ಮರದ ಕೊಂಬೆ ಬಿದ್ದು ಮೆದುಳಲ್ಲಿ ರಕ್ತಸ್ರಾವವಾಗಿದ್ದ ವ್ಯಕ್ತಿಗೆ ಫೋರ್ಟೀಸ್ ಆಸ್ಪತ್ರೆ ವೈದ್ಯರ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ- ಡಾ. ರಾಜಕುಮಾರ್ ದೇಶಪಾಂಡೆ

ಬೆಂಗಳೂರು: ಮರದ ಕೊಂಬೆ ತಲೆ ಮೇಲೆ ಬಿದ್ದು ಮೆದುಳಿನ ಭಾಗದಲ್ಲಿ ರಕ್ತ ಸ್ರಾವವಾಗಿ ಸಾವಿನ ದವಡೆಯಲ್ಲಿದ್ದ ವ್ಯಕ್ತಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ದೇಶಪಾಂಡೆ, ೩೫ ವರ್ಷದ ವ್ಯಕ್ತಿ ಬೆಳಗ್ಗಿನ ಜಾವ ಉದ್ಯಾನವನದಲ್ಲಿ ವಾಕಿಂಗ್ ಮಾಡುವ ವೇಳೆ ಮರದ ಕೊಂಬೆಯೊಂದು ನೇರವಾಗಿ ಅವರ ತಲೆ ಮೇಲೆ ಬಿದ್ದ ಪರಿಣಾಮ ತಲೆಗೆ ತೀವ್ರತರವಾದ ಗಾಯವಾಗಿ ಸಾಕಷ್ಟು ರಕ್ತ ಕಳೆದುಕೊಂಡಿದ್ದರು. […]
ತೆರಿಗೆ ಹಣದಲ್ಲಿ ಅಭಿವೃದಿ ಕಾರ್ಯಗಳನ್ನು ಕೈಗೊಳ್ಳುವಂತೆ ಸಚಿವ ಶಿವಾನಂದ ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚನೆ ಸೂಚನೆ

ವಿಜಯಪುರ: ತೆರಿಗೆಯಿಂದ ಬಂದ ಹಣದಲ್ಲಿ ಮಸೂತಿ, ಕೂಡಗಿ, ತೆಲಗಿ ಮುತ್ತಗಿ ಮತ್ತು ಗೊಳಸಂಗಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಸೂಚನೆ ನೀಡಿದ್ದಾರೆ. ಕೊಲ್ಹಾರ ತಾಲೂಕಿನ ಕೂಡಗಿ ಎನ್ ಟಿ ಪಿ ಸಿ ಸಭಾಭವನದಲ್ಲಿ ನಡೆದ 11ನೇ ಗ್ರಾಮ ಅಭಿವೃದ್ದಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇನ್ನೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಬಾಕಿ ಮತ್ತು ಇನ್ನೂ ಆರಂಭವಾಗದ ಕಾಮಗಾರಿಗಳ […]
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಫೀ ಬಂಡಾರಿ ಅವರಿಗೆ ಸನ್ಮಾನ

ವಿಜಯಪರ: ಪ್ರಸಕ್ತ ವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಡೇಲಿ ಸಾಲಾರ ಉರ್ದುು ದಿನಪತ್ರಿಕೆಯ ಹಿರಿಯ ಪತ್ರಕರ್ತ ರಫೀ ಭಂಡಾರಿ ಅವರನ್ನು ಅವರ ಅಭಿಮಾನಿಗಳು ಹಾಗೂ ನಾನಾ ಮುಖಂಡರು ಸನ್ಮಾನಿಸಿ ಗೌರವಿಸಿದರು. ನಗರದ ಗಗನ ಮಹಲ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯು ವಿಹಾರ ಬಳಗದ ನಾನಾ ಸಮಾಜದ ಮುಖಂಡರು ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಪೀ ಭಂಡಾರಿ, ತಮ್ಮ ಈ ಪ್ರಶಸ್ತಿಯನ್ನು ಭಾಷೆ ಮತ್ತು ಕೋಮು ಸೌಹಾರ್ಧತೆಗೆ ಸಮರ್ಪಿಸುವುದಾಗಿ ತಿಳಿಸಿದರು. ಹಿಂದೂ- ಮುಸ್ಲಿಂ ಸಮಾಜ […]
ಇಂಡಿ ತಾಲೂಕಿನ ಕೆರೆ ಕಾಲುವೆಗಳಿಗೆ ನೀರು ಹರಿಸದಿದ್ದರೆ ರಾಜೀನಾಮೆ- ನೂತನ ಜಿಲ್ಲೆ ಮಾಡದಿದ್ದರೆ ರಾಜಕೀಯ ನಿವೃತ್ತಿ- ಶಾಸಕ ಯಶವಂತರಾಯಗೌಡ ವಿ. ಪಾಟೀಲ ಎಚ್ಚರಿಕೆ

ವಿಜಯಪುರ: ಇಂಡಿ ಮತಕ್ಷೇತ್ರದ ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಆಡಳಿತಾರೂಢ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಯೋಜನೆಗಳಡಿ ಇಂಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಭೌತಿಕವಾಗಿ ಕಾಮಗಾರಿಗಳು ಮುಗಿದಿವೆ. ಆದರೆ, ಈ ಯೋಜನೆಗಳು ಪೂರ್ಣಗೊಂಡು 22 ವರ್ಷಗಳು ಕಳೆದರೂ ಈವರೆಗೂ ಕಾಲುವೆಯ ಟೇಲ್ ಎಂಡ(ಕೊನೆಯ ತುದಿ) ವರೆಗೂ ನೀರು ಹರಿಯುತ್ತಿಲ್ಲ. ಈಗ ಭೀಕರ ಬರ ಎದುರಾಗಿರುವ ಹಿನ್ನಲೆಯಲ್ಲಿ ರೈತರು, ಜನ, ಜಾನುವಾರುಗಳು ಸಂಕಷ್ಟದಲ್ಲಿದ್ದಾರೆ. […]
ಬಿ.ಎಲ್.ಡಿ.ಇ ಸಂಸ್ಥೆ ಬಸವ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ- ಅಥಣಿ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ

ವಿಜಯಪುರ: ಬಸವಾದಿ ಶರಣರ ಆಶಯದಂತೆ ಪ್ರಾರಂಭವಾದ ಬಿ.ಎಲ್.ಡಿ.ಇ ಸಂಸ್ಥೆ ಜಿಲ್ಲೆಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಅಥಣಿಯ ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸಸವ ಸ್ವಾಮೀಜಿ ಹೇಳಿದ್ದಾರೆ. ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪನೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟೀಷರ ಆಡಳಿತದಲ್ಲಿ ಹಿಂದುಳಿದಿದ್ದ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಗಾಗಿ 1910ರಲ್ಲಿ […]
ಕಟೀಲ ಬರ ಅಧ್ಯಯನ ಬದಲು ಬಿಜೆಪಿ ಪ್ರತಿಪಕ್ಷದ ನಾಯಕನ ಆಯ್ಕೆ ಅಧ್ಯಯನ ನಡೆಸಲಿ- ಸುನೀಲಗೌಡ ಪಾಟೀಲ

ವಿಜಯಪುರ: ಬಿಜೆಪಿ ರಾಜ್ಯಾದ್ಯಕ್ಷ ನಳೀನ ಕುಮಾರ ಕಟೀಲ ಬರ ಅಧ್ಯಯನ ನಡೆಸುವ ಬದಲು ತಮ್ಮ ಪಕ್ಷದಲ್ಲಿ ಪ್ರತಿಪಕ್ಷದ ನಾಯಕನ ಆಯ್ಕೆಗೆ ಅಧ್ಯಯನ ನಡೆಸಲಿ ಎಂದು ಎಂ. ಎಲ್. ಸಿ. ಸುನೀಲಗೌಡ ಪಾಟೀಲ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬರ ಅಧ್ಯಯನಕ್ಕೆ ತಿಕೋಟಾ ತಾಲೂಕಿಗೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇತೃತ್ವದ ತಂಡ ಜಿಲ್ಲೆಯಲ್ಲಿ ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿ ಯೋಜನೆಗಳನ್ನು ನೋಡಿ ಖುಷಿಪಟ್ಟಿದೆ ಎಂದು ತಿಳಿಸಿದ್ದಾರೆ. […]
ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅಮಾನತು- ಸಂಜಯ ಕಲ್ಲೂರ ನೂತನ ಪಿಎಸ್ಐ ಆಗಿ ವರ್ಗಾವಣೆ

ವಿಜಯಪುರ: ಚಡಚಣ ಪಿಎಸ್ಐ ಮಹಾದೇವ ಯಲಿಗಾರ ಅವರನ್ನು ಕರ್ತವ್ಯಲೋಪ ಆರೋಪದಡಿ ಅಮಾನತು ಮಾಡಿ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ವಿಕಾಶ್ ಕುಮಾರ್ ವಿಕಾಶ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಅನುಪಮ ಅಗರವಾಲ ಎಸ್ಪಿಯಾಗಿದ್ದ ಸಂದರ್ಭದಲ್ಲಿ ಇದೇ ಚಡಚಣದಲ್ಲಿ ಪಿಎಸ್‌ಐ ಆಗಿದ್ದ ಮಹಾದೇವ ಯಲಿಗಾರ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಸೇರಿದಂತೆ ನಾನಾ ಕರ್ತವ್ಯಲೋಪ ಆರೋಪದಡಿ ಅಮಾನತು ಆಗಿದ್ದರು. ಆದರೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇದೇ ಚಡಚಣ ಪೊಲೀಸ್ ಠಾಣೆಗೆ ಮತ್ತೆ […]
ಸೂಕ್ತ ಸಮಯದಲ್ಲಿ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಅಗತ್ಯ ಲಸಿಕೆ ನೀಡಿ- ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ರೋಗಗಸ್ಥ ಜಾನುವಾರುಗಳಿಗೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ಲಸಿಕೆ ನೀಡುವಂತೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಹೇಳಿದರು. ಅವರು ಜಿಲ್ಲಾ ಪಶು ವೈಧ್ಯಕೀಯ ಪಾಲಿಕ್ಲಿನಿಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿ ದಿನ ಪಶು ವೈಧ್ಯಕೀಯ ಪಾಲಿಕ್ಲಿನಿಕ್ ಭೇಟಿ ನೀಡುವ ಸಾರ್ವಜನಿಕರು, ರೈತರ ಭೇಟಿ ಕುರಿತು ಮಾಹಿತಿ ಪಡೆದುಕೊಂಡರು. ಜಾನುವಾರುಗಳಿಗೆ ಮತ್ತು ರೈತರಿಗೆ ನೀಡುವ ಚಿಕಿತ್ಸೆಗಳ ಕುರಿತು ಪರಿಶೀಲನೆ ನಡೆಸಿದ ಅವರು, ಇಲ್ಲಿನ ನಾನಾ ವಿಭಾಗಗಳಿಗೆ […]
ಸಿದ್ಧರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರೂ ಆಡಳಿತ ನಡೆಸಲು ಬರುತ್ತಿಲ್ಲ- ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ವಾಗ್ದಾಳಿ

ವಿಜಯಪುರ: ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಎರಡು ಬಾರಿ ಸಿಎಂ ಆದರೂ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳೀನ ಕುಮಾರ ಕಟೀಲ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಬರ ಅಧ್ಯಯನ ತಂಡದೊಂದಿಗೆ ತಿಕೋಟಾ ತಾಲೂಕಿನ ಬರಪೀಡಿದ ಜಾಲಗೇರಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬರದಿಂದ ಉಂಟಾಗಿರುವ ಬೆಳೆಹಾನಿ ಕುರಿತು ರೈತರಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಬರದ ವಿಚಾರದಲ್ಲಿ ರಾಜ್ಯದ […]
ನಾನಾ ಮತಗಟ್ಟೆ, ಶಾಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಭೇಟಿ, ಪರಿಶೀಲನೆ

ವಿಜಯಪುರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮತದಾರರ ಪಟ್ಟಿಯ ವೀಕ್ಷಕರಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ್ ಅವರು ಇಂಡಿ ವಿಧಾನಸಭಾ ಮತಕ್ಷೇತ್ರದ ನಾನಾ ಮತಗಟ್ಟೆಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂಡಿ ತಾಲೂಕಿನ ಹೊರ್ತಿ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಭೇಟಿ ನೀಡಿದ ಅವರು, ಮಕ್ಕಳ ಹಾಜರಾತಿ ಮತ್ತು ನಿರ್ಮಾಣ ಹಂತದ ಕಟ್ಟಡ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು. ನಂತರ ಸರಕಾರಿ […]