ಸಿಎಂ, ಸಹಕಾರ ಸಚಿವರನ್ನು ಭೇಟಿ ಮಾಡಿದ ಡಾ. ಎಲ್. ಎಚ್. ಬಿದರಿ ನೇತೃತ್ವದ ವೈದ್ಯರ ನಿಯೋಗ- ಯಶಸ್ವಿನಿ ಯೋಜನೆ ಪ್ಯಾಕೇಜ್ ದರ ಪರಿಷ್ಕರಣೆಗೆ ಆಗ್ರಹ

ಬೆಳಗಾವಿ: ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಬೇಕು ಎಂದು ಆಗ್ರ್ರಹಿಸಿ ಐಎಂಎ ಮತ್ತು ಕೆಪಿಎಂಇಎ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯಶಸ್ವಿನಿ ಯೋಜನೆಯ ಮಾಜಿ ಲೈಫ್ ಟ್ರಸ್ಟಿ ಡಾ|| ಎಲ್.ಎಚ್. ಬಿದರಿ, ಯಶಸ್ವಿನಿ ಯೋಜನೆಯ ಪ್ಯಾಕೇಜ್ ದರಗಳನ್ನು ವೈಜ್ಞಾನಿಕವಾಗಿ ಚಿಂತನೆ ಮಾಡಿ, ಚರ್ಚಿಸಿ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಯಶಸ್ವಿನಿ […]
Varsity MoU: ಚಿಕ್ಯಾಗೋ ವಿವಿ- ಬಿ ಎಲ್ ಡಿ ಇ ಡೀಮ್ಡ್ ವಿವಿ ಮಧ್ಯೆ ಶೈಕ್ಷಣಿಕ, ಸಂಶೋಧನೆ ಒಡಂಬಡಿಕೆ ಕುರಿತು ಮಹತ್ವದ ಚರ್ಚ

ವಿಜಯಪುರ: ಅಮೇರಿಕಾದ ಚಿಕ್ಯಾಗೋ ವಿಶ್ವವಿದ್ಯಾಲಯದ ಖ್ಯಾತ ವಿಜ್ಞಾನಿ ಪ್ರೊ.ನಂದೂರಿ ಆರ್. ಪ್ರಭಾಕರ ಅವರು ವಿಜಯಪುರ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಸಂಶೋಧನೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಮುಂಬರುವ ದಿನಗಳಲ್ಲಿ ಅಮೇರಿಕಾದ ಚಿಕ್ಯಾಗೋ ವಿವಿ ಜೊತೆ ಶೈಕ್ಷಣಿಕ ಹಾಗೂ ಸಂಶೋಧನೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಸಿದರು. ಅಲ್ಲದೇ, ಎರಡು ದಿನಗಳ ಕಾಲ ಬಿ.ಎಲ್.ಡಿ.ಇ ಸಂಸ್ಥೆಯ […]
AVVS Graduation Day: ಎವಿವಿಎಸ್ ಕಾಲೇಜಿನಲ್ಲಿ ಬಿಎಎಂಎಸ್, ಸ್ನಾತಕೋತ್ತರ ಪ್ರದಾನ

ವಿಜಯಪುರ: ಬಿ ಎಲ್ ಡಿ ಈ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 2022ನೇ ನೇ ವರ್ಷದ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಇಂದು ನಡೆಯಿತು. ಕಾಲೇಜಿನ ವಾಗ್ಭಟ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರ್ಗಿ ಹಿಂಗುಲಾಂಬಿಕ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಮತ್ತು ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿನೆಟ್ ಸದಸ್ಯ ಡಾ. ಅಲ್ಲಮಪ್ರಭು ಗುಡ್ಡಾ ಪದವಿ ಪ್ರಧಾನ ಮಾಡಿದರು. ಬಳಿಕ ಮಾತನಾಡಿದ ಅವರು, ವೈದ್ಯಕೀಯ ವೃತ್ತಿಯ ಪ್ರಾಮುಖ್ಯತೆ, ಮಹತ್ವ, […]
Namma Clinic: ವಿಜಯಪುರ ಜಿಲ್ಲೆಯ ನಮ್ಮ ಕ್ಲಿನಿಕ್- ಮುಖ್ಯಮಂತ್ರಿಗಳಿಂದ ವರ್ಚುವಲ್ ಮೂಲಕ ಲೋಕಾರ್ಪಣೆ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸ್ಥಾಪಿಸಲಾದ ಐದು ನಮ್ಮ ಕ್ಲಿನಿಕ್ ‘ಗಳು ಸೇರಿದಂತೆ ರಾಜ್ಯಾದ್ಯಂತ ಸ್ಥಾಪಿಸಲಾದ 114 ನಮ್ಮ ಕ್ಲಿನಿಕ್‍ಗಳನ್ನು ವರ್ಚುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅನೂಕೂಲ ಕಲ್ಪಿಸಲು ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 114 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ. ಬಡತನ ಮತ್ತು ಅನಾರೋಗ್ಯ ಎರಡು ಅಭಿವೃದ್ದಿಯ ಶತ್ರುಗಳು, […]
Open Toilet Free: ಗುಮ್ಮಟ ನಗರಿಯ 35 ವಾರ್ಡಗಳು ಬಯಲು ಶೌಚಮುಕ್ತ- ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮಕ್ಕಳಕಿ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳನ್ನು ಬಯಲು ಶೌಚಮುಕ್ತ ವಾರ್ಡಗಳೆಂದು ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು ಘೋಷಿಸಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡಗಳನ್ನು ಬಯಲು ಶೌಚಮುಕ್ತ ವಾರ್ಡಗಳೆಂದು ಘೋಷಿಸಲು ನಾನಾ ವಾರ್ಡಗಳಲ್ಲಿ ಶೌಚಾಲಯರಹಿತ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ, ಶೌಚಾಲಯ ಸೌಲಭ್ಯದಿಂದ ವಂಚಿತರಾದ ಕುಟುಂಬಗಳು, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು, ಶಾಲಾ ಮುಖ್ಯಸ್ಥರು ಹಾಗೂ ಭಾದಿತರಾಗಬಹುದಾದ ವ್ಯಕ್ತಿ, ಸಂಘ, ಸಂಸ್ಥೆಗಳಿಂದ ಆಕ್ಷೇಪಣೆ-ಸಲಹೆಗಳನ್ನು ಸಲ್ಲಿಸಲು ಡಿ. 7ರ ವರೆಗೆ ದಿನಾಂಕವನ್ನು ನಿಗದಿ […]
Health Camp: ಬಸವಣ್ಣನವರ ತವರಿನಲ್ಲಿ ಅಗರವಾಲ ಕುಟುಂಬದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ವಿಜಯಪುರ: ಬಸವನ ಬಾಗೇವಾಡಿಯ ಶ್ರೀ ಸತ್ಯನಾರಾಯಣ ದೇವಸ್ಥಾನ ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅಗರವಾಲ ಪರಿವಾರದವರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಈ ಕಾರ್ಯಕ್ರಮಕ್ಕೆ ಬಸವನ ಬಾಗೇವಾಡಿ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಬಸವನ ಬಾಗೇವಾಡಿಯ ಹಿರೇಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯರು ಚಾಲನೆ ನೀಡಿದರು. ಖ್ಯಾತ ವೈದ್ಯರಾದ ಡಾ.ನಿತೀನ ಅಗರವಾಲ, ಡಾ. ಆನಂದ ಕಣಬೂರ ಮತ್ತು ಡಾ. ಮನಿಷಾ ಅಗರವಾಲ ಶಿಬಿರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಮಧುಮೇಹ, ರಕ್ತದೊತ್ತಡ, ಸಾಮಾನ್ಯ ರೋಗ, ನೇತ್ರ ತಪಾಸಣೆ, ಸ್ತ್ರಿರೋಗ […]
Doctors Treatment: ತುರ್ತು ಚಿಕಿತ್ಸೆ ಅಗತ್ಯವಿದ್ದ ಮಗುವಿಗೆ ಕೂಡಲೇ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಬಿ ಎಲ್ ಡಿ ಇ ವೈದ್ಯರು

ವಿಜಯಪುರ: ಮಗುವಿಗೆ ಅಗತ್ಯವಿದ್ದ ತುರ್ತು ಚಿಕಿತ್ಸೆಗೆ ಸ್ಪಂದಿಸಿದ ವೈದ್ಯರು ಕೂಡಲೇ ಆ್ಯಂಬೂಲನ್ಸ್ ಮೂಲಕ ಆ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಿಸಿದ ಘಟನೆ ಸಾರವಾಡ ಗ್ರಾಮದಲ್ಲಿ ನಡೆದಿದೆ. ವಿಜಯಪುರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪುಟಟ್ ಮಗುವೊಂದು ಅಸ್ವಸ್ತವಾಗಿತ್ತು. ಆಗ ಶಿಬಿರದಲ್ಲಿದ್ದ ಮಕ್ಕಳ […]
ಎಂ ಎಲ್ ಸಿ ಫಂಡ್‍ನಿಂದ ಮೂರು ಆ್ಯಂಬುಲನ್ಸ್ ಹಸ್ತಾಂತರ: ಸಿದ್ದರಾಮಯ್ಯ ಕಾಲ ಸುವರ್ಣ ಅವಧಿಯದ್ದಾಗಿತ್ತು ಎಂದ ಸುನೀಲಗೌಡ ಪಾಟೀಲ

ವಿಜಯಪುರ: ಸಿದ್ದರಾಮಯ್ಯನವರ ಕಾಲದಲ್ಲಿ ರಾಜ್ಯದಲ್ಲಿ ಸುವರ್ಣ ಅವಧಿಯಾಗಿತ್ತು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದ ಆ್ಯಂಬುಲನ್ಸ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು, ಅಭಿವೃದ್ಧಿ ಶೆಕೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು. ಈ ದಿನ ದೇವರ ಹಿಪ್ಪರಗಿ ಮತ್ತು ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 7.19 ಲಕ್ಷ ವೆಚ್ಚದಲ್ಲಿ ಖರೀದಿಸಲಾದ […]
BLDE Sanjeevini: ಗ್ರಾಮೀಣ ಜನರಿಗೆ ಬಿ ಎಲ್ ಡಿ ಇ ಆಸ್ಪತ್ರೆ ಸಂಜೀವಿನಿಯಾಗಿದೆ- ಕೆಂಗಲಗುತ್ತಿ ಅಡವಿ ಸಿದ್ಧೇಶ್ವರ ಸ್ವಾಮೀಜಿ

ವಿಜಯಪುರ 26. ಗ್ರಾಮೀಣ ಪ್ರದೇಶದ ಜನರಿಗೆ ಬಿ.ಎಲ್.ಡಿ.ಇ ಆಸ್ಪತ್ರೆ ಸಂಜೀವಿನಿಯಾಗಿದೆ ಎಂದು ಜಂಬಗಿ ಎಚ್-ಕೆಂಗಲಗುತ್ತಿ ಅಡವಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ವಿಜಯಪುರದ ಬಿ.ಲ್.ಡಿ.ಇ ಸಂಸ್ಥೆ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಬಬಲೇಶ್ವರ ತಾಲೂಕಿನ ಹೊಸೂರಿನಲ್ಲಿ ಆಯೋಜಿಸಿದ್ದ ಉಚಿತ ಆರೊಗ್ಯ ತಪಾಸಣೆ ಶಿಬಿರ ಚಾಲನೆ ನೀಡಿ ಅವರು ಮಾತನಾಡಿದರು. ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲರು ರೈತರಿಗೆ ನೀರಾವರಿ ಯೋಜನೆ ಮಾಡಿ ಸ್ವಾವಲಂಬಿ ಜೀವನ ನಡೆಸಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ, ಗ್ರಾಮೀಣ ಭಾಗದ ಜನರ ಆರೋಗ್ಯದ ಬಗ್ಗೆಯೂ ಅಪಾರ ಕಾಳಜಿ […]
Mako Robotic Surgery: ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ಮ್ಯಾಕೋ ರೋಬೊಟಿಕ್ ತಂತ್ರಜ್ಞಾನ ಪರಿಚಯಿಸಿದ ಫೋರ್ಟಿಸ್ ಆಸ್ಪತ್ರೆ

ಬೆಂಗಳೂರು: ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೊಬೊಟಿಕ್ ತಂತ್ರಜ್ಞಾನ ವನ್ನು ಪರಿಚಯಿಸಿದ್ದು, ಈ ತಂತ್ರಜ್ಞಾನದ ಮೂಲಕ ಕೇವಲ ಒಂದು ತಿಂಗಳಲ್ಲಿ 50ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೂಳೆ ಮತ್ತು ಜಂಟಿ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ ಹುಲ್ಸೆ, ಮ್ಯಾಕೋ ರೊಬೊಟಿಕ್ ಆರ್ಮ್ ಅಸಿಸ್ಟೆಡ್ ಟೆಕ್ನಾಲಜಿ ಬಳಸಿ ಬಹು ಅಸ್ವಸ್ಥತೆಯಿಂದ ಬಳಲುತ್ತಿದ್ದ 66 ವರ್ಷದ ಆಫ್ರಿಕನ್ ರೋಗಿಗೆ ಹೊಸ ಜೀವನ […]