ವಿಜಯಪುರ ಬಸವೇಶ್ವರ ಚೌಕಿನಲ್ಲಿ ಟ್ಯಾಂಕರ್ ಪಲ್ಟಿ- ಚಾಲಕನಿಗೆ ಗಾಯ

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಹನ ಪಲ್ಟಿಯಾದ ಘಟನೆ ವಿಜಯಪುರ ನಗರದ ಬಸವೇಶ್ವರ ಚೌಕ್ ನಲ್ಲಿ ನಡೆದಿದೆ. ನಸುಕಿನ ಜಾವ ಟ್ಯಾಂಕರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಜೆಡಿಎಸ್ ಕಚೇರಿ ಮತ್ತು ಜಯಶ್ರೀ ಟಾಕೀಸ್ ಪಕ್ಕದಲ್ಲಿ ಪಲ್ಟಿಯಾಗಿದೆ.  ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಅ ಅಪಘಾತದಿಂದಾಗಿ ರಸ್ತೆಯಲ್ಲಿ ಕೆಲಕಾಲ ವಾಹನಗಳ ಸಂಚಾರ ಬಂದ್ ಆಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸಂಚಾರಿ ಪೊಲೀಸರು ಪಲ್ಟಿಯಾದ ಟ್ಯಾಂಕರ್ ವಾಹನವನ್ನು ಕ್ರೇನ್ ಸಹಾಯದಿಂದ ತೆರವು ಮಾಡಿ ವಾಹನಗಳ […]

ಮರಗೂರ ಸಕ್ಕರೆ ಕಾರ್ಖಾನೆ ಚುನಾವಣೆ- ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬಣಕ್ಕೆ ಭರ್ಜರಿ ಗೆಲುವು

ವಿಜಯಪುರ: ಇಂಡಿ ತಾಲೂಕಿನ ಮರಗೂರ ಶ್ರೀ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮತ್ತು ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಬಣಕ್ಕೆ ಭರ್ಜರಿ ಗೆಲುವು ಸಾಧಿಸಿದೆ.  ಶಾಸಕರ ಬಣದಿಂದ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಕಾರ್ಖಾನೆಯ ಮೇಲೆ ಮತ್ತೆ ಹಿಡಿತ ಸಾಧಿಸಿದ್ದಾರೆ.  ಒಟ್ಟು 13 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಈಗಾಗಲೇ ಐದು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಫಲಿತಾಂಶದ ವಿವರ ಸಾಮಾನ್ಯ ಕ್ಷೇತ್ರ(5 ಸ್ಥಾನಗಳು) ಯಶವಂತ್ರಾಯಗೌಡ ಪಾಟೀಲ- […]

ಸಿಂದಗಿ ಪೊಲೀಸರ ಕಾರ್ಯಾಚರಣೆ- 4 ಜನರ ಬಂಧನ, 37 ಬೈಕ್ ವಶ- ಬ್ಯಾಂಕ್, ಫೈನಾನ್ಸ್ ಕಳ್ಳತನದಲ್ಲಿ 3 ಆರೋಪಿಗಳ ಬಂಧನ

ವಿಜಯಪುರ: ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಬೈಕ್ ಕಳ್ಳರು ಮತ್ತು ಮೂರು ಜನ ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರನ್ನು ಬಂಧಿಸಿದ್ದಾರೆ. ರೂ. 16.65 ಲಕ್ಷ ಮೌಲ್ಯದ 37 ಬೈಕ್ ವಶ ಮೊದಲ ಪ್ರಕರಣದಲ್ಲಿ ಸಿಂದಗಿ ಪೊಲೀಸರು ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿದ್ದು, ಅವರ ಬಳಿಯಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಇವುಗಳ ಒಟ್ಟು ಮೌಲ್ಯ ರೂ. 16.65 ಲಕ್ಷ ಎಂದು ಅಂದಾಜಿಸಲಾಗಿದೆ. ಸಿಂದಗಿ ನಗರ ಮತು […]

ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಭಾವನ ಬೆಳಗೆರೆ ಸಂಪಾದಕತ್ವದಲ್ಲಿ ಶೀಘ್ರದಲ್ಲಿ ಪುನಾರಂಭ

ಬೆಂಗಳೂರು: ರವಿ ಬೆಳಗೆರೆ ಸಾರಥ್ಯದ ಹಾಯ್ ಬೆಂಗಳೂರು ವಾರ ಪತ್ರಿಕೆ ಅತೀ ಶೀಘ್ರದಲ್ಲಿ ಭಾವನಾ ಬೆಳಗೆರೆ ಸಂಪಾದಕತ್ವದಲ್ಲಿ ಪುನಾರಂಭವಾಗಲಿದೆ. ಬೆಂಗಳೂರಿನ ಹಾಯ್ ಬೆಂಗಳೂರು ಪತ್ರಿಕೆ ಕಚೇರಿಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ, ಬರಹಗಾರ ರವಿ ಬೆಳೆಗೆರೆ ಅವರ ಎರಡು ಪುಸ್ತಕಗಳಾದ ರಜನೀಶನ ಹುಡುಗಿಯರು, ಅರ್ತಿ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ರವಿ ಬೆಳಗೆರೆ ಪುತ್ರಿ ಮತ್ತು ಪತ್ರಿಕೆಯ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಲಿರುವ ಭಾವನಾ ಬೆಳಗೆರೆ ಈ ಘೋಷಣೆ ಮಾಡಿದ್ದಾರೆ. ಹಾಯ್ ಬೆಂಗಳೂರು ಮತ್ತು ಓ ಮನಸೆ ಪತ್ರಿಕೆಗಳನ್ನು ಪುನಾರಂಭಿಸುವಂತೆ ರಾಜ್ಯದ […]

ದರಬಾರ ಡಿಗ್ರಿ ಕಾಲೇಜಿನ ಯಶ ಆರ್. ಮುತ್ತಿನಪೆಂಡಿಮಠ ರಾಣಿ ಚನ್ನಮ್ಮ ವಿವಿ ಕ್ರಿಕೆಟ್ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆ

ವಿಜಯಪುರ: ನಗರದ ಪ್ರತಿಷ್ಠಿತ ಕುಮುದಬೇನ ದರಬಾರ ಬಿಬಿಎ, ಬಿಸಿಎ ಮತ್ತು ಬಿಕಾಂ ಕಾಲೇಜಿನ ಬಿ. ಕಾಂ. ಸೆಮಿಸ್ಟರ್ ವಿದ್ಯಾರ್ಥಿ ಮಾರ ಯಶ ಆರ್. ಮುತ್ತಿನಪೆಂಡಿಮಠ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರಿಕೆಟ್ ತಂಡಕ್ಕೆ ಬ್ಲ್ಯೂ ಆಗಿ ಆಯ್ಕೆಯಾಗಿದ್ದಾನೆ. ಜಮಖಂಡಿಯ ವಾಣಿಜ್ಯ ಬಿ. ಎಚ್‌. ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ಅಂತರ ಮಹಾವಿದ್ಯಾಲಯಗಳ ಕ್ರಿಕೆಟ್ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಸಂಸ್ಥೆಯ ಅದ್ಯಕ್ಷೆ ರಾಧಾ ಆರ್. ದರಬಾರ […]

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ, ಪರಿಶೀಲನೆ

ವಿಜಯಪುರ: ನಗರದ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಭೆ ಅವರು ಭೇಟಿ ನೀಡಿ, ಕಾರಾಗೃಹ ಬಂದಿಗಳ ಆರೋಗ್ಯ, ಆಹಾರ, ಮೂಲ ಸೌಕರ್ಯದ ಜೊತೆಗೆ ಅವರ ಮಕ್ಕಳ ಕುರಿತು ಮಾಹಿತಿ ಪಡೆದರು. ಕಾರಾಗೃಹ ಬಂದಿಗಳ ಅವರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸ್ಥಿತಿಗತಿಗಳ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕಾರಾಗೃಹದ ಅಧಿಕಾರಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಾರಾಗೃಹದ ಪ್ರಭಾರ ಅಧೀಕ್ಷಕರಾದ ಮಂಜುನಾಥ […]

ರಾಷ್ಟ್ರಪಿತನ ತತ್ವಗಳನ್ನು ಪಾಲಿಸಿ ವ್ಯಕ್ತಿತ್ವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು- ಶಂಕರಗೌಡ ಸೋಮನಾಳ

ವಿಜಯಪುರ: ಗಾಂಧೀಜಿಯವರ ತತ್ವಗಳನ್ನು ಪಾಲಿಸಿದರೆ ನಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದ್ದಾರೆ. ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು, ಗಾಂಧಿ ಅಧ್ಯಯನ ಕೇಂದ್ರ, ಎನ್.ಎಸ್.ಎಸ್ ಕೋಶ ಹಾಗೂ ಐಕ್ಯುಎಸಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ವತಿಯಿಂದ ಗಾಂಧಿ ಸ್ಮಾರಕ ನಿಧಿಯ 75 ನೆಯ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧಿ ಚಿಂತನೆಗಳ ಮೂಲಕ ಮಾನವೀಯ ಮೌಲ್ಯಗಳು” ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ […]

ರೂ. 32.15 ಲಕ್ಷ ಮೌಲ್ಯದ 202.38 ಗ್ರಾಂ ಮಾದಕ ವಸ್ತು ನಾಶಪಡಿಸಿದ ಪೊಲೀಸರು

ವಿಜಯಪುರ: ಜಿಲ್ಲೆಯಲ್ಲಿ ದಾಖಲಾದ ಎನ್‌ ಡಿ ಪಿ ಎಸ್ ನಡಿ ದಾಖಲಾದ 32 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳನ್ನು ಪೊಲೀಸರು ನಾಶಪಡಿಸಿದ್ದಾರೆ. ಜಿಲ್ಲೆಯಲ್ಲಿ ಎನ್ ಡಿ ಪಿ ಎಸ್ ಕಾಯಿದೆಯಡಿ ಒಟ್ಟು 32 ಪ್ರಕರಣಗಳಲ್ಲಿ ರೂ. 32 ಲಕ್ಷ 15 ಸಾವಿರದ 450 ಮೌಲ್ಯದ 202.380 ಗ್ರಾಂ ಮಾದಕ ವಸ್ತುಗಳನ್ನು ಮತ್ತು ಮಾದ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.   ಪೊಲೀಸ್ ಪ್ರಧಾನ ಕಚೇರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾ ಮಾದಕ ವಸ್ತುಗಳ ವಿಲೇವಾರಿ ಸಮೀತಿಯ ನೇತೃತ್ವದಲ್ಲಿ ವಿಜಯಪುರ ನಗರದ ಇಂಡಿ […]

ವಿಜಯಪುರ ಡಿಡಿಪಿಐ ಕುರ್ಚಿಗೆ ಇಬ್ಬರು ಅಧಿಕಾರಿಗಳ ಕಿತ್ತಾಟ- ಕಡತಗಳಿಗೆ ನಾನೇ ಸಹಿ ಹಾಕುವೆ ಎಂದು ಪಟ್ಟು

ವಿಜಯಪುರ: ನಗರದಲ್ಲಿ ಒಂದೇ ಕುರ್ಚಿಗಾಗಿ ಇಬ್ಬರು ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳು ಕಾದಾಟ ನಡೆಸುತ್ತಿದ್ದಾರೆ. ವಿಜಯಪುರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಲ್ಲಿ ಡಿಡಿಪಿಐ ಎನ್. ಎಚ್. ನಾಗೂರ ಹಾಗೂ ಪ್ರಭಾರಿ ಡಿಡಿಪಿಐ ಉಮಾದೇವಿ ಸೊನ್ನವರ ಅವರ ಮಧ್ಯೆ ಕುರ್ಚಿಗಾಗಿ ಜಗಳ ನಡೆಯುತ್ತಿದೆ. ಹಣಕಾಸು ದುರುಪಯೋಗ ಹಿನ್ನೆಲೆ ಅಮಾನತಾಗಿದ್ದ ಡಿಡಿಪಿಐ ಎನ್. ಎಚ್. ನಾಗೂರ ಹಣಕಾಸು ದುರುಪಯೋಗ ಮತ್ತು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಹಿಂದಿನ ಡಿಡಿಪಿಐ ಎನ್. ಎಚ್. ನಾಗೂರ ಅವರನ್ನು ಜನೇವರಿ 30 ರಂದು […]

ವಿಜಯಪುರ-ಬೆಂಗಳೂರು, ಮುಂಬೈಗೆ ವಂದೇ ಭಾರತ ರೈಲು ಪ್ರಾರಂಭಿಸಿ- ಸುನೀಲಗೌಡ ಪಾಟೀಲ ಆಗ್ರಹ

ವಿಜಯಪುರ: ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾಗಿರುವ ವಂದೇ ಭಾರತ ರೈಲು ಸೇವೆಯನ್ನು ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಮತ್ತು ಮುಂಬೈ- ಸೋಲಾಪುರ ರೈಲನ್ನು ವಿಜಯಪುರದ ವರೆಗೆ ವಿಸ್ತರಿಸುವಂತೆ ಆಗ್ರಹಿಸಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಕೇಂದ್ರ ಅಶ್ವಿನಿ ವೈಷ್ಣವ ಅವರಿಗೆ ಪತ್ರ ಬರೆದಿದ್ದಾರೆ. ಭಾರತದ ಸ್ವಾತಂತ್ರ‍್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೋಂದು ಸ್ಳಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ […]