ಮಕ್ಕಳ ಸೂಪ್ತ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ: ಜಿಲ್ಲಾಧಿಕಾರಿ ಟಿ. ಭೂಬಾಲನ್

ವಿಜಯಪುರ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಮಗುವಿನಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ […]

ಸಿಂದಗಿ ಮತಕ್ಷೇತ್ರಾದ್ಯಂತ ತೆರಳಿ ಸ್ವಗ್ರಾಮ ಯತ್ನಾಳಕ್ಕೆ ಮರಳಿದ ಜೋಡೆತ್ತಿನ ರೈತರ ನಂದಿ ಯಾತ್ರೆ

ವಿಜಯಪುರ: ಎತ್ತುಗಳ ಸಂತತಿಯನ್ನು ಉಳಿಸಿ ಬೆಳೆಸುವ ಸಂದೇಶವನ್ನು ಹೊತ್ತು ಯತ್ನಾಳ ಗ್ರಾಮದ ರೈತರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿ ರಥ ಏಳು ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ತೆರಳಿ ಸ್ವಗ್ರಾಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಯತ್ನಾಳ ರೈತರು ಒಂದು ವಾರಗಳ ಕಾಲ ಸಿಂದಗಿ ಮತಕ್ಷೇತ್ರಾದ್ಯಂತ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿದ್ದಾರೆ.  ಸುಮಾರು 200 ಕಿಲೋಮೀಟರ್ ನಡೆದ 11 ಜೋಡೆತ್ತುಗಳ ಗಾಡಿಗಳು ತಾಂಬಾ, ಬಂಥನಾಳ, ಚಾಂದಕವಟೆ, ಸಿಂದಗಿ ಹಾಗೂ […]

ಕೆಲಕಾಲ ಸ್ಥಬ್ದವಾಗಿ ಆತಂಕ ಸೃಷ್ಠಿಸಿದ ಫೇಸ್ ಬುಕ್, ಇನಸ್ತಾಗ್ರಾಂ- ಗ್ರಾಹಕರಿಗೆ ಗಾಬರಿಯೋ ಗಾಬರಿ

ವಿಜಯಪುರ: ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕೆಲಕಾಲ ಸ್ತಬ್ದವಾಗಿದ್ದು, ಬಹುತೇಕ ಖಾತೆದಾರರಿಗೆ ಆತಂಕ ಸೃಷ್ಠಿಸಿದ ಘಟನೆ ಇಂದು ರಾತ್ರಿ ನಡೆಯಿತು.  ಸುಮಾರು ಹೊತ್ತು Session expired ಎಂದು ಕಾಣಿಸಿಕೊಂಡ ಸಂದೇಶ ಫೇಸ್ ಬುಕ್ ಬಳಕೆದಾರರಿಗೆ ಆತಂಕ ಸೃಷ್ಠಿ ಮಾಡಿತ್ತು. ಕೆಲವರು ಮತ್ತೆ ಮತ್ತೆ ಪಾಸವರ್ಡ್ ಹಾಕಿದರೂ ಲಾಗಿನ್ ಆಗುತ್ತಿರಲಿಲ್ಲ.  ಮತ್ತೆ ಕೆಲವರು, ಆ್ಯಪ್ ನ್ನೇ ಅನಇನಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನಸ್ಟಾಲ್ ಮಾಡಿದರೂ ಪ್ರಯೋಜನವಾಗದೆ, ತಮ್ಮ ಖಾತೆ ಹ್ಯಾಕ್ ಆಗಿರಬಹುದು ಎಂದು ಆಂತಕ ವ್ಯಕ್ತಪಡಿಸಿದರು.  ಹಲವಾರು ಜನರು […]

ಎನ್.ಟಿ.ಪಿ.ಸಿಯಿಂದ ಐಟಿಐ ಸಂಸ್ಥೆಗೆ ರೂ. 90 ಲಕ್ಷ ರೂ. ಅನುದಾನ- ವಿದ್ಯಾರ್ಥಿಗಳಿಗಾಗಿ ಎರಡಂತಸ್ತಿನ ಕಟ್ಟಡ ನಿರ್ಮಾಣ- ಶಾಸಕ ಯತ್ನಾಳ

ವಿಜಯಪುರ: ನಗರದ ಐಟಿಐ ಸಂಸ್ಥೆಗೆ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯಾರ್ಥಿಗಳ ಸರ್ವೋತ್ತಮ ಅಭಿವೃದ್ಧಿಗಾಗಿ ಎರಡು ಅಂತಸ್ಥಿನ ಕಟ್ಟಡ ನಿರ್ಮಿಸಲು ರೂ. 90 ಲಕ್ಷ ಅನುದಾನ ನೀಡಿದೆ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಎನ್.ಟಿ.ಪಿಸಿ ಸಹಯೋಗದಲ್ಲಿ ಆರ್ ಆ್ಯಂಡ್ ಆರ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಒಇ ಕಟ್ಟಡದ ಮೊದಲನೆಯ ಹಾಗೂ ಎರಡನೆಯ ಮಹಡಿ ಮೇಲೆ ಬೋಧನಾ ಕೊಠಡಿ ಹಾಗೂ […]

