ಮಕ್ಕಳು, ಶಿಶು ಆರೈಕೆ ಅವಕಾಶ, ಸವಾಲು, ಸಂಶೋಧನೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ

ವಿಜಯಪುರ: ದೇಶದಲ್ಲಿ ಶಿಶುಗಳು ಮತ್ತು ಮಕ್ಕಳಿಗೆ ಈವರೆಗೆ ನಡೆದ ಸಂಶೋಧನೆಗಳ ಫಲಿತಾಂಶದ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ನಡೆಯುತ್ತಿರುವ ಸಂಶೋಧನೆಗಳಿಂದ ಮುಂಬರುವ ದಿನಗಳಲ್ಲಿ ಮಕ್ಕಳ ಆರೋಗ್ಯ ಮತ್ತಷ್ಟು ವೃದ್ಧಿಸಲಿದೆ ಎಂದು ರಿಷಿಕೇಶ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಿನ್ಸಿಪಾಲ ಡಾ. ಸ್ಮೃತಿ ಅರೊರಾ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ. ಬಿ. ಎಂ. ಪಾಟೀಲ ನರ್ಸಿಂಗ ಕಾಲೇಜಿನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಙಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಮಕ್ಕಳ ಮತ್ತು ಶಿಶು ಆರೈಕೆಯ ಅವಕಾಶ, ಸವಾಲು ಹಾಗೂ […]
ಯೋಗಾಭ್ಯಾಸ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ: ನ್ಯಾಯಾಧೀಶ ನಲವಡೆ

ವಿಜಯಪುರ: ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದಲ್ಲದೇ, ಸದೃಢ ಆರೋಗ್ಯ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಯೋಗ ಸಹಕಾರಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್. ಎ. ನಲವಡೆ ಹೇಳಿದರು. ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಸಂತೋಷ ಎಸ್. ಕುಂದರ, ವಕೀಲರ ಸಂಘದ ಅಧ್ಯಕ್ಷ ಐ. […]
ಜೀವನದಲ್ಲಿ ಯೋಗ ರೂಢಿಸಿಕೊಂಡು ಸದೃಢ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು- ಸಂಸದ ರಮೇಶ ಜಿಗಜಿಣಗಿ ಕರೆ

ವಿಜಯಪುರ: ದೇಶದ ಋಷಿ ಮುನಿಗಳಿಂದ ಕೊಡುಗೆಯಾಗಿ ಬಂದ ಬಹು ಪುರಾತನವಾದ ಯೋಗವನ್ನು ಪ್ರತಿಯೊಬ್ಬರು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸದೃಢ ಆರೋಗ್ಯ ಹೊಂದುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಅವರು ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಹಯೋಗದಲ್ಲಿ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು […]
ಯೋಗ ಜೀವನ ಪದ್ಧತಿಯಾಗಿದೆ- ಪ್ರತಿದಿನ ಮಾಡುವುದರಿಂದ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಸಾಧ್ಯ- ಪ್ರೊ. ವೈ. ಎನ್. ಜಯರಾಜ

ವಿಜಯಪುರ: ಯೋಗ ಅಲೋಪಥಿ, ಹೋಮಿಯೋಪಥಿ, ಆಯುರ್ವೇದ ಯಾವುದೂ ಅಲ್ಲ. ಇದು ಜೀವನದ ವಿಧಾನವಾಗಿದೆ ಎಂದು ವೂ ಅಲ್ಲಇದು ಜೀವನದ ವಿಧಾನವಾಗಿದೆ ಎಂದು ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕಲಾಧಿಪತಿ ಪ್ರೊ. ವೈ. ಎನ್. ಜಯರಾಜ ಹೇಳಿದ್ದಾರೆ. ವಿಶ್ವವಿದ್ಯಾಲಯದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಗಾಟಿಸಿ ಅವರು ಮಾತನಾಡಿದರು. ಸದೃಢ ದೇಹ ಮತ್ತು ಮನಸ್ಸು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತ ಮತ್ತು ಬುದ್ದಿವಂತನನ್ನಾಗಿ ಮಾಡುತ್ತದೆ. 21ನೇ ಶತಮಾನದಲ್ಲಿ ಇದರ ಅಗತ್ಯ ಹೆಚ್ಚಾಗಿದೆ. ಭಾರತದ ಯೋಗ […]
30 ವರ್ಷದ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರ ಪಿಂಡದ ಯಶಸ್ವಿ ಕಸಿ ಮಾಡಿದ ವೈದ್ಯರು- ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣ

ಬೆಂಗಳೂರು: ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡಗಳನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ ರೋಬೋಟಿಕ್ ಎನ್-ಬ್ಲಾಕ್ ವಿಧಾನದ ಮೂಲಕ ವೈದ್ಯರು ಕಸಿ ಮಾಡುವಲ್ಲಿ ಯಶಸ್ವಿಯಾದ ವಿಶ್ವದಲ್ಲಿಯೇ ಅತೀ ಅಪರೂಪದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ ಅವರನ್ನೊಳಗೊಂಡ ತಜ್ಞವೈದ್ಯರ ತಂಡ ಈ ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿ ಗಮನ ಸಳೆದಿದೆ. ಈ ಕುರಿತು ಮಾತನಾಡಿದ ಡಾ. […]
ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಅರ್ಥಪೂರ್ಣವಾಗಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಜೂ. 21 ರಂದು ಜಿಲ್ಲೆಯಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಸಿದ್ದತೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಗರದ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಂದು ಬೆ. 6 ರಿಂದ ಬೆ. 7.30ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಆಯುರ್ವೇದ, […]
ರಕ್ತದಾನ ರೋಗಿಗಳ ಜೀವ ಉಳಿಸುವುದಷ್ಟೇ ಅಲ್ಲ, ದಾನಿಗಳ ಆರೋಗ್ಯಕ್ಕೂ ಪೂರಕವಾಗಿದೆ- ಶಾಲ್ಮೊನ್ ಚೋಪಡೆ

ವಿಜಯಪುರ: ರಕ್ತದಾನ ಮಹಾದಾನ. ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಲು ಸಾಧ್ಯ ಮತ್ತು ರಕ್ತದಾನ ಮಾಡುವುದರಿಂದ ದಾನಿಗಳೂ ಆರೋಗ್ಯವಂತರಾಗಲು ಸಹಾಯವಾಗುತ್ತದೆ ಎಂದು ಬಿ.ಎಲ್.ಡಿ.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ ಹೇಳಿದ್ದಾರೆ. ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ನಗರದ ಬಿ. ಎಲ್. ಡಿ. ಇ ನರ್ಸಿಂಗ್ ಕಾಲೇಜಿನಲ್ಲಿ ಎನ್ ಎಸ್ ಎಸ್ ಸಹಯೋಗದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪಪ್ರಾಚಾರ್ಯೆ ಪ್ರೋ. ಸುಚಿತ್ರಾ ರಾಟಿ, ಎನ್. ಎಸ್. ಎಸ್. […]
ಯೋಧರು ನಿವೃತ್ತಿ ಬಳಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು- ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ

ವಿಜಯಪುರ: ದೇಶ ಸೇವೆ ಮಾಡುವ ಯೋಧರು ನಿವೃತ್ತರಾದ ಬಳಿಕ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಹೇಳಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೇಂದ್ರಿಯ ಅರಸೇನಾ ಪಡೆಗಳ ಮಾಜಿ ಮತ್ತು ಹಾಲಿ ಯೋದರು ಹಾಗೂ ಅವರ ಕುಟುಂಬ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಯೋದರು ಸೇವೆಯಲ್ಲಿದ್ದಾಗ ಜೀವದ […]
ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಪ್ರೊ. ಪ್ರವೀಣ ಶಹಾಪುರ ಈಗ ಶ್ರೀ ರಾಜೀವ ಗಾಂಧಿ ವೈದ್ಯಕೀಯ ವಿವಿಗೆ ನಾಮನಿರ್ದೇಶನ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರವೀಣ ಶಹಾಪುರ ಅವರನ್ನು ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಗೆ ನಾಮನಿರ್ದೇಶನ ಮಾಡಲಾಗಿದೆ. ಬಿ. ಎಲ್. ಡಿ. ಇ ವೈದ್ಯಕೀಯ ಕಾಲೇಜಿನಲ್ಲಿ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಪ್ರವೀಣ ಶಹಾಪುರ ಅವರನ್ನು ನೇಮಕ ಮಾಡಿ ಆರೋಗ್ಯ ವಿವಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ದನ ತಿವಿದು ಗಾಯಗೊಂಡಿದ್ದ ಮಗುವಿನ ಮೊಗದಲ್ಲಿ ಮತ್ತೆ ಮಂದಹಾಸ ಮೂಡಿಸಿದ ಜೆ ಎಸ್ ಎಸ್ ಆಸ್ಪತ್ರೆ ವೈದ್ಯರು

ವಿಜಯಪುರ: ದನ ತಿವಿದ ಕಾರಣ ಕೆಳತುಟಿಯ ಭಾಗದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಪುಟ್ಟ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಸವ ನಾಡಿನ ಜೆ ಎಸ್ ಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ತಿಕೋಟಾ ತಾಲೂಕಿನ ಮಲಕನದೇವರ ಹಟ್ಟಿಯ ಎರಡು ವರ್ಷದ ಬಾಲಗಿ ಮನೆಯ ಮುಂದೆ ಆಟವಾಡುವ ಸಂದರ್ಭದಲ್ಲಿ ದನ ತಿವಿದ ಪರಿಣಾಮ ಆಕೆಯ ಕೆಳತುಟಿಯ ಭಾಗದಲ್ಲಿ ಕೆನ್ನೆ ಕತ್ತರಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸ್ಥಿತಿಯಲ್ಲಿ ಆಕೆಯ ಪೋಷಕರು ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ […]