ಶ್ರೀ ಗೋಪಾಲ ನಂದುಲಾಲ ಮಹಾರಾಜರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ-ಸಂತಸ ವ್ಯಕ್ತಪಡಿಸಿದ ಮಹಾರಾಜರು

ವಿಜಯಪುರ: ಅಯೋಧ್ಯೆಯಲ್ಲಿ ಜನೇವರಿ 22 ರಂದು ನಡೆಯಲಿರುವ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ವಿಜಯಪುರ ಜಿಲ್ಲೆಯಿಂದ ಶ್ರೀ ಗೋಪಾಲ ನಂದುಲಾಲ ಮಹಾರಾಜ ಅವರನ್ನು ಆಹ್ವಾಸಲಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಮಹಾರಾಜರು, ತಮಗೆ ಆಹ್ವಾನ ನೀಡಿರುವುದು ಬಂಜಾರಾ ಸಮಾಜಕ್ಕೂ ಪ್ರಾತಿನಿಧ್ಯ ನೀಡಿದಂತಾಗಿದ್ದು, ಇದು ಖುಷಿಯ ಸಂಗತಿಯಾಗಿದೆ. ರಾಮ ಮಂದಿರದ ಟ್ರಸ್ಟ್ ಸಮಿತಿಯವರಿಗೆ ಗೌರವಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ತೊರವಿಎಲ್. ಟಿ- 1ರಿಂದ ಅಯೋಧ್ಯೆಗೆ ಹೋಗುತ್ತಿರುವುದು ನನ್ನ ಸೌಭಾಗ್ಯ. ಸಂತ ಸೇವಾಲಾಲ ಮಹಾರಾಜರ […]
ವಿಜಯಪುರದಲ್ಲಿ ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ವಿಜಯಪುರ: ಸಮ ಸಮಾಜದ ಕನಸು ಹೊತ್ತು,ಆ ಮೂಲಕ ಸತ್ಯಪಥದಲ್ಲಿ ನಡೆದು, ತಮ್ಮ ವಚನಗಳ ಮೂಲಕ ಸಾಮಾನ್ಯರಿಗೂ ತಿಳಿಯುವಂತೆ ಬರೆದಂತೆ,ನುಡಿದಂತೆ ನಡೆದು ಜನಸಾಮಾನ್ಯರಿಗೆ ಅರಿವಿನ ಗುರುವಾಗಿದ್ದವರು 12ನೇ ಶತಮಾನದ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದ್ದಾರೆ. ಜಿಲ್ಲಾಡಳಿತ ಮತ್ತು ನಾನಾ ಇಲಾಖೆಗಳ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮAದಿರದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು. ಶಿವಯೋಗಿ […]
ಬಸವ ನಾಡಿನ ರಾಮಭಕ್ತರ ಭಕ್ತಿ- ಬ್ಯಾಂಕಾಕ್ ಬಳಿ 13 ಸಾವಿರ ಅಡಿ ಸ್ಕೈ ಡೈವಿಂಗ್ ಮೂಲಕ ಧುಮುಕಿ ದೈವಭಕ್ತಿ ಸಮರ್ಪಣೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಭಕ್ತರು ತರಹೇವಾರಿಯಾಗಿ ತಂತಮ್ಮ ಭಕ್ತಿಯ ಪರಾಕಾಷ್ಟೆ ತೋರಿಸುತ್ತಿದ್ದಾರೆ. ಕೆಲವು ಭಕ್ತರು ಪಾದಯಾತ್ರೆ ಮೂಲಕ ಅಯೋಧ್ಯೆಗೆ ತೆರಳುತ್ತಿದ್ದರೆ, ಮತ್ತೆ ಹಲವರು ತಮ್ಮ ಕೈಲಾದ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾರೆ. ಗುಜರಾತಿನಿಂದ ಅತೀ ಉದ್ದವಾದ ಊದಿನ ಕಡ್ಡಿಯನ್ನು ಕಳುಹಿಸಿ ಕೊಟ್ಟಿದ್ದರೆ, ಮತ್ತೋಬ್ಬರು ಚಿನ್ನದ ಪಾದುಕೆಗಳನ್ನು ಕಳುಹಿಸಿದ್ದಾರೆ. ಮತ್ತೆ ಹಲವರು ವಸ್ತ್ರಗಳು, ಸುಗಂಧ ದ್ರವ್ಯಗಳು, ಬಟ್ಟೆಗಳು, ಪೂಜಾ ಸಾಮಗ್ರಿಗಳು, ತರಹೇವಾರಿ ಖಾದ್ಯಗಳು, ಪಾತ್ರೆಗಳು, ಗಂಟೆಗಳನ್ನು ಭಕ್ತಿ ಸಮರ್ಪಣೆ ಮಾಡಿದ್ದಾರೆ. ಮತ್ತೆ […]
StarpUp Story: ಉ. ಕ. ದ ಪ್ರಥಮ ಸ್ಟೀಲ್ ರಿಂಗ್ ಯಂತ್ರ: ಕಟ್ಟಡ ನಿರ್ಮಾಪಕರಿಗೆ ವರವಾದ ವಿನೋದ ಪೀರಗೊಂಡರ ವೈಭವಿ ಟ್ರೆಡರ್ಸ್