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಡಾ. ಎಲ್. ಎಚ್. ಬಿದರಿ ನೇತೃತ್ವದ ಹೋರಾಟ ಸಮಿತಿ ಭೇಟಿ

ವಿಜಯಪುರ: ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಡಾ. ಎಚ್. ಎಚ್. ಬಿದರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಮಿತಿ ಸದಸ್ಯರು, ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂತಸ ವ್ಯಕ್ತಪಡಿಸಿದರು.  ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಮಹೇಶ ನಿಲ್ದಾಣದಲ್ಲಿರುವ ಎಲ್ಲ ವಿಭಾಗಗಳನ್ನು ತೋರಿಸಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.  ಭದ್ರತಾ ವಿಭಾಗದ ಮುಖ್ಯಸ್ಥ ಭೀಮಪ್ಪಾ […]

ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ 6ನೇ ನಗರ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ 6ನೇ ನಗರವಾಗಿರುವುದು ಹೆಮ್ಮೆಯ ವಿಷಯ.  ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಇದಕ್ಕೆ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ಒಳಚರಂಡಿ ನರ‍್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ […]

ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಸರಿಯಾಗಿ ಬಳಸಿಕೊಳ್ಳಬೇಕು- ಪ್ರೊ. ಬಿ. ಕೆ. ತುಳಸಿಮಾಲಾ

ವಿಜಯಪುರ: ವೃತ್ತಿ ಬದುಕಿನ ಆಯ್ಕೆಯಲ್ಲಿ ಪೂರಕ ಮಾಹಿತಿ ಅವಶ್ಯಕ ಹಾಗೂ ಇರುವ ಮಾಹಿತಿಯನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲ ಹೇಳಿದ್ದಾರೆ.  ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಹಾಗೂ ವೃತ್ತಿ ಮಾರ್ಗದರ್ಶನ ಕೋಶ ಮತ್ತು ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವೃತ್ತಿ ಅನ್ವೇಷಕರಿಗೆ ವೃತ್ತಿ ಮಾಹಿತಿ ಬೆಂಬಲ ಕುರಿತ ಒಂದು […]

ಲೋಕಸಭೆ ಚುನಾವಣೆ: 11 ಆಕಾಂಕ್ಷಿಗಳಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ- ಪ್ರೊ. ರಾಜು ಆಲಗೂರ

ವಿಜಯಪುರ: ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ 11 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.  ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ವಿಜಯಪುರ ಎಸ್ ಸಿ ಮೀಸಲು ಕ್ಷೇತ್ರದ ಟಿಕೆಟ್ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೆಟ್ ವಿಚಾರದಲ್ಲಿ ಪಕ್ಷದ ಹೈಕಮಾಂಡ ಯಾವ ತೀರ್ಮಾನ ಕೈಗೊಳ್ಳತ್ತೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರದಿಂದ ಬಡವರ ಸರ್ವಾಂಗೀಣ ಅಭಿವೃದ್ಧಿ  ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ […]

ಗ್ರಾಫಿಕ್ ಡಿಸೈನ್ ಬಹುಬೇಡಿಕೆಯ ಕಲೆಯಾಗಿದೆ- ಮಹಿಳಾ ವಿವಿ ಕುಲಸಚಿವ ಶಂಕರಗೌಡ ಸೋಮನಾಳ

ವಿಜಯಪುರ: ಗ್ರಾಫಿಕ್ ಡಿಸೈನ್ ಎನ್ನುವುದು ಪ್ರಸ್ತುತ ದಿನಮಾನದಲ್ಲಿ ಬಹುಬೇಡಿಕೆಯ ಕಲೆಯಾಗಿದೆ. ಇದರ ಕುರಿತಾದ ಈ ಕಾರ್ಯಾಗಾರದಲ್ಲಿ ನೀವೆಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಹಿಳಾ ವಿಶ್ವವಿದ್ಯಾಲಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದ್ದಾರೆ.  ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂಹನ ಹಾಗೂ ಅಹಲ್ಯಬಾಯಿ ಸಂಶೋಧನಾ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಗ್ರಾಫಿಕ್ ಡಿಸೈನಿಂಗ್ ಕಾರ್ಯಗಾರ ಉದ್ಘಾಟಿಸಿ  ಅವರು ಮಾತನಾಡಿದರು. ಕ್ಷಣಕ್ಷಣಕ್ಕೂ ತಂತ್ರಜ್ಞಾನದ ವೇಗ ಹೆಚ್ಚುತ್ತಿದೆ. ಅದರ […]

ಡಾ. ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ- ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಅಭಿಮತ

ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ನಡೆದು ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ.  ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿ ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಹೇಳಿದ್ದಾರೆ. ಬೌದ್ಧ ವಿಹಾರ ನಿರ್ಮಾಣ ಸಮಿತಿ ವತಿಯಿಂದ ನಗರದ ಸಾರಿಪುತ್ರ- ಬೋಧಿಧಮ್ಮ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 2016ರಿಂದ ಬುದ್ಧವಿಹಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ ಅವರು, […]