ಕುಡಿಯುವ ನೀರು ಪೂರೈಸಲು 1.80 ಟಿಎಂಸಿ ನೀರು ಬಿಡುಗಡೆ- ಟೇಲ್ ಎಂಡ್ ವರೆಗೆ ತಲುಪಿಸಲು ಕ್ರಮ ಕೈಗೊಳ್ಳಿ- ಡಿಸಿ ಟಿ. ಭೂಬಾಲನ್

ವಿಜಯಪುರ: ಆಲಮಟ್ಟಿ ಜಲಾಶಯದಿಂದ ಫೆ.19ರಿಂದ ಮಾರ್ಚ 10ರವರೆಗೆ ಮುಳವಾಡ ಏತ ನೀರಾವರಿಯ ಹಾಗೂ ಚಿಮ್ಮಲಗಿ ಏತ ನೀರಾವರಿ ಕಾಲುವೆ ವ್ಯಾಪ್ತಿಯ 96 ಕೆರೆಗೆಳಿಗೆ 1.8 ಟಿಎಂಸಿ ನೀರು ಕುಡಿಯುವ ಉದ್ಧೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಕೊನೆಯಂಚಿನವರೆಗೆ ಸಮರ್ಪಕವಾಗಿ ನೀರು ಹರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ನೀರು ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದ್ದು, ಅನ್ಯ ಉದೇಶಕ್ಕಾಗಿ […]
ಸಮಾಜ ಕಲ್ಯಾಣ ಇಲಾಖೆ, ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಬರಹದ ಶಬ್ದಗಳು ಬದಲು- ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ

ವಿಜಯಪುರ: ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ ಎಂದು ರಾಷ್ಟ್ರಕವಿ ಕುವೆಂಪು ಅವರು ಮಕ್ಕಳಿಗೆ ಶಾಲೆಗಳ ಬಗ್ಗೆ ಧನ್ಯತಾ ಭಾವ ಬರಲಿ ಎಂದು ಕವನ ರಚಿಸಿದ್ದಾರೆ. ಬಹುತೇಕ ಶಾಲೆಗಳಲ್ಲಿ ಪ್ರವೇಶ ದ್ವಾರಗಳಲ್ಲಿಯೇ ಈ ಸಾಲುಗಳು ರಾರಾಜಿಸುತ್ತವೆ. ಅಷ್ಟೇ ಅಲ್ಲ, ಮಕ್ಕಳಲ್ಲಿ ಶಾಲೆ ಮತ್ತು ಅಲ್ಲಿ ವಿದ್ಯೆ ಬೋಧಿಸುವ ಶಿಕ್ಷಕರ ಬಗ್ಗೆ ಗೌರವ ಭಾವನೆಗಳನ್ನು ಹೆಚ್ಚಿಸುತ್ತವೆ. ಆದರೆ, ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಾಲೆಗಳ ಪ್ರವೇಶ ದ್ವಾರದ ಮೇಲೆ ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ ಎಂದು […]
ಫೆ.24ರಂದು ಇಂಡಿಯಲ್ಲಿ ಜಿಲ್ಲಾ ಗಾಣಿಗ ಸಮಾವೇಶ- ನೂತನ ಸಭಾಭವನ ಭೂಮಿಪೂಜೆ ಕಾರ್ಯಕ್ರಮ- ಎಂ. ಎಸ್. ಲೋಣಿ

ವಿಜಯಪುರ: ಫೆ. 24ರಂದು ಇಂಡಿಯಲ್ಲಿ ವಿಜಯಪುರ ಜಿಲ್ಲಾ ಗಾಣಿಗ ಸಂಘದ ಬೃಹತ್ ಸಮಾವೇಶ ನಡೆಯಲಿದೆ ಎಂದು ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಗಾಣಿಗರ ಸಂಘ ಮತ್ತು ಇಂಡಿ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಫೆ. 24ರಂದು ಬೆಳಿಗ್ಗೆ 10.30 ಕ್ಕೆ ಇಂಡಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿಯ ಗಾಣಿಗ ಸಮಾಜದ ಜಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಶತಮಾನದ ಸಂತ ಶ್ರೀ ಸಿದ್ದೇಶ್ವರ […]
ರಾಂಪುರದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ- ವಿದ್ಯೆ ಬೋಧಿಸಿದ ಗುರುಗಳನ್ನು ಮೆರವಣಿಗೆ ನಡೆಸಿದ ಶಿಷ್ಯಂದಿರು

ಬಾಗಲಕೋಟೆ: 20 ವರ್ಷಗಳ ಹಿಂದೆ ತಮಗೆ ವಿದ್ಯೆ ಬೋಧಿಸಿದ ಶಿಕ್ಷಕರನ್ನು ಮೆರವಣಿಗೆಯಲ್ಲಿ ಕರೆತಂದ ಶಿಷ್ಯಂದಿರು ಗುರುವಂದನೆ ಸಲ್ಲಿಸಿದ ಕಾರ್ಯಕ್ರಮ ಬಾಗಲಕೋಟೆ ತಾಲೂಕಿನ ರಾಂಪೂರದಲ್ಲಿರುವ ಸರಕಾರಿ ಪ್ರೌಢಶಾಲೆ ಸೀತಿಮನಿ ಆರ್. ಎಸ್. ಶಾಲೆಯಲ್ಲಿ ನಡೆಯಿತು. ಈ ಶಾಲೆಯಲ್ಲಿ 2003-04ರಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಅರ್ಥಪೂರ್ಣ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುಂಚೆ ಊರಿನ ಪ್ರಮುಖ ಬೀದಿಗಳಲ್ಲಿ ಶಿಕ್ಷಕರನ್ನು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಈ ಕಾರ್ಯಕ್ರಮದಲ್ಲಿ ಹಳೆ […]
ಬಸವಾದಿ ಶರಣರ ವೇಷಭೂಷಣ ಧರಿಸಿ ಗಮನ ಸೆಳೆದ ಆಕ್ಸಫರ್ಡ್ ಶಾಲೆಯ ಮಕ್ಕಳು

ವಿಜಯಪುರ: ನಗರದ ಆಕ್ಸಫರ್ಡ್ ಶಾಲೆಯ ವಿದ್ಯಾರ್ಥಿಗಳು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದಿದ್ದಾರೆ. ನಗರದ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಆಕ್ಸ್ಫರ್ಡ್ ಶಿಕ್ಷಣ ಸಂಸ್ಥೆಯ ಮುದ್ದು ಮಕ್ಕಳು ಬಸವಾದಿ ಶರಣರ ವೇಷಭೂಷಣಗಳನ್ನು ಧರಿಸಿ ಸಮಾರಂಭಕ್ಕೆ ಆಗಮಿಸಿ ಎಲ್ಲರ ಗಮನವನ್ನು ಸೆಳೆದರು. ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಬಸವಾದಿ ಶರಣರ […]
ಬಸವಾದಿ ಶರಣರ ಆಶಯದಂತೆ ಸರಕಾರದ ಆಡಳಿತ ನಡೆಸುತ್ತಿದೆ- ಸಚಿವ ಡಾ. ಎಂ. ಬಿ. ಪಾಟೀಲ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿಯ ಇಂಗಳೇಶ್ವರಲ್ಲಿ ಜನಿಸಿದ ಅಣ್ಣ ಬಸವಣ್ಣ ಅವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಕ್ಯಾಬಿನೆಟ್‍ನಲ್ಲಿ ನಿರ್ಣಯ ಮಾಡುವ ಮೂಲಕ ಬಸವಣ್ಣನವರಿಗೆ ಗೌರವ ಸೂಚಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕøತಿಕ ನಾಯಕ ಭಾವಚಿತ್ರ ಅನಾವರಣಗೊಳಿಸಿ, ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ […]
ಸಿಎಂ ಶ್ವೇತ್ರ ಪತ್ರವನ್ನೊಳಗೊಂಡ ಬಜೆಟ್ ಮಂಡಿಸಿದ್ದಾರೆ- ಬಿಜೆಪಿಯವರಿಗೆ ಕೇಂದ್ರಕ್ಕೆ ಹೋಗಲು ತಾಕತ್ತಿಲ್ಲ, ಸದನದಲ್ಲಿ ಕುಳಿತು ಕೇಳುವ ತಾಳ್ಮೆಯಿಲ್ಲ- ಎಂ. ಬಿ. ಪಾಟೀಲ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಂಡಿಸಿರುವ ಆಯವ್ಯಯ ಶ್ವೇತಪತ್ರವನ್ನೊಳಗೊಂಡ ಬಜೆಟ್ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಹೊರವಯದಲ್ಲಿ ಭೂತ್ನಾಳ ಕೆರೆ ಬಳಿ ಇರುವ ತಿಡಗುಂದಿ ವಯಾಡಕ್ಟ್ ಮೂಲಕ ಕೆರೆಗೆ ನೀರು ಹರಿಸುವ ಸಿದ್ಧತೆ ಪರಿಶೀಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸಿಎಂ ತಮ್ಮ 15 ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಇದು ಸಾಮಾಜಿಕ ಹಾಗೂ ಅಭಿವೃದ್ದಿ ಸರಿದೂಗಿಸುವ ಬಜೆಟ್ […]
ಬಜೆಟ್ ನಲ್ಲಿ ಬಸವನಾಡಿಗೂ ಭರಪೂರ ಕೊಡುಗೆ ನೀಡಿದ ಸಿಎಂ ಎಸ್. ಸಿದ್ಧರಾಮಯ್ಯ- ಏನೇನು ಗೋತ್ತಾ?

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮಂಡಿಸಿರುವ ಬಜೆಟ್ ನಲ್ಲಿ ಬಸವನಾಡು ವಿಜಯಪುರ ಜಿಲ್ಲೆಗೂ ಭರಪೂರ ಕೊಡುಗೆ ಸಿಕ್ಕಿದೆ. ವಿಜಯಪುರ ಜಿಲ್ಲೆಗೆ ಸಿಎಂ ನೀಡಿರುವ ಕೊಡುಗೆಗಳು ಏನು ಎಂಬುದರ ಕುರಿತg ಬಜೆಟ್ ನಲ್ಲಿ ನಮೂದಿಸಲಾಗಿರುವ ಅನುಕ್ರಮ ಸಂಖ್ಯೆ ಸಹಿತ ಮಾಹಿತಿ ಇಲ್ಲಿದೆ. ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಇಟ್ಟಂಗಿಹಾಳ ಬಳಿ ಆಹಾರ ಪಾರ್ಕ್ ಸ್ಥಾಪನೆ. ತೋಟಗಾರಿಕೆ ಬೆಳೆಗಳಿಗೆ ವಿಜಯಪುರ ಜಿಲ್ಲೆಯು ಹೆಸರುವಾಸಿಯಾಗಿದೆ. […]
ಕೆಯುಡಬ್ಲ್ಯೂಜೆ ಹೋರಾಟದ ಫಲ- ಗ್ರಾಮೀಣ ಪತ್ರಕರ್ತರಿಗೆ ಅವರ ಜಿಲ್ಲೆಗಳಲ್ಲಿ ಉಚಿತ ಬಸ್ ಪಾಸ್ ಘೋಷಿಸಿದ ಸಿಎಂ- ಶಿವಾನಂದ ತಗಡೂರ ಸ್ವಾಗತ

ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಅವರ ಜಿಲ್ಲಾದ್ಯಂತ ಸರಕಾರಿ ಬಸ್ಸುಗಳಲ್ಲಿ ಉಚಿತ ಬಸ್ ಪಾಸ್ ಯೋಜನೆಯನ್ನು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. ಇದರಿಂದಾಗಿ ಕೆಯುಡಬ್ಲ್ಯೂಜೆ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ದಾವಣಗೆರೆಯಲ್ಲಿ ಇದೇ ಫೆ. 3 ಮತ್ತು 4 ರಂದು ನಡನೆದ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯೂಜೆ) 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದು, ಸರಕಾರದ ಈ ನಿರ್ಧಾರವನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ […]
ರೇಲ್ವೆ ಕೆಳಸೇತುವೆ ಬಳಿ ವಾಹನಗಳ ಎತ್ತರ ನಿಯಂತ್ರಣಕ್ಕೆ ಅಳವಡಿಸಲಾಗಿದ್ದ ಫ್ರೇಮ್ ತುಂಡಾಗಿ ಬಿದ್ದು ಅವಘಡ

ವಿಜಯಪುರ: ರೇಲ್ವೆ ಕೆಳಸೇತುವೆ ಬಳಿ ಎತ್ತರದ ವಾಹನಗಳು ಸಂಚರಿಸದಂತೆ ಹಾಕಲಾಗಿದ್ದ ಕಬ್ಬಿಣದ ಫ್ರೇಮ್ ತುಂಡಾಗಿ ಬಿದ್ದ ಘಟನೆ ಕೊಲ್ಹಾರ ತಾಲೂಕಿನ ತೆಲಗಿ ಬಳಿ ಸಂಭವಿಸಿದೆ. ಗ್ರಾಮದ ರೇಲ್ವೆ ಕೆಳಸೇತುವೆ ಬಳಿ ಬೃಹತ್ ಲಾರಿಗಳು ಮತ್ತು ಎತ್ತರದ ವಾಹನಗಳು ಸಂಚರಿಸುವುದನ್ನು ನಿಯಂತ್ರಿಸಲು ಫ್ರೇಮ್ ಹಾಕಲಾಗಿತ್ತು. ಆದರೆ, ರಾತ್ರಿ ಕಬ್ಬು ಸಾಗಾಟ ಮಾಡುವ ವಾಹನಕ್ಕೆ ತಗುಲಿ ಮುರಿದು ಬಿದ್ದಿದೆ. ಈ ರಸ್ತೆ ತೆಲಗಿಯಿಂದ ಕೊಲ್ಹಾರ ಮಾರ್ಗವಾಗಿ ಬಸವನ ಬಾಗೇವಾಡಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಾಹನಗಳ ಎತ್ತರ ನಿಯಂತ್ರಕ ಫ್ರೇಮ್ ಮೇಲೀನ […]