Sweet Potateo: ಅಬ್ಬಾ, ಈ ಗೆಣಸು ಎಷ್ಟು ಬೆಳೆದಿದೆ ನೋಡಿ- ಇದಕ್ಕೆಲ್ಲ ಎಂ. ಬಿ. ಪಾಟೀಲ ಮಾಡಿದ ನೀರಾವರಿ ಕಾರಣ ಎಂದು ಗುಣಗಾನ ಮಾಡಿದ ರೈತ

ವಿಜಯಪುರ: ಅಬ್ಬಾ(Wow)! ಈ ಗೆಣಸು(Sweet Potateo) ಬೆಳೆದ(Height) ಪರಿ ನೋಡಿದರೆ ಎಲ್ಲರೂ(Everyone) ಅಚ್ಚರಿ(Wonder) ಪಡುವುದು ಗ್ಯಾರಂಟಿ.  ಈ ಕೆಂಗೆಣಸನ್ನು ಕಂಡು ಸ್ವತಃ ರೈತನೇ ಹೈರಾಣಾಗಿದ್ದಾನೆ.  ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮಯ್ಯ ದಾ ರೋಣಿಹಾಳಮಠ ಅವರ ತೋಟದಲ್ಲಿ ಬೆಳೆದಿರುವ ಈ ಗೆಣಸು ಅನ್ನದಾತರನ್ನಷ್ಟೇ ಅಲ್ಲ, ಎಲ್ಲರನ್ನೂ ಅಚ್ಚರಿ ಉಂಟು ಮಾಡಿದೆ.  ಇದಕ್ಕೆಲ್ಲ ಇಲ್ಲಿಯ ಭೂಮಿಯ ಫಲವತ್ತತೆ ಕಾರಣ.  ಈ ಭೂಮಿ ಇಷ್ಟೋಂದು ಫಲವತ್ತಾಗಲು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ […]

ರೈತರಿಗೆ ಮೋಸ ತಪ್ಪಿಸಲು ತಾನೇ ಸ್ವತಃ ಡ್ರ್ಯಾಗನ್ ಫ್ರೂಟ್ ಸಸಿ ತಯಾರಿಸಿ ಮಾರಾಟ- ಆದಾಯ ಕಂಡುಕೊಂಡ ಯುವರೈತನ ಯಶೋಗಾಥೆ

ವಿಜಯಪುರ: ಡ್ರ್ಯಾಗನ್ ಫ್ರೂಟ್ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಹಣ್ಣು.  ಇದರಲ್ಲಿರುವ ಔಷಝಿಯ ಗುಣಗಳು ನಾನಾ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣವಾಗಿವೆ.  ಈ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇದನ್ನು ಕೃಷಿ ಮಾಡುತ್ತಿರುವ ರೈತರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ಈ ಬೇಡಿಕೆಯ ಲಾಭವನ್ನು ದುರ್ಲಾಭ ಮಾಡಿಕೊಂಡ ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳು ಕಳಪೆ ಗುಣಮಟ್ಟದ ಸಸಿಗಳನ್ನು ಮಾರಾಟ ಮಾಡಿದ ಪರಿಣಾಮ ಹಲವಾರು ರೈತರು ಮೋಸ ಹೋಗಿರುವ ಘಟನೆಗಳೂ ನಡೆದಿವೆ.  ಈ ಹಿನ್ನೆಲೆಯಲ್ಲಿ […]

ಕೊರೊನಾ, ಲಾಕಡೌನ್ ಕಲಿಸಿದ ಪಾಠ- ಮನೆಯಂಗಳದಲ್ಲಿಯೇ ಕೈದೋಟ ನಿರ್ಮಿಸಿ ಮಾದರಿಯಾದ ದಂಪತಿ

ವಿಜಯಪುರ: ಕೊರೊನಾ ಎರಡನೇ ಅಲೆ ಬಸವ ನಾಡು ಅಷ್ಟೇ ಅಲ್ಲ, ಇಡೀ ರಾಜ್ಯ ಮತ್ತು ದೇಶವನ್ನು ಹೈರಾಣಾಗಿಸಿದೆ. ಇದರ ನಿಯಂತ್ರಣಕ್ಕೆ ಸರಕಾರ ಜಾರಿ ಮಾಡಿರುವ ಲಾಕಡೌನ್ ಜನರನ್ನು ಮನೆಯಲ್ಲಿಯೇ ಕೂಡುವಂತೆ ಮಾಡಿದ್ದು, ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ಬಸವ ನಾಡಿನ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ. ಬರಿ ಮನೆಯಲ್ಲಿ ಇದ್ದು ಏನು ಉಪಯೋಗ? ಈ ಸಮಯವನ್ನು ಸದುಪಯೋಗ ಪಡಿಸಿಕೊಂಡರಾಯಿತು ಎಂದು ಯೋಚಿಸಿದ ವಿಜಯಪುರ ನಗರದ ದಂಪತಿ ಹೊಸ ಯೋಜನೆಯನ್ನು ರೂಪಿಸಿ ಜಾರಿಗೆ ತಂದು ಈಗ ಅದರ ಫಲ ಉಣ್ಣುತ್ತಿದ್ದಾರೆ. […]

ಸ್ವತಃ ಕಷ್ಟದಲ್ಲಿದ್ದರೂ ಮಾನವೀಯತೆ ಮೆರೆದ ರೈತನಿಗೆ ಶಾಸಕ ಎಂ. ಬಿ. ಪಾಟೀಲ ನೆರವು

ವಿಜಯಪುರ- ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದ ರೈತ ಬಸವರಾಜ ಕಾತ್ರಾಳ ತಮ್ಮ ಮೂರು ಎಕರೆ ಜಮೀನಿನಲ್ಲಿ ಐದು ಸಾವಿರ ಬಾಳೆ ಸಸಿಗಳನ್ನು ನೆಟ್ಟು, ಪೋಷಿಸಿದ್ದರು. ಆದರೆ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಾಳೆಹಣ್ಣುಗಳನ್ನು ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದರು. ಇಂಥ ಸಂದಿಗ್ಧತೆಯ ನಡುವೆಯೂ ಮಾನವೀಯತೆಗೆ ಮುಂದಾದ ರೈತ ಇತರ ರೈತರಿಗೆ ಮಾದರಿಯಾಗಿದ್ದಾರೆ. ಮಾರುಕಟ್ಟೆ ಇಲ್ಲದೆ ಹಾಳಾಗುತ್ತಿದ್ದ ತಮ್ಮ ಬಾಳೆ ಬೆಳೆಯನ್ನು ಸುತ್ತಲಿನ ಹಳ್ಳಿಗಳ ರೈತರಿಗೆ ಉಚಿತವಾಗಿ ನೀಡವುದರ ಜೊತೆಗೆ ಮಾಸ್ಕ ಹಾಗೂ ಸೈನಿಟೈಸರ್ ವಿತರಿಸುತ್ತ […]

ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಿದ ಶೀಥಲೀಕರಣ ಘಟಕ ಉದ್ಘಾಟಿಸಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ

ಬಸವ ನಾಡು ವಿಜಯಪುರ- ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಿವಾಸದ ಬಳಿ ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ನಿರ್ಮಿಸಲಾಗಿರುವ ಸಿದ್ಧಸಿರಿ ಒಣದ್ರಾಕ್ಷಿ ಸಂಸ್ಕರಣಾ ಘಟಕ, ಸಿದ್ದಸಿರಿ ಶೀತಲ ಘಟಕವನ್ನು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಉದ್ಗಾಟಿಸಿದರು.ವಿಜಯಪುರ ನಗರದ ಸಿಂದಗಿ ರಸ್ತೆಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಲ ಅವರ ತೋಟದ ಮನೆ ಬಳಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ.ಈ ಸಂದರ್ಭದಲ್ಲಿ ಆಲಮಟ್ಟಿ ಅನ್ನದಾನೇಶ್ವರಿ ಪುರವರ ಹಿರೇಮಠದ ಶ್ರೀ ಡಾ. ರುದ್ರಮುನಿ ಶಿವಾಚಾರ್ಯರು, ಗುಜರಾತಿನ ಅಹ್ಮದಾಬಾದ […]