ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನಾ ಧರಣಿ

ವಿಜಯಪುರ: ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ ಸಂಘದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು. ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕು. ರೇವಣಸಿದ್ಧೇಶ್ವರ ಏತ ನೀರಾವರಿಯ ಯೋಜನೆಯ 2 ಮತ್ತು 3ನೇ ಹಂತದ ಕಾಮಗಾರಿ ಟೆಂಡರ್ ಕರೆಯಬೇಕು ಹಾಗೂ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಆಲಮಟ್ಟಿ ಜಲಾಷಯದ ಎತ್ತರವನ್ನು 524.256 ಮೀ. ಗೆ ಎತ್ತರಿಸುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು. ಬರದಿಂದಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಲಿಂಬೆ, ಮಾವು, […]
ರಂಗೋಲಿ ಮೂಲಕ ರಾಷ್ಟ್ರೀಯ, ಅಂತಾರಾಷ್ಟೀಯ ದಾಖಲೆಗೆ ಸಿದ್ಧರಾದ ವೈದ್ಯಕೀಯ ವಿದ್ಯಾರ್ಥಿಗಳು- ವಿನೂನತ ಪ್ರಯತ್ನಕ್ಕೆ ಆಲ್ ದಿ ಬೆಸ್ಟ್

ವಿಜಯಪುರ: 1500 ವೈದ್ಯಕೀಯ ವಿದ್ಯಾರ್ಥಿಗಳು, 40 ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು, 50 ಸಾವಿರ ಚದುರ ಅಡಿ ಪ್ರದೇಶದಲ್ಲಿ ಚಿತ್ರ ಬಿಡಿಸಲು 10 ಟನ್ ರಂಗೋಲಿ ಖರೀದಿ. ಅರೇ, ಇದೇನಿದು ವಿಚಿತ್ರ ಎಂದು ನೀವು ಅಂದುಕೊಳ್ಳಬಹುದು. ಆದರೆ, ಇದೆಲ್ಲ ಮಾಡುತ್ತಿರುವುದು ಕೈಯ್ಯಲ್ಲಿ ಪುಸ್ತಕ ಹಿಡಿದು ಕಲಿಯುವಾಗಲೇ ಸ್ಟೆಥೋಸ್ಕೋಪ್ ಬಳಸಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಬೇಕಾದ ವೈದ್ಯರು. ಅದೂ ಕೂಡ ಒಂದು ವಿನೂತನ ಕಾರ್ಯಕ್ರಮಕ್ಕಾಗಿ. ಇದು ಬಸವನಾಡು ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ […]
3 ಬಾರಿ ಕುತ್ತಿನಿಂದ ಪಾರಾದ ಸಂಸದ ಜಿಗಜಿಣಗಿ- ಸೌಂದತ್ತಿ ಯಲ್ಲಮ್ಮನ ದರ್ಶನ ಪಡೆದು ಬಸವನಾಡಿಗೆ ವಾಪಸ್- ಮಹಾಶಿವರಾತ್ರಿ ನಂತರ ಸಾರ್ವಜನಿಕರ ಭೇಟಿ

ವಿಜಯಪುರ: ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಮೆದುಳಿನ ಶಸ್ತ್ರಚಿಕಿತ್ಸೆಯ ನಂತರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಶ್ಚ್ಯಾರ್ಜ್ ಆಗಿದ್ದಾರೆ. ಮೆದುಳಿನಲ್ಲಿ ನೀರು ತುಂಬಿಕೊಂಡಿದ್ದರಿಂದ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದ, ಅವರಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಅವರು ಗುಣಮುಖರಾಗಿದ್ದು, ಬುಧವಾರ ಮಧ್ಯಾಹ್ನ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿ ಬಸವನಾಡು ವಿಜಯಪುರಕ್ಕೆ ವಾಪಸ್ಸಾಗಿದ್ದಾರೆ. ಈ ಕುರಿತು ಬಸವನಾಡು ವೆಬ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿಗೆ ಹೋದಾಗ ಏರಪೋರ್ಟ್ ನಲ್ಲಿ ಆರೋಗ್ಯ ಸಮಸ್ಯೆ ಎದುರಾಗಿತ್ತು. ಬೆಂಗಳೂರಿನಲ್ಲಿ ಮನೆಗೆ […]
ಸಂಸದ ರಮೇಶ ಜಿಗಜಿಣಗಿ ಪ್ರಯತ್ನದ ಫಲ- ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲು ನಿಲುಗಡೆ- ಬೆಳ್ಳುಬಿ, ಶಹಾಪುರ ಅವರಿಂದ ಚಾಲನೆ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರ ಪ್ರಯತ್ನದ ಫಲವಾಗಿ ನಿಡಗುಂದಿ ತಾಲೂಕಿನ ಆಲಮಟ್ಟಿ ರೈಲು ನಿಲ್ದಾಣದಲ್ಲಿ ಎಕ್ಸಪ್ರೆಸ್ ರೈಲುಗಳ ನಿಲುಗಡೆ ಆರಂಭವಾಗಿದೆ. ಬೆಳಿಗ್ಗೆ ನಿಲ್ದಾಣಕ್ಕೆ ಆಗಮಿಸಿದ ಶಿರಡಿ ಸಾಯಿನಗರ- ಮೈಸೂರು ರೈಲು ನಿಲುಗಡೆಗೆ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ ಮತ್ತು ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಹಸಿರು ನಿಶಾನೆ ತೋರಿಸಿದರು. ಬೆ. 10.20ಕ್ಕೆ ಆಲಮಟ್ಟಿ ರೈಲು ನಿಲ್ದಾಣಕ್ಕೆ ಆಗಮಿಸಿದ 16218 ಈ ರೈಲು ಒಂದು ನಿಮಿಷ ನಿಲುಗಡೆಯಾಯಿತು. ಇದೇ ರೀತಿ ಯಶವಂತಪುರ- ಬಿಕಾನೇರ-ಯಶವಂತಪುರ […]
ಮಕ್ಕಳ ಸೂಪ್ತ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ: ಜಿಲ್ಲಾಧಿಕಾರಿ ಟಿ. ಭೂಬಾಲನ್

ವಿಜಯಪುರ: ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಲು ವ್ಯಾಯಾಮ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಮಕ್ಕಳು ನಿಯಮಿತವಾಗಿ ಪಾಲ್ಗೊಳ್ಳುತ್ತಿರುವುದನ್ನು ಖಚಿತಪಡಿಸಿಕೊಂಡು ಮಗುವಿನಲ್ಲಿ ಅಡಗಿರುವ ಸೂಪ್ತ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ […]
ಸಿಂದಗಿ ಮತಕ್ಷೇತ್ರಾದ್ಯಂತ ತೆರಳಿ ಸ್ವಗ್ರಾಮ ಯತ್ನಾಳಕ್ಕೆ ಮರಳಿದ ಜೋಡೆತ್ತಿನ ರೈತರ ನಂದಿ ಯಾತ್ರೆ

ವಿಜಯಪುರ: ಎತ್ತುಗಳ ಸಂತತಿಯನ್ನು ಉಳಿಸಿ ಬೆಳೆಸುವ ಸಂದೇಶವನ್ನು ಹೊತ್ತು ಯತ್ನಾಳ ಗ್ರಾಮದ ರೈತರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೋಡೆತ್ತಿನ ಬಂಡಿ ರಥ ಏಳು ದಿನಗಳ ಕಾಲ ಸಿಂದಗಿ ಮತಕ್ಷೇತ್ರದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ತೆರಳಿ ಸ್ವಗ್ರಾಮಕ್ಕೆ ಮರಳಿದೆ. ಈ ಸಂದರ್ಭದಲ್ಲಿ ಯತ್ನಾಳ ರೈತರು ಒಂದು ವಾರಗಳ ಕಾಲ ಸಿಂದಗಿ ಮತಕ್ಷೇತ್ರಾದ್ಯಂತ ರೈತ ಮಿತ್ರ ಸ್ವಯಂ ಸೇವಕರ ಸಂಘಗಳನ್ನು ರಚಿಸಿದ್ದಾರೆ. ಸುಮಾರು 200 ಕಿಲೋಮೀಟರ್ ನಡೆದ 11 ಜೋಡೆತ್ತುಗಳ ಗಾಡಿಗಳು ತಾಂಬಾ, ಬಂಥನಾಳ, ಚಾಂದಕವಟೆ, ಸಿಂದಗಿ ಹಾಗೂ […]
ಕೆಲಕಾಲ ಸ್ಥಬ್ದವಾಗಿ ಆತಂಕ ಸೃಷ್ಠಿಸಿದ ಫೇಸ್ ಬುಕ್, ಇನಸ್ತಾಗ್ರಾಂ- ಗ್ರಾಹಕರಿಗೆ ಗಾಬರಿಯೋ ಗಾಬರಿ

ವಿಜಯಪುರ: ಫೇಸ್ ಬುಕ್ ಮತ್ತು ಇನಸ್ತಾಗ್ರಾಂ ಕೆಲಕಾಲ ಸ್ತಬ್ದವಾಗಿದ್ದು, ಬಹುತೇಕ ಖಾತೆದಾರರಿಗೆ ಆತಂಕ ಸೃಷ್ಠಿಸಿದ ಘಟನೆ ಇಂದು ರಾತ್ರಿ ನಡೆಯಿತು. ಸುಮಾರು ಹೊತ್ತು Session expired ಎಂದು ಕಾಣಿಸಿಕೊಂಡ ಸಂದೇಶ ಫೇಸ್ ಬುಕ್ ಬಳಕೆದಾರರಿಗೆ ಆತಂಕ ಸೃಷ್ಠಿ ಮಾಡಿತ್ತು. ಕೆಲವರು ಮತ್ತೆ ಮತ್ತೆ ಪಾಸವರ್ಡ್ ಹಾಕಿದರೂ ಲಾಗಿನ್ ಆಗುತ್ತಿರಲಿಲ್ಲ. ಮತ್ತೆ ಕೆಲವರು, ಆ್ಯಪ್ ನ್ನೇ ಅನಇನಸ್ಟಾಲ್ ಮಾಡಿ ಮತ್ತೆ ಹೊಸದಾಗಿ ಇನಸ್ಟಾಲ್ ಮಾಡಿದರೂ ಪ್ರಯೋಜನವಾಗದೆ, ತಮ್ಮ ಖಾತೆ ಹ್ಯಾಕ್ ಆಗಿರಬಹುದು ಎಂದು ಆಂತಕ ವ್ಯಕ್ತಪಡಿಸಿದರು. ಹಲವಾರು ಜನರು […]
ಎನ್.ಟಿ.ಪಿ.ಸಿಯಿಂದ ಐಟಿಐ ಸಂಸ್ಥೆಗೆ ರೂ. 90 ಲಕ್ಷ ರೂ. ಅನುದಾನ- ವಿದ್ಯಾರ್ಥಿಗಳಿಗಾಗಿ ಎರಡಂತಸ್ತಿನ ಕಟ್ಟಡ ನಿರ್ಮಾಣ- ಶಾಸಕ ಯತ್ನಾಳ

ವಿಜಯಪುರ: ನಗರದ ಐಟಿಐ ಸಂಸ್ಥೆಗೆ ಕೂಡಗಿಯ ಎನ್.ಟಿ.ಪಿ.ಸಿ ವಿದ್ಯಾರ್ಥಿಗಳ ಸರ್ವೋತ್ತಮ ಅಭಿವೃದ್ಧಿಗಾಗಿ ಎರಡು ಅಂತಸ್ಥಿನ ಕಟ್ಟಡ ನಿರ್ಮಿಸಲು ರೂ. 90 ಲಕ್ಷ ಅನುದಾನ ನೀಡಿದೆ ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದ ಸರಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಎನ್.ಟಿ.ಪಿಸಿ ಸಹಯೋಗದಲ್ಲಿ ಆರ್ ಆ್ಯಂಡ್ ಆರ್ ಯೋಜನೆಯಡಿ ವಿಜಯಪುರ ಜಿಲ್ಲೆಯ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಒಇ ಕಟ್ಟಡದ ಮೊದಲನೆಯ ಹಾಗೂ ಎರಡನೆಯ ಮಹಡಿ ಮೇಲೆ ಬೋಧನಾ ಕೊಠಡಿ ಹಾಗೂ […]
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಡಾ. ಎಲ್. ಎಚ್. ಬಿದರಿ ನೇತೃತ್ವದ ಹೋರಾಟ ಸಮಿತಿ ಭೇಟಿ

ವಿಜಯಪುರ: ಜಿಲ್ಲೆಯ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಡಾ. ಎಚ್. ಎಚ್. ಬಿದರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಸಮಿತಿ ಸದಸ್ಯರು, ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಂತಸ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಮಹೇಶ ನಿಲ್ದಾಣದಲ್ಲಿರುವ ಎಲ್ಲ ವಿಭಾಗಗಳನ್ನು ತೋರಿಸಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಭದ್ರತಾ ವಿಭಾಗದ ಮುಖ್ಯಸ್ಥ ಭೀಮಪ್ಪಾ […]
ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ 6ನೇ ನಗರ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ದೇಶದಲ್ಲಿಯೇ ಅತೀ ಹೆಚ್ಚು ಶುದ್ಧ ಗಾಳಿ ಇರುವ ನಗರ 6ನೇ ನಗರವಾಗಿರುವುದು ಹೆಮ್ಮೆಯ ವಿಷಯ. ನಿರೀಕ್ಷೆ ಮೀರಿ ಅಭಿವೃದ್ಧಿ ಆಗಿರುವುದೇ ಇದಕ್ಕೆ ಕಾರಣ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕಾರಾಗೃಹ ವಸತಿಗೃಹದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ಒಳಚರಂಡಿ ನರ‍್ಮಾಣ ಮಾಡುವ ಜೊತೆಗೆ ಆಂತರಿಕ ರಸ್ತೆಗಳು ಸೇರಿ ಪ್ರಮುಖ […]