ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿಗಾಗಿ ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ವಾಕ್ ಆ್ಯಂಡ್ ರನ್

ವಿಜಯಪುರ: ಡ್ರಗ್ಸ್ ಮತ್ತು ಮಾದಕ ದ್ರವ್ಯ ಸೇವೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಎಸ್ಪಿ ಋಷಿಕೇಶ ಸೋನಾವಣೆ ಭಗವಾನ ನೇತೃತ್ವದಲ್ಲಿ ನಗರದಲ್ಲಿ ವಾಕ್ ಆ್ಯಂಡ್ ರನ್ ನಡೆಸಿದರು. ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ, ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್ ಮೂಲಕ ವಾಟರ್ ಟ್ಯಾಂಕ್, ಗೋದಾವರಿ ಹೋಟೆಲ್ ವರೆಗೆ ನಡೆಯಿತು. ನಂತರ ಅಲ್ಲಿಂದ ಪೊಲೀಸ್ ಕವಾಯತು ಮೈದಾನದವರೆಗೆ ಸಾಗಿತು. ಈ ಸಂದರ್ಭದಲ್ಲಿ ಕೈಯ್ಯಲ್ಲಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ಸೇವನೆಯಿಂದಾಗುವ […]
ಬುರಣಾಪುರದಲ್ಲಿ ಸರಕಾರಿ ಬಾಲಕರ ಪಿಯು ಕಾಲೇಜಿನ ವತಿಯಿಂದ ಎನ್ಎಸ್ಎಸ್ ವಾರ್ಷಿಕ ಶಿಬಿರ- ವಿದ್ಯಾರ್ಥಿಗಳಿಂದ ಶ್ರಮದಾನ

ವಿಜಯಪುರ: ವಿಜಯಪುರ ನಗರದಲ್ಲಿರುವ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ವಿಜಯಪುರ ತಾಲೂಕಿನ ಬುರಣಾಪುರ ಗ್ರಾಮದಲ್ಲಿ ಒಂದು ವಾರ ವಾರ್ಷಿಕ ಎನ್ಎಸ್ಎಸ್ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಗ್ರಾಮ ಪಂಚಾಯಿತಿ, ಮಹಲ್, ಐನಾಪೂರ ಗ್ರಾಮದ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚತೆಗೆ ಶ್ರಮದಾನ ಮಾಡಿದರು. ಈ ಶಿಬಿರದಲ್ಲಿ ಪರಿಸರ ರಕ್ಷಣೆ, ಆರೋಗ್ಯ ಕಾರ್ಯಕ್ರಮ, ನಾನಾ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಯಿತ್ತು. ಈ ಶಿಬಿರದ ಸಮಾರೋಪ ಸಮಾರಂಭವನ್ನು ಪಿಯು ಉಪನಿದೇರ್ಶಕ ಡಾ. ಸಿ. ಕೆ. ಹೊಸಮನಿ ಉದ್ಘಾಟಿದರು. […]
ಕೇವಲ 18 ವರ್ಷಗಳಲ್ಲಿ ರೂ. 3000 ಕೋ. ಠೇವಣಿ ಸಂಗ್ರಹಿಸಿದ ಸಿದ್ಧಸಿರಿ- ರಾಜ್ಯಾದ್ಯಂತ ಸಾವಿರಾರು ಯುವಜನರಿಗೆ ಉದ್ಯೋಗ- ರಾಘವ ಅಣ್ಣಿಗೇರಿ

ವಿಜಯಪುರ: ಸಿದ್ಧಸಿರಿ ಸೌಹಾರ್ದ ಕೇವಲ 18 ವರ್ಷಗಳಲ್ಲಿ ರೂ. 3000 ಕೋ. ಠೇವಣಿ ಪೂರೈಸಿ ದಾಖಲೆ ನಿರ್ಮಿಸಿದ್ದು, ರಾಜ್ಯಾದ್ಯಂತ ನೂರಾರು ಯುವಕ- ಯುವತಿಯರಿಗೆ ಉದ್ಯೋಗ ಕಲ್ಪಿಸಿದೆ ಎಂದು ಸೌಹಾರ್ದದ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ ಅಣ್ಣಿಗೇರಿ ಹೇಳಿದ್ದಾರೆ. ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಗ್ರಾಹಕರ ಸಭೆ ಸಭೆಯಲ್ಲಿ ಮಾತನಾಡಿದ ಅವರು, ಸೌಹಾರ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆ ದಕ್ಷ ಆಡಳಿತ ಮಂಡಳಿಯನ್ನು ಹೊಂದಿದೆ. ರಾಜ್ಯಾದ್ಯಂತ 158 ಶಾಖೆಗಳು, […]
ಕಾಲೇಜು, ವಿವಿ ಶುಲ್ಕ ಶೇ. 10ರಷ್ಟು ಹೆಚ್ಚಳಕ್ಕೆ ಎಬಿವಿಪಿ ಖಂಡನೆ- ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿರನ್ನಾಗಿ ಮಾಡುವ ಹುನ್ನಾರ ಆರೋಪ

ವಿಜಯಪುರ: ರಾಜ್ಯ ಸರಕಾರ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶುಲ್ಕವನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿರುವುದನ್ನು ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚೀನ ಕುಳಗೇರಿ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಶಿಕ್ಷಣವು ಎಲ್ಲರಿಗೂ ಸಿಗುವಂತಾಗಬೇಕು. ಅದು ಕೇವಲ ಉಳ್ಳವರ ಸ್ವತ್ತು ಆಗಬಾರದು. ಬಡ ಪ್ರತಿಭಾವಂತ, ಕೂಲಿ ಕಾರ್ಮಿಕರು, ರೈತಾಪಿ ವರ್ಗದ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಸುಲಭವಾಗಿ ಮತ್ತು ಕನಿಷ್ಠ ಶುಲ್ಕ ರಾಜ್ಯ ಸರಕಾರ ಶೇ.10ರಷ್ಟು ಶುಲ್ಕವನ್ನು ಹೆಚ್ಚಿಸಲು ಒಪ್ಪಿಗೆ ನೀಡಿರುವುದನ್ನು ವಿರೋಧಿಸುವುದಾಗಿ […]
ಪುರಾತತ್ವ ಇಲಾಖೆ ಅಧೀನದ ಮ್ಯೂಸಿಯಂ ಗಳಲ್ಲಿ ಬಾಂಬ್ ಬೆದರಿಕೆ- ವಿಜಯಪುರದಲ್ಲಿ ತನಿಖೆ ನಡೆಸಿ ಇದೊಂದು ಹುಸಿ ಇ-ಮೇಲ್ ಸಂದೇಶ ಎಂದ ಪೊಲೀಸರು

ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆಯ ಅಧೀನದಲ್ಲಿ ಬರುವ ಮ್ಯೂಸಿಯಂ ಗಳಲ್ಲಿ ಸ್ಪೋಟಕ ಇರಿಸಲಾಗಿದೆ ಎಂದು ಕಳುಹಿಸಲಾದ ಇ-ಮೇಲ್ ಸಂದೇಶವೊಂದು ಆತಂಕ ಸೃಷ್ಠಿಸಿದ ಘಟನೆ ನಡೆದಿದೆ. ಈ ಇ-ಮೇಲ್ ಸಂದೇಶದ ಮಾಹಿತಿ ಪಡೆದ ವಿಜಯಪುರ ಪೊಲೀಸರು ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿರುವ ಮ್ಯೂಸಿಯಂ ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿ ಇದೊಂದು ಹುಸಿ ಇ-ಮೇಲ್ ಸಂದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ನಸುಕಿನ ಜಾವ ಬಂದ ಇ-ಮೇಲ್ ಸಂದೇಶ, ರಾತ್ರಿ ಪೊಲೀಸರಿಗೆ ಮಾಹಿತಿ ನೀಡಿದ ಅಧಿಕಾರಿಗಳು ಮ್ಯೂಸಿಯಂ […]
ಬಸವ ನಾಡಿನ ಯುವಕ ದೂರದ ಅಮೇರಿಕದಲ್ಲಿ ಕೌನ್ಸಿಲರ್ ಆಗಿ ಆಯ್ಕೆ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯ. ಯುವಕ ನವೀನ ಹಾವಣ್ಣನವರ ದೂರದ ಅಮೇರಿಕಾದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಪೋರ್ಡ್ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಅವರು ಕೌನ್ಸಲಿಲರ್ ಆಗಿ ಚುನಾಯಿತರಾಗಿದ್ದಾರೆ. ಈ ಕೌನ್ಸಿಲರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ದೆ ಮಾಡಿದ್ದ ನವೀನ ಹಾವಣ್ಣವರ, ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ವಿರುದ್ಧ 33 ಮತಗಳ ಅಂತರಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಶುಕ್ರವಾರ ಪೀಟ್ಸ್ ಪೋರ್ಡ್ ಪ್ರದೇಶದ ಕೌನ್ಸಿಲರ್ ಆಗಿ […]
ಚಡಚಣ ಪಟ್ಟಣದಲ್ಲಿ ಪೊಲೀಸರಿಂದ ಮಾದಕ ದ್ರವ್ಯಗಳ ಬಳಕೆ ವಿರುದ್ದ ಜನಜಾಗೃತಿ ಜಾಥಾ

ವಿಜಯಪುರ: ಚಡಚಣ ಪಟ್ಟಣದಲ್ಲಿ ಪೊಲೀಸರು ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ ನಡೆಸಿದರು. ಸಿಬಿಐ ಸುರೇಶ ಬೆಂಡೆಗುಂಬಳ ನೇತೃತ್ವದಲ್ಲಿ ಪಿಎಸ್‌ಐ ಸಂಜಯ ಕಲ್ಲೂರ ಮತ್ತು ಸಿಬ್ಬಂದಿ ಚಡಚಣ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸುವ ಮೂಲಕ.ಮಾದಕ ವಸ್ತುಗಳ ಬಳಕೆ ತಡೆಯುವ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೇ, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಬೆಂಡೆಗುಂಬಳ, ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟ ಕಾನೂನು […]
ವಿಜಯಪುರದಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ- ಪೇಜಾವರ ಶ್ರೀ, ಬಸವಲಿಂಗ ಸ್ವಾಮೀಜಿ ಚಾಲನೆ

ವಿಜಯಪುರ: ನಗರದ ಕಂದಗಲ ಹಣಮಂತರಾಯ ರಂಗ ಮಂದಿರದಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ಸಂಸ್ಕೃತ ಅತ್ಯಂತ ಪ್ರಾಚೀನವಾದ ಭಾಷೆಯಾಗಿದೆ. ಇಂದು ಅದು ಕೇವಲ ಕೆಲವೇ ಜನ ಬಳಿಕೆ ಮಾಡುವ ಭಾಷೆಯಾಗಿದೆ. ದೇಶದ ಪ್ರತಿಯೊಂದು ಭಾಷೆಯಲ್ಲೂ ನಾವು ಶೇ. 60ರಷ್ಟು ಸಂಸ್ಕೃತ ಭಾಷೆಯ ಶಬ್ದಗಳನ್ನು ಬಳಿಕೆ ಕಾಣುತ್ತೇವೆ. ನಿಸರ್ಗದ ಪ್ರಾಣಿ ಪಕ್ಷಿಗಳ […]
ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರ 193ನೇ ಜನ್ಮದಿನ, ಪ್ರಶಸ್ತಿ ಪ್ರಧಾನ ಸಮಾರಂಭ- ದಲಿತ ವಿದ್ಯಾರ್ಥಿ ಪರಿಷತನಿಂದ ಆಯೋಜನೆ

ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾವಿತ್ರಿಬಾಯಿ ಫುಲೆ ಅವರ 193ನೇ ಜನ್ಮದಿನದ ಅಂಗವಾಗಿ 2024ನೇ ವರ್ಷದ ರಾಜ್ಯಮಟ್ಟದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ನಾಟಕ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮವನ್ನು ಪ್ರಜಾ ಪರಿವರ್ತನ ವೇದಿಕೆ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಬಿ. ಗೋಪಾಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಅವರು ಅಂದಿನ ದಿನಗಳಲ್ಲಿ ಮೆಲ್ಜಾತಿಯವರ ತುಳಿತ, ಹೆಣ್ಣುಮಕ್ಕಳು, ಶೊಷಿತ […]
ವಿಜಯಪುರದ ಐಶ್ವರ್ಯ ನಗರದಲ್ಲಿ ರಾಮ ಮಂದಿರ ಉದ್ಘಾಟನೆ ಆಮಂತ್ರಣ ಮಂತ್ರಾಕ್ಷತೆ ವಿತರಣೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿದ್ದು, ಈ ಕಾರ್ಯಕ್ರಮದ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ ನಗರದಲ್ಲಿ ನಡೆಯಿತು. ನಗರದ ಜ್ಞಾನಯೋಗಾಶ್ರಮ ಬಳಿ ಇರುವ ಐಶ್ವರ್ಯ ನಗರದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಅಯೋಧ್ಯದಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆ, ಅಯೋಧ್ಯೆ ದೇವಾಲಯದ ಚಿತ್ರಗಳನ್ನು ವಿತರಿಸಲಾಯಿತು. ಐಶ್ವರ್ಯ ನಗರದ ಸುತ್ತಲಿನ ಬಡಾವಣೆಗಳ ರಾಮಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶ ಪಾಟೀಲ, ಸಿದ್ದು ಕರಲಗಿ, ವಿರಾಜ ಅಂಗಡಿ, ಜಯಪ್ರಕಾಶ ಅಂಬಲಿ, ರವಿ ಹಿತ್ತಲಮನಿ, […]