ಆಲಮಟ್ಟಿ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ : ಪರಿಶೀಲನೆ

ವಿಜಯಪುರ:  ನಿಡಗುಂದಿ ತಾಲೂಕಿನ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ವಿದ್ಯಾಲಯದ ಸಲಹಾ ಸಮಿತಿ ಸಭೆ ನಡೆಸಿದ ಅವರು, ವಿದ್ಯಾಲಯದ ಬೋಧನಾ ಗುಣಮಟ್ಟವನ್ನು ಹೆಚ್ಚಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ, ಮಕ್ಕಳ ಕೌಶಲ್ಯತೆಯನ್ನು ಹೆಚ್ಚಿಸಲು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. […]

ವಿಜಯಪುರ ನಗರದ ದರ್ಗಾ ನಗರ ಆರೋಗ್ಯ ಕೇಂದ್ರದಲ್ಲಿ ವಿಶೇಷ ಆರೋಗ್ಯ ತಪಾಸಣೆ

ವಿಜಯಪುರ: ನಗರದ ದರ್ಗಾ ನಗರ ಆರೋಗ್ಯ ಕೇಂದ್ರದಲ್ಲಿ ಹಿರಿಯ ಮಹಿಳೆಯರ ವಿಶೇಷ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ನಗರದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ವಿದ್ಯಾ ಥೊಬ್ಬಿ ಮತ್ತು ತಂಡ ಮಹಿಳೆಯರ ಗರ್ಭಾಶಯ ಹಾಗೂ ಗರ್ಭಾಶಯ ಕೊರಳಿನ ಕ್ಯಾನ್ಸರ್ ಪತ್ತೆ ಹಚ್ಚುವ ವಿಶೇಷ ತಪಾಸಣೆ ನಡೆಸಿದರು.  25 ಮಹಿಳೆಯರ ತಪಾಸಣೆ ನಡೆಸಲಾಗಿದ್ದು, ಚಿಕಿತ್ಸೆ ಅವಶ್ಯಕವಿರುವ ಮಹಿಳೆಯರನ್ನು ಮೇಲ್ದರ್ಜೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು. ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಈರಣ್ಣಾ ಧಾರವಾಡಕರ, ಹಿರಿಯ ಸಮುದಾಯ ಆರೋಗ್ಯಾಧಿಕಾರಿ ನಾಗರತ್ನಾ […]

ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆ ವೈದ್ಯರ ಸಾಧನೆ- ಒಂದೇ ದಿನ ಎಂಟು ಮಕ್ಕಳು ಸೇರಿ 13 ಜನರಿಗೆ ಹೃದಯ ಸಂಬಂಧಿ ಯಶಸ್ವಿ ಶಸ್ತ್ರಚಿಕಿತ್ಸೆ

ವಿಜಯಪುರ: ನಗರದ ಡಾ. ಬಿದರಿಯವರ ಅಶ್ವಿನಿ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ಬೆಂಗಳೂರಿನ ವೈದ್ಯರ ಜೊತೆ ಸೇರಿ ಒಂದೇ ದಿನ ಎಂಟು ಮಕ್ಕಳು ಸೇರಿ ಒಟ್ಟು 13 ಜನರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನೀಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದಯರೋಗ ತಜ್ಞ ಡಾ. ಪಿ. ವಿ. ಸುರೇಶ, ಅಶ್ವಿನಿ ಆಸ್ಪತ್ರೆಯ ಡಾ. ಗೌತಮ ವಗ್ಗರ, ಡಾ. ಗೋಪಾಲಕೃಷ್ಣ ದೇಶಪಾಂಡೆ, ಡಾ. ಬಸವರಾಜ ಉಟಗಿ ಸೇರಿಕೊಂಡು ಎಂಟು ಮಕ್ಕಳ ಡಿವೈಸ್ ಕ್ಲೋಸರ್ ಅಂದರೆ ಹೃದಯ ರಂಧ್ರ […]

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ರಾಮ ಮಂದಿರ ಲೋಕಾರ್ಪಣೆ ಅಂಗವಾಗಿ ಶ್ರೀರಾಮನಿಗೆ ಪೂಜೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ವಿಜಯಕುಮಾರ ಡಿ. ಇಜೇರಿ, ನೂರಾರು ವರ್ಷಗಳ ಹಿಂದೆ ಆಗಬೇಕಾಗಿದ್ದ ಶ್ರೀರಾಮ ಮಂದಿರವನ್ನು ಈಗ ಪೂರ್ಣಗೊಳಿಸಿ ಉದ್ಗಾಟಿಸಿರುವುದು ಸಂತಸ ತಂದಿದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಎಸ್. ಭೋಗಶೆಟ್ಟಿ, ನಿರ್ದೇಶಕರಾದ ಶಾಂತಪ್ಪ ಎಸ್. ಜತ್ತಿ,  ಪ್ರಕಾಶ ಬಗಲಿ, ಗುರುರಾಜ ಗಂಗನಳ್ಳಿ, ಈರಣ್ಣ ಪಟ್ಟಣಶೆಟ್ಟಿ, ಡಾ. […]

ಬಬಲೇಶ್ವರ ಮತಕ್ಷೇತ್ರಾದ್ಯಂತ ನಾನಾ ದೇವಸ್ಥಾನಗಳಲ್ಲಿ ಎಂಬಿಪಿ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ

ವಿಜಯಪುರ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಸರಕಾರದ ಸುತ್ತೋಲೆಯಂತೆ ಬಬಲೇಶ್ವರ ಮತಕ್ಷೇತ್ರದ ನಾನಾ ಗ್ರಾಮಗಳಲ್ಲಿ ರಾಮ- ಹನುಮಂತದೇವರ ಗುಡಿಗಳು ಹಾಗೂ ಗ್ರಾಮದೇವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ- ಪ್ರಾರ್ಥನೆ ನೆರವೇರಿಸಲಾಯಿತು. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ಎಂಬಿಪಿ ಅಭಿಮಾನಿಗಳಿಂದ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತುಅದೇ ರೀತಿ ಶ್ರೀ ಎಂ. ಬಿ. ಪಾಟೀಲ ಅವರ ಅಭಿಮಾನಿಗಳ ಬಳಗದವರು ಕೂಡಾ ಬಬಲೇಶ್ವರ ಮತಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ರಾಮ, ಹನುಮಂತ ಮತ್ತು […]

ದುಬೈನಲ್ಲಿ ಜೈ ಶ್ರೀರಾಮ ಎಂದು ಸಂಭ್ರಮಿಸಿದ ಬಸವನಾಡಿನ ಪ್ರವಾಸಿಗರು

ವಿಜಯಪುರ: ಈಗ ದೇಶಾದ್ಯಂತ ಶ್ರೀರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಸಂಚಲನ ಸೃಷ್ಠಿಸಿದೆ.  ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗುತ್ತಿದ್ದರೆ, ಎಲ್ಲ ಕಡೆ ರಾಮಭಕ್ತರು ನಾನಾ ರೀತಿಯಲ್ಲಿ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಇದೇ ರೀತಿ, ದುಬೈ ಪ್ರವಾಸದಲ್ಲಿರುವ ಬಸವನಾಡು ವಿಜಯಪುರ ಜಿಲ್ಲೆಯ ಹಲವಾರು ಜನರು ತಾವೀಗ ಪ್ರವಾಸ ಕೈಗೊಂಡಿರುವ  ಸ್ಖಳದಲ್ಲಿಯೇ ಕೈಯ್ಯಲ್ಲಿ ಭಗವಾ ಧ್ವಜ ಹಿಡಿದು ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ.  ವಿಜಯಪುರ […]

ವಿಜಯಪುರ ಆದರ್ಶ ನಗರದ ಮಾರುತಿ ಮಂದಿರದಲ್ಲಿ ಶ್ರೀರಾಮನಿಗೆ ಪೂಜೆ

ವಿಜಯಪುರ: ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಬಸವನಾಡು ವಿಜಯಪುರ ನಗರದ ಆದರ್ಶ ನಗರದ ಶ್ರೀ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಿತು. ದೇವಸ್ಥಾನದಲ್ಲಿ ಸೇರಿದ ಬಡಾವಣೆಯ ನಿವಾಸಿಗಳು ಶ್ರೀರಾಮಚಂದ್ರನ ಬೃಹತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮನಾಮ ಜಪಿಸಿದರು.  ಅಲ್ಲದೇ, ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು.  ಅಲ್ಲದೇ, ಪ್ರಸಾದ ಹಂಚಿ ಖುಷಿಪಟ್ಟರು. ಈ ಸಂದರ್ಭದಲ್ಲಿ ಶ್ರೀ ಹನುಮಾನ ದೇವಸ್ಥಾನ ಅಧ್ಶಕ್ಷ […]

ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೆ ಕ್ಷಣಗಣನೆ- ಬಸವ ನಾಡಿನಲ್ಲಿ ಝಗಮಗಿಸುತ್ತಿರುವ ರಸ್ತೆಗಳು, ದೇವಸ್ಥಾನಗಳು

ವಿಜಯಪುರ: ಬಹು ನಿರೀಕ್ಷಿತ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಬಸವನಾಡು ವಿಜಯಪುರ ಜಿಲ್ಲೆಯಲ್ಲಿಯೂ ಸಂಭ್ರಮದ ವಾತಾವರಣ ಮನೆ ಮಾಡಿದೆ. ಜನೇವರಿ 22 ರಂದು ಸೋಮವಾರ ಗುಮ್ಮಟ ನಗರಿ ವಿಜಯಪುರದಲ್ಲಿ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ಕಣ್ಮನ ಸೆಳೆಯುತ್ತಿವೆ.  ನಗರ ಕಲರ್‌ಪುಲ್ ಲೈಟಿಂಗ್ ಮೂಲಕ ಜಗಮಗಿಸುತ್ತಿದೆ. ನಗರದ ಶಿವಾಜಿ ವೃತ್ತದಲ್ಲಿ‌ ಕೇಸರಿ ಬಾವುಟಗಳನ್ನು‌ ಕಟ್ಟಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.  ಗಾಂಧಿಚೌಕ್, ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ್ ಚೌಕ್ ಗಳಲ್ಲಿಯೂ ವಿದ್ಯುತ್ ದೀಪಾಲಂಕಾರ […]

ಅಂಬಿಗರ ಚೌಡಯ್ಯ ಶ್ರೇಷ್ಠ ತತ್ವಜ್ಞಾನಿ, ವಚನಕಾರರು- ಜಿಲ್ಲಾಧಿಕಾರಿ ಟಿ. ಭೂಬಾಲನ್

ವಿಜಯಪುರ: ಬಸವಾದಿ ಶರಣರ ಸಮಕಾಲಿನ ಶರಣರಾದ ಅಂಬಿಗರ ಚೌಡಯ್ಯನವರು ಅಂದಿನ ಸಮಾಜದಲ್ಲಿನ ಮೌಢ್ಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು. ಮಹಿಳೆಯರು ಮತ್ತು ಪುರುಷ ಸಮಾನರೆಂದು ಪ್ರತಿಪಾದಿಸಿದ ತತ್ವನಿಷ್ಟ ಶ್ರೇಷ್ಟ ತತ್ವಜ್ಞಾನಿ, ವಚನಕಾರರಾಗಿದ್ದರು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ದಾಸೋಹ,ಶಿವಯೋಗ ಸಾಧನೆಯ ಮೂಲಕ […]

ವಿಜಯಪುರದಲ್ಲಿ ಕಾಂಗ್ರೆಸ್ಸಿನ ಕಟ್ಟಡ, ಕಟ್ಟಿಗೆ ಕಾರ್ಕಮಿಕರ ಸಂಘಟನೆ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದ ಪ್ರೊ. ರಾಜು ಆಲಗೂರ

ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತೀಯ ರಾಷ್ಟ್ರೀಯ ಕಟ್ಟಡ ಕಾರ್ಮಿಕರ ಹಾಗೂ ಕಟ್ಟಿಗೆ ಕಾರ್ಮಿಕರ ಕಾಂಗ್ರೆಸ್ ಸಂಘಟನೆ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ ಮತ್ತು ಲೋಕಸಭಾ ಚುನಾವಣೆ ಪೂರ್ವ ತಯಾರಿ ಕುರಿತು ಚರ್ಚಿಸಲು ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಇಂಡಿಯನ್ ನ್ಯಾಷನಲ್ ಬಿಲ್ಡಿಂಗ್ ಕನಸ್ಚ್ರಕ್ಷನ್ ಫಾರೆಸ್ಟ ಆಂಡ್ ವುಡ್ ವರ್ಕಸ್ ಫೆಡರೇಶನ್ ರಾಜ್ಯ ಅಧ್ಯಕ್ಷ ಜಿ. ಆರ್. ದಿನೇಶ, ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಾರ್ಮಿಕರ ಸಲುವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, […]