ರೈತರು ಇಸ್ರೆಲ್ ಮಾದರಿಯ ಕೃಷಿ ಅಳವಡಿಸಿಕೊಂಡರೆ ಹೆಚ್ಚಿನ ಆದಾಯ ಸಾಧ್ಯ- ಶಾಸಕ ರಾಜುಗೌಡ ಪಾಟೀಲ

ವಿಜಯಪುರ: ರೈತರು ಇಸ್ರೇಲ್ ಮಾದರಿಯಲ್ಲಿ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರಿನ ಸದ್ಭಳಕೆಯೊಂದಿಗೆ ಉತ್ತಮ ಇಳುವರಿ ಪಡೆದು ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ವಿಜಯಪುರ ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕೃಷಿ ಮೇಳ-2023-24ರ ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಸ್ರೇಲ್ ಕೃಷಿ ಮಾದರಿ ಪದ್ಧತಿ ಅಳವಡಿಸಿಕೊಳ್ಳಬೇಕು. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. […]

ಬಡವರು, ದೀನದಲೀತರು, ಕಾರ್ಮಿಕರು, ಅಲ್ಪಸಂಖ್ಯಾತರು, ಹಿಂದುಳಿದವರ ಏಳಿಗೆಗಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ- ಅಭಿಷೇಕ ದತ್ತ

ವಿಜಯಪುರ: ಕಾಂಗ್ರೆಸ್ ಪಕ್ಷ ಬಡವರು, ರೈತರು, ಕಾರ್ಮಿಕರು, ದೀನದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸೇರಿದಂತೆ ಎಲ್ಲ ರಂಗಗಳಲ್ಲಿ ಏಳಿಗೆಯಾಗಲು ಶ್ರಮಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ ದತ್ತ ಹೇಳಿದ್ದಾರೆ. ವಿಜಯಪುರದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿದ ಅವರು, ಮುಂಬರುವ ಲೋಕಸಭೆ ಚುನಾವಣೆ ಮತ್ತು ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ನಿಗಮ ಮಂಡಳಿಗಳಲ್ಲಿ ನೇಮಕದ ಕುರಿತು ಮತ್ತು ಕೆಪಿಸಿಸಿ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಸರಿಯಾದ ರೀತಿಯಲ್ಲಿ ಮುಟ್ಟಿಸುವ ಕುರಿತು ಕಾಂಗ್ರೆಸ್ […]

ಎತ್ತುಗಳ ಸಂರಕ್ಷಣೆ ಜನಜಾಗೃತಿಗಾಗಿ ಅಭಿ ಫೌಂಡೇಶನ್ ವತಿಯಿಂದ ನಂದಿಯಾತ್ರೆ

ವಿಜಯಪುರ: ಎತ್ತುಗಳು ಕೃಷಿಕರಿಗೆ ಕುಟುಂಬ ಸದಸ್ಯರಿದ್ದಂತೆ.  ಆದರೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಇತರ ಕಾರಣಗಳಿಂದಾಗಿ ಎತ್ತುಗಳ ಜಾಗದಲ್ಲಿ ಯಂತ್ರೋಪಕರಣಗಳು ಅವರಿಸುತ್ತಿವೆ.  ಇದರಿಂದ ಎತ್ತುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದ್ದು, ಇದು ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯದಂತೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಅಭಿ ಫೌಂಡೆಶನ್ ವತಿಯಿಂದ ಎತ್ತುಗಳ ಸಂರಕ್ಷಣೆಯ ಮಹತ್ವ ತಿಳಿಸಲು ನಂದಿಯಾತ್ರೆ ಕಾರ್ಯಕ್ರಮ ನಡೆಯುತ್ತಿದೆ.  ಗ್ರಾಮದ ಎತ್ತು ಸಾಕಾಣಿಕೆದಾರರ ನೇತೃತ್ವದಲ್ಲಿ ಜೋಡೆತ್ತಿನ ಬಂಡೆಯ ಮೇಲೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ […]

ವಿಜಯಪುರ- ತಿರುಪತಿ ರೈಲು ಸೇವೆ ಪ್ರಾರಂಭಿಸಿ- ಸಂಸದ ರಮೇಶ ಜಿಗಜಿಣಗಿ ಅವರಿಂದ ರೇಲ್ವೆ ಇಲಾಖೆ ಜಿಎಂ ಗೆ ಪತ್ರ

ವಿಜಯಪುರ: ವಿಜಯಪುರದಿಂದ ತಿರುಪತಿಗೆ ನೇರ ರೈಲು ಸಂಚಾರ ಆರಂಭಿಸುವxತೆ ಸಂಸದ ರಮೇಶ ಜಿಗಜಿಣಗಿ ಅವರು ಹುಬ್ಬಳ್ಳಿ ರೇಲ್ವೆ ಜನರಲ್ ಮ್ಯಾನೇಜರ್ ಗೆ ಪತ್ರ ಬರೆದಿದ್ದಾರೆ. ಜಿಲ್ಲೆಯ ಜನತೆ ವಿಜಯಪುರದಿಂದ ತಿರುಪತಿಯ ಮದ್ಯೆ ರೈಲುಸೇವೆ ಪ್ರಾರಂಭಿಸುವಂತೆ ಬಹುದಿನಗಳಿಂದ ಮನವಿ ಮಾಡುತ್ತಿದ್ದಾರೆ.  ಈ ಕುರಿತು ಈಗಾಗಲೇ ಕೇಂದ್ರ ರೇಲ್ವೆ ಸಚಿವರೊಂದಿಗೂ ಚರ್ಚೆ ನಡೆಸಲಾಗಿದೆ.  ಈ ಭಾಗದಿಂದ ತಿರುಪತಿಗೆ ನೇರ ರೈಲು ಸೇವ ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ವಿಜಯಪುರ- ತಿರುಪತಿ ಮಧ್ಯೆ ರೈಲು ಸಂಚಾರ ಪ್ರಾರಂಭಿಸಿ […]

1857ರ ಸ್ವಾತಂತ್ರ್ಯ ಸಂಗ್ರಾಮ ರಾಷ್ಟ್ರೀಯತೆ ಬೆಳೆಯಲು ಕಾರಣ- ಶಂಕರಗೌಡ ಸೋಮನಾಳ

ವಿಜಯಪುರ: 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ರಾಷ್ಟ್ರೀಯತೆ ಬೆಳೆಯಲು ಹಾಗೂ ಸ್ವಾತಂತ್ರ್ಯ ಚಳವಳಿಯಿಂದ ಭಾರತೀಯ ಜನರಲ್ಲಿ ರಾಷ್ಟ್ರೀಯತೆಯ ಮನೋಭಾವ ಬರಲು ಕಾರಣವಾಯಿತು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಐಕ್ಯೂಎಸಿ ಸಹಯೋಗದೊಂದಿಗೆ ಇತಿಹಾಸ ವಿಭಾಗದಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಅಮೋಘವಾಗಿದ್ದು, 1857ರ ಪ್ರಥಮ ಸ್ವಾತಂತ್ರö್ಯ ಸಂಗ್ರಾಮವು ಪ್ರೇರಣೆಯಾಗಿದೆ. ವಿದ್ಯಾರ್ಥಿಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಯ ದೃಷ್ಟಿಕೋನದಿಂದಲೂ ಆಧುನಿಕ ಭಾರತದ […]

ನೋಡಲ್ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ- ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚನೆ

ವಿಜಯಪುರ: ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ಧ ಚಿತ್ರಕ್ಕೆ ಜಿಲ್ಲೆಯಲ್ಲಿ ಜನವರಿ 26 ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿರುವ ಸ್ತಬ್ಧಚಿತ್ರ ವಾಹನಕ್ಕೆ ಮಾರ್ಗನಕ್ಷೆ (ರೂಟ್ ಮ್ಯಾಪ್) ಸಿದ್ಧಪಡಿಸಲಾಗಿದ್ದು, ಮಾರ್ಗನಕ್ಷೆಯಂತೆ ಸ್ತಬ್ಧಚಿತ್ರ ವಾಹನ ಸಂಚರಿಸಲು ಎಲ್ಲ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾದ […]

ಯುಜಿಸಿ- ಎನ್ ಇ ಟಿ ಪಾಸಾದ ಬಸವನಾಡಿನ ಯುವಕ ಸುದರ್ಶನ ಯಡಹಳ್ಳಿ

ವಿಜಯಪುರ: ಬಸವನಾಡಿನ ಯುವಕ ಸುದರ್ಶನ ಯಡಹಳ್ಳಿ ಎನ್ಇಟಿ ಪಾಸಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಡಿಸೆಂಬರ್ 2023ರಲ್ಲಿ ನಡೆಸಿದ ಜೆ ಆರ್ ಎಫ್- ಮತ್ತು ಅಸಿಸ್ಟಂಟ ಪ್ರೊಫೆಸರ್ ಪರೀಕ್ಷೆಯಲ್ಲಿ ಸುದರ್ಶನ ಯಡಹಳ್ಳಿ ಅವರು ಅಸಿಸ್ಟಂಟ್ ಪ್ರೊಫೆಸರ್ ಪರೀಕ್ಷೆ ಪಾಸಾಗಿದ್ದಾರೆ.  ಯುಜಿಸಿ ಪ್ರತಿ ವರ್ಷ ಎರಡು ಬಾರಿ ಆನ್ ಲೈನ್ ಮೂಲಕ ನೆಟ್ ಮತ್ತು ಜೆ ಆರ್ ಎಫ್ ಪರೀಕ್ಷೆ ನಡೆಸುತ್ತದೆ.  ಕಳೆದ ಡಿಸೆಂಬರ್ ನಲ್ಲಿ ನಡೆಸಿದ ಈ ಪರೀಕ್ಷೆಯಲ್ಲಿ ಒಟ್ಟು 9.50 […]

