BLDE Convocation: ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಜ್ಞಾನವೃದ್ಧಿ ಅಗತ್ಯ- ಬಿ ಎಲ್ ಡಿ ಇ ಘಟಿಕೋತ್ಸವದಲ್ಲಿ ಡಾ. ಪಿ. ವಿ. ವಿಜಯರಾಘವನ್ ಭಾಷಣ

ವಿಜಯಪುರ: ಶಿಕ್ಷಣದ ಎಲ್ಲ ಕ್ಷೇತ್ರಗಳಲ್ಲೂ ಈಗ ತ್ವರಿತವಾಗಿ ಬದಲಾವಣೆಯಾಗುತ್ತಿದ್ದು ಜೀವನದಲ್ಲಿ ನಿರಂತರವಾಗಿರುವ ಕಲಿಕೆಗೆ ಜ್ಞಾನವೃದ್ಧಿ ಅಗತ್ಯವಾಗಿದೆ ಎಂದು ಚೆನ್ನೈನ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಸಂಸ್ಥೆ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪಿ. ವಿ. ವಿಜಯರಾಘವನ್ ಹೇಳಿದ್ದಾರೆ. ವಿಜಯಪುರದಲ್ಲಿ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು. ವೃತ್ತಿ ಜೀವನದಲ್ಲಿ ಯಶಸ್ವಿಗೆ ಕೌಶಲ್ಯ ಮಹತ್ವದ್ದಾಗಿದೆ. ಬದುಕಿನಲ್ಲಿ ಹೊಸತನ, ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಕಲಿಯಲು ಕೊನೆ ಎಂಬುದಿಲ್ಲ. ಯಾವುದೇ […]

NQAS Award: ವಿಜಯಪುರ ಜಿಲ್ಲಾಸ್ಪತ್ರೆಗೆ ಒಲಿದ ಕೇಂದ್ರದ ಮತ್ತೋಂದು ಪ್ರಶಸ್ತಿ- ಆ ಗೌರವ ಯಾವುದು ಗೊತ್ತಾ?

ಮಹೇಶ ವಿ. ಶಟಗಾರ ವಿಜಯಪುರ: ಸತತವಾಗಿ ಎರಡು ವರ್ಷ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದ್ದ ಬಸವ ನಾಡು ವಿಜಯಪುರ ಜಿಲ್ಲಾಸ್ಪತ್ರೆಗೆ ಈಗ ಕೇಂದ್ರ ಸರಕಾರದಿಂದ ಮತ್ತೋಂದು ಗೌರವ ಪ್ರಾಪ್ತವಾಗಿದೆ‌. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಾರಿ ರಾಜ್ಯದಲ್ಲಿ ಜಿಲ್ಲಾಸ್ಪತ್ರೆ ವಿಭಾಗದಲ್ಲಿ ನಾನಾ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ(NQAS) ಪ್ರಶಸ್ತಿ ಪ್ರಕಟಿಸಿದೆ. ಈ ವಿಭಾಗದಲ್ಲಿ ಗೌರವಕ್ಕೆ ಪಾತ್ರವಾದ ಏಕೈಕ ಆಸ್ಪತ್ರೆ ಇದಾಗಿದೆ. ಕಳೆದ ಜೂ. 22 ಮತ್ತು 23ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ […]

Impella Heartpump: ಇಂಪೆಲ್ಲಾ ಹಾರ್ಟಪಂಪ್‌ ಸಾಧನ ಹೃದಯಾಘಾತಕ್ಕೆ ಒಳಗಾದವರಿಗೆ ಸಂಜೀವಿನಿ- ಡಾ. ವಿವೇಕ್‌ ಜವಳಿ

ಬೆಂಗಳೂರು: ದೀರ್ಘಕಾಲದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅಪರೂಪದ ಇಂಪೆಲ್ಲಾ ಹಾರ್ಟ್ ಪಂಪ್ ಅತ್ಯಾಧುನಿಕ ಸಾಧನದ ಸಹಾಯದಿಂದ ಆಂಜಿಯೋಪ್ಲಾಸ್ಟಿ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರುಮಾಡಿದ್ದಾರೆ. ಫೊರ್ಟಿಸ್‌ ಆಸ್ಪತ್ರೆ ಇಂಪೆಲ್ಲಾ ಹಾರ್ಟ್‌ ಪಂಪ್‌ ಬಳಸಿದ ಮೊದಲ ಆಸ್ಪತ್ರೆಯಾಗಿದೆ. ಈ ಕುರಿತು ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಹೃದಯ ಖ್ಯಾತ ತಜ್ಞ ಡಾ. ವಿವೇಕ್‌ ಜವಳಿ, ಹೃದಯಾಘಾತ ಆದವರನ್ನು ಹಾಗೂ ಹೃದಯದ ನಾಳ ಬ್ಲಾಕ್‌ ಆದವರನ್ನು ಕೂಡಲೇ ಬದುಕಿಸಲು ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನ ಸಂಜೀವಿನಿಯಂತೆ. […]

Doctors Experience: ನೈಜ ಜೀವನದ ಅನುಭವದಿಂದ ಶ್ರೇಷ್ಠ ವೈದ್ಯರಾಗಲು ಸಾಧ್ಯ- ಡಾ. ಆರ್. ಎಸ್. ಮುಧೋಳ

ವಿಜಯಪುರ: ವೈದ್ಯರಾಗುವವರು ಕೇವಲ ಪುಸ್ತಕದಿಂದ ತಿಳಿದುಕೊಂಡರೆ ಸಾಲದು. ನೈಜ ಜೀವನದ ಅನುಭವದಿಂದ ಕಲಿತುಕೊಂಡರೆ ಶ್ರೇಷ್ಠ ವೈದ್ಯರಾಗಲು ಸಾಧ್ಯ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು. ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ್ ವೈದ್ಯಕೀಯ ಆಸ್ಪತ್ರೆ, ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಿಂದ ವಿಜಯಪುರ ನಗರ ಹೊರ ವಲಯದಲ್ಲಿರುವ ರಂಭಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಕುಟುಂಬ ದತ್ತು ಪಡೆಯುವ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು. […]

Psychiatrist Ramadurg: ಪೋಷಕರು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆಯಿದೆ- ಮನೋವೈದ್ಯ ಡಾ. ಸಂತೋಷ ರಾಮದುರ್ಗ

ವಿಜಯಪುರ: ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಲ್ಲಿ ಆಗುವ ಮಾನಸಿಕ ಬದಲಾವಣೆಗಳು ಸಹಜವಾಗಿ ಬೇರೆಯಾಗಿರುತ್ತವೆ. ಆದ್ದರಿಂದ ಮಹಿಳೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಮನೋರೋಗ ವಿಭಾಗದ ಪ್ರಾಧ್ಯಾಪಕ ಡಾ. ಸಂತೋಷ ರಾಮದುರ್ಗ ಹೇಳಿದರು. ವಿಜಯಪುರ ತಾಲೂಕಿನ ತೊರವಿ ಬಳಿ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಬಿ ಎಲ್ ಡಿ ಇ ಡೀಮ್ಡ್ ವಿವಿಯ ಮಾನಸಿಕ, ಸಾಮಾಜಿಕ ಆಪ್ತ […]

Yogathon: ಯೋಗಾಥಾನ್-2022 ಕಾರ್ಯಕ್ರಮಕ್ಕೆ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ವಿಜಯಪುರ: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮಹತ್ವದ ಕಾರ್ಯಕ್ರಮ ಯೋಗಾಥಾನ್-2022ಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನಗರದಲ್ಲಿ ಚಾಲನೆ ನೀಡಿದರು. ನಗರದ ಡಾ. ಬಿ. ಎನ್. ಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಯೋಗವು ನಮ್ಮ ದೇಶದ ಪರಂಪರೆ, ಸಂಸ್ಕೃತಿ ಮತ್ತು ಹಿರಿಮೆಯಾಗಿದೆ. ಪುರಾತನ ಕಾಲದಿಂದಲೂ ಯೋಗ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಯೋಗ ಮಾಡುತ್ತಿದ್ದ ಋಷಿಮುನಿಗಳು ಶತಾಯುಷಿಗಳಾಗಿ ಬದುಕಿ ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಹೆಚ್ಚು […]

Idiot Syndrome: ಇಡಿಯಟ್ ಸಿಂಡ್ರೋಮ್ ನಿಂದ ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಪದ್ಮಶ್ರೀ ಡಾ. ಸಿ. ಎನ್‌ ಮಂಜನಾಥ

ಬೆಂಗಳೂರು: ಜನರಲ್ಲಿ ಇಡಿಯಟ್‌ ಸಿಂಡ್ರೋಮ್‌ (IDIOT SYNDROME – Internet Derived Information Obstruction Treatment) ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಜನರು ಹಾಗೂ ರೋಗಿಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಇದರಿಂದ ವೈದ್ಯರು ಒತ್ತಡಕ್ಕೆ ಒಳಗಾಗುತ್ತಿದ್ದು ಆನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕ, ಪದ್ಮಶ್ರೀ ಡಾ. ಸಿ. ಎನ್‌. ಮಂಜುನಾಥ್‌ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಹಿರಿಯ […]

National Doctor’s Day: ರಾಷ್ಟ್ರೀಯ ವೈದ್ಯರ ದಿನಾಚರಣೆ- ಡಾ. ಬಿ. ಸಿ. ರಾಯ್ ಜನ್ಮದಿನದ ವಿಶೇಷ

ಡಾ. ರವಿ ಎಸ್. ಕೋಟೆಣ್ಣವರ ವಿಜಯಪುರ: ನಾವು ಭೂಮಿಯ ಮೇಲೆ ದೇವರನ್ನು ನೋಡಲು ಸಾಧ್ಯವಿಲ್ಲ ಎನ್ನುವುದು ಎಲ್ಲರು ತಿಳಿದಿರುವ ಸತ್ಯ. ಆದರೆ ನಮ್ಮ ಆರೋಗ್ಯವನ್ನು ಉತ್ತಮ ಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು, ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು. ಈ ಕೋವಿಡ್ ಹೆಮ್ಮಾರಿ ವೈದ್ಯನೇ ಭೂಮಿಯ ಮೇಲಿನ ದೈವ ಎಂದು ಜನಸಾಮನ್ಯರಿಗೆ ಸಾಬಿತು ಪಡೆಸಿದೆ. ಜು.1 ರಂದು ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಗುತ್ತದೆ. ಅಲೋಪತಿ, ಹೋಮಿಯೋಪತಿ, ಆಯುರ್ವೇದ. ಯುನಾನಿ ಹೀಗೆ […]

Yoga Day: ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.  ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಆಡಳಿತಾಧಿಕಾರಿ ವೆಂಕಟೇಶ, ವಿಶ್ವಾದ್ಯಂತ ಇಂದು ಯೋಗ ದಿನ ಆಚರಿಸಲಾಗುತ್ತಿದೆ.  ಭಾರತದಲ್ಲಿ ಪುರಾತನ ಕಾಲದಿಂದಲೂ ಯೋಗ ಮಾಡಲಾಗುತ್ತಿದೆ.  ಜೀವನದಲ್ಲಿ ಗುರಿ ಸಾಧಿಸಲು ಯೋಗ ಪ್ರಮುಖ ಸಾಧನವಾಗಿದೆ.  ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಸಲು ಸಾಧ್ಯ.  ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಎಸ್. ಎಸ್. […]

BJP Yoga Day: ಐತಿಹಾಸಿಕ‌‌ ಗಗನ ಮಹಲ್ ನಲ್ಲಿ ಬಿಜೆಪಿ ಮುಖಂಡರಿಂದ ಯೋಗ ದಿನಾಚರಣೆ

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ನಗರದ ಐತಿಹಾಸಿಕ ಗಗನ‌ ಮಹಲ ಆವರಣದಲ್ಲಿ 8ನೇ ಅಂತಾರಾಷ್ಡ್ರೀಯ ಯೋಗ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ಭಾರತದ ಋಷಿಮುನಿಗಳು ಸದೃಢ ಆರೋಗ್ಯಕ್ಕಾಗಿ ಯೋಗವನ್ನು ನಮಗೆಲ್ಲರಿಗೂ ವರವಾಗಿ ನೀಡಿದ್ದಾರೆ. ಈ ಯೋಗದ ಆರೋಗ್ಯ ಗುಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಮುಂದೆ ತೆರೆದಿಟ್ಟಿದ್ದಾರೆ. ಈಗ ವಿಶ್ವಾದ್ಯಂತ 180ಕ್ಕೂ ಹೆಚ್ಚು ರಾಷ್ಟ್ರಗಳು ಯೋಗವನ್ನು ಆಚರಣೆ ಮಾಡುತ್ತಿವೆ. […]