ನಿಗದಿತ ಅವಧಿಯೊಳಗೆ ಜಂತುಹುಳು ಮಾತ್ರೆ ಒದಗಿಸಿ- ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನಿಗದಿತ ಅವಧಿಯೊಳಗೆ ಒಂದರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ತಪ್ಪದೇ ನಿರ್ದಿಷ್ಟ ಪ್ರಮಾಣದ ಜಂತುಹುಳು ನಿವಾರಣೆ ಮಾತ್ರೆ ನೀಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಹೇಳಿದ್ದಾರೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಹಿನ್ನೆಲೆ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾ ಸಮನ್ವಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು. ಜಂತುಹುಳು ನಿವಾರಣೆ ಮಾತ್ರೆಯು ಮಕ್ಕಳು ಮತ್ತು ವಯಸ್ಕರಿಗೆ ಸಮಾನವಾಗಿ ಸುರಕ್ಷಿತ ಔಷಧಿಯಾಗಿದೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ […]
ತಾಯಂದಿರು ಮಕ್ಕಳಿಗೆ ಪಿಸಿವಿ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು- ಡಿಸಿ ಪಿ ಸುನಿಲ್ ಕುಮಾರ ಕರೆ
ವಿಜಯಪುರ: ಮಕ್ಕಳಿಗೆ ಭವಿಷ್ಯದಲ್ಲಿ ಮಾರಕ ಕಾಯಿಲೆಗಳಿಂದ ರಕ್ಷಿಸಲು ತಾಯಂದಿರು ತಂತಮ್ಮ ಮಕ್ಕಳಿಗೆ ಪಿಸಿವಿ ಲಸಿಕೆಯನ್ನು ಹಾಕಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನಿಲ ಕುಮಾರ ಕರೆ ನೀಡಿದ್ದಾರೆ. ವಿಜಯಪುರ ನಗರದ ದರ್ಗಾ ಪ್ರದೇಶದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ನ್ಯೂಮೊಕಾಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಒಂದು ಹೊಸ ಪಿಸಿವಿ ಲಸಿಕೆಯನ್ನು ಪರಿಚಯಿಸಲಾಗುತ್ತಿದೆ. ಇದು ನ್ಯೂಮೊಕಾಕಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಕಾಯಿಲೆಗಳಿಂದ […]
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ವಿಶೇಷ ಲೇಖನ
ಡಾ. ರವಿ ಎಸ್.ಕೋಟೆಣ್ಣವರ, ಹೋಮಿಯೋಪಥಿ ಖ್ಯಾತ ತಜ್ಞರು. ವಿಜಯಪುರ: ಮಧುಮೇಹ ಅಥವಾ ಸಕ್ಕರೆ ರೋಗ ಎನ್ನುವುದು ಬಹಳ. ಪುರಾತನವಾದ ಖಾಯಿಲೆ. ಅತಿಯಾದ ಮೂತ್ರ ವಿಸರ್ಜಿಸುವ ರೋಗ ಎಂದು ಕೂಡ ಕರೆಯಲಾಗುವುದು. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. ಇರುವೆಗಳನ್ನು ಆಕರ್ಷಿಸುವ ಮೂತ್ರ ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗ್ರೀಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ […]
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮಕ್ಕೆ ಡಿ. ರಂದೀಪ್ ಚಾಲನೆ

ವಿಜಯಪುರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ಮಾತಾಡ್ ಮಾತಾಡ್ ಕನ್ನಡ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ವಿಜಯಪುರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಂಗವಾಗಿ ವಿಶ್ವಾದ್ಯಂತ ಏಕಕಾಲಕ್ಕೆ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ. ರಂದೀಪ ಈ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಅತ್ಯುತ್ತಮ ಆಸ್ಪತ್ರೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯೂ ಒಂದಾಗಿದೆ. ಇಲ್ಲಿನ […]
ಡಾ. ಬಾಂಗಿ ಆಸ್ಪತ್ರೆ ವೈದ್ಯರ ಆರೈಕೆ- 5 ತಿಂಗಳ ಬಳಿಕ ಕೊರೊನಾದಿಂದ ಗುಣಮುಖನಾದ ದೇವೇಂದ್ರ ಕೂಸಪ್ಪ ಚಲವಾದಿ ಇಚ್ಛಾಶಕ್ತಿಗೊಂದು ಸಲಾಂ

