ಡಿ. 14ರಂದು ವಿಜಯಪುರದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಲವಡೆ
ವಿಜಯಪುರ: ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಡಿ. 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಡೆ ಅವರು ತಿಳಿಸಿದ್ದಾರೆ. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಎ ಡಿ ಆರ್ ಕಟ್ಟಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅದಾಲತನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ […]
ಪತ್ರಕರ್ತರು ಸಮಾಜಮುಖಿ ಕೆಲಸ ಮಾಡಬೇಕು- ಹಿರಿಯ ಪತ್ರಕರ್ತ ಗೋಪಾಲ ನಾಯಕ
ವಿಜಯಪುರ: ಪತ್ರಿಕೋದ್ಯಮ ವೃತ್ತಿ ವೃತ್ತಿಯಾಗಿದ್ದು, ಪತ್ರಕರ್ತರಾದವರು ಸಮಾಜಮುಖಿ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದ್ದಾರೆ. ನಗರದ ಜಿ. ಪಂ. ಬಳಿ ಇರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ಪವಿತ್ರ ವೃತ್ತಿಯಾಗಿದೆ. ಇಂಥ ಮಹತ್ವದ ಪತ್ರಿಕಾಧರ್ಮ ನಿಭಾಯಿಸುವ ಪತ್ರಕರ್ತರಲ್ಲಿ ಕೆಟ್ಟ ವಿಚಾರಗಳು, ಸಮಾಜಕ್ಕೆ ಧಕ್ಕೆ ತರುವ ಭಾವನೆಗಳು ಇರಬಾರದು. […]
ಮುದ್ದೇಬಿಹಾಳ, ಬಸವನ ಬಾಗೇವಾಡಿ, ಮನಗೂಳಿಗೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ ಭೇಟಿ, ಪರಿಶೀಲನೆ
ವಿಜಯಪುರ: ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಂಗಳವಾರ ಮುದ್ದೇಬಿಹಾಳ ಪುರಸಭೆಗೆ ಭೇಟಿ ನೀಡಿ, ನಾನಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಸ ವಿಲೇವಾರಿ ಘಟಕ, ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ನಾನಾ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ನಂತರ ಬಸವನ ಬಾಗೇವಾಡಿಗೆ ಭೇಟಿ ನೀಡಿ ಬಸ್ ನಿಲ್ದಾಣದ ಹತ್ತಿರ ಇರುವ ಇಂದಿರಾ ಕ್ಯಾಂಟಿನ್ ವೀಕ್ಷಣೆ ಮಾಡಿದ ಅವರು, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ […]
ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು: ರೂ. 52 ಕೋ. ವೆಚ್ಚದಲ್ಲಿ 10 ಕಿ. ಮೀ ಕೊಳವೆ ಮಾರ್ಗ ಬದಲಾವಣೆಗೆ ಒಪ್ಪಿಗೆ- ಎಂ. ಬಿ. ಪಾಟೀಲ
ಬೆಂಗಳೂರು: ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ರೂ. 52 ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್. ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ […]
ಬಸವ ನಾಡಿನಲ್ಲಿ ಮಾದರಿ ಅಂಗನವಾಡಿಗಳ ಅಭಿವೃದ್ಧಿ ಕ್ರಮ: ಜಿ. ಪಂ ಸಿಇಒ ರಿಷಿ ಆನಂದ
ವಿಜಯಪುರ: ಜಿಲ್ಲೆಯಲ್ಲಿ ಮಾದರಿ ಅಂಗನವಾಡಿಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ 34 ಅಂಗನವಾಡಿಗಳನ್ನು ಮಾದರಿ ಹಾಗೂ ಆಕರ್ಷಕ ಅಂಗನವಾಡಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಗ್ರಾಮೀಣ ಮಟ್ಟದ ಮಕ್ಕಳ ಶೈಕ್ಷಣಿಕ ಜೀವನದ ಅಡಿಪಾಯವು ಅತ್ಯಂತ ಸದೃಢವಾಗುವುದರ ಜೊತೆಗೆ ಮಕ್ಕಳ ಹಾಜರಾತಿಯ ನಿರಂತರತೆಯನ್ನು ಕಾಯ್ದುಕೊಂಡು […]
ನಟ ವಿಶ್ವಪ್ರಕಾಶ ಟಿ ಮಲಗೊಂಡಗೆ ರಾಜ್ಯೋತ್ಸವ ಪ್ರಶಸ್ತಿ- ಆಲಮೇಲದ ಕಾರ್ಯಕ್ರಮದಲ್ಲಿ ಪ್ರದಾನ
ವಿಜಯಪುರ : ನಟ ನಿರ್ದೇಶಕ ವಿಶ್ವಪ್ರಕಾಶ ಟಿ. ಮಲಗೊಂಡ ಅವರನ್ನು ಕರ್ನಾಟಕ ಸಂಭ್ರಮ 50 ರ ಸವಿನೆನಪಿನಲ್ಲಿ ಆಲಮೇಲ ತಾಲೂಕು ಆಡಳಿತ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪತ್ರ ನೀಡಿ ತಹಸೀಲ್ದಾರ ಕೆ. ವಿಜಯಕುಮಾರ ಸನ್ಮಾನಿಸಲಾಯಿತು. ಆಲಮೇಲ ತಹಸೀಲ್ದಾರ ಕಚೇರಿ ಆವರಣದಲ್ಲಿ ನಡೆದ 2024ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರರಂಗದ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಎಸ್ಐ ಅರವಿಂದ ಅಂಗಡಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಾಧಿಕ ಸುಂಬಡ, ತಾ.ಪಂ […]
