ರಾತ್ರಿಯಿಡಿ ಡ್ಯೂಟಿ- ನಸುಕಿನ ಜಾವ 21 ಕಿ. ಮೀ. ಓಟದಲ್ಲಿ ಪಾಲ್ಗೊಂಡ ಡಿಆರ್ ಪೊಲೀಸ್ ಪೇದೆ ಭೀಮಾಶಂಕರ ಮಾಡಗ್ಯಾಳ- ಇವರ ಕ್ರೀಡಾಸ್ಪೂರ್ತಿ ಇತರರಿಗೆ ಮಾದರಿ

ವಿಜಯಪುರ: ರಾತ್ರಿಯಿಡಿ ಕರ್ತವ್ಯ ನಿರ್ವಹಿಸುವ ಜೊತೆಗೆ ನಸುಕಿನ ಜಾವ ನಡೆದ ವೃಕ್ಷೊಥಾನ್ ಹೆರಿಟೇಜ್ ರನ್-2023ರ 21 ಕಿ. ಮೀ. ಓಟದಲ್ಲಿ ಪಾಲ್ಗೋಂಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಪೇದೆಯೊಬ್ಬರು ಕ್ರೀಡಾಭಿಮಾನ ಮೆರೆದಿದ್ದಾರೆ. ಹಳಗುಣಕಿ ಗ್ರಾಮದ ಮತ್ತು ವಿಜಯಪುರ ಮೀಸಲು ಪಡೆ ಪೊಲೀಸ್ ಪೇದೆಯಾಗಿರುವ ಭೀಮಾಶಂಕರ ಮಾಡಗ್ಯಾಳ(38) ಡಿಸೆಂಬರ್ 23ರಂದ ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ, ಮರುದಿನ ಡಿಸೆಂಬರ್ 24 ರಂದು ರವಿವಾರ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ 21 ಕಿ. ಮೀ. ಮ್ಯಾರಾಥಾನ್ ಓಟದಲ್ಲಿ ಪಾಲ್ಗೋಂಡಿದ್ದಾರೆ. ಅಷ್ಟೇ […]
ಲೋಕಸಭೆ ಚುನಾವಣೆಗೆ ಟಿಕೇಟ್ ನೀಡಿ- ಸಚಿವ ಸತೀಶ ಜಾರಕಿಹೊಳಿಗೆ ಅರ್ಜಿ ಸಲ್ಲಿಸಿದ ಅರ್ಜುನ ರಾಠೋಡ

ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿ ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಮನವಿ ಪತ್ರ ಸಲ್ಲಿಸಿದ್ದಾರೆ. ವಿಜಯಪುರಕ್ಕೆ ಭೇಟಿ ನೀಡಿದ್ದ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಅರ್ಜುನ ರಾಠೋಡ, ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಈವರೆಗೆ ನಡೆದ ಎಲ್ಲ ವಿಧಾನ ಸಭೆ ಮತ್ತು ವಿಧಾನ ಪರಿಷತ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ್ದೇನೆ. ಅಷ್ಟೇ ಅಲ್ಲ, ಪಕ್ಷದ […]
ಸಚಿವ ಸತೀಶ ಜಾರಕಿಹೊಳಿ ಅವರಿಂದ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ- ಶೀಘ್ರವೇ ವಿಮಾನಗಳ ಹಾರಾಟದ ಭರವಸೆ

ವಿಜಯಪುರ: ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಸೋಮವಾರ ಲೋಕೋಪಯೋಗಿ ಖಾತೆ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ ಟರ್ಮಿನಲ್ ಕಟ್ಟಡ, ನಿಲ್ದಾಣದ ರನವೇ, ಟ್ಯಾಕ್ಸಿ ವೇ, ಬ್ಯಾಗೇಜ್ ಹ್ಯಾಂಡಲಿಂಗ್ ವ್ಯವಸ್ಥೆ, ಸೆಕ್ಯುರಿಟಿ ಸ್ಕ್ಯಾನರ್ ಸೇರಿದಂತೆ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಭದ್ರತಾ ಉಪಕರಣಳು ಸೇರಿದಂತೆ ಬಾಕಿ ಕಾಮಗಾರಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸುವುದನ್ನು ಒಳಗೊಂಡಂತೆ ಎಲ್ಲ ಭೌತಿಕ ಕಾಮಗಾರಿಗಳು ಶೇ.90ರಷ್ಟು […]
ವೀರಶೈವ ಮಹಾಸಭೆ ಬಿ ಎಸ್ ವೈ ಅಂದರೆ ಭೀಮಣ್ಣ, ಶಾಮನೂರು, ಯಡಿಯೂರಪ್ಪ ಆಗಿದೆ- ಕೊರೊನಾ ಸಂದರ್ಭದಲ್ಲಿ ರೂ 40000 ಕೋ. ಭ್ರಷ್ಟಾಚಾರ ನಡೆದಿದೆ- ಯತ್ನಾಳ ಆರೋಪ

ವಿಜಯಪುರ: ಅಖಿಲ ಭಾರತ ವೀರಶೈವ ಮಹಾಸಭೆ ಬಿ ಎಸ್ ವೈ ಅಂದರೆ ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಮತ್ತು ಬಿ. ಎಸ್. ಯಡಿಯೂರಪ್ಪ ಅವರ ಕುಟುಂಬದಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಣಿಸಿಕೊಂಡ ಕೊರೊನಾ ಚಿಕಿತ್ಸೆ ವಿಚಾರದಲ್ಲಿ ರೂ. 40 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ವೀರಶೈವ ಮಹಾಸಭೆ ಮಹಾಧಿವೇಶನ ವಿಚಾರ ದಾವಣಗೆರೆಯಲ್ಲಿ […]
ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ತೊಂದರೆ ನಿವಾರಣೆಗೆ ಜಿಲ್ಲೆಯ 211 ಗ್ರಾ.ಪಂ.ಗಳಲ್ಲಿ ಕ್ಯಾಂಪ್ಗಳ ಆಯೋಜನೆ- ಸಿಇಓ ರಾಹುಲ್ ಶಿಂಧೆ

ವಿಜಯಪುರ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಗೆ ದಿನಾಂಕ:19-07-2023 ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗಿದ್ದು, ಜಿಲ್ಲೆಯ ಕೆಲವು ಫಲಾನುಭವಿಗಳಿಗೆ ತಾಂತ್ರಿಕ ತೊಂದರೆಗಳಿಂದ ಖಾತೆಗಳಿಗೆ ಹಣ ಜಮಾ ಆಗದೇ ಇರುವುದರಿಂದ ಸಮಸ್ಯೆ ನಿವಾರಣೆಗಾಗಿ ಡಿ.27 ರಿಂದ 29ರವರೆಗೆ ಜಿಲ್ಲೆಯ 211 ಗ್ರಾಮ ಪಂಚಾಯತ್‍ಗಳಲ್ಲಿ ಕ್ಯಾಂಪ್‍ಗಳನ್ನು ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ 1999 ಫಲಾನುಭವಿಗಳ ಇ-ಕೆವೈಸಿ […]
ರಾಜ್ಯದ ಎಲ್ಲಡೆ ಮಾದಿಗ ಮುನ್ನಡೆ ಸಮಾವೇಶ- ಕಾಂಗ್ರೆಸ್ ವಿರುದ್ಧ ಮಾಜಿ ಡಿಸಿಎಂ ಗೋವಿಂದ ಕಾರಜೋಳ

ವಿಜಯಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಮಾದಿಗರಿಗೆ ಮಿಸಲಾತಿ ಕೊಡಿಸುವ ಮತ್ತು ಸಾಮಾಜಿಕ ನ್ಯಾಯ ಕೊಡಿಸುವ ಹೋರಾಟದಲ್ಲಿ ನಾನು ನಿಮ್ಮ ಜೊತೆಗಿದ್ದೇನೆ ಎಂದು ನಮ್ಮನ್ನು ಅಪ್ಪಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಮುಖ್ಯಮಂತ್ರಿ ನೀವು ನಮ್ಮವರು ಎಂದು ಮಾದಿಗರನ್ನು ಎಂದಿಗೂ ಅಪ್ಪಿಕೊಂಡು ಮಾತನಾಡಿಲ್ಲ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ. ನಗರದ ಅಥಣಿ ರಸ್ತೆಯ ಇಟಗಿ ಪೆಟ್ರೋಲ್ ಪಂಪ್ ಬಳಿ ಇರುವ ಸಾಯಿ ಗಾರ್ಡನ್‌ನಲ್ಲಿ ನಡೆದ ರಾಜ್ಯದ ಎಲ್ಲಡೆ ಮಾದಿಗ ಮುನ್ನಡೆ ಸಮಾವೇಶದಲ್ಲಿ […]
ವೃಕ್ಷತ್ಥಾನ ಹೆರಿಟೇಜ್ ರನ್-2023: ನಾನಾ ವಿಭಾಗಗಳಲ್ಲಿ 60ಕ್ಕೂ ಹೆಚ್ಚು ವಿಜೇತರಿಗೆ ಪ್ರಶಸ್ತಿ ಪ್ರಧಾನ

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ಹೆರಿಟೇಜ್ ರನ್-2023 ಅಂಗವಾಗಿ ನಡೆದ ನಾನಾ ವಿಭಾಗಗಳ ಓಟಗಳಲ್ಲಿ ಖ್ಯಾತನಾಮರು ಪಾಲ್ಗೊಂಡು ಗಮನ ಸೆಳೆದರು. ಈ ಸಂದರ್ಭದಲ್ಲಿ ನಾನಾ ವಿಭಾಗಗಳಲ್ಲಿ ಗೆಲುವು ಸಾಧಿಸಿದ ಸುಮಾರು 60ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆÉ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಹಿರಿಯ ಐಎಎಸ್ ಅಧಿಕಾರಿ ಅಶೋಕ ದಳವಾಯಿ, ಎನ್ ಟಿಪಿಸಿಯ ಮುಖ್ಯಸ್ಥರಾದ ವಿ.ಕೆ ಪಾಂಡೆ,ಮುಖ್ಯ […]
ವೃಕ್ಷೊಥಾನ ಹೆರಿಟೇಜ್ ರನ್-2023: ಸ್ಮಾರಕಗಳ ಸಂರಕ್ಷಣೆ-ಪರಿಸರ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ- ಸಚಿವ ಎಂ. ಬಿ. ಪಾಟೀಲ ಕರೆ

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ಹೆರಿಟೇಜ್ ರನ್ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. 21 ಕಿ.ಮೀ, 10 ಕಿ.ಮೀ, 5 ಕಿ.ಮೀ, 3.50 ಕಿಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ರನ್ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮ್ಯಾರಥಾನ್‍ಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸುಮಾರು 5 ಕಿ.ಮೀ. ಓಡಿ ನೆರೆದವರನ್ನು ಹುರುದುಂಬಿಸಿದರು. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾಕರಗಳ ರಕ್ಷಣೆ, ನೀರಿನ ಸದ್ಭಳಕೆಯೊಂದಿಗೆ ಗಿಡ-ಮರಗಳನ್ನು […]
ಬಸವ ನಾಡಿನಲ್ಲಿ ರವಿವಾರ ವೃಕ್ಷೊಥಾನ್ ಹೆರಿಟೇಜ್ ರನ್- ಓಡು ವಿಜಯಪುರ ಓಡು ಕಾರ್ಯಕ್ರಮಕ್ಕೆ ಕ್ಷಣಗಣನೆ

ವಿಜಯಪುರ: ನಗರದಲ್ಲಿ ಡಿ. 24 ರಂದು ರವಿವಾರ ನಡೆಯಲಿರುವ ವೃಕ್ಷೊಥಾನ್ ಹೆರಿಟೇಜ್ ರನ್-2023ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರಾದ್ಯಂತ ಓಟಗಾರರು ಸಾಗುವ ಮರ‍್ಗಗಳಲ್ಲಿ ರವಿವಾರ ಬೆಳಿಗ್ಗೆ 6ಗಂಟೆಯಿಂದಲೆ ನಾನಾ ಸಾಂಸ್ಕೃತಿಕ ಕಲಾ ತಂಡಗಳಿಂದ ಕರ‍್ಯಕ್ರಮ ಆಯೋಜಿಸಲಾಗಿದೆ. ಕರ್ನಾಟಕ ಅಷ್ಟೇ ಅಲ್ಲ, ನಾನಾ ರಾಜ್ಯಗಳು ಹಾಗೂ ವಿದೇಶಗಳಿಂದ ಹೆಸರು ನೋಂದಾಯಿಸಿರುವ ಕ್ರೀಡಾಪಟುಗಳು ಗುಮ್ಮಟ ನಗರಿಗೆ ಆಗಮಿಸಿದ್ದು, ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಹೆಸರು ನೋಂದಾಯಿಸಿದ ಓಟಗಾರರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಬ್ ಮತ್ತು ಟಿ ರ‍್ಟ್ ಗಳನ್ನು ವಿತರಿಸಲಾಯಿತು. ಈ ಮಧ್ಯೆ ರಾಷ್ಟ್ರ […]
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವಿಷಯದ ಫೊನ್ ಇನ್ ಕಾರ್ಯಕ್ರಮ: ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡ ವಿದ್ಯಾರ್ಥಿಗಳು

ವಿಜಯಪುರ: ಇಂಗ್ಲೀಷ್ ವಿಷಯದ ವ್ಯಾಕರಣ ಮತ್ತು ಪತ್ರಲೇಖನ ಪ್ಯಾರಾಗ್ರಾಫ್, ಪ್ರಬಂಧ ಬರವಣಿಗೆ ಹಾಗೂ ವಿಷಯ ಕರಗತ ಮಾಡಿಕೊಳ್ಳುವುದೂ ಸೇರಿದಂತೆ ತಮ್ಮ ಶೈಕ್ಷಣಿಕ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಸಂಪನ್ಮೂಲ ಶಿಕ್ಷಕರಿಂದ ಪರಿಹಾರ ಪಡೆದುಕೊಂಡರು. ಶಿಕ್ಷಕರು ವಿಷಯ ಸಮಸ್ಯೆ ಸೂಚಿಸುವುದರ ಜೊತೆಗೆ ಆತ್ಮವಿಶ್ವಾಸದ ಪಾಠ ಮಾಡಲಾಯಿತು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್. ಎಚ್. ನಾಗೂರ ತಿಳಿಸಿದ್ದಾರೆ. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಸಂಜೆ 6 ರಿಂದ ರಾತ್ರಿ […]