ವಿಜಯಪುರ: ಇದು ನಂಬಲು ಕಷ್ಟವಾದರೂ ಸತ್ಯ. ಇಲ್ಲಿ ರೋಗಿಯ ಇಚ್ಛಾಶಕ್ತಿಯ ಜೊತೆ ಆಸ್ಪತ್ರೆಯ ವೈದ್ಯರ ಅಕ್ಕರೆಯ ಆರೈಕೆ ಬಡವನಿಗೆ ಹೊಸ ಬದುಕು ನೀಡಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ನಗರದ ವಾರ್ಡ್ ಸಂಖ್ಯೆ 2 ರಲ್ಲಿ ಬರುವ ಅಫಜಲಪುರ ಟಕ್ಕೆ ನಿವಾಸಿ ದೇವೇಂದ್ರ ಕೂಸಪ್ಪ ಚಲವಾಸಿ(50) ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದರು. ಮೇ 3 ರಂದು ಕರೆ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದರು. ಆಗ ಕೂಡಲೇ ವಿಜಯಪುರ ನಗರದ […]
ವಿಶ್ವ ಹೃದಯ ದಿನ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಜ್ಞೆ- ಏನು ಗೊತ್ತಾ?

ಬೆಂಗಳೂರು: ವಿಶ್ವ ಹೃದಯ ದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಜ್ಞೆಯೊಂದನ್ನು ಕೈಗೊಂಡಿದ್ದಾರೆ. ಆ ಪ್ರತಿಜ್ಞೆ ಏನು ಎಂದು ತಿಳಿಯುವ ಮುಂಚೆ ಬೆಂಗಳೂರಿನಲ್ಲಿ ನಡೆದ ವಿಶ್ವ ಹೃದಯ ದಿನದ ಕಾರ್ಯಕ್ರಮದ ಮಾಹಿತಿ ಇಲ್ಲಿದೆ ನೋಡಿ. ಶಕ್ತಿಯುತ ದೇಹ ಮತ್ತು ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ವಿಧಾನಸೌಧದಿಂದ ಕಂಠೀರವ ಕ್ರೀಡಾಂಗಣದವರೆಗೆ ಆಯೋಜಿಸಿದ್ದ *ಹೃದಯದಿಂದ ಬಾಂಧವ್ಯ ಬೆಳೆಸೋಣ*; ವಾಕಥಾನ್ ಗೆ ಚಾಲನೆ ನೀಡಿ ಅವರು […]
ಶ್ರವಣ ದೋಷ ಉಂಟಾಗದಂತೆ ಮಕ್ಕಳು, ಹಿರಿಯರು ಮುನ್ನೆಚ್ಚರಿಕೆ ವಹಿಸಬೇಕು- ಡಾ. ಆರ್. ಎಸ್. ಮುಧೋಳ

ವಿಜಯಪುರ: ಶ್ರವಣ ದೋಷವುಂಟಾಗದಂತೆ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಮೂಢನಂಬಿಕೆಗಳಿಗೆ ಒಳಗಾಗದೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು ಎಂದು ಬಿ ಎಲ್ ಡಿ ಇ ಡಿಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಹೇಳಿದರು. ಬಿ ಎಲ್ ಡಿ ಇ ಆಸ್ಪತ್ರೆಯಲ್ಲಿ ಕಿವುಡುತನದ ಬಗ್ಗೆ ಚಿಕಿತ್ಸೆ ಜಾಗೃತಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು ಜಗತ್ತು ಕೋರೊನಾ ಮಹಾಮಾರಿಗೆ ನಲುಗಿದಾಗ ಸಂಸ್ಥೆಯ ಅಧ್ಯಕ್ಷರು ಮತ್ತು ಮಾಜಿ ಸಚಿವರಾದ ಎಂ. ಬಿ. ಪಾಟೀಲ ಅವರು […]
ಅತ್ಯಂತ ಕಿರಿಯ ವಯಸ್ಸಿನ ಶ್ವಾಸಕೋಶ ತಜ್ಞನಾಗಿ ಹೊರಹೊಮ್ಮಿದ ಕಲಬುರಗಿ ಯುವಕ ಡಾ. ವೈಭವ ಸಿ. ಪಡಶೆಟ್ಟಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲು

ಕಲಬುರಗಿ: ಕಲಬುರಗಿ ನಗರದ ಜಿಮ್ಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯ ಡಾ. ವೈಭವ ಸಿ. ಪಡಶೆಟ್ಟಿ ಭಾರತ ಕಂಡ ಅತ್ಯಂತ ಕಿರಿಯ ವಯಸ್ಸಿನ ಶ್ವಾಸಕೋಶ ತಜ್ಞರಾಗಿ ಹೊರ ಹೊಮ್ಮಿದ್ದಾರೆ. ಕಲ್ಯಾಣ ಕರ್ನಾಟಕ ಕಲಬುರಗಿಯ ವೈದ್ಯ ದಂಪತಿಗಳಾದ ಡಾ. ಸಿ. ವಿ. ಪಡಶೆಟ್ಟಿ ಮತ್ತು ಡಾ. ಮಹಾನಂದಾ ಪಡಶೆಟ್ಟಿ ಅವರ ಕಿರಿಯ ಪುತ್ರರಾಗಿರುವ ಡಾ. ವೈಭವ ಸಿ. ಪಡಶೆಟ್ಟಿ ಈಗ ಗಮನ ಸೆಳೆದಿದ್ದಾರೆ. ಕಲಬುರಗಿಯ ಮಹಾದೇವಪ್ಪ ರಾಂಪೂರೇ ಮೆಡಿಕಲ್ ಕಾಲೇಜನಲ್ಲಿ ಎಂ ಬಿ ಬಿ ಎಸ್ ಪದವಿ […]
ನೂತನ 120 ಆರೋಗ್ಯ ಕವಚ ಆ್ಯಂಬುಲನ್ಸ್ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 129 ನೂತನ 108 ಆರೋಗ್ಯ ಕವಚ ಆ್ಯಂಬುಲನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ಹೊಸದಾಗಿ 120 ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಹಕಾರ ಸಚಿವ ಎಸ್. ಟಿ. ಸೋಮಶೇಖರ, ತೋಟಗಾರಿಕೆ ಸಚಿವ ಮುನಿರತ್ನ […]
ಆಯುಷ್ ಅರಿವು ಕಾರ್ಯಕ್ರಮ- ಡಾ. ರವಿ. ಎಸ್. ಕೋಟೆಣ್ಣವರ ಅವರಿಂದ ಉಪನ್ಯಾಸ

ಬಾಗಲಕೋಟೆ: ಬಾಗಲಕೋಟೆ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಆಯುಷ್ ಅರಿವು ಕಾರ್ಯಕ್ರಮ ನಡೆಯಿತು. ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಬಿವಿವಿಎಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಜಿಲ್ಯಾದ್ಯಂತ ಆಯೋಜಿಸಿರುವ ಸರಣಿ ಉಪನ್ಯಾಸ ಕಾಯ೯ಕ್ರಮದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಎಸ್. ಕೋಟೆಣ್ಣವರ, ಸ್ವಸ್ಥ, ಸಮರ್ಥ್ಯ, ಸದೃಡ ಆರೋಗ್ಯಕ್ಕಾಗಿ ಆಯುಷ್ ಪದ್ದತಿ ಉಪಯುಕ್ತವಾಗಿದೆ. ದಿನನಿತ್ಯದ ಆರೋಗ್ಯ ಸಮಸ್ಯೆಗಳಿಗೆ ಆಯುಷ್ ಪದ್ದತಿಯಲ್ಲಿ ಪರಿಹಾರವಿದೆ. ಈ ಪದ್ಧತಿಗಳನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ […]