ್ಯಾಕ್ಟ್‌ SUV ಎಲೆಕ್ಟ್ರಿಕ್‌ ಟ್ಯಾಕ್ಸಿಗಳಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ಬಿಐಎಎಲ್‌ನ ಸಿಇಒ ಹರಿ ಮರಾರ್, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ. ಚಾಲನೆ ನೀಡಿದರು. ಬಳಿಕ ಮಾತನಾಡಿದ […]