ಮಹೇಶ ವಿ. ಶಟಗಾರ ವಿಜಯಪುರ: ಮನೆಕಟ್ಟಿ ನೋಡು. ಮದುವೆ ಮಾಡಿ ನೋಡು ಎಂಬುದು ನಾಣ್ಣುಡಿ. ಆದರೆ, ಮನೆ ಕಟ್ಟುವಾಗ ಸಿಕ್ಕ ಅನುಭವವನ್ನೇ ಜೀವನದಲ್ಲಿ ಉದ್ಯಮವಾಗಿಸಿಕೊಂಡು ಯಶಸ್ವಿಯಾದರೆ ಹೇಗಿರಬೇಡ. ಹೌದು. ಈ ರೀತಿ ಮನೆ ಕಟ್ಟುವಾಗ ಎದುರಿಸಿದ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ರೂಪಿಸಿದ ಯೋಜನೆಗಳ ಮೇಲೆ ಯುವಕನೊಬ್ಬ ಉದ್ಯಮ ಪ್ರಾರಂಭಿಸಿ ಯಶಸ್ವಿಯಾಗಿರುವ ಸ್ಟೋರಿ ಇದು. ವಿಜಯಪುರ ನಗರದ ಸೋಲಾಪುರ ರಸ್ತೆಯಿಂದ ಶ್ರೀ ಸಿದ್ಧಾರೂಢ ಮಠದ ಕಡೆಗೆ ಹೊರಟರೆ ಸಾಕು ಮೂರ್ನಾಲ್ಕು ಅಂಗಡಿಗಳನ್ನು ದಾಟಿದರೆ ವೈಭವಿ ಟ್ರೇಡರ್ಸ್ […]
ವಿಜಯಪುರ ಜಿ. ಪಂ. ನೂತನ ಸಿಇಓ ರಿಶಿ ಆನಂದ ಅಧಿಕಾರ ಸ್ವೀಕಾರ

ವಿಜಯಪುರ: ಜಿ. ಪಂ. ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ರಿಶಿ ಆನಂದ ಅಧಿಕಾರ ಸ್ವೀಕರಿಸಿದ್ದಾರೆ. ವಿಜಯಪುರ ಜಿ. ಪಂ. ಸಿಇಓ ಆಗಿದ್ದ ರಾಹುಲ ಶಿಂಧೆ ಅವರು ಬೆಳಗಾವಿ ಜಿ. ಪಂ. ಸಿಇಓ ಆಗಿ ವರ್ಗಾವಣೆಯಾಗಿದ್ದಾರೆ. ಅವರ ಸ್ಥಾನಕ್ಕೆ ಈಗ ರಿಶಿ ಆನಂದ ಅವರು ವರ್ಗವಣೆಯಾಗಿದ್ದು, ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿ. ಪಂ. ಉಪಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ […]
ದೇಶದ 500 ಟಾಪ್ ಸ್ಕೂಲ್ ಗಳಲ್ಲಿ ಬಸವನಾಡಿನ ಪ್ರೇರಣಾ ಪಬ್ಲಿಕ್ ಸ್ಲೂಕ್ ಗೆ ಸ್ಥಾನ- ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್ಸ್ ಗೌರವ

ವಿಜಯಪುರ: ನಗರದ ಪ್ರೇರಣಾ ಪಬ್ಲಿಕ್ ಸ್ಕೂಲ್ ದೇಶದ 500 ಟಾಪ್ ಶಾಲೆಗಳಲ್ಲಿ ಸ್ಥಾನ ಪಡೆದಿದೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್- 2023 ನೀಡಿ ಗೌರವಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಶಾಲೆಯ ಶ್ರೇಷ್ಠತೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ಶಾಲೆಯು ಕರ್ನಾಟಕದ 25 ಅತ್ಯುತ್ತಮ ಸಿಬಿಎಸ್‌ಇ ಶಾಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಅಲ್ಲದೇ, ಈ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಜಿಲ್ಲೆಯ ಏಕೈಕ ಶಾಲೆ ಇದಾಗಿದೆ. […]
ಗ್ರಾಮೊದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕೆ ಸಹಕಾರಿ ಸಂಘದ ಚುನಾವಣೆ ಫಲಿತಾಂಶ ಪ್ರಕಟ

ವಿಜಯಪುರ: ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಬಳಿ ಇರುವ ಗ್ರಾಮ್ಯೋದ್ಯೋಗ ಎಣ್ಣೆ ಉತ್ಪಾದಕರ ಕೈಗಾರಿಕ ಸಹಕಾರ ಸಂಘಕ್ಕೆ 2024-29ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ನಿರ್ದೇಶಕರಾಗಿ ಆಯ್ಕೆಯಾದ ಅಭ್ಯರ್ಥಿಗಳು, ಪಡೆದ ಮತಗಳ ವಿವರ ಇಲ್ಲಿದೆ. ಸಾಮಾನ್ಯ ಕ್ಷೇತ್ರ ಚಂದ್ರಶೇಖರ ಇಜೇರಿ(224), ಸುರೇಶ ಗಚ್ಚಿನಕಟ್ಟಿ(243), ಸಿದ್ಧಪ್ಪ ಸಜ್ಜನ(243), ರಾಜಶೇಖರ ಸಜ್ಜನ(221), ಈರಪ್ಪ ಹಿಪ್ಪರಗಿ(219), ನಜೀರಅಹ್ಮದ ನಾಡೇವಾಲೆ(202), ಮಲ್ಲಿಕಾರ್ಜುನ ನುಚ್ಚಿ(200). ಪರಿಶಿಷ್ಟ ಜಾತಿ ಕ್ಷೇತ್ರ ದಶರಥ ಬಿರಾದಾರ(166) ಅವಿರೋದವಾಗಿ ಆಯ್ಕೆಯಾದ ಅಭ್ಯರ್ಥಿಗಳು ಅಶೋಕ ನ್ಯಾಮಗೌಡ(ಹಿಂದುಳಿದ ವರ್ಗ […]
ಶ್ರೀ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ

ವಿಜಯಪುರ: ನಗರದಲ್ಲಿ ನಡೆದ ಶ್ರೀ ಶಿವದಾಸಿಮಯ್ಯ ಜಯಂತಿ, ಪ್ರತಿಭಾ ಪುರಸ್ಕಾರ, ದಾನಿಗಳ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ. ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ ಎಂದು ಹೇಳಿದರು. ಸಮಾಜದಲ್ಲಿರುವ ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕು. ನಾನೂ […]
ಶಾಲೆಗಳ ಅಭಿವೃದ್ಧಿಗೆ ನರೇಗಾ ಸಹಕಾರಿ: ತಾ. ಪಂ. ಸಹಾಯಕ ನಿರ್ದೇಶಕ ಕಾಸಿಂಸಾಬ್ ಮಸಳಿ

ವಿಜಯಪುರ: ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ಅಡುಗೆ ಕೋಣೆಯನ್ನು ವಿಜಯಪುರ ತಾ. ಪಂ. ಸಹಾಯಕ ನಿರ್ದೇಶಕ ಕಾಸಿಂಮಸಾಬ ಮಸಳಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮನರೇಗಾ ಯೋಜನೆಯು ಗ್ರಾಮೀಣ ಜನರಿಗೆ ರೂ. 316 ಕೂಲಿ ಜೊತೆಗೆ 100 ದಿನಗಳ ಉದ್ಯೋಗ ಖಾತರಿ ನೀಡುವವರ ಜೊತೆಗೆ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ನೆರವು ನೀಡುತ್ತಿದೆ. ಸರಕಾರಿ […]
ವಿಜಯಪುರದಲ್ಲಿ ಸಂಕ್ರಾಂತಿ ಅಂಗವಾಗಿ ಫಲಪುಷ್ಪ ಪ್ರದರ್ಶನ- ಗಮನ ಸೆಳೆಯುತ್ತಿದೆ ಹೂವು-ಹಣ್ಣುಗಳ ವರ್ಣಾಲಂಕಾರ

ವಿಜಯಪುರ: ಮಕರ ಸಂಕ್ರಾಂತಿ ಅಂಗವಾಗಿ ನಗರದ ಜಿಲ್ಲಾ ತೋಟಗಾರಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಗ ಗಮನ ಸೆಳೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ 2023-24ನೇ ವರ್ಷದ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ವಿಜಯಪುರ ಮಹಾನಗರ ಪಾಲಿಕೆಯ ನೂತನ ಮೇಯರ್ ಮೆಹಜಬೀನ್ ಅಬ್ದುಲ್ ರಜಾಕ ಹೊರ್ತಿ […]