ಸ್ನೇಹ ಸಂಬಂಧ ಎಲ್ಲದಕ್ಕಿಂತ ಮಿಗಿಲು- ಶಾಸಕ ಸುನೀಲಗೌಡ ಪಾಟೀಲ
ವಿಜಯಪುರ: ಗೆಳೆತನ ಎಲ್ಲಕ್ಕಿಂತ ಮಿಗಿಲು. ಶ್ಲಾಘಿಸಿದರೆ ಹಿಗ್ಗದೆ, ಟೀಕಿಸಿದರೆ ಕುಗ್ಗದೆ ಸದಾ ಮಂದಸ್ಮಿತರಾಗಿರುವ ವ್ಯಕ್ತಿಗಳು ಸಿಗುವುದು ಅಪರೂಪ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ. ನಗರದ ಐಓಸಿ ಬಳಿಯ ಮಹಾಲ ಬಾಗಾಯತ ಕೈಗಾರಿಕೆ ಪ್ರದೇಶದಲ್ಲಿ ಶುಕ್ರವಾರ ನಡೆದ ಮೇ. ರಜನಿ ಸ್ಟೀಲ್ ವರ್ಕ್ಸ್ 29ನೇ ವರ್ಷದ ಸಂಭ್ರಮಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸ್ನೇಹಜೀವಿ ಡಾ. ಗಂಗಾಧರ ಸಂಬಣ್ಣಿ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಟ್ರೇಲರ್ ಗಳು ಎಲ್ಲ ಕಂಪನಿಯ ಟ್ರ್ಯಾಕ್ಟರ್ […]
ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಶ್ರೀಶೈಲ ಕೊಟ್ಟಲಗಿ, ಸುರೇಶ ಘೋಣಸಗಿ ಸೇರಿ 25 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ವಿಜಯಪುರ: ಪತ್ರಕರ್ತರಾದ ಮೋಹನ ಕುಲಕರ್ಣಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಿಕಾರ್ಜುನ ಸೊನ್ನದ, ಕ್ಯಾಮೆರಾಮನ್ ಶ್ರೀಶೈಲ ಕೊಟ್ಟಲಗಿ, ಸಮಾಜ ಸೇವಕ ಸುರೇಶ ಘೊಣಸಗಿ ಸೇರಿ 25 ಜನರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು ಮತ್ತು ಕ್ಷೇತ್ರಗಳ ಮಾಹಿತಿ ಇಲ್ಲಿದೆ. ಗಣ್ಯರು ಶಿಲ್ಪಕಲೆ 1.ಷಣ್ಮುಖಪ್ಪ ದೇವೇಂದ್ರಪ್ಪ ಪತ್ತಾರ-ಸಾರವಾಡ ಚಿತ್ರಕಲೆ 2.ಹುಸೇನ ಹುನೇರ ಅಲಿಶಾ ಮಕಾನದಾರ-ತಾಳಿಕೋಟೆ ಬಯಲಾಟ 3.ಯಲ್ಲಪ್ಪ ಈರಪ್ಪ ಗೊಂದಳಿ-ಸಾರವಾಡ ಜಾನಪದ ಕ್ಷೇತ್ರ 4.ಅದವ್ವಾ ಚಂದಪ್ಪ ಕದ್ರಿ-ಹಡಗಲಿ 5.ಸಿದ್ದಪ್ಪ ಗುರುಪಾದಪ್ಪ ಅಲಗೊಂಡ(ಜೋಗತಿ)-ಮನಗೂಳಿ […]
ವಿಜಯಪುರ ನಗರದ ನಾನಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಭೇಟಿ, ಪರಿಶೀಲನೆ
ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶನಿವಾರ ನಗರದ ಅಗ್ನಿಶಾಮಕ, ಅರಣ್ಯ ಇಲಾಖೆ, ನಿರಾಶ್ರಿತರ ಕೇಂದ್ರ, ಜಿಲ್ಲಾ ತರಬೇತಿ ಶಿಕ್ಷಣ ಸಂಸ್ಥೆ, ಕೇಂದ್ರೀಯ ವಿದ್ಯಾಲಯ, ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸರಕಾರಿ ಬಾಲಕರ ಬಾಲಮಂದಿರ ಹಾಗೂ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಟಕ್ಕೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿರಾಶ್ರಿತರಿಗಾಗಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಒಳಾಂಗಣದಲ್ಲಿ ಬೆಳೆಸಿರುವ ಹಸರಿಕರಣ- ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ. […]
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಾತಃಸ್ಮರಣೀಯರ ಕಾಯಕ ಅಜರಾಮರ- ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ
ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿರುವ ಪ್ರಾತಃಸ್ಮರಣೀಯರ ಜನಪರ ಕಾರ್ಯ ಸದಾ ಅಜರಾಮರವಾಗಿರಲಿದೆ ಎಂದು ನಗರದ ಶ್ರೀ ಷಣ್ಮುಖಾರೂಢ ಮಠದ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಜಿ ಹೇಳಿದ್ದಾರೆ. ಇಂದು ಬುಧವಾರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಗ್ರಂಥಾಲಯ ಕಟ್ಟೆದ ಹೊಸ ಸಭಾಂಗಣದಲ್ಲಿ ನಡೆದ ಬಿ.ಎಲ್.ಡಿ.ಇ 115ನೇ ಸಂಸ್ಥಾಪನ ದಿನಾಚರಣೆ ಮತ್ತು ಸಂಸ್ಥೆಯ ಪ್ರತಿಭಾವಂತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಸಂಸ್ಥೆಯನ್ನು ಕಟ್ಟಿರುವ […]