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಸರಕಾರದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಿದ ಸಂಗಮೇಶ ಬಬಲೇಶ್ವರ

ವಿಜಯಪುರ: 12ನೇ ಶತಮಾನದ ಸಮಾಜ ಸುಧಾರಕ, ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸ್ಥಾಪಕ ಅಣ್ಣ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದಕ್ಕೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಕೃತಜ್ಞತೆ ಸಲ್ಲಿಸಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರ ಐತಿಹಾಸಿಕ ತೀರ್ಮಾನ ಮಾಡಿದೆ.  ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ, ಸಚಿವರಾದ ಶರಣ ಎಂ. ಬಿ. ಪಾಟೀಲ, ರಾಜ್ಯ ಸಚಿವ ಸಂಪುಟದ ಎಲ್ಲ […]

ಬಸವ ನಾಡಿನ ವೈದ್ಯರಿಂದ ಯಶಸ್ಸಿ ಕಿಡ್ನಿ ಕಸಿ- ಬಿಹಾರ ಮೂಲದ ಯುವಕನಿಗೆ ಉಚಿತವಾಗಿ ಮೂತ್ರಪಿಂಡ ಶಸ್ತ್ರಚಿಕಿತ್ಸೆ

ವಿಜಯಪುರ: ರೋಗಿಗಳಿಗೆ ಶಸ್ತ್ರಚಿಕಿತ್ಸೆಗಳೆಂದರೆ ಸಾಕು ಅವರಿಗಷ್ಟೇ ಅಲ್ಲ ಅವರ ಸಂಬಂಧಿಕರಿಗೆ ಚಿಂತೆ ಎದುರಾಗುತ್ತದೆ.  ಅದರಲ್ಲೂ ಬಡವರಿಗೆ ಮೂತ್ರಪಿಂಡ ಕೃಸಿ ಶಸ್ತ್ರಚಿಕಿತ್ಸೆ ಬಗ್ಗೆ ಕೇಳಿದರೂ ಆತಂಕ ಉಂಟಾಗುತ್ತದೆ.  ಅದರ ಚಿಕಿತ್ಸಾ ವೆಚ್ಚದ ಬಗ್ಗೆಯೂ ಗಾಬರಿಯಾಗುತ್ತದೆ.  ಬಡವರ ಪಾಲಿಗೆ ಈ ಶಸ್ತ್ರಚಿಕಿತ್ಸೆಗಳು ಕೈಗೆಟುಕದಂತಾಗಿ ಬಿಡುತ್ತದೆ.  ಆದರೆ, ಬಸವನಾಡು ವಿಜಯಪುರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ವೈದ್ಯರು ಬಿಹಾರ ಮೂಲದ 17 ವರ್ಷದ ಯುವಕನೊಬ್ಬನಿಗೆ ಉಚಿತವಾಗಿ ಕಿಡ್ನಿಕಸಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಿಡ್ನಿಕಸಿ […]

ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ- ಆರ್. ಎಸ್. ಪಾಟೀಲ ಕೂಚಬಾಳ

ವಿಜಯಪುರ: ಪಕ್ಷದ ಕಾರ್ಯಕರ್ತರು ಮತ್ತು ಹಿರಿ ಮುಖಂಡರ ಆಶೀರ್ವಾದದಿಂದ ತಮಗೆ ಮತ್ತೋಮ್ಮೆ ಬಿಜೆಪಿ ಜಿಲ್ಲಾಧ್ಯ್ಕಷ ಸ್ಥಾನದ ಜವಾಬ್ದಾರಿ ಒಲಿದು ಬಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಪುನರಾಯ್ಕೆಯಾಗಿರುವುದು ನನ್ನ ಸುದೈವ.  ಜಿಲ್ಲಾ ಬಿಜೆಪಿಯಲ್ಲಿ ಯಾವ ಬಣವೂ ಇಲ್ಲ.  ಎಲ್ಲ ನಾಯಕರು ನನ್ನ ಆಯ್ಕೆಗೆ ಸಹಕರಿಸಿ ಈ ಜವಾಬ್ದಾರಿಯನ್ನು ಹೊರೆಸಿದ್ದಾರೆ, ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ […]