ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಸಚಿವ ಎಂ. ಬಿ. ಪಾಟೀಲ ಸೂಚನೆ

ವಿಜಯಪುರ: ಐತಿಹಾಸಿಕ ಸ್ಮಾರಕಗಳನ್ನೊಳಗೊಂಡ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ರೋಡ್ ಮ್ಯಾಪ್ ಸಿದ್ಧಪಡಿಸಬೇಕು. ಪಾರಂಪರಿಕ ತಾಣಗಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪಾರಂಪರಿಕ ತಾಣಗಳ ರಕ್ಷಣೆ ಹಾಗೂ ಸ್ವಚ್ಛತೆಯೊಂದಿಗೆ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ವಹಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ […]
ಸಿದ್ದೇಶ್ವರ ಸ್ವಾಮೀಜಿಗಳ ನೀತಿ, ಆದರ್ಶಗಳನ್ನು ಸರಕಾರ ಪಾಲಿಸಲಿದೆ-ನಾನು ಬಸವಾದಿ ಶರಣರ ಅನುಯಾಯಿ- ಸಿಎಂ ಸಿದ್ಧರಾಮಯ್ಯ

ವಿಜಯಪುರ: ನಾನು ಬಸವಾದಿ ಶರಣರ ಅನುಯಾಯಿ. ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ನೀತಿ ಆದರ್ಶಗಳನ್ನು ನಾನು ಮತ್ತು ನಮ್ಮ ಸರಕಾರ ಪಾಲನೆ ಮಾಡಲಿದೆ ಎಂದು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಹೇಳಿದ್ದಾರೆ. ವಿಜಯಪುರ ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿ ಇಂದಿಗೆ ಒಂದು ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನು ಬಸವಾದಿ ಶರಣರ ಅನುಯಾಯಿ. ಅವರು ಜಾತಿ ಮತ್ತು ಧರ್ಮ ರಹಿತವಾದ ಸಮಾಜ ನಿರ್ಮಾಣ ಗುರಿ […]
ಶ್ರೀ ಸಿದ್ಧೇಶ್ವರ ಅಪ್ಪನವರಂಥ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ- ಸಂಸದ ರಮೇಶ ಜಿಗಜಿಣಗಿ ಭಾವುಕ ನುಡಿ

ವಿಜಯಪುರ: ಶ್ರೀ ಸಿದ್ದೇಶ್ವರ ಅಪನವರಂಥ ಗುರು ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಗುರುನಮನ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನು ಸಮಾಜದ ಅತ್ಯಂತ ಸಣ್ಣ ವ್ಯಕ್ತಿ. ಆದರೆ, ಶ್ರೀಗಳು ನನ್ನನ್ನು ಅತ್ಯಂತ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ತಮ್ಮ ಪಕ್ಕದಲ್ಲಿಯೇ ಕೂಡಿಸಿಕೊಂಡು ಊಟ ಮಾಡುತ್ತಿದ್ದರು. ಅವರಂಥ ಸಂತರನ್ನು ನನ್ನ ಇಡೀ ಜೀವನದಲ್ಲಿಯೇ ಕಂಡಿಲ್ಲ. ವ್ಯಕ್ತಿತ್ವದಿಂದಲೇ ಅವರು ಜಗತ್ಪ್ರಸಿದ್ಧಿಯನ್ನು ಗಳಿಸಿದ್ದರು. ಸ್ವಂತಕ್ಕೆ ಏನನ್ನು ಭಯಸದೆ ಸದಾ ಸಮಾಜಕ್ಕೆ […]
ಅಲೆಮಾರಿ ಜನಾಂಗದ ಸೌಲಭ್ಯಗಳ ಕುರಿತು ಅರಿವು ಮೂಡಿಸಿ ಅನುಷ್ಠಾನಗೊಳಿಸಿ- ಜಿಲ್ಲಾಧಿಕಾರಿ ಟಿ. ಭೂಬಾಲನ ಸೂಚನೆ

ವಿಜಯಪುರ: ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸರಕಾ ರದಿಂದ ದೊರೆಯುವ ಸೌಲಭ್ಯಗಳ ಕುರಿತು ಸೂಕ್ತ ಜಾಗೃತಿ ಹಾಗೂ ಅರಿವು ಮೂಡಿಸಿ ಸಮರ್ಪಕವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ-ಅರೆ ಅಲೆಮಾರಿ ಜನಾಂಗಕ್ಕೆ ದೊರೆಯುವ ಸೌಲಭ್ಯಗಳನ್ನು ದೊರಕಿಸಿ ಆರ್ಥಿಕ ಸ್ವಾವಲಂಬನೆಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಲೆಮಾರಿ […]
ಜ್ಞಾನಯೋಗಾಶ್ರಮದಲ್ಲಿ ಶತಮಾನದ ಸಂತನಿಗೆ ಗುರುನಮನ- ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಭಕ್ತಗಣ

ವಿಜಯಪುರ: ಹೊಸ ವರ್ಷವನ್ನು ವಿಶ್ವಾದ್ಯಂತ ಸಡಗರ ಮತ್ತು ಸಂಭ್ರಮದಿಂದ ಆರಂಭಿಸಿದ್ದಾರೆ. ಆದರೆ, ಇದೇ ವೇಳೆ, ಬಸವ ನಾಡಿನ ಜನ ಮಾತ್ರ ಇದನ್ನು ಶ್ರದ್ಧಾ ಭಕ್ತಿಯಿಂದ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪುಣ್ಯಭೂಮಿಗೆ ಭೇಟಿ ನೀಡುವ ಮೂಲಕ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ನಡೆದಾಡಿದ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ದೇಹತ್ಯಾಗ ಮಾಡಿ ಈಗ ಒಂದು ವರ್ಷ ಪೂರ್ಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂದು ತಿಂಗಳಿಂದ ಗುರುನಮನ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು […]
Year End Poem: 2023 ವರ್ಷಾಂತ್ಯದ ಸಂದರ್ಭದಲ್ಲಿ ಡಾ. ಅರುಣ ಚಂ. ಇನಾಮದಾರ ರಚಿಸಿರುವ ಕವನ

ವಿಜಯಪುರ: ಸಾಕಷ್ಟು ನಲಿವು ಮತ್ತು ನೋವಗಳನ್ನು ನೀಡಿದ ವರ್ಷ 2023. ಈ ವರ್ಷದಲ್ಲಿ ಹಲವರಿಗೆ ಒಳ್ಳೆಯದಾಗಿದ್ದರೆ, ಮತ್ತೆ ಕೆಲವರಿಗೆ ಸಂಕಷ್ಟ ತಂದಿದೆ. ಈ ಸಂದರ್ಭದಲ್ಲಿ ಚರ್ಮರೋಗ ಖ್ಯಾತ ತಜ್ಞ ಮತ್ತು ವಿಜಯಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ನೆನಪು ಹೆಸರಿನಲ್ಲಿ ಕವಿತೆಯೊಂದನ್ನು ರಚಿಸಿದ್ದಾರೆ. ಮುಪ್ಪಾವಸ್ಥೆಯಲ್ಲಿರುವ ದಂಪತಿ ತಮ್ಮ ಯೌವ್ವನಾವಸ್ಥೆಯ ನೆನಪುಗಳನ್ನು ಸ್ಮರಿಸುವ ಪದ್ಯ ಇದಾಗಿದೆ. ಅಲ್ಲದೇ, ಮುಂಬರುವ ಹೊಸ ವರ್ಷವನ್ನು ಸ್ವಾಗತಿಸುವ ಸಂದೇಶವೂ ಇದರಲ್ಲಿದೆ. ಡಾ. ಅರುಣ ಚಂ. […]
ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ ಮಾಧ್ಯಮವಾಗಿದೆ- ಎಸ್. ಆರ್. ಮೂಗನೂರಮಠ

ಬಾಗಲಕೋಟೆ: ರೇಡಿಯೋ ಶಿಕ್ಷಣ, ಆರೋಗ್ಯ, ಕೃಷಿ, ವಿಜ್ಞಾನ, ಮನೊರಂಜನೆ ಒದಗಿಸುವ ಪ್ರಮುಖ ಮಾಹಿತಿ ಮಾಧ್ಯಮವಾಗಿದೆ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಆರ್. ಮೂಗನೂರಮಠ ಹೇಳಿದ್ದಾರೆ. ನಗರದ ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಬಾಗಲಕೋಟೆಯ ಬಿಈಸಿ ಧ್ವನಿ 90.4 ಎಫ್.ಎಮ್.ನಲ್ಲಿ ಪ್ರತಿ ಸೋಮವಾರ ಪ್ರಸಾರವಾಗುವ ಸಂಪೂಣ೯ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಕಾಯ೯ಕ್ರಮದ ಭಿತ್ತಿಚಿತ್ರಪಟ ಬಿಡುಗಡೆ ಮಾಡಿ ಅವರು ಮಾತನಾಡಿದರು. ರೇಡಿಯೋ ಅತ್ಯಂತ ವ್ಯಾಪಕವಾಗಿ ಜನಸಾಮಾನ್ಯರಿಗೆ ತಲುಪುವ ಕಡಿಮೆ ವೆಚ್ಚದ […]
ಬಿಜೆಪಿ ಕಾರ್ಪೊರೇಟರ್ ಜೊತೆ ಸಭೆ ಮಧ್ಯೆ ಎಚ್.ಡಿ.ಕೆ ಗೆ ಕರೆ ಮಾಡಿದ ಬಿ. ವೈ. ವಿಜಯೇಂದ್ರ- ಯಾಕೆ ಗೊತ್ತಾ?

ವಿಜಯಪುರ: ಜಿಲ್ಲಾ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ರಾತ್ರಿ ವಿಜಯಪುರ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ. ದಿನವಿಡೀ ನಿಗದಿತ ಕಾರ್ಯಕ್ರಮ ಬಳಿಕ ರಾತ್ರಿ ವಾರ್ಡ್ ನಂಬರ್ 12 ರ ಬಿಜೆಪಿ ಸದಸ್ಯೆ ರಶ್ಮಿ ಕೋರಿ ಅವರ ನಿವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಸಭೆ ನಡೆಸಿದರು. ಸಂಜೆ ಪಕ್ಷದ ಕಚೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೀಗಾಗಿ ಪ್ರತ್ಯೇಕ ಸಭೆ ನಡೆಸುವಂತೆ ಸದಸ್ಯರು […]
ಕೃಷ್ಣಾ ನಗರದಲ್ಲಿ ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರಧಾನ ಸಮಾರಂಭ- ಜಗದೀಶ ಶೆಟ್ಟರ, ಬಿ. ವೈ. ವಿಜಯೇಂದ್ರ ಭಾಗಿ

ವಿಜಯಪುರ: 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಜಗಜ್ಯೋತಿ ಬಸವೇಶ್ವರರು ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆಗೆ ನಾಂದಿ ಹಾಡಿದ್ದಾರೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದ್ದಾರೆ. ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ. ಎಚ್. ಪಾಟೀಲ ಮೆಮೋರಿಯಲ್, ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬಬಲೇಶ್ವರ ತಾಲೂಕು ಮತ್ತು ಬೀಳಗಿ ತಾಲೂಕು ಘಟಕಗಳು ಆಯೋಜಿಸಿದ್ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಣಜಿಗ ಸಮಾಜದ ಸಂಘಟನಾ […]
ನಾನಾಗಲಿ, ಪಕ್ಷದ ಮುಖಂಡರು ಕೇಂದ್ರಕ್ಕೆ ಹೋಗಿ ಚಾಡಿ ಹೇಳಿಲ್ಲ- ಹುಡುಗಾಟಿಕೆ ಆರೋಪಗಳಿಗೆ ಉತ್ತರಿಸಲ್ಲ- ಬಿ. ವೈ. ವಿಜಯೇಂದ್ರ ಟಾಂಗ್

ವಿಜಯಪುರ: ನಾನಾಗಲಿ ಅಥವಾ ಪಕ್ಷದ ಮುಖಂಡರಾಗಲಿ ಕೇಂದ್ರಕ್ಕೆ ಹೋಗಿ ಯಾರ ಬಗ್ಗೆಯೂ ಚಾಡಿ ಹೇಳುವುದಾಗಲಿ, ದೂರು ನೀಡುವುದಾಗಲಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಾವು ಪ್ರಯತ್ನ ಮಾಡಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಆದರೆ, ಮುಂದೆ ಸಂದರ್ಭ ಹೇಗೆ ಸೃಷ್ಠಿಯಾಗುತ್ತೆ ಅದರ ಮೇಲೆ ಕೇಂದ್ರ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಏನೆ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ, ವಯಸ್ಸಿನಲ್ಲಿ ಚಿಕ್ಕವನಾದರೂ ಪಕ್ಷದ ಅಧ್ಯಕ್ಷನಾಗಿ ಹಿತದೃಷ್ಠಿಯಿಂದ […]