ಬೆಂಗಳೂರು ಸಮಸ್ಯೆಗಳಿಗೆ ನಿಮ್ಮ ಬಳಿ ಪರಿಹಾರವಿದೆಯೇ? ನೀವೂ ನಮ್ಮ ಬೆಂಗಳೂರು ಚಾಲೆಂಜ್‌ ನಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಟ್ರಾಫಿಕ್ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿಭಿನ್ನ ಆಲೋಚನೆ, ಐಡಿಯಾ ನಿಮ್ಮಲ್ಲಿದೆಯೇ? ಹಾಗಿದ್ದರೆ ಇಲ್ಲಿದೆ ಉತ್ತಮ ಅವಕಾಶ. ಅನ್‌ಬಾಕ್ಸಿಂಗ್‌ ಬೆಂಗಳೂರು ಹಾಗೂ WT ಫಂಡ್‌ ಸಹಯೋಗದೊಂದಿಗೆ ಬೆಂಗಳೂರು ಸಮಸ್ಯೆಗೆ ಪರಿಹಾರ ಸೂಚಿಸುವ ಐದು ವಿಭಿನ್ನ ಆಲೋಚನೆಗಳಿಗೆ ತಲಾ 10 ಲಕ್ಷ ರೂ ಅನುದಾನ ನೀಡುವ “ನಮ್ಮ ಬೆಂಗಳೂರು ಚಾಲೆಂಜ್‌” ಉಪಕ್ರಮವನ್ನು ಘೊಷಣೆ ಮಾಡಿದೆ. ಉತ್ತಮ ಐಡಿಯಾ ನೀಡುವ 5 ವ್ಯಕ್ತಿಗಳು ಅಥವಾ ಸ್ಟಾರ್ಟ್‌ಅಪ್‌ ಅಥವಾ ಸಮುದಾಯ […]

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭ್ರಷ್ಟಾಚಾರದ ತುತ್ತ ತುದಿಗೆ ಹೋಗಿದ್ದಾರೆ- ಈಶ್ವರಪ್ಪಗೆ ಮಾಡಿದ ಅನ್ಯಾಯದ ಪಾಪ ಅವರಿಗೆ ಬೆನ್ನು ಹತ್ತಿದೆ ಶಾಸಕ ಯತ್ನಾಳ

ವಿಜಯಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಭ್ರಷ್ಟಾಚಾರದ ತುತ್ತ ತುದಿಗೆ ಹೋಗಿದ್ದಾರೆ.  ಹಿಂದೆ ಮಾಡಿದ ಪಾಪದ ಫಲ ಅವರನ್ನು ಕಾಡುತ್ತಿದೆ ಎಂದು ವಿಜಯಪರು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ. ವಿಜಯಪುರದಲ್ಲಿ ವಕ್ಫ್ ಕಾನೂನು ವಿರೋಧಿಸಿ ಹೋರಾಟ ನಡೆಸುತ್ತಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ಎಫ್ ಡಿಎ ಆತ್ಮಹತ್ಯೆ ಮತ್ತು ಈ ಪ್ರಕರಣದ ಡೆತ್ ನೋಟ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪಿಎ ಸೋಮು […]

ಬಸವ ನಾಡಿನಲ್ಲಿ ಮಾದರಿ ಅಂಗನವಾಡಿಗಳ ಅಭಿವೃದ್ಧಿ ಕ್ರಮ: ಜಿ. ಪಂ ಸಿಇಒ ರಿಷಿ ಆನಂದ

ವಿಜಯಪುರ: ಜಿಲ್ಲೆಯಲ್ಲಿ ಮಾದರಿ ಅಂಗನವಾಡಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 34 ಅಂಗನವಾಡಿಗಳನ್ನು ಮಾದರಿ ಹಾಗೂ ಆಕರ್ಷಕ ಅಂಗನವಾಡಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವು ಅತ್ಯಂತ ಸದೃಢವಾಗುವುದರ ಜೊತೆಗೆ ಮಕ್ಕಳ ಹಾಜರಾತಿಯ ನಿರಂತರತೆಯನ್ನು ಕಾಯ್ದುಕೊಂಡು […]

ಭೂತ್ನಾಳ ಕೆರೆ, ಬೇಗಂ ತಾಲಾಬ್ ಗಳಿಗೆ ಸಚಿವ ಎಂ. ಬಿ. ಪಾಟೀಲ ಭೇಟಿ- ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ವಿಜಯಪುರ: ಭೂತ್ನಾಳ ಕೆರೆ ಮತ್ತು ಬೇಗಂ ತಾಲಾಬ್ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಶನಿವಾರ ಬೆಳಿಗ್ಗೆ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶ, ಭೂತನಾಳ ಕೆರೆ, ಐತಿಹಾಸಿಕ ಬೇಗಂ ಕೆರೆಗಳಿಗೆ ಅವರು ಭೇಟಿ ನೀಡಿದರು. ಮೊದಲಿಗೆ ಭೂತ್ನಾಳ ಕೆರೆಯ ಹಿಂಭಾಗದಲ್ಲಿರುವ ಕರಾಡದೊಡ್ಡಿ ಮಾನವ […]

ನಟ ವಿಶ್ವಪ್ರಕಾಶ ಟಿ ಮಲಗೊಂಡಗೆ ರಾಜ್ಯೋತ್ಸವ ಪ್ರಶಸ್ತಿ- ಆಲಮೇಲದ ಕಾರ್ಯಕ್ರಮದಲ್ಲಿ ಪ್ರದಾನ

ವಿಜಯಪುರ : ನಟ ನಿರ್ದೇಶಕ ವಿಶ್ವಪ್ರಕಾಶ ಟಿ. ಮಲಗೊಂಡ ಅವರನ್ನು ಕರ್ನಾಟಕ ಸಂಭ್ರಮ 50 ರ ಸವಿನೆನಪಿನಲ್ಲಿ  ಆಲಮೇಲ ತಾಲೂಕು ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪತ್ರ ನೀಡಿ ತಹಸೀಲ್ದಾರ ಕೆ. ವಿಜಯಕುಮಾರ ಸನ್ಮಾನಿಸಲಾಯಿತು. ಆಲಮೇಲ ತಹಸೀಲ್ದಾರ ಕಚೇರಿ ಆವರಣದಲ್ಲಿ ನಡೆದ 2024ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರರಂಗದ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಎಸ್ಐ ಅರವಿಂದ ಅಂಗಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ತಾ.ಪಂ […]

ವಕ್ಫ್ ವಿಚಾರದಲ್ಲಿ ಬಿಜೆಪಿಯಿಂದ ಅಪಪ್ರಚಾರ- ಕಾಯಿದೆ ತಿಳಿದುಕೊಂಡು ಮಾತನಾಡಲಿ- ಎಸ್. ಎಂ. ಪಾಟೀಲ ಗಣಿಹಾರ

ವಿಜಯಪುರ: ವಕ್ಫ್ ನೊಟೀಸ್ ವಿಚಾರದಲ್ಲಿ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದು, ಈ ಕಾಯಿದೆಯನ್ನು ಸಂಪೂರ್ಣ ತಿಳಿದುಕೊಂಡು ಮಾತನಾಡಬೇಕು ಎಂದು ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಕ್ಫ್ ಮಂತ್ರಿ ಜಮೀರ ಅಹ್ಮದ್ ಖಾನ್ ವಿಜಯಪುರಕ್ಕೆ ಬಂದು ವಕ್ಫ್ ಅದಾಲತ ಮಾಡಿದ ಬಳಿಕ ಈ ಗೊಂದಲ ಸೃಷ್ಠಿ ಮಾಡಲಾಗಿದೆ.  ಸಚಿವರು ಮುತುವಲ್ಲಿಗಳ ಆಸ್ತಿಗಳ ದಾಖಲಾತಿ ಬಗ್ಗೆ ವಕ್ಫ್ ಅದಾಲತ ಮಾಡಿದ್ದರು.  ವಕ್ಫ್ ಆಸ್ತಿಗಳ ಬಗ್ಗೆ ಅಲ್ಲ.  ಈ ವಕ್ಫ್ ಅದಾಲತ್ ಗೂ […]

ಬಿಜೆಪಿ ಮುಖಂಡರ ಜಂಟಿ ಸುದ್ದಿಗೋಷ್ಠಿ- ನ. 4ರ ವಕ್ಫ್ ಕಾಯಿದೆ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಮುಖಂಡರು

ವಿಜಯಪುರ: ವಕ್ಫ್ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು.  ನವೆಂಬರ್ 4 ರಂದು ಸೋಮವಾರ ಭಾರತೀಯ ಕಿಸಾನ ಸಂಘಕ್ಕೆ ಬಂಬಲಿಸಿ ಪ್ರತಿಭಟನೆಯಲ್ಲಿ ನಾವೂ ಭಾಗಿಯಾಗಲಿದ್ದೇವೆ.  ಈ ಮೂಲಕ ಜನಜಾಗೃತಿ ಮಾಡೂಲಿಸುವುದು, […]

ವಕ್ಫ್ ನೊಟೀಸ್ ವಿಚಾರ: ನ. 4 ಸೋಮವಾರದಿಂದ ಅಹೋರಾತ್ರಿ ಧರಣಿ ಆರಂಭಛ ಶಾಸಕ ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ನವೆಂಬರ್ 4 ಸೋಮವಾರದಿಂದ ಬೆ. 11 ಕ್ಕೆ ವಿಜಯಪುರ ನಗರದ ಶ್ರೀ ಸಿದ್ದೇಶ್ವರ ಗುಡಿಯಿಂದ ಮೆರವಣಿಗೆ ಮೂಲಕ ತೆರಳಿ ನಗರದ ಜಿಲ್ಲಾಧಿಕಾರಿ ಕಚೇರಿ ಹೊರಭಾಗದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. […]

ನೋಟೀಸುಗಳನ್ನು ವಾಪಸ್ ಪಡೆಯುವಂತೆ ವಕ್ಫ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್

ವಿಜಯಪುರ: ರೈತರಿಗೆ ನೀಡಲಾಗಿರುವ ನೋಟೀಸ್ ನ್ನು ಹಿಂಪಡೆಯುವಂತೆ ಸಿಎಂ ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ. ಝ್. ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ವಿಜಯಪುರದಲ್ಲಿ ತಮ್ನನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ವಕ್ಪ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನನ್ನನ್ನು ಸಹ ಮೀಟಿಂಗ್ ಗೆ ಕರೆದಿದ್ದರು.  ಆದರೆ, ನಾನು ಸಂಡೂರಿನಲ್ಲಿದ್ದ ಕಾರಣ ಹೋಗಲು ಆಗಿಲ್ಲ.  ಹೀಗಾಗಿ ಸಿಎಂ ಮೀಟಿಂಗ್ ಮಾಡಿ ನಿರ್ಧಾರ ತಗೆದುಕೊಂಡಿದ್ದಾರೆ.  ಎಲ್ಲ ನೋಟಿಸ್ […]

ಸ್ನೇಹ ಸಂಬಂಧ ಎಲ್ಲದಕ್ಕಿಂತ ಮಿಗಿಲು- ಶಾಸಕ ಸುನೀಲಗೌಡ ಪಾಟೀಲ

ವಿಜಯಪುರ: ಗೆಳೆತನ ಎಲ್ಲಕ್ಕಿಂತ ಮಿಗಿಲು.  ಶ್ಲಾಘಿಸಿದರೆ ಹಿಗ್ಗದೆ, ಟೀಕಿಸಿದರೆ ಕುಗ್ಗದೆ ಸದಾ ಮಂದಸ್ಮಿತರಾಗಿರುವ ವ್ಯಕ್ತಿಗಳು ಸಿಗುವುದು ಅಪರೂಪ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ನಗರದ ಐಓಸಿ ಬಳಿಯ ಮಹಾಲ ಬಾಗಾಯತ ಕೈಗಾರಿಕೆ ಪ್ರದೇಶದಲ್ಲಿ ಶುಕ್ರವಾರ ನಡೆದ ಮೇ. ರಜನಿ ಸ್ಟೀಲ್ ವರ್ಕ್ಸ್ 29ನೇ ವರ್ಷದ ಸಂಭ್ರಮಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸ್ನೇಹಜೀವಿ ಡಾ. ಗಂಗಾಧರ ಸಂಬಣ್ಣಿ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಟ್ರೇಲರ್ ಗಳು ಎಲ್ಲ ಕಂಪನಿಯ ಟ್ರ್ಯಾಕ್ಟರ್ […]